by GS Bharath Gudibande
ಗುಡಿಬಂಡೆ: ಕೊರೋನಾ ಸೋಂಕಿನಿಂದ ಬಳಲುತ್ತಿದ್ದ ಸಾವಿರಾರು ಜನರಿಗೆ ಆಯುರ್ವೇದ ಔಷಧ ನೀಡಿ ಜನಪ್ರಿಯರಾಗಿರುವ ಆಂಧ್ರ ಪ್ರದೇಶದ ನೆಲ್ಲೂರು ಜಿಲ್ಲೆಯ ಕೃಷ್ಣಪಟ್ಟಣಂ ಗ್ರಾಮದ ಆಯುರ್ವೇದ ಪಂಡಿತ ಬಿ. ಆನಂದಯ್ಯ ಅವರು ಗುಡಿಬಂಡೆಗೆ ಬರಲಿದ್ದಾರೆ.
ಪಟ್ಟಣದ ಶ್ರೀ ಕನ್ನಿಕಾಪರಮೇಶ್ವರಿ ದೇವಾಲಯದ ಆವರಣದಲ್ಲಿ ಇದೇ ತಿಂಗಳ 7ರ ಶನಿವಾರ ಹಮ್ಮಿಕೊಳ್ಳಲಾಗಿರುವ ಔಷಧ ವಿತರಣೆ ಕಾರ್ಯಕ್ರಮದಲ್ಲಿ ಅವರು ಭಾಗಿಯಾಗಲಿದ್ದಾರೆ ಎಂದು ಇಲ್ಲಿನ ಆರ್ಯವೈಶ್ಯ ಸಂಘದ ರಾಘವೇಂದ್ರ ಅವರು ಸಿಕೆನ್ಯೂಸ್ ನೌ ಗೆ ತಿಳಿಸಿದ್ದಾರೆ.
ಔಷಧ ವಿತರಣೆ ಮಾಡುವುದರ ಜತೆಗೆ, ಕೋವಿಡ್ ಕುರಿತಾದ ಅಮೂಲ್ಯ ಮಾಹಿತಿಯನ್ನೂ ಆನಂದಯ್ಯ ಅವರು ಸಾರ್ವಜನಿಕರ ಜತೆ ಹಂಚಿಕೊಳ್ಳಲಿದ್ದಾರೆ ಎಂದು ಅವರು ಹೇಳಿದ್ದಾರೆ.
ಅಂದು ಸಾಂಕೇತಿಕವಾಗಿ 500 ಜನರಿಗೆ ಔಷಧವನ್ನು ಆನಂದಯ್ಯ ವಿತರಿಸಲಿದ್ದಾರೆ. ತದ ನಂತರ ಅಗತ್ಯ ಇರುವವರಿಗೆ ಈ ಔಷಧವನ್ನು ಸಂಘದಿಂದ ನೀಡಲಾಗುವುದು ಎಂದ ಅವರು, ಆಂಧ್ರ ಪ್ರದೇಶದಲ್ಲಿ ತಮ್ಮ ಔಷಧಿಯ ಮೂಲಕ ಅನೇಕರ ಜೀವ ಉಳಿಸಿರುವ ಆನಂದಯ್ಯ ಅವರು ಎಲ್ಲಡೆ ಮನೆ ಮಾತಾಗಿದ್ದಾರೆ.
ಯಾರು ಈ ಆನಂದಯ್ಯ?
