• About
  • Advertise
  • Careers
  • Contact
Wednesday, May 6, 2026
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home EDITORS'S PICKS

ಮೋದಿ ಸಂಪುಟದಲ್ಲಿ ರಾಜ್ಯಕ್ಕೆ ಎರಡಲ್ಲ, ಒಂದೇ ಕ್ಯಾಬಿನೇಟು, ನಾಲ್ಕು ಸ್ಟೇಟು: ಕನ್ನಡಿಗರಿಗೆ ಲಾಭವೆಷ್ಟು?

P K Channakrishna by P K Channakrishna
July 10, 2021
in EDITORS'S PICKS, NATION, POLITICS
Reading Time: 10 mins read
0
ಯೋಗ ಸಂತಸದ ಜೀವನ ಮಾರ್ಗ ತೋರುತ್ತದೆ, ಸಾಮೂಹಿಕ ಆರೋಗ್ಯದಲ್ಲಿ ಧನಾತ್ಮಕ ಪಾತ್ರ ವಹಿಸುತ್ತದೆ ಎಂದ ನರೇಂದ್ರ ಮೋದಿ
1k
VIEWS
FacebookTwitterWhatsuplinkedinEmail

ನಗುಮೊಗದೊಂದಿಗೇ ನಿರ್ಗಮಿಸಿದ ಸದಾನಂದ ಗೌಡರು; ಇದರಿಂದ ರಾಜ್ಯಕ್ಕೆ ಆಗುವ ನಷ್ಟವೆಷ್ಟು?

ನಿರ್ಮಲಾ ಸೀತಾರಾಮನ್‌ ಹೆಸರಿಗಷ್ಟೇ ರಾಜ್ಯಕ್ಕೆ ಲೆಕ್ಕ!

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸಂಪುಟದ ಭಾರೀ ಪುನಾರಚನೆ ಮತ್ತು ವಿಸ್ತರಣೆ ಆಗಿದ್ದು, ರಾಜ್ಯದಿಂದ ನಾಲ್ವರು ಸೇರ್ಪಡೆಯಾಗಿದ್ದಾರೆ. ಆದರೆ, ಯಾರೊಬ್ಬರಿಗೂ ಸಂಪುಟ ದರ್ಜೆ ಸಿಕ್ಕಿಲ್ಲ.

ಈವರೆಗೆ, ಪ್ರಹ್ಲಾದ ಜೋಶಿ ಹಾಗೂ ಡಿ.ವಿ.ಸದಾನಂದ ಗೌಡರು ಸಂಪುಟ ದರ್ಜೆ ಸಚಿರಾಗಿದ್ದರು. ಕೆಲ ತಿಂಗಳ ಹಿಂದೆ ಅಗಲಿದ ಸುರೇಶ ಅಂಗಡಿ ಅವರೂ ಸಂಪುಟ ದರ್ಜೆ ಅಲ್ಲದ ಸ್ವತಂತ್ರ ಖಾತೆ ಹೊಂದಿದ್ದರು. ಈಗ ಗೌಡರು ಸಂಪುಟದಿಂದ ಹೊರಬಿದ್ದಿದ್ದಾರೆ. ಹೀಗಾಗಿ ಕ್ಯಾಬಿನೆಟ್‌ ಸಭೆಯಲ್ಲಿ ದನಿ ಎತ್ತಲು ರಾಜ್ಯಕ್ಕೆ ಈಗ ಉಳಿದಿರುವುದು ಒಬ್ಬರು ಮಾತ್ರ. ಇನ್ನು, ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾಗಿ ಕೇಂದ್ರದಲ್ಲಿ ಹಣಕಾಸು ಸಚಿವೆಯಾಗಿರುವ ನಿರ್ಮಲಾ ಸೀತಾರಾಮನ್‌ ಅವರು ಲೆಕ್ಕಕ್ಕಷ್ಟೇ.

ರಾಜ್ಯಸಭೆ ಸದಸ್ಯ ರಾಜೀವ್‌ ಚಂದ್ರಶೇಖರ್‌, ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ, ಚಿತ್ರದುರ್ಗದ ಆನೇಕಲ್‌ನಾರಾಯಣ ಸ್ವಾಮಿ ಹಾಗೂ ಬೀದರ್‌ನ ಭಗವಂತ ಖೂಬಾ ರಾಜ್ಯ ಸಚಿವರಾಗಿ ಪ್ರಮಾಣ ಸ್ವೀಕಾರ ಮಾಡಿದ್ದಾರೆ. ಇದು ಕರ್ನಾಟಕಕ್ಕೆ ಲಾಭವೋ ನಷ್ಟವೋ ಎಂಬ ಲೆಕ್ಕಾಚಾರ ಈಗ ಶುರುವಾಗಿದೆ.

