• About
  • Advertise
  • Careers
  • Contact
Thursday, October 29, 2026
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home CHIKKABALLAPUR

ಬಯಲುಸೀಮೆಯಲ್ಲಿ ನವಿಲು ನರ್ತನದ ನಿತ್ಯೋತ್ಸವ

cknewsnow desk by cknewsnow desk
July 10, 2021
in CHIKKABALLAPUR, EDITORS'S PICKS, STATE
Reading Time: 2 mins read
0
ಬಯಲುಸೀಮೆಯಲ್ಲಿ ನವಿಲು ನರ್ತನದ ನಿತ್ಯೋತ್ಸವ
1.4k
VIEWS
FacebookTwitterWhatsuplinkedinEmail

ಗುಡಿಬಂಡೆ ಆಸುಪಾಸಿನಲ್ಲಿ ಮನೆ ಅಂಗಳದಲ್ಲೇ ರಾಷ್ಟ್ರಪಕ್ಷಿಗಳ Ramp Walk

by GS Bharath Gudibande

ಗುಡಿಬಂಡೆ: ಮಲೆನಾಡು, ನಾಗರಹೊಳೆ ಮತ್ತು ಬಂಡೀಪುರದಂಥ ಅರಣ್ಯಗಳಲ್ಲಿಯೇ ದಟ್ಟವಾಗಿ ಕಾಣಿಸಿಕೊಳ್ಳುವ ನವಿಲುಗಳು ಈಗ ಬಯಲುಸೀಮೆ ಬೆಡಗನ್ನೂ ಹೆಚ್ಚಿಸಿವೆ. ಅಲ್ಲದೆ, ಬರಪೀಡಿತ ಗುಡಿಬಂಡೆ ತಾಲೂಕಿನಲ್ಲಿ ನಿತ್ಯ ಜನಜೀವನದ ಭಾಗಿ ಎಲ್ಲರನ್ನೂ ಮುದಗೊಳಿಸುತ್ತಿವೆ.

ಸಾಮಾನ್ಯವಾಗಿ ನವಿಲು ಗರಿಬಿಚ್ಚಿ ನರ್ತಿಸುವುದನ್ನು ನೋಡಲು ಎಲ್ಲರೂ ಕಾತರರಾಗಿರುತ್ತಾರೆ. ಆ ಕ್ಷಣ ಕಂಡರೆ ಮನಸ್ಸು ಪುಳಕಿತವಾಗುತ್ತದೆ. ಕೆಲವೊಮ್ಮೆ ಅಂಥ ಸುಂದರ ಸನ್ನಿವೇಶ ಮಿಸ್‌ ಆದರೆ ಆಗುವ ಬೇಸರ ಅಷ್ಟಿಷ್ಟಲ್ಲ. ಆದರಿಲ್ಲಿ ಅಂಥ ಬೇಸರಕ್ಕೆ, ನಿರಾಸೆಗೆ ಅವಕಾಶವೇ ಇಲ್ಲ. ಏಕೆಂದರೆ, ಗುಡಿಬಂಡೆ ಆಸುಪಾಸಿನಲ್ಲಿ ನವಿಲುಗಳ ನರ್ತನದ ನಿತ್ಯೋತ್ಸವವೇ ನಡೆಯುತ್ತಿದೆ.‌

ಸುಸದ್ಮಪದ್ಮಗಿರಿ, ಅಮಾನಿಭೈರ ಸಾಗರ, ಆದಿನಾರಾಯಣ ಬೆಟ್ಟ ಹಾಗೂ ಸುಂದರ ನಿತ್ಯ ಹಸಿರಿನ ಅರಣ್ಯ ಪ್ರದೇಶದಿಂದ ಪ್ರವಾಸಿಗರನ್ನು ಸೆಳೆಯುತ್ತಿರುವ ಗುಡಿಬಂಡೆ, ಇದೀಗ ನವಿಲುಗಳ ಕಾರಣಕ್ಕೆ ವನ್ಯಜೀವಿ ಪ್ರಾಣಿಪ್ರಿಯರ ಹಾಟ್‌ ಫೇವರಿಟ್‌ ತಾಣವಾಗಿ ಬದಲಾಗಿದೆ.