ಆಂಧ್ರದ ನೆಲ್ಲೂರು ಜಿಲ್ಲೆಯ ಕೃಷ್ಣಪಟ್ಟಣಂ ಎಂಬ ಊರಿನ ಪಂಡಿತ್ ಆನಂದಯ್ಯ ಅವರ ಹೆಸರು ಎಲ್ಲರಿಗೂ ಚಿರಪರಿಚಿತ. ಅವರು ಆಯುರ್ವೇದ ಸೂತ್ರದಡಿಯಲ್ಲಿ ತಯಾರಿಸಿದ ಕೊರೊನ ನಿವಾರಕ ಔಷಧಿವು ಬಹಳ ಜನಪ್ರಿಯವಾಗಿದೆ. 2ನೇ ಅಲೆಯ ಸಂದರ್ಭದಲ್ಲಿ ಸಾವಿರಾರು ಜನರಿಗೆ ಈ ಔಷಧಿ ನೀಡಿ ಸೋಂಕನ್ನು ಗುಣ ಮಾಡಿದ್ದರು. ಐಸಿಯುನಲ್ಲಿರುವ ಸೋಂಕಿತರಿಗೆ ಇವರ ಔಷಧ ಸೇವನೆಯಿಂದ ಆಮ್ಲಜನಕ ಸಾಂದ್ರತೆ ಏರಿಕೆಯಾಗಿದೆ ಎಂಬ ವರದಿಗಳಿವೆ. ಇವರ ಸಾಂಪ್ರಾದಾಯಿಕ ಔಷಧವನ್ನು ಕೋವಿಡ್ ಸೋಂಕಿತರಿಗೆ ಬಳಸಲು ಆಂಧ್ರ ಪ್ರದೇಶದ ವೈಎಸ್ ಜಗನ್ಮೋಹನ್ ರೆಡ್ಡಿ ಅವರ ಸರಕಾರ ಒಪ್ಪಿಗೆ ನೀಡಿದೆ. ಇವರ ಸೇವೆಯನ್ನು ಗುರುತಿಸಿ ಸರಕಾರವು ಆನಂದಯ್ಯ ಅವರಿಗೆ ಝಡ್ ಪ್ಲಸ್ ಭದ್ರತೆ ನೀಡಿದೆ. ಅಲ್ಲದೆ, ಅನೇಕ ವರ್ಷಗಳಿಂದ ಆಯುರ್ವೇದ ವೈದ್ಯರಾಗಿರುವ ಇವರು, ತಮ್ಮ ಔಷಧಕ್ಕೆ ಯಾರ ಅನುಮತಿಯೂ ಬೇಡ, ಇದನ್ನು ಮಾರಾಟ ಮಾಡುವ ಉದ್ದೇಶವೂ ಇಲ್ಲ. ಜನರಿಗೆ ಉಚಿತವಾಗಿ ವಿತರಣೆ ಮಾಡಲು ಅವಕಾಶ ಕೊಡಿ ಎಂದು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು.
ಆನಂದಯ್ಯ ಅವರು ತಯಾರಿಸಿರುವ ಈ ಔಷಧವನ್ನು ಎಲ್ಲರೂ ʼಕೃಷ್ಣಪಟ್ಟಣಂ ಔಷಧಿʼ ಎಂದೇ ಕರೆಯುತ್ತಿದ್ದಾರೆ. ದೇಶ ವಿದೇಶದಿಂದ ಇದಕ್ಕಾಗಿ ಬೇಡಿಕೆ ಬರುತ್ತಿದೆ.
ಬೆಂಗಳೂರಿನ ಸಾಯಿ ಗೋಲ್ಡ್ ಪ್ಯಾಲೇಸ್ ಮಾಲೀಕ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಶರವಣ, ಗುಡಿಬಂಡೆಯ ಆರ್ಯವೈಶ್ಯ ಸಂಘದ ಸಹಯೋಗದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಾಕೇಂತಿಕವಾಗಿ 500 ಜನರಿಗೆ ಔಷಧ ನೀಡಲು ಯೋಜಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ವಿತರಿಸಲಾಗುವುದು. ಕಾರ್ಯಕ್ರಮಕ್ಕೆ ಬರುವ ಸಾರ್ವಜನಿಕರು ಕಡ್ಡಾಯವಾಗಿ ಕೊವಿಡ್-19 ನಿಯಮಗಳನ್ನು ಪಾಲಿಸಿ, ಮಾಸ್ಕ್, ದೈಹಿಕ ಅಂತರ ಪಲಿಸಬೇಕು.
ರಾಘವೇಂದ್ರ ಎಂದು ಆರ್ಯವೈಶ್ಯ ಸಂಘ
ಆಂಧ್ರದ ಖ್ಯಾತ ಆರ್ಯುವೇದ ತಜ್ಞ ಆನಂದಯ್ಯ ಅವರು ಗುಡಿಬಂಡೆ ಪಟ್ಟಣಕ್ಕೆ ಆಗಮಿಸಿ, ಕೊರೋನಾ ಔಷಧ ವಿತರಿಸುತ್ತಿರುವುದು ಸ್ವಾಗತಾರ್ಹ. ತಾಲೂಕಿನ ಎಲ್ಲಾ ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗವನ್ನು ಬಳಸಿಕೊಳ್ಳಬೇಕು.
ಕೆ.ಎನ್ ನವೀನ್ ಕುಮಾರ್ ಆರೋಗ್ಯ ರಕ್ಷಾ ಸಮಿತಿ ಸದಸ್ಯರು, ಗುಡಿಬಂಡೆ