ಕೋವಿಡ್‌ ಎರಡನೇ ಅಲೆಯಲ್ಲಿ ರಾಜ್ಯದ ಪರವಾಗಿ ದಿಲ್ಲಿಯಲ್ಲಿ ಕ್ರಿಯಾಶೀಲರಾಗಿ ಕೆಲಸ ಮಾಡಿದ್ದ ಡಿ.ವಿ.ಸದಾನಂದ ಗೌಡರು, ರಾಸಾಯನಿಕ & ರಸಗೊಬ್ಬರ ಖಾತೆ ಸಚಿವರಾಗಿ ರಾಜ್ಯಕ್ಕೆ ಸಾಕಷ್ಟು ಕೆಲಸ ಮಾಡಿದ್ದರು. ಕೋವಿಡ್‌ಗೆ ಔಷಧಿ, ಮುಖ್ಯವಾಗಿ ರೆಮಿಡಿಸಿವರ್‌, ಬ್ಲ್ಯಾಕ್‌ ಫಂಗಸ್‌ ಔಷಧಿ ಕೊರತೆ ಉಂಟಾದಾಗ ಕ್ಷಣಕ್ಷಣಕ್ಕೂ ನೆರವಿಗೆ ಬಂದವರೇ ಇದೇ ಡಿವಿಎಸ್.‌ ಆದರೆ, ಮುಂದಿನ ದಿನಗಳಲ್ಲಿ ಕೇಂದ್ರದಿಂದ ಇಂಥ ತತ್‌ಕ್ಷಣದ ಫೇವರ್‌ ಸಿಗುವುದು ಕಷ್ಟ.

ಮುಖ್ಯವಾಗಿ ನಗುಮೊಗದಿಂದ ಎಲ್ಲರನ್ನೂ ಮಾತನಾಡಿಸುವ ಸದಾನಂದ ಗೌಡರಿಗೆ ಅತ್ಯುತ್ತಮ ಕಮ್ಯುನಿಕೇಷನ್‌ ಸ್ಕಿಲ್‌ ಇತ್ತು. ಯಾರನ್ನೇ ಬೇಕಾದರೂ ತಮ್ಮ ಸಜ್ಜನಿಕೆ, ಸರಳತೆ ಹಾಗೂ ನಗುಮೊಗದಿಂದಲೇ ಕಟ್ಟಿಹಾಕುವ ಗುಣ ಅವರಲ್ಲಿತ್ತು. ಪ್ರಹ್ಲಾದ ಜೋಶಿ ಅವರಿಗೆ ಈ ಎಲ್ಲ ಗುಣಗಳು ಇವೆಯಾದರೂ ರಾಜ್ಯದ ಮಟ್ಟಿಗೆ ಮುಂದಿನ ದಿನಗಳಲ್ಲಿ ಅವರಿಗೆ ಒತ್ತಡ ಹೆಚ್ಚಾಗುವುದು ಖಚಿತ. ಅದಕ್ಕೂ ಮಿಗಿಲಾಗಿ, ಸಾಮಾನ್ಯರಿಗೆ ನೇರವಾಗಿ ಟಚ್‌ ಆಗುವಂಥ ಖಾತೆಗಳು ಅವರಲ್ಲಿ ಇಲ್ಲ. ಅವರ ಸಂಸದೀಯ ವ್ಯವಹಾರ ಹಾಗೂ ಗಣಿ ಖಾತೆಗಳನ್ನು ಕಟ್ಟಿಕೊಂಡು ಕರ್ನಾಟಕ ಶ್ರೀಸಾಮಾನ್ಯನಿಗೆ ಏನಾಗಬೇಕು?

  • ಎ.ನಾರಾಯಣಸ್ವಾಮಿ, ಶೋಭಾ ಕರಂದ್ಲಾಜೆ, ಭಗವಂತ ಖುಬಾ & ರಾಜೀವ್‌ ಚಂದ್ರಶೇಖರ್

ಹೊಸಬರಿಂದ ಏನು ಸಾಧ್ಯ?

ಬುಧವಾರ ಹೊಸದಾಗಿ ಸಂಪುಟಕ್ಕೆ ಸೇರಿರುವ ʼಕ್ಯಾಬಿನೆಟ್‌ ದರ್ಜೆ ರಹಿತʼ ಸಚಿವರು ಕೆಲಸ ಮಾಡುವುದಿಲ್ಲವೇ ಎಂಬ ಮಾತು ಸಹಜ. ಈ ಅನುಮಾನ ತಪ್ಪಲ್ಲ. ಆದರೆ, ಇವರೆಲ್ಲರೂ ಕ್ಯಾಬಿನೆಟ್‌ ಸಚಿವರೊಬ್ಬರ ಅಧೀನದಲ್ಲಿ ಕೆಲಸ ಮಾಡಬೇಕಾಗುತ್ತದೆ. ಒಂದು ವೇಳೆ ಸ್ವತಂತ್ರ ನಿರ್ವಹಣೆ ಸಿಕ್ಕಿದರೆ ಪರವಾಗಿಲ್ಲ. ಖಾತೆ ಹಂಚಿಕೆಯಾದ ಮೇಲೆ ಏನಾದರೂ ಈ ಬಗ್ಗೆ ಹೇಳಬಹುದು. ಸದ್ಯಕ್ಕೆ ನಾಲ್ವರೂ ರಾಜ್ಯ ಸಚಿವರಷ್ಟೇ. ಹೀಗಾಗಿ ಕೇಂದ್ರ ಸಂಪುಟದಲ್ಲಿ ನಾಲ್ವರು ನಮ್ಮ ಮಂತ್ರಿಗಳಿದ್ದಾರೆಂದು ಕನ್ನಡಿಗರು ಬೀಗುವ ಹಾಗೇನೂ ಇಲ್ಲ.

ಕನ್ನಡಿಗರೆಲ್ಲರಿಗೂ ಗೊತ್ತಿರುವಂತೆ ಇವರಲ್ಲಿ ಯಾರೂ ಮೋದಿ, ಅಮಿತ್‌ ಶಾ ಇಲ್ಲವೇ ಕೇಂದ್ರದ ಯಾವ ಸಚಿವರೊಬ್ಬರ ಎದುರು ಕರ್ನಾಟಕಕ್ಕಾಗಿ ತೋಳೇರಿಸಿ ಮಾತನಾಡಿ ರಾಜ್ಯಕ್ಕಾಗಿ ಧಕ್ಕಿಸಿಕೊಂಡಿದ್ದೇನೂ ಇಲ್ಲ. ಇರುವುದರಲ್ಲಿ ತಮ್ಮ ಕುಶಲ ಮಾತುಕತೆಯಿಂದ ಸದಾನಂದ ಗೌಡರು ಸ್ವಲ್ಪ ಮಟ್ಟಿಗೆ ಕೆಲಸ ಸಾಧಿನೆ ಮಾಡಿಕೊಂಡಿದ್ದರು.

ಶೋಭಾ ಕರಂದ್ಲಾಜೆ ಅವರು ಡೈನಾಮಿಕ್‌ ವ್ಯಕ್ತಿತ್ವದವರೇನೋ ನಿಜ. ಆದರೆ, ದಿಲ್ಲಿಯಲ್ಲಿ ಹಿಂದಿಯವರ ಬಲಿಷ್ಠ ಲಾಬಿಯ ಮುಂದೆ ಇವರು ಹೇಗೆ ಖಾತೆಯನ್ನು ನಿರ್ವಹಿಸುತ್ತಾರೆ ಎಂಬುದೇ ಪ್ರಶ್ನೆ. ಇನ್ನು, ರಾಜೀವ್‌ ಚಂದ್ರಶೇಖರ್‌ ಅವರಿಗೆ ಎಲ್ಲ ರೀತಿಯ ಸ್ಕಿಲ್‌ ಇದೆಯಾದರೂ ಅವರು ಹೇಳಿಕೇಳಿ ಬ್ಯುಸಿನೆಸ್‌ಮನ್.‌ ಹಿತಾಸಕ್ತಿಗಳ ಸಂಘರ್ಷದ ಬಗ್ಗೆ ಅನುಮಾನಗಳಿವೆ. ಉಳಿದಂತೆ, ನಾರಾಯಣಸ್ವಾಮಿ ಕೊಂಚ ಮಟ್ಟಿಗೆ ಸದಾನಂದಗೌಡರನ್ನು ರೀ ಪ್ಲೇಸ್‌ ಮಾಡಬಹದುದೇನೋ. ಆದರೆ, ಅವರಿಗೆ ಸಿಕ್ಕಿರುವ ರಾಜ್ಯ ಸಚಿವ ಸ್ಥಾನಮಾನಕ್ಕೆ ಅಷ್ಟೇನೂ ಕಿಮ್ಮತ್ತಿರುವುದಿಲ್ಲ, ಫೈನಲ್ಲಾಗಿ ಭಗವಂತ ಖೂಬಾ ಬಗ್ಗೆ ಹೇಳುವಂತೆ ಇಲ್ಲ. ಅವರು ಸಂಪುಟಕ್ಕೆ ಸೇರಿದ್ದಕ್ಕಿಂತ ಅವರು ಸಂಪುಟಕ್ಕೆ ಸೇರಲು ಕಾರಣರಾದವರ ಬಗ್ಗೆ ಹೆಚ್ಚು ಚರ್ಚೆ ಆಗುತ್ತಿದೆ.

ಇದೇ ವೇಳೆ ತಡರಾತ್ರಿಗೆ ಮುನ್ನವೇ ಹೊಸ ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡಲಾಗಿದೆ. ನಮ್ಮ ರಾಜ್ಯದ ಸ್ಟೇಟ್ ದರ್ಜೆಯ ಸಚಿವರುಗಳಾದ ರಾಜೀವ್ ಚಂದ್ರಶೇಖರ್ ಅವರಿಗೆ ಐಟಿ ಖಾತೆಯ ಜತೆಗೆ ಸ್ಕಿಲ್ ಡೆವಲಪ್ ಮೆಂಟ್ ಖಾತೆ ನೀಡಲಾಗಿದೆ. ಶೋಭಾ ಕರಂದ್ಲಾಜೆ ಅವರಿಗೆ ಕೃಷಿ ಮತ್ತು ರೈತರ ಕಲ್ಯಾಣ, ನಾರಾಯಣ ಸ್ವಾಮಿ ಅವರಿಗೆ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಹಾಗೂ ಭಗವಂತ ಖೂಬಾ ಅವರಿಗೆ ರಸಗೊಬ್ಬರ ಖಾತೆ ಹಾಗೂ ನವೀಕರಿಸಬಹುದಾದ ಇಂಧನ ಖಾತೆ ನೀಡಲಾಗಿದೆ.

ಈ ಖಾತೆಗಳ ಹಂಚಿಕೆಯಲ್ಲಿ ಒಂದು ಸಣ್ಣ ಭರವಸೆ ಇದೆ. ಐಟಿ & ಕೌಶಲ್ಯಾಭಿವೃದ್ಧಿ ಖಾತೆಗಳಿಂದ ರಾಜೀವ್‌ ಚಂದ್ರಶೇಖರ್‌ ಅವರಿಂದ ಏನಾದರೂ ನಿರೀಕ್ಷೆ ಮಾಡಬಹುದಾ? ಕಾದು ನೋಡಬೇಕು. ಮುಖ್ಯವಾಗಿ ರಾಜ್ಯದ ಮಟ್ಟಿಗೆ ಇವೆರಡೂ ಖಾತೆಗಳು ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಅವರಲ್ಲಿವೆ. ಹೀಗಾಗಿ ಸ್ವಲ್ಪಮಟ್ಟಿಗೆ ಅನುಕೂಲ ಆಗಬಹುದು. ಉಳಿದಂತೆ ಕೃಷಿ ಸಹಾಯಕ ಸಚಿವರಾದ ಶೋಭಾ ಕರಂದ್ಲಾಜೆ ಅವರು ಕ್ಯಾಬಿನೆಟ್‌ ದರ್ಜೆ ಸಚಿವ ನರೇಂದ್ರ ಸಿಂಗ್‌ ತೋಮರ್‌ ಜತೆ ಕೆಲಸ ಮಾಡಬೇಕು. ಕೇಂದ್ರ ಸರಕಾರ ತಂದಿರುವ ವಿವಾದಿತ ಕೃಷಿ ಕಾಯ್ದೆಗಳನ್ನು ಅವರು ದೇಶದ ಉದ್ದಗಲಕ್ಕೂ ಸಮರ್ಥಿಸಿಕೊಂಡು ಓಡಾಡಬೇಕಿದೆ.

ರಾಜೀವ್‌ ಚಂದ್ರಶೇಖರ್‌ ಅವರು ಕೌಶಲ್ಯಾಭಿವೃದ್ಧಿ ಖಾತೆಗೆ ಸಂಬಂಧಿಸಿ ಧರ್ಮೇಂದ್ರ ಪ್ರಧಾನ್‌ ಜತೆ ಹಾಗೂ ಐಟಿ ಖಾತೆಗೆ ಸಂಬಂಧಿಸಿ ಅಶ್ವಿನಿ ವೈಷ್ಣವ್‌ ಅವರೊಂದಿಗೆ ಕೆಲಸ ಮಾಡಬೇಕು. ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ಪಡೆದಿರುವ ನಾರಾಯಣ ಸ್ವಾಮಿ ಅವರು ಡಾ.ವೀರೇಂದ್ರ ಕುಮಾರ್‌ ಜತೆ ಕಾರ್ಯ ನಿರ್ವಹಿಸಬೇಕು. ಕೊನೆಗೆ ರಸಗೊಬ್ಬರ ಖಾತೆ ಪಡೆದಿರುವ ಭಗವಂತ ಖೂಬಾ ಅವರು ಮನ್ಸುಖ್‌ ಮಾಂಡವೀಯಾ ಜತೆ ಕೆಲಸ ಮಾಡಬೇಕು. ಇವರೆಲ್ಲರೂ ತಮ್ಮ ಸೀನಿಯರ್‌ಗಳ ಜತೆ ಹೇಗೆ ಕೆಲಸ ಮಾಡುತ್ತಾರೆಂಬ ಕುತೂಹಲ ರಾಜ್ಯದ ಜನರಿಗಿದೆ.

ಕೋವಿಡ್‌ ಸಂಕಷ್ಟ ಕಾಲದಲ್ಲಿ ಕನ್ನಡಿಗರೊಬ್ಬರ ಕೈಯ್ಯಲ್ಲಿ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಇತ್ತು. ಹೀಗಾಗಿ ಕರ್ನಾಟಕ ಸರಕಾರ ಎರಡನೇ ಅಲೆ ಸಂದರ್ಭದಲ್ಲಿ ಸಾಕಷ್ಟು ಲಾಭ ಹೊಂದಿತ್ತು. ಹೆಚ್ಚು ಸೋಂಕಿತರಿದ್ದ ಮಹಾರಾಷ್ಟ್ರಕ್ಕೆ ಸರಿ ಸಮಾನವಾಗಿ ರಾಜ್ಯಕ್ಕೆ ಔಷಧ ಇತ್ಯಾದಿಗಳು ದೊರೆತಿದ್ದವು.

ದಿಲ್ಲಿಯಲ್ಲಿ ರಾಜ್ಯಕ್ಕೆ ಶೂನ್ಯ‌ ಸ್ಥಿತಿ?

ಹೊಸ ನಾಯಕರು ಬರಬಾರದು ಅಥವಾ ಬೆಳೆಯಬಾರದು ಎಂದರ್ಥವಲ್ಲ. ಈಗ ಬಂದ ಹೊಸ ಸಚಿವರ ಮೇಲೆ ಕನ್ನಡಿಗರಿಗೆ ಬೆಟ್ಟದಷ್ಟು ನಿರೀಕ್ಷೆ ಇದೆ. ಅದೆಲ್ಲವನ್ನೂ ಅವರು ಸಾಕಾರ ಮಾಡುತ್ತಾರಾ? ಎನ್ನುವುದೇ ಪ್ರಶ್ನೆ. ಅನಂತಕುಮಾರ್‌ ಇದ್ದಾಗ ದಿಲ್ಲಿಯಲ್ಲಿ ಯಾವುದೇ ಸರಕಾರ ಇದ್ದರೂ ಕರ್ನಾಟಕ ಸ್ಟ್ರಾಂಗ್‌ ಆಗಿಯೇ ಇತ್ತು. ಅವರ ಅಗಲಿಕೆ ನಂತರ ಅವರನ್ನು ಭರ್ತಿ ಮಾಡಲು ಯಾರಿಗೂ ಆಗಿಲ್ಲ. ಪ್ರಹ್ಲಾದ್‌ ಜೋಶಿ ಅವರು ಟ್ರೈ ಮಾಡುತ್ತಿದ್ದಾರಾದರೂ ವರಿಷ್ಠರ ಬಿಗಿ ಹಿಡಿತ ಮುಂದೆ ಏನೇನೂ ಸಾಧ್ಯವಾಗುತ್ತಿಲ್ಲ. ಇದು ಅನೇಕ ಸಲ ಸಾಬೀತಾಗಿರುವ ಸತ್ಯ. ಸುರೇಶ ಅಂಗಡಿ ಅವರು ತಮ್ಮ ಇತಿಮಿತಿಯಲ್ಲಿ ರಾಜ್ಯಕ್ಕಾಗಿ ಕೆಲಸ ಮಾಡಿದ್ದರು.  

ಸದ್ಯಕ್ಕೆ, ರಾಜ್ಯಕ್ಕೆ ಕೇಂದ್ರದ ಜತೆ ಜಿಎಸ್‌ಟಿ ಪಾಲಿನ ಸಮಸ್ಯೆ ಇದೆ, ರಾಜ್ಯ ಮತ್ತು ಕೇಂದ್ರದ ನಡುವೆ ಇದಕ್ಕೆ ಸಂಬಂಧಿಸಿದ ದೊಡ್ಡದೇ ಎನ್ನುವಷ್ಟು ಬಿಕ್ಕಟ್ಟಿದೆ. ಈ ವಿಷಯದಲ್ಲಿ ನಿರ್ಮಲಾ ಸೀತಾರಾಮನ್‌ ರಾಜ್ಯಕ್ಕೆ ಮಾಡಿರುವ ಫೇವರ್‌ ಬಗ್ಗೆ ಎಲ್ಲರೂ ಮಾತನಾಡಿಕೊಳ್ಳುತ್ತಿದ್ದಾರೆ. ಹದಿನೈದನೇ ಹಣಕಾಸು ಆಯೋಗದ ಶಿಫಾರಸಿನಂತೆ ರಾಜ್ಯಕ್ಕೆ ನ್ಯಾಯಯುತವಾಗಿ ಬರಬೇಕಿದ್ದ ₹ 5,495 ಕೋಟಿ ರೂ.ಗಳನ್ನು ತಡೆದಿದ್ದೇ ನಿರ್ಮಲಾ ಸೀತಾರಾಮನ್‌ ಎಂದು ನಾಲ್ಕು ದಿನಗಳ ಹಿಂದೆ ಸಿದ್ದರಾಮಯ್ಯ ನೇರವಾಗಿ ಆರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ನೋಡಿದರೆ ಪಕ್ಕದ ರಾಜ್ಯದ ನಿರ್ಮಲಾ ನಮ್ಮನ್ನು ಕೇಂದ್ರ ಸಂಪುಟದಲ್ಲಿ ಕ್ಯಾಬಿನೇಟ್‌ ಮಂತ್ರಿಯಾಗಿ ಪ್ರತಿನಿಧಿಸುತ್ತಾರೆಂದು ಬಡಾಯಿ ಕೊಚ್ಚಿಕೊಳ್ಳಬೇಕಷ್ಟೇ

ಇನ್ನು, ಮೇಕೆದಾಟು ಯೋಜನೆ ಬಗ್ಗೆ ರಾಜ್ಯದ ಜತೆ ತಮಿಳುನಾಡು ತಗಾದೆ ಇದೆ. ಕೋವಿಡ್‌ ವಿಷಯದಲ್ಲಿ ಕೇಂದ್ರದಿಂದ ಸಕಾಲಿಕವಾದ ಉದಾರ ನೆರವು ಅಗತ್ಯ. ಇನ್ನೇನು ಮೂರನೇ ಅಲೆ ಅಪ್ಪಳಿಸುವುದರಲ್ಲಿದೆ. ಪರಮ ಲೆಕ್ಕಾಚಾರಿಯಾದ ಮೋದಿಯವರ ಜತೆ ವ್ಯವಹರಿಸುವ ಜಾಣ್ಮೆಯುಳ್ಳವರು ಬೇಕು. ವರ್ಷಕ್ಕೆ ಒಮ್ಮೆಯಾದರೂ ಪ್ರವಾಹದಿಂದ ತತ್ತರಿಸುವ ಉತ್ತರ ಕರ್ನಾಟಕಕ್ಕೆ ದಿಲ್ಲಿಯ ಸಹಾಯ ಹಸ್ತ ಬಹಳ ಮುಖ್ಯ. ಯಡಿಯೂರಪ್ಪ ಅವರ ಸರಕಾರ ಬಂದ ಹೊಸದರಲ್ಲಿ ಸಂಭವಿಸಿದ ಪ್ರವಾಹದ ವೇಳೆ ಕೇಂದ್ರವು ರಾಜ್ಯದ ಬಗ್ಗೆ ತೋರಿದ ನಿರ್ಲಕ್ಷ್ಯ ಎಲ್ಲರೂ ಬಲ್ಲರು. ಇವುಗಳ ಜತೆ ರೈಲ್ವೆ ಯೋಜನೆ, ಕೈಗಾರಿಕೆ, ವಿತ್ತೀಯ ನ್ಯಾಯ ಹೀಗೆ ಬೇಕಾದಷ್ಟಿವೆ.