ಗುಡಿಬಂಡೆ ತಾಲೂಕಿನ ವಲಯ ಅರಣ್ಯ ಪ್ರದೇಶದಲ್ಲಿ ಅಪಾರ ನವಿಲುಗಳ ದಂಡೇ ಇದೆ. ರಾಷ್ಟ್ರಪಕ್ಷಿ ವೈಭವವನ್ನು ಕಣ್ತುಂಬಿಕೊಳ್ಳಬೇಕಾದರೆ ಇಲ್ಲಿಗೊಮ್ಮೆ ಬರಬೇಕು. ಅವುಗಳ ಸಂಭ್ರಮವನ್ನು ನೋಡಲು ಎರಡು ಕಂಗಳು ಸಾಲವು.  ಕೆಲ ದಿನಗಳಿಂದ ಮಳೆ ಉತ್ತಮವಾಗಿ ಸುರಿಯುತ್ತಿರುವುದರಿಂದ ಸೂರ್ಯೋದಯ ಹಾಗೂ ಸೂರ್ಯಾಸ್ತದ ವೇಳೆಯಲ್ಲಿ ಕಾಡಿನಿಂದ ನಾಡಿಗೆ, ಅದರಲ್ಲೂ ಪ್ರಕೃತಿಯ ಮಡಿಲಲ್ಲಿರುವ ಹಳ್ಳಿಗಳ ಮನೆಯಂಗಳದಲ್ಲೇ ಇವು ಪ್ರತ್ಯಕ್ಷವಾಗುತ್ತಿವೆ. ಹಿಂಡು ಹಿಂಡಾಗಿ ಬಂದು ತಮ್ಮ ಮನೆಗಳ ಮುಂದೆ ಗರಿಬಿಚ್ಚಿ ಕುಣಿಯುವ ನವಿಲುಗಳನ್ನು ಕಂಡು ಜನರೂ ರೋಮಾಂಚನಗೊಂಡಿದ್ದಾರೆ.

ಎಲ್ಲೆಲ್ಲೂ ನವಿಲು, ಜನರಿಗೆ ಪುಳಕ

ಮನೆ ಅಂಗಳದಲ್ಲಿ ಮಾತ್ರವಲ್ಲದೆ, ಹೊಲ-ಗದ್ದೆಗಳ ಬಳಿ ಈಗ ಸಾಮಾನ್ಯವಾಗಿ ನವಿಲುಗಳು ಹೆಚ್ಚಾಗಿ ಕಂಡು ಬರುತ್ತಿವೆ. ತೋಟಗಳಲ್ಲಿ ರೈತರು ಕೆಲಸ ಮಾಡುವಾಗ ನವಿಲುಗಳು ಅವರ ಆಯಾಸವನ್ನು ಕಡಿಮೆ ಮಾಡುತ್ತಿವೆ. ಮರಗಳ ಪೊದೆಗಳಲ್ಲಿ, ಹೊಲಗಳಲ್ಲಿ, ತೋಟಗಳ ನಡುವೆ ಹಿಂಡು ಹಿಂಡಾಗಿ ಕಾಣಿಸಿಕೊಳ್ಳುತ್ತಿವೆ. ಜನರು ಕೂಡ ರಾಷ್ಟ್ರಪಕ್ಷಿಗಳಿಗೆ ಹಾನಿ ಮಾಡದೇ ಅಕ್ಕರೆಯಿಂದ ನೋಡಿಕೊಳ್ಳುತ್ತಿದ್ದಾರೆ.

