ಗ್ರಾಮೀಣ ಮಕ್ಕಳ ಅನುಕೂಲಕ್ಕಾಗಿ ಗುಡಿಬಂಡೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಯ ಉಪಕ್ರಮ
by GS Bharath Gudibande
ಗುಡಿಬಂಡೆ: ಎಸ್ಎಸ್ಎಲ್‌ಸಿ ಪರೀಕ್ಷೆಗೆ ಸಂಬಂಧಿಸಿದಂತೆ ಪೋಷಕರು ಹಾಗೂ ವಿದ್ಯಾರ್ಥಿಗಳಿಗೆ ಇರುವ ಸಂದೇಹಗಳು, ವಿಷಯದ ಕ್ಲಿಷ್ಟಾಂಶ, ಓಎಂಆರ್‌ನಲ್ಲಿ ಉತ್ತರಿಸುವ ವಿಧಾನ ಹಾಗೂ ಪರೀಕ್ಷಾ ಕೇಂದ್ರಗಳ ಬಗ್ಗೆ ಎಸ್ಎಸ್ಎಲ್‌ಸಿ ವಿದ್ಯಾರ್ಥಿಗಳಿಗೆ ಮಾಹಿತಿ ನೋಡುವ ಕುರಿತು ಸೋಮವಾರ, ಜುಲೈ 5 ರಂದು ಫೋನ್ ಇನ್ ಕಾರ್ಯಕ್ರಮ ಮಾಡಲಾಗುತ್ತಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶಪ್ಪ ಮಾಹಿತಿ ನೀಡಿದರು.
ಜೀವನದ ದಿಕ್ಕನ್ನು ಬದಲಾಯಿಸುವ ಎಸ್ಎಸ್ಎಲ್‌ಸಿ ಪರೀಕ್ಷೆಯ ಬಗ್ಗೆ ವಿದ್ಯಾರ್ಥಿಗಳಿಗೆ ಕೆಲವೊಂದು ಗೊಂದಲಗಳಿರಬಹುದು. ಅವುಗಳನ್ನು ಬಗೆಹರಿಸಲು ಪರೀಕ್ಷಾ ವಿಷಯದ ಬಗ್ಗೆ ಉತ್ತಮ ಜ್ಞಾನವನ್ನು ಹೊಂದಿರುವ ಶಿಕ್ಷಕರನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಸೇರಿಸಿ ಫೋನ್ ಕರೆಗಳ ಮೂಲಕ ಬಗೆಹರಿಸುವ ಒಂದು ವಿಭಿನ್ನ ಯೋಜನೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಕೈಗೊಂಡಿದ್ದಾರೆ.
ನುರಿತ ಶಿಕ್ಷಕರಿಂದ ಫೋನ್ ಇನ್
ವಿದ್ಯಾರ್ಥಿಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ಪ್ರತಿಯೊಂದು ವಿಷಯದ ಶಿಕ್ಷಕರ ಜೊತೆಗೆ ನೋಡೆಲ್ ಅಧಿಕಾರಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಉಪಸ್ಥಿತಿಯಲ್ಲಿ ಫೋನ್ ಇನ್ ಮೂಲಕ ವಿದ್ಯಾರ್ಥಿಗಳು ಸಂದೇಹಗಳನ್ನು ಪರಿಹರಿಸಲು ಯೋಜನೆ ಮಾಡಿದ್ದಾರೆ.
ಜುಲೈ ತಿಂಗಳಲ್ಲಿ ನಡೆಯುವ ಎಸ್ಎಸ್ಎಲ್‌ಸಿ ಪರೀಕ್ಷೆಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ಹಾಗೂ ಪೋಷಕರು ತಮ್ಮ ಸಂದೇಶಗಳನ್ನು ಬಗೆಹರಿಸಲು ನೇರವಾಗಿ ಶಿಕ್ಷಕರನ್ನು ಸಂಪರ್ಕಿಸಬಹುದು. ಮೊಬೈಲ್ ಸಂಖ್ಯೆಗಳು ಕೆಳಗಿನಂತಿವೆ.
ಕ್ಷೇತ್ರ ಶಿಕ್ಷಣಾಧಿಕಾರಿ: 9480695120
ನೋಡಲ್ ಅಧಿಕಾರಿ; 9481585810
ಕನ್ನಡ: ನಾರಾಯಣಸ್ವಾಮಿ: 9901991187
ಇಂಗ್ಲೀಷ್: ನಂದಾದೇವಿ-9482895531
ಹಿಂದಿ: ಗಿರಿಜಾಂಬ: 8880852223
ಗಣಿತ: ಹಿದಾಯತುಲ್ಲಾ-8762870983
ವಿಜ್ಞಾನ: ಕೆ.ಸಿ.ಮಂಜುನಾಥ್: 9449709402
ಸಮಾಜ ವಿಜ್ಞಾನ: ಉಮಾಶಂಕರ್: 9141442462
ಲಾಕ್‌ಡೌನ್ ನಂತರ ಪರೀಕ್ಷೆ ಆರಂಭವಾಗುತ್ತಿದೆ. ಪರೀಕ್ಷೆಯ ಬಗ್ಗೆ ಕೆಲವೊಂದು ಸಂದೇಹಗಳನ್ನು ನಿವಾರಿಸಿಕೊಳ್ಳಲು ಫೋನ್ ಇನ್ ಕಾರ್ಯಕ್ರಮ ಒಂದು ಉತ್ತಮ ವೇದಿಕೆ ಎಂದು ವಿದ್ಯಾರ್ಥಿಗಳ ಪೋಷಕರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.