ಮುಂದಿನ ದಿನಗಳಲ್ಲಿ ದಿಲ್ಲಿಯಲ್ಲಿ ರಾಜ್ಯದ ಪರ ಲಾಬಿ ಹೆಚ್ಚುವುದಿಲ್ಲ. ಒಂದು ವೇಳೆ ಹೆಚ್ಚಿದರೆ ಅದಕ್ಕಿಂತ ಸಂತೋಷ ಇನ್ನೇನಿಲ್ಲ.

ಯಾರಿಗೆ ಯಾವ ಖಾತೆ?

ಖಾತೆಗಳನ್ನು ಹಂಚುವ ಬಗ್ಗೆ ಮೋದಿ ಅವರಲ್ಲಿ ಚೌಕಾಶಿಗೆ ಅವಕಾಶವೇ ಇಲ್ಲ. ಹೀಗಾಗಿ ತಡರಾತ್ರಿಗೆ ಮುನ್ನವೇ ಖಾತೆ ವಿವರ ಪ್ರಕಟವಾಯಿತು. ಹೊಸದಾಗಿ ಸೃಷ್ಟಿ ಮಾಡಲಾಗಿರುವ ಸಹಕಾರ ಖಾತೆಯನ್ನು ಅಮಿತ್‌ ಶಾಗೆ ನೀಡಲಾಗಿದೆ. ಮೊದಲು ಪೆಟ್ರೋಲಿಯಂ ಖಾತೆ ಹೊಂದಿದ್ದ ಧರ್ಮೇಂದ್ರ ಪ್ರಧಾನ್‌ ಅವರಿಗೆ ಈ ಬಾರಿ ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತಾ ಖಾತೆ ಕೊಡಲಾಗಿದೆ. ಜ್ಯೋತಿರಾದಿತ್ಯ ಸಿಂಧಿಯಾಗೆ ನಾಗರೀಕ ವಿಮಾನಯಾನ ನೀಡಲಾಗಿದೆ. ಉಳಿದ ವಿವರ ಈ ಕೆಳಗಿನಂತಿದೆ.

Shri Narendra ModiPrime Minister and also in-charge of:Ministry of Personnel, Public Grievances and Pensions;Department of Atomic Energy;Department of Space;All important policy issues; andAll other portfolios not allocated to any Minister

CABINET MINISTERS

1.Shri Raj Nath SinghMinister of Defence
2.Shri Amit ShahMinister of Home Affairs; and Minister of Cooperation
3.Shri Nitin Jairam GadkariMinister of Road Transport and Highways
4.Smt. Nirmala SitharamanMinister of Finance; andMinister of Corporate Affairs
5.Shri Narendra Singh TomarMinister of Agriculture and Farmers Welfare
6.Dr. Subrahmanyam JaishankarMinister of External Affairs
7.Shri Arjun MundaMinister of Tribal Affairs
8.Smt. Smriti Zubin IraniMinister of Women and Child Development
9.Shri Piyush GoyalMinister of Commerce and Industry;Minister of Consumer Affairs, Food and Public Distribution; andMinister of Textiles
10.Shri Dharmendra PradhanMinister of Education; andMinister of Skill Development and Entrepreneurship
11.Shri Pralhad JoshiMinister of

Parliamentary Affairs;Minister of Coal; andMinister of Mines
12.Shri Narayan Tatu RaneMinister of Micro, Small and Medium Enterprises
13.Shri Sarbananda SonowalMinister of Ports, Shipping and Waterways; andMinister of AYUSH
14.Shri Mukhtar Abbas NaqviMinister of Minority Affairs
15.Dr. Virendra KumarMinister of Social Justice and Empowerment
16.Shri Giriraj SinghMinister of Rural Development; andMinister of Panchayati Raj
17.Shri Jyotiraditya M. ScindiaMinister of Civil Aviation
18.Shri Ramchandra Prasad SinghMinister of Steel
19.Shri Ashwini VaishnawMinister of Railways;Minister of Communications; andMinister of Electronics and Information Technology

CABINET MINISTERS (CONTD.)

20.Shri Pashu Pati Kumar ParasMinister of Food Processing Industries
21.Shri Gajendra Singh ShekhawatMinister of Jal Shakti
 22.Shri Kiren RijijuMinister of Law and Justice
23.Shri Raj Kumar SinghMinister of Power; andMinister of New and Renewable Energy
24.Shri Hardeep Singh PuriMinister of Petroleum and Natural Gas; andMinister of Housing and Urban Affairs
25.Shri Mansukh MandaviyaMinister of Health and Family Welfare; andMinister of Chemicals and Fertilizers
26.Shri Bhupender YadavMinister of Environment, Forest and Climate Change; andMinister of Labour and Employment
27.Dr. Mahendra Nath PandeyMinister of Heavy Industries
28.Shri Parshottam RupalaMinister of Fisheries, Animal Husbandry and Dairying
29.Shri G. Kishan ReddyMinister of Culture;Minister of Tourism; andMinister of Development of North Eastern Region
30.Shri Anurag Singh ThakurMinister of Information and Broadcasting; andMinister of Youth Affairs and Sports

MINISTERS OF STATE (INDEPENDENT CHARGE)

1.Rao Inderjit SinghMinister of State (Independent Charge) of the Ministry of Statistics and Programme Implementation;Minister of State (Independent Charge) of the Ministry of Planning; andMinister of State in the Ministry of Corporate Affairs
2.Dr. Jitendra SinghMinister of State (Independent Charge) of the Ministry of Science and Technology;Minister of State (Independent Charge) of the Ministry of Earth Sciences;Minister of State in the Prime Minister’s Office;Minister of State in the Ministry of Personnel, Public Grievances and Pensions;Minister of State in the Department of Atomic Energy; andMinister of State in the Department of Space

MINISTERS OF STATE

1.Shri Shripad Yesso NaikMinister of State in the Ministry of Ports, Shipping and Waterways; andMinister of State in the Ministry of Tourism
2.Shri Faggansingh KulasteMinister of State in the Ministry of Steel; andMinister of State in the Ministry of Rural Development

MINISTERS OF STATE (CONTD.)

3.Shri Prahalad Singh PatelMinister of State in the Ministry of Jal Shakti; andMinister of State in the Ministry of Food Processing Industries
4.Shri Ashwini Kumar ChoubeyMinister of State in the Ministry of Consumer Affairs, Food and Public Distribution; andMinister of State in the Ministry of Environment, Forest and Climate Change
5.Shri Arjun Ram MeghwalMinister of State in the Ministry of Parliamentary Affairs; andMinister of State in the Ministry of Culture
6.General (Retd.) V. K. SinghMinister of State in the Ministry of Road Transport and Highways; andMinister of State in the Ministry of Civil Aviation
7.Shri Krishan PalMinister of State in the Ministry of Power; andMinister of State in the Ministry of Heavy Industries
8.Shri Danve Raosaheb DadaraoMinister of State in the Ministry of Railways;Minister of State in the Ministry of Coal; andMinister of State in the Ministry of Mines
9.Shri Ramdas AthawaleMinister of State in the Ministry of Social Justice and Empowerment
10.Sadhvi Niranjan JyotiMinister of State in the Ministry of Consumer Affairs, Food and Public Distribution; andMinister of State in the Ministry of Rural Development
11.Dr. Sanjeev Kumar BalyanMinister of State in the Ministry of Fisheries, Animal Husbandry and Dairying

MINISTERS OF STATE (CONTD.)

12.Shri Nityanand RaiMinister of State in the Ministry of Home Affairs
13.Shri Pankaj ChaowdharyMinister of State in the Ministry of Finance
14.Smt. Anupriya Singh PatelMinister of State in the Ministry of Commerce and Industry
15.Prof. S. P. Singh BaghelMinister of State in the Ministry of Law and Justice
16.Shri Rajeev ChandrasekharMinister of State in the Ministry of Skill Development and Entrepreneurship; andMinister of State in the Ministry of Electronics and Information Technology
17.Sushri Shobha KarandlajeMinister of State in the Ministry of Agriculture and Farmers Welfare
18.Shri Bhanu Pratap Singh VermaMinister of State in the Ministry of Micro, Small and Medium Enterprises
19.Smt. Darshana Vikram JardoshMinister of State in the Ministry of Textiles; andMinister of State in the Ministry of Railways
20.Shri V. MuraleedharanMinister of State in the Ministry of External Affairs; andMinister of State in the Ministry of Parliamentary Affairs
21.Smt. Meenakashi LekhiMinister of State in the Ministry of External Affairs; andMinister of State in the Ministry of Culture
22.Shri Som ParkashMinister of State in the Ministry of Commerce and Industry

MINISTERS OF STATE (CONTD.)

23.Smt. Renuka Singh SarutaMinister of State in the Ministry of Tribal Affairs
24.Shri Rameswar TeliMinister of State in the Ministry of Petroleum and Natural Gas; andMinister of State in the Ministry of Labour and Employment
25.Shri Kailash ChoudharyMinister of State in the Ministry of Agriculture and Farmers Welfare
26.Smt. Annpurna DeviMinister of State in the Ministry of Education
27.Shri A. NarayanaswamyMinister of State in the Ministry of Social Justice and Empowerment
28.Shri Kaushal KishoreMinister of State in the Ministry of Housing and Urban Affairs
29.Shri Ajay BhattMinister of State in the Ministry of Defence; andMinister of State in the Ministry of Tourism
30.Shri B. L. VermaMinister of State in the Ministry of Development of North Eastern Region; andMinister of State in the Ministry of Cooperation
31.Shri Ajay KumarMinister of State in the Ministry of Home Affairs
32.Shri Devusinh ChauhanMinister of State in the Ministry of Communications

MINISTERS OF STATE (CONTD.)

