• About
  • Advertise
  • Careers
  • Contact
Monday, May 19, 2025
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home GUEST COLUMN

ಕೋವಿಡ್‌ನಿಂದ ಕೊರಗಿದ ಪ್ರವಾಸೋದ್ಯಮ

cknewsnow desk by cknewsnow desk
September 27, 2021
in GUEST COLUMN
Reading Time: 2 mins read
0
ಕೋವಿಡ್‌ನಿಂದ ಕೊರಗಿದ ಪ್ರವಾಸೋದ್ಯಮ

ಬೇಲೂರು ಶ್ರೀ ಚೆನ್ನಕೇಶವ ದೇವಾಲಯ / Courtesy: Wikipedia

979
VIEWS
FacebookTwitterWhatsuplinkedinEmail

ಇಂದು ವಿಶ್ವ ಪ್ರವಾಸೋದ್ಯಮ ದಿನ; ವಿಪುಲ ಅವಕಾಶಗಳ ಆಗರ ಭಾರತೀಯ ಟೂರಿಸಂ

ಇಂದು (ಸೆ.27) ವಿಶ್ವ ಪ್ರವಾಸೋದ್ಯಮ ದಿನ. ಕಳೆದ ಎರಡು ವರ್ಷಗಳಿಂದ ಕೊರೋನಾ ವೈರಸ್‌ ದಾಳಿಯಿಂದ ಬೆದರಿದ ಪ್ರವಾಸೋದ್ಯಮ ಸಣ್ಣಗೆ ಜಿಗಿದುಕೊಳ್ಳುತ್ತಿದೆ. ದೇಶಿಯ ಟೂರಿಸಂ ಅಭಿವೃದ್ಧಿಗೆ ಏನೆಲ್ಲಾ ಮಾಡಬೇಕು? ನಮ್ಮ ಅಂಕಣಕಾರ ಡಾ.ಗುರುಪ್ರಸಾದ್‌ ಹವಲ್ದಾರ್‌ ವಿವರವಾಗಿ ಚರ್ಚಿಸಿದ್ದಾರೆ.

  • ಹಂಪಿ / courtesy: Wikipedia

ಕಳೆದ ವರ್ಷ ಕೊರೊನಾ ಕೊಟ್ಟ ಹೊಡೆತಕ್ಕೆ ಇಡೀ ಜಗತ್ತೇ ತತ್ತರಿಸಿ ಹೋಗಿದೆ. ಜನರಿಗೆ ಆರ್ಥಿಕ ಸಂಕಷ್ಟ ಎದುರಾಗಿ ಪ್ರವಾಸ ಮಾಡಬೇಕೆನ್ನುವ ಅಸೆ ಕಮರಿ ಹೊಗಿರುವ ಕಾಲಘಟ್ಟದಲ್ಲಿ ವಿಶ್ವ ಪ್ರವಾಸೋದ್ಯಮ ದಿನ ದಿನಾಚರಣೆ ಆಚರಿಸುತ್ತಿದ್ದೆವೆ. ಪ್ರತಿ ವರ್ಷ ಭಾರತಕ್ಕೆ ಭೇಟಿ ನೀಡುತ್ತಿರುವ ಪ್ರವಾಸಿಗರ ಸಂಖ್ಯೆ 25 ಲಕ್ಷದಷ್ಟು. ಎರಡು ವರ್ಷಗಳಿಂದ ಭಾರತದಲ್ಲಿ ಮತ್ತು ಜಗತ್ತಿನಾದ್ಯಂತ ಪ್ರವಾಸೋದ್ಯಮವು ಸಂಪೂರ್ಣವಾಗಿ ನೆಲ ಕಚ್ಚಿತು. ಕೋವಿಡ್ ಅಪಾಯದ ನಡುವೆಯೂ ಈಗ ನಿಧಾನವಾಗಿ ಜನ ಪ್ರವಾಸಿ ತಾಣಗಳತ್ತ ಮು ಮಾಡುತ್ತಿದ್ದಾರೆ.

ಈ ವರ್ಷದ ವಿಶ್ವ ಪ್ರವಾಸೋದ್ಯಮ ದಿನಾಚರಣೆ 2021ರ ಥೀಮ್ ‘ಅಂತರ್ಗತ ಬೆಳವಣಿಗೆಗೆ ಪ್ರವಾಸೋದ್ಯಮ’ (Tourism for Inclusive Growth’ is the theme for World Tourism Day 2021. This year’s official celebration will be hosted by Cote d’Ivoire ) ಎಂಬುದಾಗಿದೆ.

