• About
  • Advertise
  • Careers
  • Contact
Friday, May 1, 2026
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home CKPLUS

ಬಾಲುಗಾರು… ಅದ್ಭುತಃ!!

P K Channakrishna by P K Channakrishna
September 25, 2020
in CKPLUS, STATE
Reading Time: 1 min read
1
ಬಾಲುಗಾರು… ಅದ್ಭುತಃ!!
931
VIEWS
FacebookTwitterWhatsuplinkedinEmail

ಶ್ರೀಪತಿ ಪಂಡಿತಾರಾಧ್ಯುಲ ಬಾಲಸುಬ್ರಹ್ಮಣ್ಯಂ.
ಎಲ್ಲರ ಪಾಲಿಗೆ ಎಸ್.ಪಿ.ಬಾಲಸುಬ್ರಹ್ಮಣ್ಯಂ. ಇನ್ನೂ ಅನೇಕರಿಗೆ ಎಸ್ಪಿಬಿ, ಮತ್ತೂ ಅನೇಕಾನೇಕರಿಗೆ ಪ್ರೀತಿಯ ಬಾಲು.
-1-
ಶ್ರುತಿಬ್ರಹ್ಮ!!!
ಅಚ್ಚರಿಯೇನೂ ಇಲ್ಲ. ಅವರು ಸಾಕ್ಷಾತ್ ಶ್ರುತಿಬ್ರಹ್ಮರೇ. ನಮ್ಮ ನೆಲದ ಸಂಗೀತಲೋಕದ ಐಸಿರಿ, ಸ್ವರಬ್ರಹ್ಮ ಹಂಸಲೇಖ ಅವರು ಬಾಲು ಅವರನ್ನು ಕರೆಯುವ ಪರಿ, ತಮ್ಮ ಹೃದಯದಲ್ಲಿ ಅವರನ್ನು ಪ್ರತಿಷ್ಠಾಪನೆ ಮಾಡಿಕೊಂಡಿರುವ ರೀತಿ ಇದು. ಅಷ್ಟೇ ಅಲ್ಲ, ಅವರ ಮಾತುಗಳಲ್ಲೇ ಹೇಳುವುದಾದರೆ, “ಇಂದು ಅವರ (ಎಸ್ಪಿಬಿ) ಹುಟ್ಟುಹಬ್ಬ. ನನ್ನ ಪಾಲಿಗಿದು ಸಂಸ್ಕೃತಿಯೇ ಜನ್ಮವೆತ್ತಿದ ದಿನ! ನಾಡಿನ ಪಾಲಿಗೆ ಸಾಮರಸ್ಯವೇ ಜನಿಸಿದ ದಿನ. ಒನ್ ಎಸ್ಪಿಬಿ ಫಾರ್ 500 ಯಿಯರ್ಸ್!!!”

ಆಹಾ.. ಎಂತಹ ನುಡಿಗಳು. ಅವರ ಮಾತುಗಳಲ್ಲಿ ಲವಲೇಶವೂ ಉತ್ಪ್ರೇಕ್ಷೆ ಇಲ್ಲ. ಸರಸ್ವತಿ ಪುತ್ರರಾದ ಅವರ ನಾಲಗೆಯ ಮೇಲೆ ಬಾಲು ಎಂಬ ಶ್ರುತಿಯೂ ಹೀಗೆ ಸಾಕ್ಷಾತ್ಕಾರವಾಗಿದೆ.

//ಉಮಂಡುಗು ಮಂಡುಘನ
ಗರಜೇ ಬದುರಾ//

ಗಾನಯೋಗಿ ಪಂಚಾಕ್ಷರಿ ಗವಾಯಿ ಚಿತ್ರಕ್ಕಾಗಿ ಅಪ್ಪಟ ಹಿಂದೂಸ್ಥಾನಿಯ ‘ಮೇಘ’ದಲ್ಲಿ ಬಾಲು ಅವರು ಹಾಡಿದ ಈ ಚೀಜು ನಮ್ಮ ಪಾಲಿನ ಅನರ್ಘ್ಯ ಸ್ವರಧಾರೆ. ಆ ಮಹಾ ಗಾನಯೋಗಿಯ ದಿವ್ಯಕೃಪೆಯಿಂದ ಈ ವಿರಳ ಗಾಯಕನ ಹೃದಯದಿಂದ ಉಕ್ಕಿಹರಿದ ಗಾನಗಂಗೆಯೇ ಸರಿ. ಕನ್ನಡಮ್ಮನ ಕಿರೀಟಕ್ಕೆ ರಾಷ್ಟ್ರಪ್ರಶಸ್ತಿಯ ಗರಿಯಿಟ್ಟ ಅನನ್ಯ ಗಾಯನವದು.
“ಬಾಲುಗಾರು… ಅದ್ಭುತಃ”, ಹಂಸಲೇಖ ಸರ್, ತಮಗೆ ಸಾವಿರ ಶರಣು..
-2-
ಅದು ಹೈದರಾಬಾದ್. ಕಾರ್ಯಕ್ರಮ, ಶಿರಿಡಿ ಸಾಯಿ ಚಿತ್ರದ ಆಡಿಯೋ ಲೋಕಾರ್ಪಣೆ. ವೇದಿಕೆಯ ಮುಂಭಾಗದಲ್ಲಿ ತೆಲುಗು ಚಿತ್ರರಂಗದ ಪಾಲಿನ ಜ್ಞಾನಕೋಶ ಅಕ್ಕಿನೇನಿ ನಾಗೇಶ್ವರ ರಾವ್ ಅವರೇ ಕೂತಿದ್ದರು. ಅವರ ಪಕ್ಕದಲ್ಲಿ ಅಕ್ಕಿನೇನಿ ನಾಗಾರ್ಜುನ, ಅವರ ಪತ್ನಿ ಅಮಲ, ಹಿರಿಯ ನಿರ್ದೇಶಕ ಕೆ.ರಾಘವೇಂದ್ರ ರಾವು, ನಟ ಶ್ರೀಕಾಂತ್, ನಿರ್ಮಾಪಕರಾದ ಅಲ್ಲು ಅರವಿಂದ್, ದಿಲ್ ರಾಜು ಸೇರಿದಂತೆ ತೆಲುಗು ಚಿತ್ರರಂಗದ ಚಿಕ್ಕದೊಡ್ಡವರೆಲ್ಲರೂ ಸೇರಿದ್ದರು. ಅದು ಆ ಚಿತ್ರದ ಕ್ಲೈಮ್ಯಾಕ್ಸ್ ಗೀತೆ.

//ಭಕ್ತಲು ಮೀರು, ಮೀ ಭಕ್ತಿಕಿ ಬಾನಿಸ ನೇನು
ಸೂರ್ಯಚಂದ್ರುಲು ಚುಕ್ಕಲು ನೇನೈ ಕನಬಡುತುಂಟಾನು
ಮಿಮ್ಮು ಕನಿಪೆಡುತುಂಟಾನು…//

( //ಭಕ್ತರು ನೀವು, ನಿಮ್ಮ ಭಕ್ತಿಗೆ ಅಡಿಯಾಳು ನಾನು
ಸೂರ್ಯಚಂದ್ರರು, ನಕ್ಷತ್ರಗಳು ನಾನಾಗಿ ಕಾಣಿಸುತ್ತಿರುವೆ
ನಿಮ್ಮೆಲ್ಲರನು ನೋಡಿಕೊಳ್ಳುತ್ತಿರುತ್ತೇನೆ..// )

ಮಹಾ ಸಮಾಧಿಯಾಗುವ ಮುನ್ನ ಬಾಬಾ ಅವರು ತಮ್ಮ ಭಕ್ತಸಮೂಹಕ್ಕೇ ಹೇಳುವ ಸಾಲುಗಳಿವು. ಒಂದೆಡೆ ಭಕ್ತಿಯ ಪರಾಕಾಷ್ಠೆ, ಮತ್ತೊಂದೆಡೆ ಭಕ್ತರನ್ನು ಸಾಂತ್ವನಗೊಳಿಸುವ ಅವತಾರಪುರುಷನ ಅಂತಿಮ ಕ್ಷಣಗಳು.. ಆರ್ದ್ರತೆಯ ಮಹಾಸಾಗರದಂತೆ ಉಕ್ಕುವ ಹಾಡಿಗೆ ಜೀವತುಂಬಿದ್ದರು ಬಾಲು. ಪಲ್ಲವಿಯ ಮೂರು ಸಾಲು ಮುಗಿಯುವ ಮುನ್ನವೇ ಇಡೀ ಸಭಾಂಗಣ ಸೂಜಿಬಿದ್ದರೂ ಕೇಳುವಷ್ಟು ನಿಶ್ಯಬ್ದವಾಗಿತ್ತು. ಕಿಕ್ಕಿರಿದಿದ್ದ ಸಭಿಕರ ಕಣ್ಣಾಲಿಗಳು ತುಂಬಿಹೋಗಿದ್ದವು. ಅವರ ಸ್ವರಾಲಾಪಕ್ಕೆ ಸ್ವತಃ ಅಕ್ಕಿನೇನಿ ಅವರು ಮೂಕವಿಸ್ಮಿತರಾಗಿಬಿಟ್ಟರು. ಸಂಗೀತ ನಿದೇಶಕ ಕೀರವಾಣಿ ಮೌನಮೂರ್ತಿಯಾಗಿಬಿಟ್ಟರು.
****
ಇಂಥ ಬಾಲು ಅವರ ಬಗ್ಗೆ ಹೇಳಲು ಇಂತಹ ಸಾವಿರಾರು ಉದಾಹರಣೆಗಳಿವೆ, ಸ್ವಾರಸ್ಯಗಳಿವೆ. ಅವರ ಸ್ವರಯಾತ್ರೆಯಲ್ಲಿ ಕಾಣುತ್ತಿರುವ ಮೈಲುಗಲ್ಲುಗಳು, ಹೆಜ್ಜೆಗುರುತುಗಳನ್ನು ಲೆಕ್ಕಿಸುತ್ತ ಹೋಗುವುದು ಎಂದರೆ ಗಜಪಯಣದ ಹಿಂದೆ ಇರುವೆ ನಡೆದಂತೆ. 1966ರಿಂದ ಅವರತವಾಗಿ ಹಾಡುತ್ತಿರುವ ಅವರ ಸ್ವರಕ್ಕೆ ಧಣಿವಿಲ್ಲ, ಆ ಜೀವಿಗೆ ಸ್ವರದ ಹಸಿವು ಬಿಟ್ಟರೆ ಬೇರೇನೂ ಇಲ್ಲ.

ಕನ್ನಡದಲ್ಲಿ ಗಾನಯೋಗಿ ಪಂಚಾಕ್ಷರಿ ಗವಾಯಿ, ಗಡಿಬಿಡಿ ಗಂಡ, ಪ್ರೇಮಲೋಕ, ಚೈತ್ರದ ಪ್ರೇಮಾಂಜಲಿ, ಮೈಸೂರ ಮಲ್ಲಿಗೆ, ಅಮೃತವರ್ಷಿಣಿ, ನಮ್ಮೂರ ಮಂದಾರ ಹೂವೇ… ಒಂದೇ ಎರಡೇ.

ಕವಿ ಕೆಎಸ್ ನರಸಿಂಹಸ್ವಾಮಿ ಅವರ ಸರ್ವಕಾಲೀನ ವಿರಹಗೀತೆ..
//ನಿನ್ನ ಪ್ರೇಮದ ಪರಿಯ ನಾನರಿಯೇ ಕನಕಾಂಗಿ
ನಿನ್ನೊಳಿದೆ ನನ್ನ ಮನಸು
ಹುಣ್ಣಿಮೆಯ ರಾತ್ರಿಯಲಿ ಉಕ್ಕುವುದು ಕಡಲಾಗಿ
ನಿನ್ನೊಲುಮೆ ನನ್ನ ಕಂಡೂ…//

ಹುಣ್ಣಿಮೆಯಲಿ ಉಕ್ಕುವ ಕಡಲಿನಂತೆಯೇ ಈ ಗೀತೆಯಲ್ಲಿ ಬಾಲು ಅವರ ಸ್ವರಗಳ ಭಾವಶರಧಿಯಲ್ಲಿ ಕನ್ನಡಿಗರೆಲ್ಲರೂ ಮಿಂದಿದ್ದು ಸುಳ್ಳಲ್ಲ.

ನಮ್ಮ ಸ್ವರಬ್ರಹ್ಮರೇ ಬರೆದು ರಾಗ ಸಂಯೋಜಿಸಿದ ’ಮಹಾಕ್ಷತ್ರಿಯ’ ಚಿತ್ರದ “ಈ ಭೂಮಿ ಬಣ್ಣದ ಬುಗುರಿ..” ಹಾಡು ಬಾಲು ಅವರಿಗಾಗಿಯೇ ಜನ್ಮತಾಳಿತೇನೋ ಎನ್ನುವ ಹಾಗಿದೆ ಅವರ ಸ್ವರಾಲಾಪನೆ.

ಇನ್ನು ತೆಲುಗಿಗೆ ಬಂದರೆ ಅವರು ಹಾಡಿದ್ದೆಲ್ಲವೂ ಅಮೃತವೇ. ‘ಶಂಕರಾಭರಣಂ’, ‘ಸ್ವಾತಿಮುತ್ಯಂ’, ‘ಸಿರಿವೆನ್ನೆಲ’, ‘ಗೀತಾಂಜಲಿ’, ‘ರೋಜಾ’, ‘ಜಗದೇಕವೀರುಡು ಅತಿಲೋಕ ಸುಂದರಿ’, ‘ಅನ್ನಮಯ್ಯ’, ‘ಶ್ರೀರಾಮದಾಸು’ ಸೇರಿದಂತೆ ಅನೇಕಾನೇಕ ಚಿತ್ರಗಳ ಅಪರೂಪದ ಗೀತೆಗಳಿಗೆ ಅವರು ಉಸಿರನ್ನೇ ತುಂಬಿಸಿಟ್ಟಿದ್ದಾರೆ.

ತಮಿಳಿನ ’ಕೇಳಡಿ ಕಣ್ಮಣಿ’ ಚಿತ್ರಕ್ಕಾಗಿ ಅವರೇ ನಟಿಸಿ ಹಾಡಿದ ’ಮಣ್ಣಿಲ್ ಇಂದ ಕಾದಲನ್ರೀ’ ಹಾಗೂ ’ತೇವರ್ ಮಗನ್’ ಚಿತ್ರದಲ್ಲಿನ ಅವರ ಗಾಯನ.. ವ್ಹಾಹ್.. ವರ್ಣನೆಗೆ ಅಕ್ಷರಗಳೇ ಸೋಲುತ್ತಿವೆ. ಹಿಂದಿಯಲ್ಲಿ ಏಕ್ ದುಜೇ ಕೇಲಿಯೇ, ಮೈನೆ ಪ್ಯಾರ್ ಕಿಯಾ, ಸಾಜನ್, ಹಮ್ ಆಪ್ಕೆ ಹೈ ಕೌನ್ ಚಿತ್ರಗಳ ಹಾಡುಗಳಂತೂ ಅದ್ಭುತ ಮೆಲೋಡಿಗಳು.

ಕನ್ನಡ, ತೆಲುಗು, ತಮಿಳು, ಮಲೆಯಾಳಂ, ಹಿಂದಿ, ಮರಾಠಿ, ಭೋಜಪುರಿ ಸೇರಿ ಹಲವು ಭಾಷೆಗಳಲ್ಲಿ 40ರಿಂದ 45 ಸಾವಿರ ಹಾಡುಗಳನ್ನು ಅವಿಚ್ಛಿನ್ನವಾಗಿ ಹಾಡಿರುವ ಅವರು ಬಹುಮುಖ ಪ್ರತಿಭೆ. 1996ರಲ್ಲಿ ಅವರು ನಿರ್ಮಿಸಿ, ಕಮಲ್ ಹಾಸನ್ ನಟಿಸಿದ್ದ ’ಶುಭಸಂಕಲ್ಪಂ’ ಚಿತ್ರವು, ಸಿನಿಮಾಗಳ ಬಗ್ಗೆ ಅವರಿಗಿದ್ದ ಸದಭಿರುಚಿಗೆ ಸಾಕ್ಷಿ. ಕನ್ನಡದ ’ಮುದ್ದಿನಮಾವ’, ತೆಲುಗಿನ ’ಪ್ರೇಮ’, ತಮಿಳಿನ ’ಕೇಳಡಿ ಕಣ್ಮಣಿ’, ’ಕಾದಲನ್’ ಚಿತ್ರಗಳಲ್ಲಿ ಅವರದ್ದು ಕಚಗುಳಿ ಇಡುವ ಅಪರೂಪದ ನಟನೆ.

ತೆಲುಗು ಕವಿ, ನಟ ತೆನಕಳ್ಳ ಭರಣಿ ಅವರ ’ಮಿಥುನಂ’ ಚಿತ್ರದ ನಟನೆ ಬಾಲು ಅವರ ನಟನಾ ಪ್ರತಿಭೆಯ ಗೌರಿಶಂಕರ. ಎರಡೇ ಪಾತ್ರಗಳ ಆ ಚಿತ್ರದಲ್ಲಿ ಹಿರಿಯ ನಟಿ ಲಕ್ಷ್ಮೀ ಅವರ ಪತಿಯಾಗಿ ಕಾಣಿಸಿಕೊಂಡ ಅವರ ನವರಸ ಪೋಷಣೆಯನ್ನು ಕಣ್ತುಂಬಿಕೊಳ್ಳಲೇಬೇಕು.

ಬಾಲು ಅವರದ್ದು ಬರೆದಷ್ಟೂ ಮುಗಿಯದ ಮಹಾಕಾವ್ಯ. ಅವರಿಗೆ ಅವರೇ ಸಾಟಿ. ಆ ಸ್ವರಕ್ಕೆ ಆ ಸ್ವರವೇ ಪೋಟಿ. ಮಹಾನುಭಾವ ಶ್ರೀ ಕೋದಂಡಪಾಣಿಯವರು ಹಾಗೂ ಸ್ವರ ಸರಸ್ವತಿ ಎಸ್. ಜಾನಕಿ ಅವರಿಬ್ಬರು ಇಲ್ಲದಿದ್ದರೆ ಇವತ್ತು ಬಾಲಸುಬ್ರಹ್ಮಣ್ಯಂ ಎಂಬ ಹೆಸರೇ ಇರುತ್ತಿತ್ತೋ ಇಲ್ಲವೋ.

ಅದಕ್ಕೆ ಮಹಾ ವಾಗ್ಗೇಯಕಾರ ಶ್ರೀ ತ್ಯಾಗಯ್ಯ ಅವರು ಬರೆದು ಹಾಡಿದ ಈ ಕೀರ್ತನೆ ಚಿರಾಯು.
//ಎಂದರೋ ಮಹಾನುಭಾವುಲು
ಅಂದರಿಕೀ ವಂದನಮುಲು…//

(ಎಷ್ಟೋ ಮಹಾನುಭಾವರು / ಎಲ್ಲರಿಗೂ ವಂದನೆಗಳು)

ಬಾಲು ಎಂಬ ಮಹಾನುಭಾವರಿಂದ ಸಂಗೀತ ಲೋಕ ಸಮೃದ್ಧವಾಗಿದೆ. ಇವತ್ತು (ಜೂನ್ 4) ಹುಟ್ಟುಹಬ್ಬ ಆಚರಿಕೊಂಡು 74ನೇ ವಸಂತಕ್ಕೆ ಕಾಲಿಟ್ಟ ಅವರಿಗೆ ನನ್ನ ಹೃದಯಾಂತರಾಳದ ಶುಭಾಶಯಗಳು.
****
ಕೊನೆಯದಾಗಿ…
ಮಹಾನ್ ವಾಗ್ಗೇಯಕಾರರಾದ ಅನ್ನಮಯ್ಯ ಅವರ ಜೀವನಚೆರಿತೆಯಲ್ಲಿ ಒಂದು ಪ್ರಸಂಗ ಬರುತ್ತದೆ. ಒಮ್ಮೆ ನಾರದರು ಮಾರುವೇಷದಲ್ಲಿ ಬಂದು, ಅನ್ನಮಯ್ಯ ಹರಿಭಕ್ತಿಗೆ ಮೆಚ್ಚಿ ತಮ್ಮ ತಂಬೂರಿಯನ್ನೇ ಅವರಿಗೆ ಕೊಟ್ಟುಬಿಟ್ಟು ಹೀಗೆ ಹೇಳಿದರಂತೆ..

“ಮರ್ಭಾಕ್ತಾಹಃ ಯತ್ರ ಗಾಯಂತಿ ತತ್ರತಿಷ್ಠಾಮಿ ನಾರದ..”
“ನಾರದ, ನಾನು ವೈಕುಂಠದಲ್ಲೂ ಇರಲ್ಲ, ಯೋಗಿಗಳ ಹೃದಯದಲ್ಲೂ ಇರುವುದಿಲ್ಲ. ಎಲ್ಲಿ ನನ್ನ ಭಕ್ತರು ಹಾಡುತ್ತಿರುವರೋ ಅಲ್ಲಿ ಪಟ್ಟಾಗಿ ಕೂತುಬಿಟ್ಟಿರುತ್ತೇನೆ. ನನಗೆ ಗಾಯನವೆಂದರೆ ಅಷ್ಟು ಪ್ರಾಣ.” ಸ್ವತಃ ಶ್ರೀಹರಿಯೇ ನನ್ನೊಂದಿಗೆ ಹೀಗೆ ಹೇಳಿದ್ದು ಎಂದು ನಾರದರು ಹೇಳುತ್ತಾರೆ..