ನವಿಲುಗಳು ಆಹಾರ ಕೊರತೆಯಿಂದ ಕಾಡುಬಿಟ್ಟು ನಾಡಿಗೆ ಲಗ್ಗೆ ಇಟ್ಟಿವೆ. ತಮ್ಮ ಬೆಳೆಗಳನ್ನು ಅವು ತಿಂದರೂ ರೈತರಿಗೆ ಬೇಸರವಿಲ್ಲ. ಬದಲಿಗೆ ಹತ್ತಾರು ಕಷ್ಟಗಳಲ್ಲಿ ಸಿಲುಕಿರುವ ಅವರ ಮನಸ್ಸಿಗೆ ಇವು ಒಳ್ಳೆಯ ರಿಲೀಫ್‌ ನೀಡುತ್ತಿವೆ. ಮಕ್ಕಳಂತೂ ನವಿಲುಗಳ ನರ್ತನಕ್ಕೆ ಮಾರುಹೋಗುತ್ತಿದ್ದಾರೆ. ಲಾಕ್‌ಡೌನ್‌ ಸಡಿಲಿಕೆಯಾದ ಮೇಲೆ ಬರುತ್ತಿರುವ ಪ್ರವಾಸಿಗರಿಗೂ ಮೋಡಿ ಮಾಡುತ್ತಿವೆ.

  • ನವಿಲು ನರ್ತನೆಯ ಝಲಕ್‌ ನೋಡಲು ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ..
https://www.youtube.com/watch?v=e4LOWMCQjQE&t=20s

ನವಿಲುಗಳೊಂದಿಗೆ ವಾಯುವಿಹಾರ!

ಬೆಳಗ್ಗೆ-ಸಂಜೆ ಸಮಯದಲ್ಲಿ ತಾಲೂಕಿನ ವಾಬಸಂದ್ರ, ಉಕ್ಕುಡಂ, ಎಲ್ಲೋಡು, ಯರ್ರಹಳ್ಳಿ, ಗರುಡಾಚಾರ್ಲಹಳ್ಳಿ, ಗೌರಿಬಿದನೂರು ರಸ್ತೆಯ ಅರಣ್ಯ ಪ್ರದೇಶದಲ್ಲಿ ನವಿಲುಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಈ ಕಾರಣಕ್ಕೆ ಆ ಭಾಗಗಳಿಗೆ ಪಟ್ಟಣದ ಜನರು ಹೆಚ್ಚಾಗಿ ಸಂಜೆ ವೇಳೆ ವಾಯುವಿಹಾರಕ್ಕೆ ಹೋಗುತ್ತಾರೆ. ತಮ್ಮ ನಡಿಗೆಯ ನಡುವೆ ಕಣ್ಮುಂದೆ ಹಾದು ಹೋಗುವ, ಒಮ್ಮೊಮ್ಮೆ ಹಾರುವ ನವಿಲುಗಳನ್ನು ಕಂಡು ಸಂತೋಷಗೊಳ್ಳುತ್ತಿದ್ದಾರೆ.

ಅನೇಕ ಬಗೆಯ ಪ್ರಾಣಿ-ಪಕ್ಷಿ ಸೇರಿದಂತೆ ಸಕಲ ಜೀವ ಸಂಕುಲಕ್ಕೆ ಗುಡಿಬಂಡೆ ಅರಣ್ಯ ಪ್ರದೇಶವು ಆಶ್ರಯ ತಾಣವಾಗಿದೆ. ಅರಣ್ಯ ಇಲಾಖೆಯ ಅಂದಾಜಿನ ಪ್ರಕಾರ ಸುಮಾರು 10 ಸಾವಿರಕ್ಕೂ ಹೆಚ್ಚು ನವಿಲುಗಳು ಈ ಮೀಸಲು ಅರಣ್ಯ ಪ್ರದೇಶದಲ್ಲಿವೆ. ಅವುಗಳನ್ನು ಸಂರಕ್ಷಿಸಲಾಗಿದೆ.

ಹುಲುಗಪ್ಪ / ವಲಯ ಅರಣ್ಯ ಸಂರಕ್ಷಣಾಧಿಕಾರಿ, ಗುಡಿಬಂಡೆ

ನಮ್ಮ ಜಮೀನು ಮತ್ತು ಹಳ್ಳಿಯ ಸುತ್ತಮುತ್ತ ನವಿಲುಗಳು ಕಾಣಿಸಿಕೊಳ್ಳುತ್ತಿವೆ. ಅವುಗಳನ್ನು ನೋಡಿ ಮಕ್ಕಳು ಆನಂದಿಸುತ್ತಾರೆ. ಅವುಗಳನ್ನು ಕೊಲ್ಲುವುದಾಗಲಿ, ಹಿಂಸೆ ಮಾಡುವುದಾಗಲಿ ಯಾರೂ ಮಾಡುವುದಿಲ್ಲ. ಜನ ಕಾಣಿಸಿದ ಕೂಡಲೇ ಚಂಗನೆ ಹಾರಿ ಮರಗಿಡಗಳ ನಡುವೆ ಮರೆಯಾಗುತ್ತವೆ.

ಜಿ.ಎ.ಅಮರೇಶ್‌ / ರೈತ, ಗರುಡಾಚಾರ್ಲಹಳ್ಳಿ

ನನ್ನ ಮನಸ್ಸಿಗೆ ನವಿಲುಗಳ ದಂಡು ನೋಡಿ ಖುಷಿ ಎನಿಸಿತು. ನವಿಲುಗಳು ಸಂಜೆ ಸಮಯದಲ್ಲಿ ಹೆಚ್ಚಾಗಿ  ಕಾಣಿಸುತ್ತವೆ. ಅವು ಗರಿಬಿಚ್ಚಿದ ಸಂದರ್ಭದಲ್ಲಿ ಗೊಡೆಯ ಹಿಂದೆ ಕಾಣಿಸದಂತೆ ಫೋಟೊ ಮತ್ತು ವೀಡಿಯೋ ಮಾಡಲಾಯಿತು. ನಮ್ಮ ಭಾಗದ ಜನರಿಗೆ ಮತ್ತು ಮಕ್ಕಳಿಗೆ ನವಿಲು ಅಂದರೆ ಹೆಚ್ಚು ಪ್ರೀತಿ. ರೈತರು ಅವುಗಳನ್ನು ರಕ್ಷಣೆ ಮಾಡುತ್ತಿದ್ದಾರೆ. ಹಳ್ಳಿಗಳಲ್ಲಿ ನವಿಲುಗಳು ಹಿಂಡು ಹಿಂಡಾಗಿ ಸಂಚರಿಸುವುದನ್ನು ನೋಡುವುದೇ ಸಂತೋಷ. ಸರಕಾರ ನವಿಲುಗಳ ರಕ್ಷಣೆಗೆ ಪ್ರತ್ಯೇಕವಾಗಿ ಈ ಭಾಗದಲ್ಲಿ ʼನವಿಲುಧಾಮʼ ನಿರ್ಮಿಸಬೇಕು.

ಗೋವಿಂದರೆಡ್ಡಿ / ರೈತ, ಕಡೇಹಳ್ಳಿ

Tags: adinarayana bettabagepallifarmersgudibande reserve forestIndian national birdpeacock
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

#SIR ರಾಜ್ಯದಲ್ಲಿ 99.32 ಲಕ್ಷ ಮತದಾರರ ಹೆಸರಿಲ್ಲ

#SIR ರಾಜ್ಯದಲ್ಲಿ 99.32 ಲಕ್ಷ ಮತದಾರರ ಹೆಸರಿಲ್ಲ

by cknewsnow desk
October 28, 2026
0

ಬೆಂಗಳೂರಿನಲ್ಲಿ 43.13% ಮತದಾರರ ಪ್ರಮಾಣ ಕುಸಿತ

ದೇವೇಗೌಡರ ಕುಟುಂಬವನ್ನು ರಾಜಕೀಯವಾಗಿ ಮುಗಿಸಲು ₹600 ಕೋಟಿಗೆ ಡೀಲ್ ಕೊಟ್ಟರಾ ಡಿಕೆಶಿ!!