ಈ ವರ್ಷದ ವಿಶ್ವ ಪ್ರವಾಸೋದ್ಯಮ ಆಚರಣೆಯನ್ನು ಕೋಟ್ ಡಿ ಐವೊಯಿರ್ ಆಯೋಜಿಸಲಿದ್ದು, ಪ್ರವಾಸೋದ್ಯಮದ ಅಂತರ್ಗತ ಅಭಿವೃದ್ಧಿಯನ್ನು ವೃದ್ಧಿಸುವ ಸಾಮರ್ಥ್ಯ ಮತ್ತು ಗೌರವವನ್ನು ಉತ್ತೇಜಿಸುವಂತೆ ಮಾಡಿ ಈ ಮೂಲಕ ಪ್ರಪಂಚದಾದ್ಯಂತ ಲಕ್ಷಾಂತರ ಜನರಿಗೆ ಅವಕಾಶಗಳನ್ನು ಸೃಷ್ಟಿಸುತ್ತದೆ.

ಭಾರತದಲ್ಲಿ ಪ್ರವಾಸೋದ್ಯಮ 1970ರ ದಶಕದ ನಂತರ ವೇಗವಾಗಿ ಚಾಲನೆ ಪಡೆದುಕೊಂಡಿತು. 1982ರಲ್ಲಿ ಪ್ರವಾಸೋದ್ಯಮಕ್ಕಾಗಿಯೇ ರಾಷ್ಟ್ರೀಯ ನೀತಿ ಪ್ರಕಟಿಸಲಾಯಿತು. 1988ರಲ್ಲಿ ರಾಷ್ಟ್ರೀಯ ಪ್ರವಾಸೋದ್ಯಮ ಸಮಿತಿ ರಚಿಸಿ ನೀರಿಕ್ಷೆ ಗುರಿ ತಲುಪುವ ಯೋಜನೆ ಹಮ್ಮಿಕೊಳ್ಳಲಾಯಿತು. 1992ರಲ್ಲಿ ರಾಷ್ಟ್ರೀಯ ಕ್ರಮ ಯೋಜನೆ ಮತ್ತು 1996ರಲ್ಲಿ ರಾಷ್ಟ್ರೀಯ ಯೋಜನೆಗಳು ಜಾರಿಗೊಂಡವು. ಇದಕ್ಕೂ ಮುನ್ನ 1966ರಲ್ಲಿ ಇಂಡಿಯಾ ಟೂರಿಸಂ ಡೆವಲಪ್‍ಮೆಂಟ್ ಕಾರ್ಪೋರೇಷನ್ ಮತ್ತು 1989ರಲ್ಲಿ ಟೂರಿಸಂ ಫೈನಾನ್ಸ್ ಕಾರ್ಪೋರೇಷನ್‍ಗಳನ್ನು ಸ್ಥಾಪಿಸಿದ್ದು ಮಹತ್ವದ ಮೈಲುಗಲ್ಲುಗಳಾಗಿದ್ದವು. ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಹೋಲಿಸಿದರೆ ಈ ಉದ್ಯಮಕ್ಕೆ ಸಂಬಂಧಿಸಿದಂತೆ ಭಾರತವು ದುಸ್ಥಿತಿಯಲ್ಲಿದೆ.

ಭಾರತವು ವಿಶ್ವದಾದ್ಯಂತ ಎಲ್ಲ ರಾಷ್ಟ್ರಗಳ ಪ್ರವಾಸಿಗರನ್ನು ಕೈಬಿಸಿ ಕರೆಯುತ್ತಿದೆ. ಭಾರತೀಯರ ಜೀವನ ಶೈಲಿ, ಸಾಂಸ್ಕೃತಿಕ ವೈಭವ, ರಂಗುರಂಗಿನ ಜಾತ್ರೆಗಳು, ಉತ್ಸವಗಳು ಇವೆಲ್ಲ ಹೊರನಾಡಿನವರನ್ನು ಆಕರ್ಷಿಸುತ್ತವೆ. ಸುಂದರ ಕಡಲ ತೀರಗಳು, ಅಭಯಾರಣ್ಯಗಳು, ಕಾಡು ಪ್ರಾಣಿಗಳು, ಹಿಮ, ನದಿ, ಪರ್ವತ ಶ್ರೇಣಿಗಳು ಮೆಚ್ಚಿನ ತಾಣವಾಗಿವೆ. ಭಾರತೀಯರ ಕರಕುಶಲತೆ ಅದರಲ್ಲೂ ವಿಶೇಷವಾಗಿ ಆಭರಣಗಳು, ನೆಲಹಾಸು, ಚರ್ಮದ ಉತ್ಪಾದನೆಗಳು, ಆನೆ ದಂತ, ಕುಸುರಿ ಕೆಲಸಗಳು ಇತ್ಯಾದಿ. ವಿದೇಶಿ ಪ್ರವಾಸಿಗರ ನೆಚ್ಚಿನ ಶಾಪಿಂಗ್ ವಸ್ತುಗಳಾಗಿವೆ. ಸಮಿಕ್ಷೆಯೊಂದರ ಪ್ರಕಾರ ನಮ್ಮ ಪ್ರವಾಸ ಖರೀದಿಯ ಶೇಕಡ 40ರಷ್ಟು ಆದಾಯ ಈ ವಸ್ತುಗಳಿಂದ ಬರುತ್ತಿದೆ.

ʼಒಂದು ರಾಜ್ಯ, ಹಲವು ಜಗತ್ತುʼ ಧ್ಯೇಯದ ಅಡಿಯಲ್ಲಿ ಇಂದು ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಉತ್ಸಾಹದಿಂದ ಕೆಲಸ ಮಾಡುತ್ತಿದೆ. ಬೇರೆ ರಾಜ್ಯಗಳಿಗೆ ಹೊಲಿಸಿದರೆ ಕರ್ನಾಟಕವು ಪ್ರವಾಸೋದ್ಯಮದಲ್ಲಿ ಮಂದಗತಿಯಲ್ಲಿದೆ. ಇವಕ್ಕೆಲ್ಲ ಹಲವಾರು ಕಾರಣಗಳು ಇವೆ. ಗಾತ್ರದಲ್ಲಿ ಚಿಕ್ಕದಾದರೂ ನೆರೆಯ ಗೋವಾ ಮತ್ತು ಕೇರಳ ರಾಜ್ಯಗಳು ಅತಿ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸಿ ತಮ್ಮ ಖಜಾನೆಯನ್ನು ಭರ್ತಿ ಮಾಡಿಕೊಳ್ಳುತ್ತಿವೆ. ಪ್ರವಾಸಿ ತಾಣಗಳಿಗೆ ತಲುಪಲು ಸರಿಯಾದ ರಸ್ತೆ ಸಂಪರ್ಕವಿಲ್ಲದಿರುವುದು ಮತ್ತು ಪ್ರವಾಸಿಗಳು ತಂಗಲು ಸರಿಯಾದ ವಸತಿ ಸೌಕರ್ಯ ಇಲ್ಲದಿರುವುದು ಮುಖ್ಯ ಕಾರಣಗಳು.

ವಿಶ್ವವಿಖ್ಯಾತ ಜೋಗ ಜಲಪಾತದಲ್ಲಿ ತಂಗಲು ಉತ್ತಮ ವಸತಿ ಸೌಕರ್ಯ‌ ಇಲ್ಲದಿರುವುದು ಅತ್ಯಂತ ದುರದೃಷ್ಟಕರ. ಬೆಂಗಳೂರು ಮತ್ತು ಮೈಸೂರು ನಗರಗಳಲ್ಲಿರುವ ಸೌಲಭ್ಯಗಳು ಇತರೆ ನಗರಗಳಲ್ಲಿ ಇಲ್ಲ. ಮದುವೆಯಾದ ನವ ದಂಪತಿಗಳಿಗೆ ನೀವು ಮಧುಚಂದ್ರಕ್ಕೆ ಎಲ್ಲಿಗೆ ಹೋಗುತ್ತಿರಾ ಅಂತ ಕೇಳಿದರೆ ಊಟಿ, ಕೊಡೈಕೆನಾಲ್ ಹೆಸರು ಹೇಳುತ್ತಾರೆ. ಅದಕ್ಕಿಂತ ಉತ್ತಮ ತಾಣಗಳಾದ ಕೆಮ್ಮಣ್ಣು ಗುಂಡಿ, ಕುದುರೆಮುಖ, ಕೊಡಗು, ನಂದಿ ಬೆಟ್ಟ, ಸಕಲೆಶಪುರ ಮುಂತಾದ ಗಿರಿಧಾಮಗಳನ್ನು ಯಾರು ಹೆಸರಿಸುವುದಿಲ್ಲ. ಮೂಲಭೂತ ಸೌಕರ್ಯಗಳ ಕೊರತೆಯೇ ಇದಕ್ಕೆ ಕಾರಣ. 

  • ಜೋಗ ಜಲಪಾತ / courtesy: Wikipedia

ವಿದೇಶಿ ಪ್ರವಾಸಿಗರಿಗೆ ರಕ್ಷಣೆ ಅಗತ್ಯ

ವಿದೇಶಿ ಪ್ರವಾಸಗರಿಗೆ ಕೀಟಲೆ ಕೊಡುವ ಸ್ವಭಾವ ಇಂದು ನಮ್ಮವರಲ್ಲಿ ಜಾಸ್ತಿಯಾಗಿದೆ. ಇದು ನಮ್ಮ ಭವ್ಯ ಸಂಸ್ಕೃತಿಗೆ ಮಸಿ ಬಳಿಯುವ ಸಂಗತಿ. ಇಲ್ಲಿ ಅತಿಥಿಗಳಿಗೆ ರಕ್ಷಣೆ ಕೊಡುವುದಕ್ಕಿಂತ ಅವರಿಂದ ಭಕ್ಷಣೆಗಾಗಿ ಹುಡುಕಾಡುವವರೇ ಹೆಚ್ಚು. ಅವರಿಂದ ಹಣ ಹಾಗೂ ಅಮೂಲ್ಯ ವಸ್ತುಗಳನ್ನು ಲಪಟಾಯಿಸುವ ಕೃತ್ಯಗಳು ನಮ್ಮವರಿಂದಲೇ ನಡೆಯುತ್ತಿವೆ. ವಿದೇಶಿ ಪ್ರವಾಸಿಗರ ಹತ್ಯೆ, ಮಹಿಳೆಯರ ಮೇಲೆ ಅತ್ಯಾಚಾರ ಪ್ರಕರಣಗಳು ಕಡಿಮೆಯೇನಿಲ್ಲ. ಇಂಥ ಕೃತ್ಯಗಳಲ್ಲಿ ತೊಡಗಿಕೊಳ್ಳುವ ಕೆಲ ಅದಮರಿಂದಾಗಿ ಇಡೀ ಪ್ರವಾಸೋದ್ಯಮ ಕ್ಷೇತ್ರ ಹಾಳಾಗುತ್ತಿದೆ. ಇಂಥ ಅಮಾನವೀಯ ಕೃತ್ಯಗಳನ್ನು ತಡೆಯುವಂಥ ಕಾರ್ಯ ಇಲ್ಲಿ ಆಗಬೇಕಾದ್ದು ಅಗತ್ಯ.

ಪ್ರವಾಸಿ ವೀಸಾ ನೀತಿಯಲ್ಲಿ ಸಡಿಲಿಕೆ , 2 ಮತ್ತು 3ನೇ ದರ್ಜೆಯ ನಗರದಲ್ಲಿ ವಸತಿ, ಸಾರಿಗೆ ಹಾಗೂ ರಸ್ತೆಗಳ ಅಭಿವೃದ್ಧಿ, ಸುರಕ್ಷತೆ, ಮಹಿಳಾ ಪ್ರವಾಸಿಗಳ ಸುರಕ್ಷತೆಗೆ ಹೆಚ್ಚಿನ ಮಹತ್ವ ನೀಡುವುದು, ಸ್ವಚ್ಛತೆ ಮತ್ತು ಇತರೆ ಮೂಲಭೂತ ಸೌಕರ್ಯಗಳು ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಬೇಕು. ಪ್ರವಾಸಿ ತಾಣಗಳಿಗೆ ರಾಷ್ಟ್ರೀಯ ಹೆದ್ದಾರಿಗಳ ಸಂಪರ್ಕ ಕಲ್ಪಿಸುವುದು. ಭಾಷಾ ಅನುವಾದಕರ ಕೊರತೆ ನೀಗಿಸುವುದು. ಸೇವ ತೆರಿಗೆ. ಲುಕ್ಷರಿ ತೆರಿಗೆ, ಮೊನೋರಂಜನೆ ತೆರಿಗೆ, ವ್ಯಾಟ್, ಮಾರಾಟ ತೆರಿಗೆಗಳಿಂದ ರಿಯಯಾಯಿತಿ ಕೊಡುವುದು. ಪ್ರವಾಸೋದ್ಯಮದ ಶಿಕ್ಷಣ ಕೇಂದ್ರಗಳನ್ನು ಆರಂಭಿಸುವುದು. ತಂತ್ರಜ್ಞಾನ ಬಳಕೆ ಇವೆಲ್ಲವೂ ಇಂದು ಪ್ರವಾಸೋದ್ಯಮ ಎದುರಿಸುತ್ತಿರುವ ಸವಾಲುಗಳಾಗಿವೆ.

  • ಮುರುಡೇಶ್ವರ ಕಡಲ ಕಿನಾರೆಯಲ್ಲಿ ಸೂರ್ಯಾಸ್ತ / by @ckphotography

ಪ್ರವಾಸಕ್ಕೆ ಬರುವ ದೇಶೀಯ ಮತ್ತು ವಿದೇಶಿ ಪ್ರವಾಸಿಗರಿಂದ ಹಣವು ಸಹ ಯತೇಚ್ಚವಾಗಿ ಹರಿದುಬರುತ್ತದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ನಿರಂತರ ಅದಾಯವೂ ಬರುತ್ತದೆ. ಇಂದು ಭಾರತದಲ್ಲಿ ಪ್ರವಾಸೋದ್ಯಮವು ಸುಮಾರು ೨೦ ಲಕ್ಷ ಜನರಿಗೆ ಉದ್ಯೋಗ ನೀಡಿದೆ. ಇಂದೊಂದು ಉತ್ತಮ ಬೆಳವಣಿಗೆ. ಭಾರತದ ಪ್ರಾಚೀನ ಪದ್ದತಿಗಳಾದ ಆಯುರ್ವೇದ ಮತ್ತು ಯೋಗ ಚಿಕಿತ್ಸೆಗಳಿಗೆ ವಿದೇಶಿಯರಲ್ಲದೆ ಸ್ವದೇಶಿಯರು ಸಹ ಮುಗಿಬಿದ್ದಿರುವುದು ವೈದ್ಯಕೀಯ ಪ್ರವಾಸೋದ್ಯಮಕ್ಕೆ ವರದಾನವಾಗಿದೆ. ವೈದ್ಯಕೀಯ ಪ್ರವಾಸೋದ್ಯಮವು ವರ್ಷದಿಂದ ವರ್ಷಕ್ಕೆ ೩೦%ರಷ್ಟು ವೇಗದಲ್ಲಿ ಬೆಳವಣಿಗೆ ಹೊಂದುತ್ತಿದೆ. ೨೦೧೫ರ ಹೊತ್ತಿಗೆ ಸುಮಾರು ೨ ಬಿಲಿಯನ್‌ ಡಾಲರ್ ವರಮಾನವನ್ನು ಮಿರುವ ಸಾದ್ಯತೆಯಿದೆ ಎಂಬ ನಿರೀಕ್ಷೆಯಿದೆ.

ಪ್ರವಾಸೋದ್ಯಮದಿಂದ ಸಾರಿಗೆ, ಹೊಟೇಲ್ ಉದ್ಯಮಕ್ಕೆ ನೇರ ಲಾಭ ಆಗುವುದರಿಂದ ಅಲ್ಲಿ ಹೆಚ್ಚು ಉದ್ಯೋಗವಕಾಶಗಳು ಸೃಷ್ಟಿಯಾಗುತ್ತವೆ. ಹಿಂದೆ ಪ್ರವಾಸಗಳನ್ನು ಕೇವಲ ಉಳ್ಳವರು ಮಾಡುತ್ತಿದ್ದರು ಹಾಗೂ ಸಾಮಾನ್ಯರ ಪ್ರವಾಸವೆಂದರೆ ತೀರ್ಥಯಾತ್ರೆಗಳಿಗೆ ಮಾತ್ರ ಮೀಸಲಾಗಿತ್ತು. ಇಂದು ಬಡವ, ಶ್ರೀಮಂತರೆಂಬ ಭೇದವಿಲ್ಲದೆ, ಶಾಲಾ ಮಕ್ಕಳಿಂದ ಹಿಡಿದು ವಯೋವೃದ್ದರವರೆಗೂ ಪ್ರವಾಸ ಕೈಗೊಳ್ಳುತ್ತಾರೆ. ಅವರ ಅನುಕೂಲಕ್ಕೆ ತಕ್ಕಂತೆ ಪ್ರವಾಸಗಳನ್ನು ಏರ್ಪಡಿಸುವ ಏಜೆನ್ಸಿಗಳು ದಿನನಿತ್ಯ ಹುಟ್ಟುತ್ತಲೇ ಇವೆ. ಪ್ರವಾಸೋದ್ಯಮದಿಂದ ಬರುವ ಆದಾಯದಿಂದ ಸರ್ಕಾರವು ಪ್ರವಾಸಿ ಕೇಂದ್ರಗಳ ಮೂಲಭೂತ ಸೌಕರ್ಯಗಳ ಅಭಿವೃದ್ದಿಗೆ ಯತ್ನಿಸಿ ಪ್ರವಾಸಿ ಕೇಂದ್ರಗಳಿಗೆ ಪ್ರವಾಸಿಗರನ್ನು ಸೆಳೆದು ಇನ್ನೂ ಹೆಚ್ಚು ಆದಾಯವನ್ನು ಗಳಿಸಬಹುದು. ಜಗತ್ತಿನ ಇತರೆ ದೇಶಗಳಿಗೆ ಹೊಲಿಸಿದರೆ ಭಾರತದಲ್ಲಿ ಹಳ್ಳಿ ಮತ್ತು ಪಟ್ಟಣಗಳ ನಡುವಿನ ಜನಜೀವನ ಮಟ್ಟದ ಅಂತರ ಬಹಳವಿದೆ. ಪ್ರವಾಸೋದ್ಯಮವು ಜನರು ಹಳ್ಳಿಗಳಿಂದ ನಗರಕ್ಕೆ ವಲಸೆ ಹೋಗುವುದನ್ನು ತಪ್ಪಿಸಿ ಅವರು ಇದ್ದಲ್ಲಿಯೇ ಉತ್ತಮ ಆದಾಯ ತರುವ ಮೂಲವಾಗುತ್ತದೆ. ಪ್ರವಾಸಕ್ಕೆ ಬರುವ ಪ್ರವಾಸಿಗರು ಹೆಚ್ಚಾದಂತೆ ವಿಶ್ವದಲ್ಲಿ ಭಾರತದ ಬಗ್ಗೆ ಇರುವ ಹಲವಾರು ತಪ್ಪು ತಿಳುವಳಿಕೆಗಳು ಇಲ್ಲವಾಗಿ ಫೀಲ್ʼಗುಡ್ ಫ್ಯಾಕ್ಟರ್ ಹೆಚ್ಚಾಗುತ್ತದೆ. ‌

ಪ್ರವಾಸೋದ್ಯಮವನ್ನು ವ್ಯವಸ್ಥಿತವಾಗಿ ಅಭಿವೃದ್ಧಿಪಡಿಸುವ ಮೂಲಕ ಬಡತನದ ಸಮಸ್ಯೆ ನಿರ್ಮೂಲನೆ ಮಾಡಬಹುದು ಹಾಗೂ ನಮ್ಮ ದೇಶದ ಕೀರ್ತಿಯು ಸಹ ಉತ್ತುಂಗಕ್ಕೆ ಏರುತ್ತದೆ ಎನ್ನುವುದರಲ್ಲಿ ಯಾವ ಅನುಮಾನವಿಲ್ಲ.  


ಡಾ.ಗುರುಪ್ರಸಾದ ಹವಲ್ದಾರ್

  • ಮೂಲತಃ ಉಪನ್ಯಾಸಕರು. ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಮರಿಯಮ್ಮನ ಹಳ್ಳಿಯವರು. ಪ್ರಸ್ತುತ ಹಗರಿಬೊಮ್ಮನಹಳ್ಳಿ ಜಿವಿಪಿಪಿ ಪದವಿ ಕಾಲೇಜನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತ ಜೊತೆಗೆ ಪತ್ರಿಕೆಗಳಿಗೆ ವೆಬ್ ನ್ಯೂಸ್ ಪೋಟ್೯ಲ್ ಗಳಿಗೆ ಲೇಖನ ಬರೆಯುತ್ತಿದ್ದಾರೆ.

CkPhotography ಸಿಕೆಪಿ@ckphotographi

Tags: cknewsnowcovid19indiakarnatakanewsworld tourism day 2021world tourism day theme 2021
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಒಬ್ಬರೇ ಒಬ್ಬರು! ಅವರೇ ಭಾರತರತ್ನ ಕರ್ಪೂರಿ ಠಾಕೂರ್.., ಹರಿದ ಕೋಟು, ಹರಿದ ಚಪ್ಪಲಿಯೊಂದಿಗೆ ಸಾಗಿದ ಮಹಾನ್‌ ದಂತಕಥೆ!!

ಒಬ್ಬರೇ ಒಬ್ಬರು! ಅವರೇ ಭಾರತರತ್ನ ಕರ್ಪೂರಿ ಠಾಕೂರ್.., ಹರಿದ ಕೋಟು, ಹರಿದ ಚಪ್ಪಲಿಯೊಂದಿಗೆ ಸಾಗಿದ ಮಹಾನ್‌ ದಂತಕಥೆ!!

by cknewsnow desk
January 27, 2024
0

"ಒಬ್ಬರ ಜನನವು ಅವರ ಹಣೆಬರಹವನ್ನು ನಿಶ್ಚಯಿಸುವುದಿಲ್ಲ" ಎಂದ ಜನ ನಾಯಕ; ಅಪ್ಪಟ ಭಾರತರತ್ನ, ಮೀಸಲು ಕೊಟ್ಟು ಬದುಕು ಕಟ್ಟಿಕೊಟ್ಟ ಭಾರತದ ಭಾಗ್ಯವಿದಾತ

ಸರ್ದಾರ್ ಪಟೇಲರ ದೃಢ ಸಂಕಲ್ಪ, ಮುನ್ಷಿ ಅವರ ಪ್ರಚಂಡ ಧೈರ್ಯ ಮತ್ತು ಬಾಬು ರಾಜೇಂದ್ರ ಪ್ರಸಾದರ ರಾಜಿ ಇಲ್ಲದ ನಿಲುವು

ಸರ್ದಾರ್ ಪಟೇಲರ ದೃಢ ಸಂಕಲ್ಪ, ಮುನ್ಷಿ ಅವರ ಪ್ರಚಂಡ ಧೈರ್ಯ ಮತ್ತು ಬಾಬು ರಾಜೇಂದ್ರ ಪ್ರಸಾದರ ರಾಜಿ ಇಲ್ಲದ ನಿಲುವು

by cknewsnow desk
January 21, 2024
0

ಅಯೋಧ್ಯಾ ಆಂದೋಲನ ಭಾರತದ ಅಂತರಾತ್ಮದ ಧ್ವನಿ; ಎಲ್.ಕೆ.ಆಡ್ವಾಣಿ ಅವರು ತಮ್ಮ ಆತ್ಮಕಥೆ My Country My Life ಕೃತಿಯಲ್ಲಿ ಬರೆದಿರುವ ಮಹತ್ವದ ಲೇಖನ ಸಿಕೆನ್ಯೂಸ್‌ ನೌ ನಲ್ಲಿ..

ಶ್ರೀರಾಮಪ್ರಭುವೇ ಕ್ಷಮಿಸು! ನಿನ್ನ ಹೆಸರಿಟ್ಟುಕೊಂಡವರೆಲ್ಲ ನಿನ್ನವರಲ್ಲ!!

ಅಯೋಧ್ಯಾ ಆಂದೋಲನ ಭಾರತದ ಅಂತರಾತ್ಮದ ಧ್ವನಿ; ಮಂದಿರಕ್ಕೆ ಅಂಕುರಾರ್ಪಣೆ ಆಗಿದ್ದು ಹೇಗೆ?

by cknewsnow desk
January 19, 2024
0

ಎಲ್.ಕೆ.ಆಡ್ವಾಣಿ ಅವರು ತಮ್ಮ ಆತ್ಮಕಥೆ My Country My Life ಕೃತಿಯಲ್ಲಿ ಬರೆದಿರುವ ಮಹತ್ವದ ಲೇಖನ ಸಿಕೆನ್ಯೂಸ್‌ ನೌ ನಲ್ಲಿ..

ನಿಡುಮಾಮಿಡಿ ಶ್ರೀಗಳು: ಕಾವಿಯೊಳಗೆ ನಿಗಿನಿಗಿ ಹೊಳೆಯುವ ಕೆಂಪುಸೂರ್ಯ

ನಿಡುಮಾಮಿಡಿ ಶ್ರೀಗಳು: ಕಾವಿಯೊಳಗೆ ನಿಗಿನಿಗಿ ಹೊಳೆಯುವ ಕೆಂಪುಸೂರ್ಯ

by cknewsnow desk
December 28, 2023
0

ನಿಜದ ಜಾಡು ಹಿಡಿದು ಹೊರಟ ನಿಡುಮಾಮಿಡಿ ಶ್ರೀಗಳ ಹೋರಾಟಕ್ಕೆ 33 ವರ್ಷ

ಅಖಂಡ ಭಾರತದ ಅಷ್ಟದಿಕ್ಕುಗಳ ಆಮೂಲಾಗ್ರ ಅಭಿವೃದ್ಧಿಗೆ ಸುವರ್ಣ ಅಧ್ಯಾಯ ಬರೆದವರೇ ಅಜಾತಶತ್ರು ಅಟಲ್‌ ಬಿಹಾರಿ ವಾಜಪೇಯಿ

ಅಟಲ್ ಎಂದರೆ ಅಜಾತಶತ್ರು

by cknewsnow desk
December 25, 2023
0

ಇಂದು ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನ, ಉತ್ತಮ ಆಡಳಿತ ದಿನ by Dr.Gurupeasad Hawaldar ಜಾಗತಿಕ ಮಟ್ಟದ ಶ್ರೇಷ್ಠ ನಾಯಕರ ಸಾಲಿನಲ್ಲಿ ಗೌರವಿಸಲ್ಪಡುವ  ನಿಸ್ವಾರ್ಥ ರಾಜಕಾರಣಿ,...

ಶಿಕ್ಷಣ, ಶಿಕ್ಷಕ ಮತ್ತು ಬದಲಾವಣೆ; ನೂತನ ಶಿಕ್ಷಣ ನೀತಿಯ ಹೊತ್ತಿನಲ್ಲಿ ಓಶೋ ಜೋಶ್..

ಓಶೋ: ಬೆರಗು, ಬೆಡಗು ಮತ್ತು ವಿಸ್ಮಯ

by cknewsnow desk
December 11, 2023
0

ಇಂದು ಓಶೋ ಜನ್ಮದಿನ

Next Post
ಬಾಗೇಪಲ್ಲಿಯಲ್ಲಿ ಭಾರತ್ ಬಂದ್ ಸಂಪೂರ್ಣ ಯಶಸ್ವಿ; ಜನಜೀವನ ಅಸ್ತವ್ಯಸ್ತ

ಬಾಗೇಪಲ್ಲಿಯಲ್ಲಿ ಭಾರತ್ ಬಂದ್ ಸಂಪೂರ್ಣ ಯಶಸ್ವಿ; ಜನಜೀವನ ಅಸ್ತವ್ಯಸ್ತ

Leave a Reply Cancel reply

Your email address will not be published. Required fields are marked *

Recommended

ಭಾರತಕ್ಕೆ ಹೊಸ ದಿಕ್ಕು ತೋರಿದ ಮೇ ಮಹಾಚುನಾವಣೆ; ಪರ್ವ ಕಾಲದಲ್ಲಿ ದೇಶವನ್ನು ಕೈಹಿಡಿದು ಮುನ್ನಡೆಸಿದ ಪಿ.ವಿ.ನರಸಿಂಹರಾವ್‌

ಭಾರತಕ್ಕೆ ಹೊಸ ದಿಕ್ಕು ತೋರಿದ ಮೇ ಮಹಾಚುನಾವಣೆ; ಪರ್ವ ಕಾಲದಲ್ಲಿ ದೇಶವನ್ನು ಕೈಹಿಡಿದು ಮುನ್ನಡೆಸಿದ ಪಿ.ವಿ.ನರಸಿಂಹರಾವ್‌

4 years ago
ಸಚಿವ ಈಶ್ವರಪ್ಪ ವಿರುದ್ಧ ಗುಡಿಬಂಡೆಯಲ್ಲಿ ಕಾಂಗ್ರೆಸ್‌ ಪ್ರತಿಭಟನೆ

ಸಚಿವ ಈಶ್ವರಪ್ಪ ವಿರುದ್ಧ ಗುಡಿಬಂಡೆಯಲ್ಲಿ ಕಾಂಗ್ರೆಸ್‌ ಪ್ರತಿಭಟನೆ

3 years ago

Popular News

  • ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    0 shares
    Share 0 Tweet 0
  • ಹಾಡಿದವು ಕಣ್ಣುಗಳು!!

    0 shares
    Share 0 Tweet 0
  • ಎಚ್ಚೆನ್ ಎಂಬುವವರಿದ್ದರು ಎಂಬುದನ್ನು ಶತಮಾನಗಳ ನಂತರ ನಂಬುವುದೇ ಕಷ್ಟವಾಗಬಹದು…

    0 shares
    Share 0 Tweet 0
  • ಚಿರಸ್ಮರಣೀಯ ಚಿರಂಜೀವಿ

    0 shares
    Share 0 Tweet 0
  • ಬಾಲುಗಾರು… ಅದ್ಭುತಃ!!

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025
ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

May 8, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2021 cknewsnow

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2021 cknewsnow

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