ದಲಿತ ಸಮುದಾಯದಲ್ಲಿ ಸ್ವಾಭಿಮಾನದ ಕಿಚ್ಚು ಹಚ್ಚಿದ್ದರು ಸಿದ್ದಲಿಂಗಯ್ಯ
ಬಾಗೇಪಲ್ಲಿ: ಹಿರಿಯ ಸಾಹಿತಿ, ಕವಿ ಡಾ.ಸಿದ್ದಲಿಂಗಯ್ಯ ನವರ ಅಗಲಿಕೆಯು ಇಡೀ ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಎಂದು ನ್ಯಾಷನಲ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ.ರಾಮಯ್ಯ ತಿಳಿಸಿದರು.
ಗ್ರೀನ್ ಇಂಡಿಯಾ ಫೋರಂ ವತಿಯಿಂದ ಪಟ್ಟಣದ ಹಳೇ ಕೋರ್ಟ್ ರಸ್ತೆಯಲ್ಲಿರುವ ಕಚೇರಿಯಲ್ಲಿ ನಡೆದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೊರೋನಾ ಅಟ್ಟಹಾಸಕ್ಕೆ ಕೊನೆ ಇಲ್ಲ. ಹಿರಿಯ ಸಾಹಿತಿ, ಕವಿ ಡಾ. ಸಿದ್ದಲಿಂಗಯ್ಯ ಅವರನ್ನು ಕೊರೋನಾ ಬಲಿಪಡೆದಿದೆ. 67 ವರ್ಷ ವಯಸ್ಸಿನ ಡಾ.ಸಿದ್ದಲಿಂಗಯ್ಯ ಕೊರೋನಾ ಕಾರಣಕ್ಕೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿಯೇ ನಿಧನ ಹೊಂದಿದ್ದಾರೆ. ಕಳೆದ ತಿಂಗಳು ಬೆಡ್ʼಗಾಗಿ ಸಿದ್ದಲಿಂಗಯ್ಯ ಪರದಾಡಿದ್ದು ವರದಿಯಾಗಿತ್ತು ಎಂದು ಬೇಸರ ವ್ಯಕ್ತಪಡಿಸಿದರು.
ದಲಿತ ಸಮುದಾಯದಲ್ಲಿ ಸ್ವಾಭಿಮಾನದ ಕಿಚ್ಚು ಹಚ್ಚಿದ ಅವರು ರಾಜ್ಯದ ದಲಿತ ಸಂಘರ್ಷ ಸಮಿತಿಯಲ್ಲಿ ಒಬ್ಬರಾಗಿದ್ದರು. ಸಿದ್ದಲಿಂಗಯ್ಯನವರು ನಮ್ಮನ್ನ ಅಗಲಿದ್ದರೂ ಸಹ ಅವರ ಸಾಹಿತ್ಯದ ಮೂಲಕ ಎಂದೆಂದಿಗೂ ಚಿರಸ್ಥಾಯಿಯಾಗಿ ಇರುತ್ತಾರೆ. ಸಾಹಿತ್ಯ ಕ್ಷೇತ್ರದ ನಕ್ಷತ್ರವೊಂದು ಧರೆಗೆ ಉರುಳಿದೆ ಕಂಬನಿ ಮಿಡಿದರು ರಾಮಯ್ಯ.
ಈ ಸಂದರ್ಭದಲ್ಲಿ ಗ್ರೀನ್ ಇಂಡಿಯಾ ಫೋರಂ ಅಧ್ಯಕ್ಷ ಸೈಯದ್ ಸಿದ್ದೀಕ್, ಸದಸ್ಯರಾದ ಮಹೇಶ್ ಬುಜ್ಜಿ, ಕದೀರ್ ಖಾನ್, ಬಾಬು, ಗಣೇಶ್ ಪಾಂಡೆ, ಪ್ರದೀಪ್, ಅರವಿಂದ, ಮಹೇಶ್, ಗೌತಮ್, ಪವನ್ ಕುಮಾರ್, ಬುಜ್ಜಿ ಬಾಬು ಮುಂತಾದವರು ಹಾಜರಿದ್ದರು.