ಡಾ.ಸಿದ್ದಲಿಂಗಯ್ಯ ಅವರು ಕರ್ನಾಟಕ ರಾಜ್ಯದ 2ನೇ ಅಂಬೇಡ್ಕರ್
by G S Bharath Gudibande
ಗುಡಿಬಂಡೆ: ಹಲವು ವರ್ಷಗಳ ಹಿಂದೆ ಸಮಾಜದಲ್ಲಿ ಹೋರಾಟದ ಕಿಚ್ಚನ್ನು ಹಚ್ಚಿದ್ದ, 21ನೇ ವಯಸ್ಸಿನಲ್ಲಿಯೇ ಕವನಗಳನ್ನು ಬರೆದು, ಶೋಷಿತ ಸಮುದಾಯದ ಧ್ವನಿಯಾಗಿದ್ದ ಡಾ.ಸಿದ್ದಲಿಂಗಯ್ಯನವರ ಅಗಲಿಕೆಯಿಂದ ರಾಜ್ಯಕ್ಕೆ ತುಂಬಲಾಗದ ನಷ್ಟವಾಗಿದೆ ಎಂದು ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ವಿ.ಶ್ರೀರಾಮಪ್ಪ ದುಃಖ ವ್ಯಕ್ತಪಡಿಸಿದರು.
ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ಪರಿಸರ ವೇದಿಕೆ, ದಲಿತ ಮುಖಡರು ಹಾಗೂ ವಿವಿಧ ಇಲಾಖೆಯ ಅಧಿಕಾರಗಳು ಗಿಡನೆಡುವ ಮೂಲಕ ಡಾ.ಸಿದ್ದಲಿಂಗಯ್ಯ ರವರಿಗೆ ಭಾವಪೂರ್ಣ ವಿದಾಯ ಹಾಗೂ ಮೌನಾಚರಣೆ ಮಾಡಿ ಮಾತನಾಡಿದರು.
66 ವರ್ಷದ ಸಿದ್ದಲಿಂಗಯ್ಯನವರ ಕ್ರಾಂತಿಕಾರಿ ಸಾಹಿತ್ಯದ ಕೃಷಿ ಇಡೀ ಕರ್ನಾಟಕ ರಾಜ್ಯಾದ್ಯಂತ ಜನಪ್ರಿಯವಾಗಿದೆ, ಲಕ್ಷಾಂತರ ವಿದ್ಯಾರ್ಥಿಗಳಿಗೆ ಜ್ಞಾನವನ್ನು ನೀಡಿ, ಅವರ ಜೀವನ ಕಟಿ ಕೊಳ್ಳಲು ಪ್ರೇರೇಪಿಸಿದ ಮಹಾನ್ ವ್ಯಕ್ತಿ, ಇವರು ಕರ್ನಾಟಕ ರಾಜ್ಯದ 2ನೇ ಅಂಬೇಡ್ಕರ್ ಎಂದರೆ ತಪ್ಪಾಗಲಾರದು ಎಂದು ಅವರು ಅಭಿಪ್ರಾಯಪಟ್ಟರು
ನಂತರ ದಲಿತ ಮುಖಂಡ ಜಿ.ವಿ.ಗಂಗಪ್ಪ ಮಾತನಾಡಿ, ದಲಿತರ ಧ್ವನಿಯಾಗಿದ್ದ ಸಿದ್ದಲಿಂಗಯ್ಯ, ದಲಿತ ಬಂಡಾಯ ಚಳವಳಿಯಲ್ಲಿ ಸಕ್ರಿಯರಾಗಿ, ರಾಜ್ಯದ ದಲಿತ ಸಂಘರ್ಷ ಸಮಿತಿಯ ಸಂಸ್ಥಾಪಕರಲ್ಲಿ ಒಬ್ಬರಾಗಿದ್ದರು. ಸಾಮಾಜಿಕ ಸಮಾನತೆಯ ಕವನ ರಚಿಸಿದ್ದಾರೆ, ಯಾರಿಗೆ ಬಂತು ಎಲ್ಲಿಗೆ ಬಂತು 47ರ ಸ್ವಾತಂತ್ರ್ಯ ಬರೀ ಚಲನಚಿತ್ರ ಗೀತೆಯಾಗಿ ಉಳಿಯಲಿಲ್ಲ, ಜಾನಪದದಂತೆ ಎಲ್ಲರನ್ನು ತಲುಪಿತು. ದಲಿತ ಸಮುದಾಯದಲ್ಲಿ ಸ್ವಾಭಿಮಾನದ ಕಿಡಿ ಹೆಚ್ಚಿಸುವಂತೆ ಮಾಡಿತು, ಕರ್ನಾಟಕದ ದಲಿತ ಚಳವಳಿಗೆ ಹೊಸ, ಸಂಚಲನ ನೀಡಿದ್ದ ಅಪರೂಪದ ಸಾಹಿತಿ, ಸದಾಕಾಲ ಸಾಮಾಜಿಕ ಸಮಾನತೆಯ ಹೋರಾಟದಲ್ಲಿ ನಿರತರಾಗಿದ್ದರು ಇವರ ನಿಧನದಿಂದ ಶಿಕ್ಷಣ ಕ್ಷೇತ್ರಕ್ಕೆ ಭಾರಿ ನಷ್ಟವನ್ನುಂಟು ಮಾಡಿದೆ ಎಂದು ಶೋಕಿಸಿದರು.
ಈ ವೇಳೆ ತಾಲೂಕು ಆರೋಗ್ಯಾಧಿಕಾರಿ ಡಾ.ನರಸಿಂಹಮೂರ್ತಿ, ದಲಿತ ಸಂಘರ್ಷ ಸಮಿತಿಯ ತಾಲೂಕು ಸಂಚಾಲಕ ಆದಿನಾರಾಯಣಪ್ಪ, ಕೆ.ಎಸ್.ನರಸಿಂಹಪ್ಪ, ಪರಿಸರ ವೇದಿಕೆಯ ಜಿಲ್ಲಾಧ್ಯಕ್ಷ ಡಾ.ಗುಂಪುಮರದ ಆನಂದ್, ಗ್ರಾಮಲೆಕ್ಕಾಧಿಕಾರಿ ವಿ.ಲಕ್ಷ್ಮೀನಾರಾಯಣ, ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಮಂಜುನಾಥ್, ಪರಿಸರ ವೇದಿಕೆಯ ಜಿಲ್ಲಾ ಕಾರ್ಯದರ್ಶಿ ಜಿ.ಎಸ್.ಭರತ್, ಶಿಕ್ಷಕರಾದ ನಾಗರಾಜ್, ಮುರಳಿ, ಆರೋಗ್ಯ ರಕ್ಷಾ ಸಮಿತಿ ಸದಸ್ಯ ಗಾಂದಿ ಶ್ರೀನಿವಾಸ್, ದಲಿತ ಮುಖಂಡರಾದ ಕೆ.ಎನ್.ನರಸಿಂಹಪ್ಪ, ಆದಿನಾರಾಯಣ, ಗಂಗಾದರಪ್ಪ, ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆಯ ಕೆ.ನರಸಿಂಹಪ್ಪ, ನಾರಾಯಣಸ್ವಾಮಿ ಪತ್ರಕರ್ತರಾದ ರಾಜಶೇಖರ್, ಶ್ರೀನಾಥ್, ಸತೀಶ್ ಬಾಲು, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
- ಸಿದ್ದಲಿಂಗಯ್ಯ ಅವರ ಜೀವನಚಿತ್ರಗಳನ್ನು ನೋಡಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ..
- ಈ ಸುದ್ದಿ ಓದಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ..