ಒಬ್ಬರೂ ಫೇಲ್ ಇಲ್ಲ; ತಾಲೂಕಿಗೆ 100% ರಿಸಲ್ಟ್
by GS Bharath Gudibande
ಗುಡಿಬಂಡೆ: ಪ್ರಸಕ್ತ ಸಾಲಿನ SSLC ಫಲಿತಾಂಶ ಪ್ರಕಟವಾಗಿದ್ದು, ತಾಲೂಕಿನಲ್ಲಿ ಒಟ್ಟು 728 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಅಷ್ಟೂ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ವೆಂಕಟೇಶಪ್ಪ ತಿಳಿಸಿದ್ದಾರೆ.
ಗುಡಿಬಂಡೆ ತಾಲೂಕು ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದಿದ್ದು, ಇದರ ಹಿಂದೆ ಶ್ರಮಿಸಿದ ಶಿಕ್ಷಕರು, ಪೋಷಕರು, ಹಾಗೂ ಎಲ್ಲಾ ಇಲಾಖೆಯ ಅಧಿಕಾರಿಗಳಿಗೆ ಈ ಗೌರವ ಸಲ್ಲುತ್ತದೆ ಎಂದರು.
ಸಿಕೆನ್ಯೂಸ್ ನೌ ಜತೆ ಮಾತನಾಡಿದ ಅವರು; ತಾಲೂಕಿನಲ್ಲಿ ಒಟ್ಟು 14 ಶಾಲೆಗಳಿದ್ದು, ಅದರಲ್ಲಿ ಗಂಡು ಮಕ್ಕಳು 362 ಮತ್ತು ಹೆಣ್ಣು ಮಕ್ಕಳು 366 ಸೇರಿ ಒಟ್ಟು 728 ವಿದ್ಯಾರ್ಥಿಗಳು ಉತ್ತೀರ್ಣರಾಗಿರುವುದು ಸಂತಸದ ತಂದಿದೆ ಎಂದು ಅವರು
ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು
ತಾಲೂಕಿನ ಬೀಚಗಾನಹಳ್ಳಿ ಶಾಲೆಯ ಎನ್.ನಿತೀನ್ ಮತ್ತು ವೈ.ಎನ್.ಕಸ್ತೂರಿ 619 ಅಂಕ ಪಡೆದಿದ್ದಾರೆ. ಉಳಿದಂತೆ 22ಕ್ಕೂ ಅಧಿಕ ವಿದ್ಯಾರ್ಥಿಗಳು 600ಕ್ಕೂ ಹೆಚ್ಚು ಅಂಕಗಳನ್ನು ಪಡೆದಿದ್ದಾರೆ.
ಇನ್ನು; ತಾಲೂಕಿನಲ್ಲಿ ಒಟ್ಟು 290 ವಿದ್ಯಾರ್ಥಿಗಳು A+, 358 ವಿದ್ಯಾರ್ಥಿಗಳ A,, 77 ವಿದ್ಯಾರ್ಥಿಗಳು B, ಮತ್ತು 3 ವಿದ್ಯಾರ್ಥಿಗಳು C ಗ್ರೇಡ್ ಗಳೊಂದಿಗೆ ಒಟ್ಟು 728 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ವೆಂಕಟೇಶಪ್ಪ ತಿಳಿಸಿದ್ದಾರೆ.
ಈ ವರ್ಷ ಸರಳವಾಗಿ ಪರೀಕ್ಷೆ ನಡೆಸಿದರೂ ಕೂಡ ಉತ್ತಮ ಫಲಿತಾಂಶ ಬರಲು ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಶಿಕ್ಷಕರ ಪಾತ್ರ ಮಹತ್ವದ್ದಾಗಿತ್ತು. ಅಲ್ಲದೆ, ಓಎಂಆರ್ ಶೀಟ್ ಪದ್ಧತಿಯಲ್ಲಿ ನಡೆದ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಎಲ್ಲೂ ಗೊಂದಲಕ್ಕೆ ಒಳಗಾಗದಂತೆ ಪರೀಕ್ಷೆ ಎದುರಿಸಲು ಮಾರ್ಗದರ್ಶನ ನೀಡಿದ್ದರು.