33.Shri Bhagwanth KhubaMinister of State in the Ministry of New and Renewable Energy; andMinister of State in the Ministry of Chemicals and Fertilizers
34.Shri Kapil Moreshwar PatilMinister of State in the Ministry of Panchayati Raj
35.Sushri Pratima BhoumikMinister of State in the Ministry of Social Justice and Empowerment
36.Dr. Subhas SarkarMinister of State in the Ministry of Education
37.Dr. Bhagwat Kishanrao KaradMinister of State in the Ministry of Finance
38.Dr. Rajkumar Ranjan SinghMinister of State in the Ministry of External Affairs; andMinister of State in the Ministry of Education
39.Dr. Bharati Pravin PawarMinister of State in the Ministry of Health and Family Welfare
40.Shri Bishweswar TuduMinister of State in the Ministry of Tribal Affairs; andMinister of State in the Ministry of Jal Shakti
41.Shri Shantanu ThakurMinister of State in the Ministry of Ports, Shipping and Waterways
42.Dr. Munjapara MahendrabhaiMinister of State in the Ministry of Women and Child Development; andMinister of State in the Ministry of AYUSH
43.Shri John BarlaMinister of State in the Ministry of Minority Affairs

MINISTERS OF STATE (CONTD.)

44.Dr. L. MuruganMinister of State in the Ministry of Fisheries, Animal Husbandry and Dairying; andMinister of State in the Ministry of Information and Broadcasting
45.Shri Nisith PramanikMinister of State in the Ministry of Home Affairs; andMinister of State in the Ministry of Youth Affairs and Sports

Tags: cabinet reshuffle 2021cknewsnowdv sadananda gowdaindia council of ministers in indiakarnaraka ministersnarendra modinews and views
P K Channakrishna

P K Channakrishna

www.cknewsnow.com ಪ್ರಧಾನ ಸಂಪಾದಕ ಮತ್ತು ಸಂಸ್ಥಾಪಕ. ಪ್ರಿಂಟ್‌ ಮೀಡಿಯಾದಲ್ಲಿ 3 ದಶಕದಷ್ಟು ಸುದೀರ್ಘ ಅನುಭವ. ರಾಜಕೀಯ, ಕೃಷಿ, ಸಿನಿಮಾ, ಸಂಗೀತ, ಫೊಟೋಗ್ರಫಿ, ಪ್ರವಾಸ, ಸೋಶಿಯಲ್‌ ಮೀಡಿಯಾದಲ್ಲಿ ಆಸಕ್ತಿ. ಓದು ಅಚ್ಚುಮೆಚ್ಚು.

Related Posts

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

by cknewsnow desk
June 2, 2025
0

ರಾಜ್ಯದ ಹಿತರಕ್ಷಣೆಗೆ ಕೈ ಜೋಡಿಸುವಂತೆ ಕೇಂದ್ರ ಸಚಿವರು, ಸಂಸದರಿಗೆ ಡಿಸಿಎಂ ಡಿಕೆಶಿ ಮನವಿ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

Next Post
ಬಾಗೇಪಲ್ಲಿ ಕ್ಷೇತ್ರ: ಪ್ರತಿ ಮನೆ ಬಾಗಿಲಿಗೇ ಶಾಸಕರ ಆಹಾರ ಕಿಟ್‌

ಬಾಗೇಪಲ್ಲಿ ಕ್ಷೇತ್ರ: ಪ್ರತಿ ಮನೆ ಬಾಗಿಲಿಗೇ ಶಾಸಕರ ಆಹಾರ ಕಿಟ್‌

Leave a Reply Cancel reply

Your email address will not be published. Required fields are marked *

Recommended

ಶಬರಿಮಲೆಯ ಅಯ್ಯಪ್ಪ ಸ್ವಾಮಿಯ ಸನ್ನಿಧಾನದಲ್ಲೊಬ್ಬರು ಇದ್ದಾರೆ ಆಧುನಿಕ  ಅಂಗುಲೀಮಾಲ!!

ಶಬರಿಮಲೆಯ ಅಯ್ಯಪ್ಪ ಸ್ವಾಮಿಯ ಸನ್ನಿಧಾನದಲ್ಲೊಬ್ಬರು ಇದ್ದಾರೆ ಆಧುನಿಕ ಅಂಗುಲೀಮಾಲ!!

5 years ago
ಶಾಲೆಗೆ ಹೊರಟಿದ್ದ ಹದಿಮೂರು ವಯಸ್ಸಿನ ಬಾಲಕನಿಗೆ ಡಿಕ್ಕಿ ಹೊಡೆದ ಟಾಟಾ ಎಸ್ ವಾಹನ; ಸ್ಥಳದಲ್ಲೇ ಕೊನೆಯುಸಿರೆಳೆದ ಕಂದ

ಶಾಲೆಗೆ ಹೊರಟಿದ್ದ ಹದಿಮೂರು ವಯಸ್ಸಿನ ಬಾಲಕನಿಗೆ ಡಿಕ್ಕಿ ಹೊಡೆದ ಟಾಟಾ ಎಸ್ ವಾಹನ; ಸ್ಥಳದಲ್ಲೇ ಕೊನೆಯುಸಿರೆಳೆದ ಕಂದ

5 years ago

Popular News

  • ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

    ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

    0 shares
    Share 0 Tweet 0
  • ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

    0 shares
    Share 0 Tweet 0
  • ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

    0 shares
    Share 0 Tweet 0
  • ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

    0 shares
    Share 0 Tweet 0
  • ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

June 2, 2025
ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2025 cknewsnow | Website Design  by Karnatakabest Digital Services

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2025 cknewsnow | Website Design  by Karnatakabest Digital Services

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