ದೇವೇಗೌಡರ ಕುಟುಂಬವನ್ನು ರಾಜಕೀಯವಾಗಿ ಮುಗಿಸಲು ₹600 ಕೋಟಿಗೆ ಡೀಲ್ ಕೊಟ್ಟರಾ ಡಿಕೆಶಿ!!

by cknewsnow desk
October 25, 2026
0

ಹಾಲಿ ಮುಖ್ಯಮಂತ್ರಿ ವಿರುದ್ಧ ಕೇಂದ್ರ ಸಚಿವರ ಗಂಭೀರ ಆರೋಪ; ಈಗಿನ ಮಹಾನ್ ಮುಖ್ಯಮಂತ್ರಿಗಳೇ ಸ್ಟಿಂಗ್ ಮೂಲಪುರುಷ

ಸ್ಟಿಂಗ್ ಮಾಡಿದವರಿಗೆ ನೋಟಿಸ್, ಅನ್ಯಪಕ್ಷದವರ ಅರೆಸ್ಟ್!

ಸ್ಟಿಂಗ್ ಮಾಡಿದವರಿಗೆ ನೋಟಿಸ್, ಅನ್ಯಪಕ್ಷದವರ ಅರೆಸ್ಟ್!

by cknewsnow desk
October 25, 2026
0

ಸ್ಟಿಂಗ್ ಆಪರೇಶನ್ ಪ್ರಕರಣದಲ್ಲಿ ರಾಜ್ಯ ಸರ್ಕಾರದ್ದು ಇಬ್ಬಗೆ ನೀತಿ; ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವಾಗ್ದಾಳಿ

ಸ್ಟಿಂಗ್ ವಿರುದ್ಧ ಕೋರ್ಟ್ ಮೊರೆ ಹೋದ ಸಿದ್ದರಾಮಯ್ಯ! ಇಂದು ಆದೇಶ ನಿರೀಕ್ಷೆ

ನನ್ನ ತಲೆಗೆ ಸ್ಟಿಂಗ್ ಕಟ್ಟಲು ಡಿಕೆಶಿ, ಪ್ರಿಯಾಂಕ್ ಖರ್ಗೆ ಸಂಚು

by cknewsnow desk
October 25, 2026
0

ಹೆಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ; #kpsc ಹಗರಣದ ದಿಕ್ಕು ತಪ್ಪಿಸಲು ಪ್ರಿಯಾಂಕ್ ಖರ್ಗೆ ಒದ್ದಾಟ

ಬೆಂಗಳೂರು ಸುತ್ತಲಿನ ಜನರ ಸಮಾಧಿ ಮೇಲೆ ಬ್ರ್ಯಾಂಡ್‌ ಬೆಂಗಳೂರು

10 ತಿಂಗಳಾದರೂ ಸಿಗದ ಭೂಮಿ; ರಾಜ್ಯದ ಕೈತಪ್ಪಲಿದೆಯಾ ಎಲೆಕ್ಟ್ರಿಕ್ ವಾಹನ ಪರೀಕ್ಷಾ ಕೇಂದ್ರ

by cknewsnow desk
October 22, 2026
0

ಬೇಸತ್ತು ಮುಖ್ಯಮಂತ್ರಿ ಡಿಕೆಶಿಗೆ ಪತ್ರ ಬರೆದ ಕೇಂದ್ರ ಸಚಿವ #HDK

ರಾಜೀನಾಮೆ ಕೊಟ್ಟು ಹೊರಬನ್ನಿ; ಅಪಮಾನಿತ ದಲಿತ ಸಚಿವರಿಗೆ #Jds ಕಿವಿಮಾತು

ರಾಜೀನಾಮೆ ಕೊಟ್ಟು ಹೊರಬನ್ನಿ; ಅಪಮಾನಿತ ದಲಿತ ಸಚಿವರಿಗೆ #Jds ಕಿವಿಮಾತು

by cknewsnow desk
October 22, 2026
0

ಮೈಸೂರು ದಸರಾದಲ್ಲಿ ಅವಮಾನ ಪ್ರಸಂಗ; ಬಾಯಲ್ಲಿ ಜಾತ್ಯತೀತ ತತ್ವ, ಆಚರಣೆಯಲ್ಲಿ ಅಸೃಶ್ಯತೆ!; ಕಾಂಗ್ರೆಸ್ ವಿರುದ್ಧ ಜೆಡಿಎಸ್ ವಾಗ್ದಾಳಿ

Next Post
ಗುಡಿಬಂಡೆ ಆಸುಪಾಸಿನಲ್ಲಿ ಮನೆ ಅಂಗಳದಲ್ಲೇ ರಾಷ್ಟ್ರಪಕ್ಷಿಗಳ Ramp Walk

ಗುಡಿಬಂಡೆ ಆಸುಪಾಸಿನಲ್ಲಿ ಮನೆ ಅಂಗಳದಲ್ಲೇ ರಾಷ್ಟ್ರಪಕ್ಷಿಗಳ Ramp Walk

Leave a Reply Cancel reply

Your email address will not be published. Required fields are marked *

Recommended

ಜನಧನ್ ಖಾತೆಗಳಿಂದ ತಲಾ 2 ರೂ.ನಂತೆ 6,000 ಕೋಟಿ ರೂ. ಅಕ್ರಮ ವರ್ಗಾವಣೆ ಶಂಕೆ

ಜನಧನ್ ಖಾತೆಗಳಿಂದ ತಲಾ 2 ರೂ.ನಂತೆ 6,000 ಕೋಟಿ ರೂ. ಅಕ್ರಮ ವರ್ಗಾವಣೆ ಶಂಕೆ

5 years ago
ಆದಾಯಕ್ಕೂ ಮೀರಿದ ಆಸ್ತಿ; ಎಸಿಬಿ ಖೆಡ್ಡಕ್ಕೆ ಬಿದ್ದ ಚಿಕ್ಕಬಳ್ಳಾಪುರ ನಿರ್ಮಿತಿ ಕೇಂದ್ರದ ನಿರ್ದೇಶಕ; ಕೋಲಾರದಲ್ಲೂ ಶೋಧ, ರಾಜ್ಯದಲ್ಲಿ 28 ಕಡೆ, 9 ಅಧಿಕಾರಿಗಳ  ಮೇಲೆ ಏಕಕಾಲಕ್ಕೆ ದಾಳಿ

ಆದಾಯಕ್ಕೂ ಮೀರಿದ ಆಸ್ತಿ; ಎಸಿಬಿ ಖೆಡ್ಡಕ್ಕೆ ಬಿದ್ದ ಚಿಕ್ಕಬಳ್ಳಾಪುರ ನಿರ್ಮಿತಿ ಕೇಂದ್ರದ ನಿರ್ದೇಶಕ; ಕೋಲಾರದಲ್ಲೂ ಶೋಧ, ರಾಜ್ಯದಲ್ಲಿ 28 ಕಡೆ, 9 ಅಧಿಕಾರಿಗಳ ಮೇಲೆ ಏಕಕಾಲಕ್ಕೆ ದಾಳಿ

6 years ago

Popular News

  • #SIR ರಾಜ್ಯದಲ್ಲಿ 99.32 ಲಕ್ಷ ಮತದಾರರ ಹೆಸರಿಲ್ಲ

    #SIR ರಾಜ್ಯದಲ್ಲಿ 99.32 ಲಕ್ಷ ಮತದಾರರ ಹೆಸರಿಲ್ಲ

    0 shares
    Share 0 Tweet 0
  • ದೇವೇಗೌಡರ ಕುಟುಂಬವನ್ನು ರಾಜಕೀಯವಾಗಿ ಮುಗಿಸಲು ₹600 ಕೋಟಿಗೆ ಡೀಲ್ ಕೊಟ್ಟರಾ ಡಿಕೆಶಿ!!

    0 shares
    Share 0 Tweet 0
  • ಸ್ಟಿಂಗ್ ಮಾಡಿದವರಿಗೆ ನೋಟಿಸ್, ಅನ್ಯಪಕ್ಷದವರ ಅರೆಸ್ಟ್!

    0 shares
    Share 0 Tweet 0
  • ನನ್ನ ತಲೆಗೆ ಸ್ಟಿಂಗ್ ಕಟ್ಟಲು ಡಿಕೆಶಿ, ಪ್ರಿಯಾಂಕ್ ಖರ್ಗೆ ಸಂಚು

    0 shares
    Share 0 Tweet 0
  • 10 ತಿಂಗಳಾದರೂ ಸಿಗದ ಭೂಮಿ; ರಾಜ್ಯದ ಕೈತಪ್ಪಲಿದೆಯಾ ಎಲೆಕ್ಟ್ರಿಕ್ ವಾಹನ ಪರೀಕ್ಷಾ ಕೇಂದ್ರ

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

#SIR ರಾಜ್ಯದಲ್ಲಿ 99.32 ಲಕ್ಷ ಮತದಾರರ ಹೆಸರಿಲ್ಲ

#SIR ರಾಜ್ಯದಲ್ಲಿ 99.32 ಲಕ್ಷ ಮತದಾರರ ಹೆಸರಿಲ್ಲ

October 28, 2026
ದೇವೇಗೌಡರ ಕುಟುಂಬವನ್ನು ರಾಜಕೀಯವಾಗಿ ಮುಗಿಸಲು ₹600 ಕೋಟಿಗೆ ಡೀಲ್ ಕೊಟ್ಟರಾ ಡಿಕೆಶಿ!!

ದೇವೇಗೌಡರ ಕುಟುಂಬವನ್ನು ರಾಜಕೀಯವಾಗಿ ಮುಗಿಸಲು ₹600 ಕೋಟಿಗೆ ಡೀಲ್ ಕೊಟ್ಟರಾ ಡಿಕೆಶಿ!!

October 25, 2026
ಸ್ಟಿಂಗ್ ಮಾಡಿದವರಿಗೆ ನೋಟಿಸ್, ಅನ್ಯಪಕ್ಷದವರ ಅರೆಸ್ಟ್!

ಸ್ಟಿಂಗ್ ಮಾಡಿದವರಿಗೆ ನೋಟಿಸ್, ಅನ್ಯಪಕ್ಷದವರ ಅರೆಸ್ಟ್!

October 25, 2026
ಸ್ಟಿಂಗ್ ವಿರುದ್ಧ ಕೋರ್ಟ್ ಮೊರೆ ಹೋದ ಸಿದ್ದರಾಮಯ್ಯ! ಇಂದು ಆದೇಶ ನಿರೀಕ್ಷೆ

ನನ್ನ ತಲೆಗೆ ಸ್ಟಿಂಗ್ ಕಟ್ಟಲು ಡಿಕೆಶಿ, ಪ್ರಿಯಾಂಕ್ ಖರ್ಗೆ ಸಂಚು

October 25, 2026

Covid 19

ಸತ್ಯಸಾಯಿ ಗ್ರಾಮದಲ್ಲಿ ನವರಾತ್ರಿ ಪೂಜೆಯಲ್ಲಿ ಪಾಲ್ಗೊಂಡ HDK

ಸತ್ಯಸಾಯಿ ಗ್ರಾಮದಲ್ಲಿ ನವರಾತ್ರಿ ಪೂಜೆಯಲ್ಲಿ ಪಾಲ್ಗೊಂಡ HDK

October 16, 2026
ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
  • About
  • Advertise
  • Careers
  • Contact

© 2025 cknewsnow | Website Design  by Karnatakabest Digital Services

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2025 cknewsnow | Website Design  by Karnatakabest Digital Services

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