ಜತೆಗೆ, ಮನೆಗಳಿಗೇ ಭೇಟಿ ನೀಡಿದ್ದ ಶಿಕ್ಷಕರು, ಕೊನೆ ಕ್ಷಣದವರೆಗೂ ಮಕ್ಕಳಿಗೆ ಪ್ರೋತ್ಸಾಹ ನೀಡಿದ್ದರು. ವಿದ್ಯಾಗಮ ವ್ಯವಸ್ಥೆಯನ್ನು ಅತ್ಯುತ್ತಮವಾಗಿ ನಿರ್ವಹಿಸಿದ್ದರು. ಕೊರೋನಾ ಸೋಂಕಿನ ಕಾರಣ ವಿದ್ಯಾರ್ಥಿಗಳಿಗೆ ಭೌತಿಕ ತರಗತಿಗಳಿಲ್ಲದೆ ಶೈಕ್ಷಣಿಕ ಬೆಳವಣಿಗೆಯಲ್ಲಿ ಹಿಂದೆ ಉಳಿಯುತ್ತಿದ್ದನ್ನು ತಪ್ಪಿಸಲು ಶಿಕ್ಷಕರು ಸಾಕಷ್ಟು ಶ್ರಮಿಸಿದ್ದರು.
ಇದಿಷ್ಟೇ ಅಲ್ಲದೆ, ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶಪ್ಪ ನೇತೃತ್ವದಲ್ಲಿ ಸಂಪನ್ಮೂಲ ಶಿಕ್ಷಕರನ್ನು ಗುರುತಿಸಿ ಅವರ ಮೂಲಕ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಫೋನ್ ಇನ್ ಕಾರ್ಯಕ್ರಮವನ್ನೂ ನಡೆಸಲಾಗಿತ್ತು. ತಾಲೂಕಿನ 732 ವಿದ್ಯಾರ್ಥಿಗಳ ಪೈಕಿ 109 ವಿದ್ಯಾರ್ಥಿಗಳಿಗೆ ಫೋನ್ ಕರೆಯ ಮೂಲಕ ಸೂಕ್ತ ಸಲಹೆ ನೀಡಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಲಾಯಿತು. ಪ್ರತಿ ಶಾಲೆಯಲ್ಲೂ ಮಕ್ಕಳಿಗೆ ಹೊಸ ರೀತಿಯ ಪರೀಕ್ಷೆಯ ಬಗ್ಗೆ ಇದ್ದ ಆತಂಕಗಳನ್ನು ದೂರ ಮಾಡಲಾಯಿತು.
ಗುಡಿಬಂಡೆ ತಾಲೂಕು ಹೆಚ್ಚು ಸರಕಾರಿ ಶಾಲೆಗಳನ್ನು ಹೊಂದಿದ್ದು ಅತಿಹೆಚ್ಚು ಅಂದರೆ 619 ಅಂಕಗಳನ್ನು ಪಡೆದಿದ್ದಾರೆ. ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳಿಗೂ ಅಭಿನಂದನೆಗಳು ಹಾಗೂ ಕೋವಿಡ್ ಸಂದರ್ಭದಲ್ಲಿ ಸಹಕರಿಸಿದ ಎಲ್ಲಾ ಶಿಕ್ಷಕರು, ಅಧಿಕಾರಿಗಳು ಮತ್ತು ನಮ್ಮ ಮೇಲಿನ ಅಧಿಕಾರಿಗಳಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ.
ವೆಂಕಟೇಶಪ್ಪ, ಗುಡಿಬಂಡೆ, ಕ್ಷೇತ್ರ ಶಿಕ್ಷಣಾಧಿಕಾರಿ
ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಫೋನ್ ಇನ್ ಕಾರ್ಯಕ್ರಮ, ಓಎಂಆರ್ ಶೀಟ್ ಹಾಗೂ ಚಂದನ ವಾಹಿನಿಯಲ್ಲಿ ಬರುವ ಪೂರ್ವ ಸಿದ್ದತೆಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಲಾಗುತ್ತಿತ್ತು. ಎಲ್ಲಾ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆದಿರುವುದು ಶ್ಲಾಘನೀಯ.
ಚಂದ್ರಶೇಖರ್, ಇಸಿಒ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಗುಡಿಬಂಡೆ