ಬೆಂಗಳೂರು: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು (ವಿಟಿಯು) ರಾಜ್ಯದ 6 ಎಂಜಿನಿಯರಿಂಗ್ ಕಾಲೇಜುಗಳನ್ನು ಮುಚ್ಚುವಂತೆ ಸೂಚಿಸಿ ಆ ಕಾಲೇಜುಗಳ ಮಾನ್ಯತೆಯನ್ನು ವಾಪಸ್ ಪಡೆದಿದೆ.
ಈ ಕಾಲೇಜುಗಳಿಗೆ ಯಾವ ವಿದ್ಯಾರ್ಥಿಯೂ ದಾಖಲಾಗಬಾರದು ಹಾಗೂ ಈಗಾಗಲೇ ವಿವಿಧ ಸೆಮಿಸ್ಟರ್‌ಗಳ್ಲಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮಾನ್ಯತೆ ಹೊಂದಿರುವ ಇತರೆ ಕಾಲೇಜುಗಳಲ್ಲಿ ಪ್ರವೇಶಕ್ಕೆ ವ್ಯವಸ್ಥೆ ಮಾಡಲಾಗುವುದು. ಅದಕ್ಕೆ ಪ್ರತ್ಯೇಕ ಸೂಚನೆ ಹೊರಡಿಸಲಾಗುವುದು ಎಂದು ವಿವಿಯ ಪ್ರಕಟಣೆ ತಿಳಿಸಿದೆ.
ಒಂದು ವೇಳೆ ಯಾರೇ ವಿದ್ಯಾರ್ಥಿಗಳು ಈ ಮಾಹಿತಿಯನ್ನು ಕಡೆಗಣಿಸಿ ಕೆಳಕಂಡ ಕಾಲೇಜುಗಳಲ್ಲಿ ದಾಖಲಾದರೆ ತಾನು ಜವಾಬ್ದಾರಿಯಲ್ಲ ಎಂದು ವಿವಿ ತಿಳಿಸಿದೆಯಾದರೂ, ಮಾನ್ಯತೆ ವಾಪಸ್ ಪಡೆದ ಬಗ್ಗೆ ವಿವಿ ಯಾವುದೇ ಕಾರಣ ನೀಡಿಲ್ಲ.
ಮಾನ್ಯತೆ ಕಳೆದುಕೊಂಡ ಕಾಲೇಜುಗಳು
- ಆಲ್ಫಾ ಕಾಲೇಜ್ ಆಫ್ ಎಂಜಿನಿಯರಿಂಗ್ -ಬೆಂಗಳೂರು
- ಶೇಖ್ ಕಾಲೇಜ್ ಆಫ್ ಎಂಜಿನಿರಿಂಗ್- ಬೆಳಗಾವಿ
- ಇಸ್ಲಾಮಿಯಾ ಇನಸಿಟ್ಯೂಟ್ ಆಫ್ ಟೆಕ್ನಾಲಜಿ-ಬೆಂಗಳೂರು
- ಏಕಲವ್ಯ ಇನಸಿಟ್ಯೂಟ್ ಆಫ್ ಟೆಕ್ನಾಲಜಿ-ಚಾಮರಾಜನಗರ
- ಶ್ರೀ ವಿನಾಯಕ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ-ಕೆಜಿಎಫ್
- ಇಟಿಎಲ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್‌ಮೆಂಟ್‌ಬೆಂಗಳೂರು