Reference image: Photo by Prem Pal Singh Tanwar from Pexels
ನಿರ್ಬಂಧಗಳು ಕಟುನಿಟ್ಟಾಗಿದ್ದ ಸಮಯದಲ್ಲೇ ಅಬಕಾರಿ ಇಲಾಖೆಗೆ ಶೇ.10ರಷ್ಟು ಹೆಚ್ಚು ಲಾಭ!; 4,500 ಕೋಟಿ ವರಮಾನ
ಬೆಂಗಳೂರು: ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ಅಬಕಾರಿ ಇಲಾಖೆ ಸಾಮಾನ್ಯ ದಿನಗಳಿಗಿಂತ ಹೆಚ್ಚು ಆದಾಯ ಗಳಿಸಿದೆ. ಇಲಾಖೆಯ ಲಾಭದಲ್ಲಿ ಶೇ.10ರಷ್ಟು ಹೆಚ್ಚಾಗಿದೆ.
ಸ್ವತಃ ಅಬಕಾರಿ ಸಚಿವ ಕೆ.ಗೋಪಾಲಯ್ಯ ಈ ವಿಷಯ ತಿಳಿಸಿದ್ದು, “ಕೋವಿಡ್ ಲಾಕ್‌ಡೌನ್ ಆದ ಮೇಲೆ ಏಪ್ರಿಲ್ 1ರಿಂದ ಜೂನ್ 15 ರವರೆಗೆ ಅಬಕಾರಿ ಇಲಾಖೆಗೆ 4,500 ಕೋಟಿ ವರಮಾನ ಬಂದಿದದ್ದು, ಸಾಮಾನ್ಯ ದಿನಗಳಿಗಿಂತ ಶೇ.10ರಷ್ಟು ಹೆಚ್ಚು ಲಾಭ ಬಂದಂತಾಗಿದೆ ಎಂದಿದ್ದಾರೆ.
ಸಾಮಾನ್ಯ ದಿನಗಳಿಗಿಂತ ಜನರು ಕೋವಿಡ್ ನಿರ್ಬಂಧದಿಂದಾಗಿ ಮನೆಯಲ್ಲಿದ್ದ ಸಮಯದಲ್ಲೇ ಹೆಚ್ಚು ಮದ್ಯ ಬಳಕೆ ಮಾಡಿದ್ದಾರೆ. ಇದರಿಂದ ಸರಕಾರದ ಆದಾಯ ಹೆಚ್ಚಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಅಲ್ಲಿಗೆ ಲಾಕ್‌ಡೌನ್ ಸಮಯದಲ್ಲಿ ಇಡೀ ರಾಜ್ಯದಲ್ಲಿ ಮದ್ಯಪಾನ ಭರ್ಜರಿಯಾಗಿ ನಡೆದಿದೆ. ಅಲ್ಲದೆ, ಎಂಆರ್‌ಪಿ ಶಾಪ್‌ಗಳಲ್ಲಿ ಹೆಚ್ಚು ಮದ್ಯ ವಿಕ್ರಯವಾಗಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.