ಚಿನ್ನಾಭರಣ ಅಂಗಡಿ ದರೋಡೆ & ಗುಂಡೇಟು ಪ್ರಕರಣಕ್ಕೆ ಸಂಬಂಧಿಸಿ 6 ಜನರ ಸೆರೆ
ಮೈಸೂರು: ನಗರದಲ್ಲಿ ನಡೆದ ಎರಡು ಅಪರಾಧಿ ಘಟನೆಗಳು ದುರದೃಷ್ಟಕರ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದ್ದಾರೆ.
ಮೈಸೂರಿನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗೃಹ ಸಚಿವರು, ನಗರದಲ್ಲಿ ನಡೆದಿರುವ ಗ್ಯಾಂಗ್ ರೇಪ್ ವಿಚಾರ ಶೀಘ್ರದಲ್ಲೇ ಬಗೆಹರಿಯುತ್ತದೆ. ಆರೋಪಿಗಳನ್ನು ಹಿಡಿಯುತ್ತೇವೆ ಎಂದರು.
ಮೈಸೂರಿನ್ಲಲಿ ಇತ್ತೀಚೆಗೆ ನಡೆದ ಚಿನ್ನಾಭರಣ ಅಂಗಡಿ ದರೋಡೆ ಮತ್ತು ಗುಂಡೇಟು ಪ್ರಕರಣಕ್ಕೆ ಸಂಬಂಧಿಸಿ 6 ಜನರನ್ನು ಬಂಧಿಸಲಾಗಿದೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಮಾಹಿತಿ ನೀಡಿದರು.
ಮೈಸೂರು ಪೊಲೀಲಿಸ್ ಆಯುಕ್ತರು ಐದು ತಂಡ ರಚಿಸಿ ದೇಶದ ಬೇರೆ ಬೇರೆ ಭಾಗಕ್ಕೆ ಕಳುಹಿಸಿದ್ದರು. ನಾಲ್ಕು ದಿನಗಳ ನಂತರದಲ್ಲಿ ಒಳ್ಳೆಯ ಸುದ್ದಿ ಕೊಡುತ್ತೇವೆ. ಆರು ಮಂದಿಯನ್ನು ಈಗಾಗಲೇ ಬಂಧಿಸಿದ್ದೇವೆ. ಪ್ಲ್ಯಾನ್ ಮಾಡಿದವರ ಪೈಕಿ ಇಬ್ಬರನ್ನು ಬಂಧಿಸಲಾಗಿದೆ. ಇವರಲ್ಲಿ ಒಬ್ಬರು ಮೈಸೂರಿನವರು, ಮತ್ತೊಬ್ಬ ರಾಜಸ್ಥಾನದವನು ಎಂದು ಅವರು ತಿಳಿಸಿದರು.
ದರೋಡೆ, ಕೊಲೆ ಮಾಡಿದವರ ಪೈಕಿ ಇಬ್ಬರನ್ನು ಪಶ್ಚಿಮ ಬಂಗಾಳ, ಮುಂಬಯಿ ಮತ್ತು ಜಮ್ಮು-ಕಾಶ್ಮೀರದಲ್ಲಿ ಬಂಧಿಸಲಾಗಿದೆ. ಪ್ರಕರಣ ಸಂಬಂದ ಇನ್ನಿಬ್ಬರ ಬಂಧನ ಆಗಬೇಕಿದೆ ಎಂದು ಸೂದ್ ಹೇಳಿದರು.
ಗ್ಯಾಂಗ್ ರೇಪ್ ಪ್ರಕರಣ ಕುರಿತು ಮಾತನಾಡಿದ ಪ್ರವೀಣ್ ಸೂದ್, ಆ ಹುಡುಗಿ ಹೇಳಲಿ ಬಿಡಲಿ, ನಮಗೆ ಯಾವುದೇ ಅನುಮಾನ ಇಲ್ಲ. ಅಲ್ಲಿ ಏನೇನೂ ನಡೆದಿದೆ ಅಂತ ಗೊತ್ತಿದೆ. ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಾಗುವುದು. ಸದ್ಯ ಯಾವುದೇ ಮಾಹಿತಿ ನೀಡಲಾಗುವುದಿಲ್ಲ ಎಂದರು.
ಮಾಹಿತಿ ಸೋರಿಕೆಯಾದರೆ ಆರೋಪಿಗಳು ಎಚ್ಚೆತ್ತುಕೊಳ್ಳಬಹುದು. ಆರೋಪಿಗಳ ಬಂಧನ ತಡವಾಗಬಹುದು ಎಂದು ತಿಳಿಸಿದರು.