ಗಾಯನವೆಂದರೆ ಶ್ರೀಹರಿಗೇ ಏಕೆ? ಶ್ರೀಸಾಮಾನ್ಯನಿಗೂ ಪರಮ ಇಷ್ಟ. ಶಾಸ್ತ್ರೀಯ ಸಂಗೀತದ ಪ್ರವೇಶವೇ ಇಲ್ಲದೇ ಸಪ್ತಸ್ವರಗಳನ್ನು ಆ ಸಾಮಾನ್ಯನ ಹೃದಯಕ್ಕೆ ಆಳವಾಗಿ ದಾಟಿಸಿದ ಬಾಲು ಅವರನ್ನು ಮಹಾನ್ ಗಾಯಕ ಎನ್ನದಿರಲು ಸಾಧ್ಯವೇ?

Tags: HamsalekhaMusicsp balasubrahmanyamspb
P K Channakrishna

P K Channakrishna

www.cknewsnow.com ಪ್ರಧಾನ ಸಂಪಾದಕ ಮತ್ತು ಸಂಸ್ಥಾಪಕ. ಪ್ರಿಂಟ್‌ ಮೀಡಿಯಾದಲ್ಲಿ 3 ದಶಕದಷ್ಟು ಸುದೀರ್ಘ ಅನುಭವ. ರಾಜಕೀಯ, ಕೃಷಿ, ಸಿನಿಮಾ, ಸಂಗೀತ, ಫೊಟೋಗ್ರಫಿ, ಪ್ರವಾಸ, ಸೋಶಿಯಲ್‌ ಮೀಡಿಯಾದಲ್ಲಿ ಆಸಕ್ತಿ. ಓದು ಅಚ್ಚುಮೆಚ್ಚು.

Related Posts

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

by cknewsnow desk
June 2, 2025
0

ರಾಜ್ಯದ ಹಿತರಕ್ಷಣೆಗೆ ಕೈ ಜೋಡಿಸುವಂತೆ ಕೇಂದ್ರ ಸಚಿವರು, ಸಂಸದರಿಗೆ ಡಿಸಿಎಂ ಡಿಕೆಶಿ ಮನವಿ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

Next Post
ಅಂಬಿ ಎಂದರೆ ಆನಂದ, ಅಂಬಿ ಎಂದರೆ ಆಶ್ಚರ್ಯ, ಅಂಬಿ ಎಂದರೆ ಸಂಭ್ರಮ

ಅಂಬಿ ಎಂದರೆ ಆನಂದ, ಅಂಬಿ ಎಂದರೆ ಆಶ್ಚರ್ಯ, ಅಂಬಿ ಎಂದರೆ ಸಂಭ್ರಮ

Comments 1

  1. Pingback: ಶ್ರೀಪತಿ ಪಂಡಿತಾರಾಧ್ಯುಲ ಬಾಲಸುಬ್ರಹ್ಮಣ್ಯಂ; ಹೃದಯವನ್ನೇ ಕೊರಳಾಗಿಸಿಕೊಂಡು ಹಾಡಿದ ಗಂಧರ್ವ - cknewsnow

Leave a Reply Cancel reply

Your email address will not be published. Required fields are marked *

Recommended

ಅನಿವಾರ್ಯವಾಗಿ ರಾಜಕಾರಣಕ್ಕೆ ಬಂದು ಹುತಾತ್ಮರಾದರು ರಾಜೀವ್ ಗಾಂಧಿ

ಅನಿವಾರ್ಯವಾಗಿ ರಾಜಕಾರಣಕ್ಕೆ ಬಂದು ಹುತಾತ್ಮರಾದರು ರಾಜೀವ್ ಗಾಂಧಿ

3 years ago
ಬೆಂಗಳೂರಿನ 31 ವಿದ್ಯಾರ್ಥಿಗಳಿಗೆ ಬಿಗ್ ರಿಲೀಫ್

ಬೆಂಗಳೂರಿನ 31 ವಿದ್ಯಾರ್ಥಿಗಳಿಗೆ ಬಿಗ್ ರಿಲೀಫ್

4 years ago

Popular News

  • ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

    ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

    0 shares
    Share 0 Tweet 0
  • ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

    0 shares
    Share 0 Tweet 0
  • ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

    0 shares
    Share 0 Tweet 0
  • ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

    0 shares
    Share 0 Tweet 0
  • ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

June 2, 2025
ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2025 cknewsnow | Website Design  by Karnatakabest Digital Services

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2025 cknewsnow | Website Design  by Karnatakabest Digital Services

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