ಬರದ ನಾಡಿನಲ್ಲಿ ಕಣ್ಮನ ಸೆಳೆಯುತ್ತಿರುವ ಜಲಧಾರೆ
by Ra Na Gopala Reddy Bagepalli
ಬಾಗೇಪಲ್ಲಿ: ತಾಲ್ಲೂಕಿನಲ್ಲಿ ಭಾನುವಾರ ರಾತ್ರಿ ಗುಡುಗು ಸಹಿತ ಸುರಿದ ಭಾರೀ ಮಳೆಯಿಂದ ಪಾತಪಾಳ್ಯ ಹೋಬಳಿಯ ಗುಜ್ಜೇಪಲ್ಲಿ ಬಳಿ ಇರುವ ಜಡಮಡುಗು ಜಲಪಾತ ಧುಮ್ಮಿಕ್ಕಿ ಹರಿಯುತ್ತಿದ್ದು, ಈ ಭಾಗದ ಜನರನ್ನು ರೈತರನ್ನು ಪುಳಕಿತರನ್ನಾಗಿ ಮಾಡಿದೆ.
ಬರಪೀಡಿತ ಬಾಗೇಪಲ್ಲಿ ತಾಲೂಕು ಯಾವಾಗಲೂ ಜಲಕ್ಷಾಮ ಎದುರಿಸುತ್ತಲೇ ಇರುತ್ತದೆ. ಕೆಲವೊಮ್ಮೆ ಹನಿ ನೀರಿಗೂ ತತ್ವಾರ ಉಂಟಾಗುತ್ತದೆ. ಆದರೆ ಈ ಮಳೆಗಾಲದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಬಿಸಿಲಿನ ಝಲದಿಂದ ಬಾಯ್ಬಿಟ್ಟಿದ್ದ ಭೂಮಿ ತಂಪಾಗಿದೆ.
ಮಳೆಯಿಂದ ಪೈಪಾಳ್ಯ ಕೆರೆ ತುಂಬಿದರೆ ಈ ಜಡಮಡುಗು ಜಲಪಾತ ಉಕ್ಕಿ ಹರಿಯುತ್ತದೆ. ನಿನ್ನೆಯಲ್ಲ ಬಿದ್ದ ಮಳೆಯಿಂದ ಬೆಟ್ಟಗುಡ್ಡಗಳಿಂದ ನೀರು ಹರಿದು, ಮತ್ತಷ್ಷು ನೀರಿನ ಸೆಲೆಗಳನ್ನು ಬರಸೆಳೆದುಕೊಂಡು, ಬೋರ್ಗರೆಯುತ್ತಾ, ಸುಂದರವಾದ ಬೆಟ್ಟಗುಡ್ಡಗಳ ನಡುವ ರಮಣಿಯ ಪ್ರಕೃತಿಯ ನಡುವೆ ಪಯಣಿಸಿ ಸಾಗಿಬರುವ ನೀರು ಜಡಮಡುಗುವಿನ ಬಳಿ ಜಲಪಾತವಾಗುವ ದೃಶ್ಯವೇ ರೋಚಕ.
ಮಳೆಗಾಲಕ್ಕೆ ಮಾತ್ರ ಸೃಷ್ಟಿಯಾಗುವ ಈ ಜಲಪಾತವನ್ನು ಸ್ಥಳೀಯರು ಪುಳಕಿತರಾಗಿದ್ದು, ಸುತ್ತಮಮುತ್ತಲಿನ ಜನ ಬಂದು ಈ ಜಲರಾಶಿಯನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಈ ಭಾಗದ ಜನರಿಗೆ ಜಡಮಡುಗು ಜಲಪಾತವೇ ಶರಾವತಿಯ ಜೋಗ ಜಲಪಾತದಂತೆ ಆಗಿದೆ.