ಇಂದು ವಿಶ್ವ ಓಜೋನ್ ರಕ್ಷಣಾ ದಿನ
ಮನು ಕುಲವನ್ನು ರಕ್ಷಿಸಲು ಉದ್ಭವಾಗಿರುವ ಹಲವಾರು ಪ್ರಕೃತಿ ರಕ್ಷ ಕವಚಗಳಲ್ಲಿ ಓಜೋನ್ ಪದರವು ಒಂದು.
ಆದರೆ, ಅಂತಹ ರಕ್ಷೆ ಒದಗಿಸುವ ಕವಚದ ಧ್ವಂಸ ಮಾಡುವ ಧೈರ್ಯವನ್ನು ಮನುಕುಲ ಮಾಡುತ್ತಿದೆ. ಅದರ ಪರಿಣಾಮದ ಆಳ ಅರಿಯದೇ ಪರಿಸರ ಮಾಲಿನ್ಯದಂತಹ ಕೃತ್ಯಗಳನ್ನು ಮುಂದುವರಿಸಿಯುತ್ತಿದ್ದೇವೆ. ಇಂತಹ ಮನಸ್ಥಿತಿ ಹೀಗೆ ಮುಂದುವರಿದ್ದರೆ ಮುಂದೊಂದು ದಿನ ಭೀಕರವಾದ ಅಂತ್ಯ ಕಾಣುವುದು ಸುಳ್ಳಲ್ಲ.
ಸೂಯರ್ನಿಂದ ಹೊರಹೊಮ್ಮುವ ಅಪಾಯಕಾರಿ ಅತಿನೇರಳೆ ಬಣ್ಣದ ವಿಕಿರಣಗಳು ನೇರವಾಗಿ ಭೂಮಿಗೆ ತಲುಪಿದರೆ, ಭೂಮಿಯಲ್ಲಿನ ಜೀವಸಂಕುಲವೇ ಸರ್ವನಾಶವಾಗುತ್ತದೆ. ಆ ವಿಕಿರಣವನ್ನು ತಡೆದು, ಬೆಳಕಿನ ಕಿರಣಗಳನ್ನು ಭೂಮಿಗೆ ನೀಡುವ ಪದರವೇ ಓಜೋನ್. ಓಜೋನ್ ಎಂದರೆ ಅದು ಆಮ್ಲಜನಕದ ಒಂದು ರೂಪವಾಗಿದೆ. ಅದರ ರಾಸಾಯನಿಕ ಸಂಕೇತವೇ `ಓ; ಸಾಮಾನ್ಯವಾಗಿ ಆಮ್ಲಜನಕವು ಎರಡು ಪರಮಾಣುಗಳನ್ನು ಒಳಗೊಂಡಿರುತ್ತದೆ. ಓಜೋನ್ ನಲ್ಲಿ ಮೂರು ಪರಮಾಣುಗಳಿರುತ್ತವೆ.
ವಾಯುಮಂಡಲದ `ಸ್ಟ್ರಾಟೋಸ್ಪಿಯರ್ ನಲ್ಲಿ 15ರಿಂದ 50 ಕಿ.ಮೀ. ಮೇಲ್ಮಟ್ಟದ ಪ್ರದೇಶದಲ್ಲಿ ಅದು ಯಥೇಚ್ಚವಾಗಿದೆ. ಭೂಮಂಡಲದ ಜೀವಿಗಳಿಗೆ ಓಜೋನ್ ಅತಿಮುಖ್ಯ. ಅಂಥಾ ಓಜೋನ್ ಪದರ ಈಗ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಕ್ಲೋರಿನ್ ಮತ್ತು ಬ್ರೋಮೈನ್ ಗಳು ವಾತಾವರಣದಲ್ಲಿ ಹೆಚ್ಚುಹೆಚ್ಚು ಬಿಡುಗಡೆಯಾಗಿತ್ತಿರುವುದೇ ಓಜೋನ್ ಕ್ಷೀಣತೆಗೆ ಪ್ರಮುಖ ಕಾರಣ ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ.
ಕ್ಲೋರೋಪೆÇೀರೋ ಮತ್ತು ಹಾಲೋಕಾರ್ಬನ್ ಗಳ ಉತ್ಪಾದನೆ ಹೆಚ್ಚಾಗುತ್ತಿರುವುದರಿಂದ ಕ್ಲೋರಿನ್ ಮತ್ತು ಬ್ರೋಮೈನ್ ಗಳು ಹೆಚ್ಚಾಗುತ್ತಿವೆ. ಇವು ಬೇಗ ನಶಿಸುವುದಿಲ್ಲ. ಹಲವು ವರ್ಷಗಳವರೆಗೆ ವಾಯುಮಂಡಲದಲ್ಲೇ ಇರುತ್ತವೆ. ಇವು ಓಜೋನ್ ಪದರದಲ್ಲಿನ ಕಣಗಳನ್ನು ಛಿದ್ರ ಮಾಡುತ್ತವೆ. ಇದರ ತೀವ್ರತೆ ಎಷ್ಟಿರುತ್ತದೆ ಎಂದರೆ, ಒಂದು ಕ್ಲೋರಿನ್ ಪ್ರಿರಾಡಿಕಲ್ 10 ಲಕ್ಷ ಓಜೋನ್ ಕಣಗಳನ್ನು ನಾಶಪಡಿಸುತ್ತವೆ. 1970-90ರ ಅವಧಿಯಲ್ಲಿ ವಿಶ್ವದಾದ್ಯಂತ ಶೇ. 5ರಷ್ಟು ಓಜೋನ್ ಪದರ ಕ್ಷೀಣಿಸಿದ್ದು, ಧ್ರುವ ಪ್ರದೇಶಗಳಲ್ಲೇ ಹೆಚ್ಚಾಗಿ ಕ್ಷೀಣಿಸಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.
1985ರಲ್ಲಿ ಬ್ರಿಟೀಷ್ ಅಂಟಾರ್ಕಿಟಿಕ್ ಸಮೀಕ್ಷೆ ಸಂಶೋಧಕರು, ಅಂಟಾರ್ಕಿಟಿಕ್ ಪ್ರಾಂತ್ಯದ ದಕ್ಷಿಣ ಧ್ರುವದ ಮೇಲ್ಭಾಗದಲ್ಲಿ ಓಜೋನ್ ಪೆÇರೆಗೆ ರಂಧ್ರ ಬಿದ್ದಿರುವುದಾಗಿ ತಿಳಿಸಿದ್ದಾರೆ. ಈ ರಂಧ್ರ ಆಸ್ಟ್ರೇಲಿಯಾ ಖಂಡದ ಭೂಭಾಗದಷ್ಟು ದೊಡ್ಡದಿದೆ ಎಂದು ಎಚ್ಚರಿಸಿದ್ದಾರೆ.
ಕ್ಲೋರೊಪಿರೊ, ಇಂಗಾಲದಂಥ ರಾಸಾಯನಿಕಗಳ ಪ್ರಮಾಣ ಹೆಚ್ಚಾಗುತ್ತಿದ್ದು, ಇದರಿಂದ ಓಜೋನ್ ಪದರ ತೆಳುವಾಗುತ್ತಿದೆ ಎಂಬುದು ವಿಜ್ಞಾನಿಗಳಿಗೆ ಸ್ಪಷ್ಟವಾಗಿದೆ. ಹಾಗಾಗಿ ಆ ಪದರಕ್ಕೆ ಇನ್ನೂ ಹೆಚ್ಚು ಹಾನಿ ಮಾಡದಂತೆ ಹಾಗೂ ಕ್ಲೋರೊಪಿರೊ ಮತ್ತು ಇಂಗಾಲದ ಪ್ರಮಾಣವನ್ನು ಕಡಿಮೆಗೊಳಿಸುವಂತೆ ಸಲಹೆಗಳು ವಿಶ್ವದ ವಿವಿಧೆಡೆಯಿಂದ ಹರಿದು ಬರುತ್ತಿವೆ. ಈಗಾಗಲೇ ಸುಮಾರು 17% ರಷ್ಟು ಓಜೋನ್ ಪದರ ತೆಳುವುವಾಗಿದೆ ಎಂದು ಸಮೀಕ್ಷೆಯೊಂದು ತಿಳಿಸಿದೆ.
ಓಜೋನ್ ಪದರ ಕರಗಲು ಮುಖ್ಯ ಕಾರಣ
- ಬೆಳೆಯುತ್ತಿರುವ ಕೈಗಾರಿಕ ಘಟಕಗಳು.
- ಕಾರ್ಖಾನೆಗಳಿಂದ ಹೊರಹುಮ್ಮುವ ವಿಷಕಾರಕ ಅನಿಲಗಳು.
- ವಾಹನಗಳಿಂದ ಹೊರಬರುವ ಹೊಗೆ ಹಾಗೂ ಶೀಥಲೀಕರಣ ಯಂತ್ರದಿಂದ ಬರುವ ಅನಿಲ.
- ಮಿಥೇನ್, ಕಾರ್ಬನ್ ಮೋನೋಕ್ಸೆಡ್, ಕ್ಲೋರೋಪೆÇ್ಲೀರೋ ಕಾರ್ಬನ್, ಕ್ಲೋರಿನ್, ಬ್ರೋಮಿನ್, ಮೀಥೈಲ್ ಬ್ರೋಮೈಡ್, ಹೈಡ್ರೋ ಫೆÇ್ಲೀರೋ ಕಾರ್ಬನ್ ಮುಂತಾದ ಅನಿಲಗಳಿಂದಲ್ಲೂ ಮಾರಕ.
ಓಜೋನ್ ಪದರ ಕರಗಿದರೆ ಏನಾಗುತ್ತದೆ?
- ಓಜೋನ್ ಪದರ ತೆಳುವಾದರೇ ಪರಿಸರದ ಸಮತೋಳನ ಕಳೆದುಹೋಗಿ, ಭೂಮಿ ಬರಡಾಗುತ್ತದೆ.
- ಜೀವ ವೈವಿಧ್ಯಗಳು ನಾಶಗೊಂಡು ಭೂಮಿ ಬದುಕಲು ಯೋಗ್ಯವಲ್ಲದ ಬಂಜರು ಭೂಮಿಯಾಗುತ್ತದೆ.
- ಪರಿಣಾಮ ಮನುಷ್ಯ ಆರೋಗ್ಯದಲ್ಲಿ ಏರುಪೇರಾಗಿ ಚರ್ಮದ ಕ್ಯಾನ್ಸರ್ ಬರಬಹುದು.
- ನೀರಿನ ಕೊರತೆ ಕಾಡಬಹುದು.
ವಿಶ್ವ ಸಂಸ್ಥೆಯ ಅಂಕಿ-ಅಂಶಗಳ ಪ್ರಕಾರ ಅತೀ ಹೆಚ್ಚು ಇಂಗಾಲ ಹೊರಸೂಸುವ ರಾಷ್ಟ್ರಗಳಲ್ಲಿ ಚೀನ ಮೊದಲ ಸ್ಥಾನದಲ್ಲಿದೆ.
ವಿಶ್ವದಲ್ಲಿ ಅತೀ ಹೆಚ್ಚು ಇಂಗಾಲವನ್ನು ಹೊರಸೂಸುವ ದೇಶಗಳ ಪೈಕಿ ಭಾರತ ನಾಲ್ಕನೇ ಸ್ಥಾನದಲ್ಲಿದೆ. ಅತೀ ಹೆಚ್ಚು ಇಂಗಾಲವನ್ನು ಹೊರಸೂಸುವಂತಹ ಜಗತ್ತಿನ ಟಾಪ್ ಹತ್ತು ದೇಶಗಳ ಸಾಲಿನಲ್ಲಿ ಚೀನ, ಅಮೆರಿಕ, ಯರೋಪಿಯನ್, ಭಾರತ, ರಷ್ಯ, ಜಪಾನ್, ಜರ್ಮನಿ, ಇರಾನ್, ಸೌದಿ ಅರೇಬಿಯಾ, ದಕ್ಷಿಣ ಕೊರಿಯಾ.
ಮನುಷ್ಯನಿಗೆ ಚಿಕಿತ್ಸೆಯಲ್ಲೂ ಓಜೋನ್ ಬಳಕೆ ಮಾಡಲಾಗುತ್ತದೆ,ಸ್ಲಿಪ್ ಡಿಸ್ಕ್ನಿಂದಾಗಿ ಬೆನ್ನುನೋವು ಇರುವವರಿಗೆ ಓಜೋನ್ ಚುಚ್ಚುಮದ್ದನ್ನು ನೀಡುತ್ತಾರೆ. ಹಾನಿಗೊಳಗಾದ ಬೆನ್ನುಮೂಳೆಯನ್ನು ಹಿಡಿದುಕೊಳ್ಳುವ ವೃತ್ತಾಕಾರದ ಡಿಸ್ಕ್ ಗೆ ಓಜೋನ್ ಅನ್ನು ಚುಚ್ಚು ಮದ್ದಿನ ಮೂಲಕ ಕೊಡುತ್ತಾರೆ. ಇದರಿಂದ ನೋವು ಬಹುತೇಕ ನಿವಾರಣೆಯಾಗುತ್ತದೆ.
ಈ ವರ್ಷದ ವಿಶ್ವ ಓಜೋನ್ ದಿನ 2021 ಥೀಮ್
“ಓಜೋನ್ ಫಾರ್ ಲೈಫ್: 36 ವರ್ಷಗಳ ಓಜೋನ್ ಲೇಯರ್ ಭದ್ರತೆ” ಎಂಬುದು ವಿಶ್ವ ಓಜೋನ್ ದಿನ 2021ರ ಘೋಷಣೆಯಾಗಿದೆ. ಈ ವರ್ಷ ನಾವು 36 ವರ್ಷಗಳ ಜಾಗತಿಕ ಓಜೋನ್ ಪದರ ರಕ್ಷಣೆಯ ದಿನವನ್ನಾಗಿ ಆಚರಿಸುತ್ತೇವೆ.
ಇದು ದಿನೇದಿನೆ ಮತ್ತಷ್ಟು ಹೆಚ್ಚಾಗುತ್ತಿದ್ದು, ಇದರ ತಡೆಗೆ ಜಾಗತಿಕ ಮಟ್ಟದದಲ್ಲಿ ವಾಯು ಮಾಲಿನ್ಯದ ಕುರಿತು ಗಂಭೀರವಾಗಿ ಚಿಂತಿಸಬೇಕಿದೆ. ಮಾಲಿನ್ಯ ನಿಯಂತ್ರಣಕ್ಕೆ ಬೇಕಾದ ಕ್ರಮಗಳಿಗೆ ಇಡೀ ವಿಶ್ವವೇ ಒಂದಾಗಬೇಕಿದೆ. ಇಲ್ಲದಿದ್ದಲಿ ಮುಂದಿನ ಶತಮಾನಗಳಲ್ಲಿ ಭೂಮಂಡಲದ ಮೇಲೆ ಇರುವ ಇಡೀ ಜೀವ ಸಂಕುಲಕ್ಕೇ ಆಪತ್ತು ಬಂದೊದಗಲಿದೆ.
ಡಾ.ಗುರುಪ್ರಸಾದ ಹವಲ್ದಾರ್
- ಮೂಲತಃ ಉಪನ್ಯಾಸಕರು. ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಮರಿಯಮ್ಮನ ಹಳ್ಳಿಯವರು. ಪ್ರಸ್ತುತ ಹಗರಿಬೊಮ್ಮನಹಳ್ಳಿ ಜಿವಿಪಿಪಿ ಪದವಿ ಕಾಲೇಜನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತ ಜೊತೆಗೆ ಪತ್ರಿಕೆಗಳಿಗೆ ವೆಬ್ ನ್ಯೂಸ್ ಪೋಟ್೯ಲ್ ಗಳಿಗೆ ಲೇಖನ ಬರೆಯುತ್ತಿದ್ದಾರೆ.