by GS Bharath Gudibande
ಗುಡಿಬಂಡೆ: ಈಗಾಗಲೇ ಬಾಗೇಪಲ್ಲಿಯಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ನೇತೃತ್ವದಲ್ಲಿ 81 ಸಾವಿರ ಕುಟುಂಬಗಳಿಗೆ ಆಹಾರ ಕಿಟ್ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬೆನ್ನಲ್ಲೇ ಗುಡಿಬಂಡೆ ತಾಲೂಕಿನಲ್ಲಿಯೂ 35,000 ಆಹಾರ ಕಿಟ್‌ಗಳನ್ನು ವಿತರಣೆ ಮಾಡುವ ಕಾರ್ಯಕ್ಕೆ ನಾಳೆ (ಜುಲೈ 17) ಚಾಲನೆ ದೊರೆಯಲಿದೆ.
ಪಟ್ಟಣ ಸರಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಮಧ್ಯಾಹ್ನ 12 ಗಂಟೆಗೆ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಹಾಗೂ ಕಾಂಗ್ರೆಸ್ ಪಕ್ಷದ ಗಣ್ಯರಿಂದ ಆಹಾರ ಕಿಟ್ ವಿತರಣಾ ಕಾರ್ಯಕ್ರಮ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ 3 ಸಾವಿರ ಕುಟುಂಬಗಳಿಗೆ ಕಿಟ್ ವಿತರಿಸಲಾಗುವುದು. ನಂತರ ಕುಟುಂಬಗಳ ಮನೆ ಬಾಗಿಲಿಗೇ ಕಿಟ್‌ಗಳನ್ನು ತಲುಪಿಸುವ ಕೆಲಸ ಮಾಡಲಾಗುವುದು ಎಂದು ಶಾಸಕರು ತಿಳಿಸಿದ್ದಾರೆ.
ಇದೇ ವೇಳೆ, ಕೋವಿಡ್ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ಕಟ್ಟೆಚ್ಚರ ವಹಿಸಲಾಗಿದೆ. ಆಹಾರ ಕಿಟ್ ವಿತರಣಾ ಕಾರ್ಯಕ್ರಮಕ್ಕೆ ಟೋಕನ್ ಪಡೆದು ಆಗಮಿಸುವ ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಮತ್ತು ಸಾಮಾಜಿಕ ಅಂತರ ಕಾಪಾಡಬೇಕು. ತಾಲೀಕಿನಲ್ಲಿ ಕೋವಿಡ್ ಸೋಂಕು ಶೂನ್ಯಕ್ಕೆ ಬಂದಿದ್ದು, ಪುನಾ ಮಹಾಮಾರಿ ಕಾಣಿಸಿಕೊಳ್ಳುವುದು ಬೇಡ ಎಂದು ಅವರು ಮನವಿ ಮಾಡಿದ್ದಾರೆ.
ಇಂದೇ ಟೋಕನ್ ವಿತರಣೆ
ಪಟ್ಟಣದ ವಿವಿಧ ವಾರ್ಡ್ʼಗಳಲ್ಲಿ ಒಟ್ಟು 3,000 ಕುಟುಂಬಗಳಿಗೆ ಟೋಕನ್ ವಿತರಿಸಲಾಗುತ್ತಿದೆ. ಟೋಕನ್ ಪಡೆದವರು ನಾಳೆ ನಾಳೆ ಬಂದು ಕಾಲೇಜು ಆವರಣದ ಕಾರ್ಯಕ್ರಮದಲ್ಲಿ ಆಹಾರ ಕಿಟ್ ಪಡೆಯಬಹುದಾಗಿದೆ. ಅತ್ಯಂತ ಬಡವರನ್ನು ಗುರುತಿಸಿ ಟೋಕನ್‌ಗಳನ್ನು ಕಾರ್ಯಕರ್ತರು ವಿತರಣೆ ಮಾಡುತ್ತಿದ್ದಾರೆ.
ಕಾರ್ಯಕ್ರಮದಲ್ಲಿ ಗುಡಿಬಂಡೆ ತಾಲ್ಲೂಕಿನ ಕಾಂಗ್ರಸ್ ಪಕ್ಷದ ಎಲ್ಲಾ ಮುಖಡರು ಹಾಗೂ ಸದಸ್ಯರು ಭಾಗವಹಿಸಲಿದ್ದಾರೆ.
- ಈ ಸುದ್ದಿಯನ್ನು ಓದಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ…
- ಈ ಸುದ್ದಿಯನ್ನು ಓದಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ…