ವಿಭಿನ್ನವಾಗಿ ವಿಜಯದಶಮಿ ಆಚರಿಸಿದ ಪರಿಸರ ವೇದಿಕೆ
By Gs Bharath Gudibande
ಗುಡಿಬಂಡೆ: ಪರಿಸರ ಸಂರಕ್ಷಿಸುವ ಜವಾಬ್ದಾರಿ ಪ್ರತಿಯೊಬ್ಬ ವ್ಯಕ್ತಿಗೂ ಇದೆ. ಪರಿಸರ ಸಂರಕ್ಷಿಸುವುದು ಅತ್ಯವಶ್ಯಕ ಎಂಬುದನ್ನು ನಾವು ಇಂದು ಅರಿತಿದ್ದೇವೆ. ಹಾಗಾಗಿ ಪ್ರತಿ ಹಬ್ಬ-ಹರಿದಿನಗಳಿಗೆ ಗಿಡನೆಡುವ ಮೂಲಕ ಆಚರಿಸಿ ಎಂದು ಡಾ.ದರ್ಶನ್ ಸಲಹೆ ನೀಡಿದರು.
ಪಟ್ಟಣದ ಅಂಚೆ ಕಚೇರಿ ಆವರಣದಲ್ಲಿ ಪರಿಸರ ವೇದಿಕೆಯಿಂದ ಆಯುಧಪೂಜೆ ಹಾಗೂ ವಿಜಯದಶಮಿ ಹಬ್ಬದ ಪ್ರಯುಕ್ತ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನಮ್ಮ ಸುತ್ತಮುತ್ತಲಿನ ಪರಿಸರ, ಗಿಡಮರಗಳನ್ನು ಸಂರಕ್ಷಣೆ ಮಾಡದಿದ್ದರೆ, ಮುಂದೊಂದು ದಿನ ಎಲ್ಲರೂ ದೊಡ್ಡ ಗಂಡಾಂತರ ಎದುರಿಸಬೇಕಗುತ್ತದೆ. ಹಾಗಾಗಿ ಪರಿಸರ ಸಂರಕ್ಷಣೆಯ ಬಗ್ಗೆ ಎಲ್ಲರೂ ಕಾಳೆಜಿ ವಹಿಸಬೇಕು ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಅಂಚೆ ಇಲಾಖೆಯ ಶ್ರೀನಿವಾಸ್ ಮಾತನಾಡಿ, ಅಂಚೆ ಇಲಾಖೆಯ ಆವರಣದಲ್ಲಿ ದೊಡ್ಡ ವನ ಮಾಡಬೇಕು, ಇದಕ್ಕೆ ಪರಿಸರ ವೇದಿಕೆಯ ಸಹಕಾರ ಅಗತ್ಯವಾಗಿದೆ. ಗುಡಿಬಂಡೆ ತಾಲೂಕಿನಲ್ಲಿ ಪರಿಸರ ವೇದಿಕೆಯ ಪರಿಸರ ಪ್ರೇಮಿಗಳ ಕಾಳಜಿ ನಜಕ್ಕೂ ಅದ್ಬುತ, ಒಂದು ಕುಟುಂಬದ ಭಾಗವಂತೆ ಪರಿಸರ ಸಂರಕ್ಷಣೆಯ, ಅರಿವು ಮೂಡಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ಪರಿಸರ ವೇದಿಕೆಯ ಜಿಲ್ಲಾಧ್ಯಕ್ಷ ಡಾ.ಗುಂಪುಮರದ ಆನಂದ್, ಜಿಲ್ಲಾ ಕಾರ್ಯದರ್ಶಿ ಜಿ.ಎಸ್.ಭರತ್, ಖಜಾಂಚಿ ಶ್ರೀನಾಥ್, ತಾಲೂಕು ಕಾರ್ಯದರ್ಶಿ ಇಂದ್ರಕುಮಾರ್ ಸಿಂಗ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ವಿ.ಶ್ರೀರಾಮಪ್ಪ, ದೈಹಿಕ ಶಿಕ್ಷಕರಾದ ಕೆ.ಆರ್ ಅಶ್ವತ್ಥಪ್ಪ, ಜನಪದ ರಾಜಪ್ಪ, ರೆಡ್ ಕ್ರಾಸ್ ತಾಲೂಕು ಖಜಾಂಚಿ ನಾಗರಾಜ್ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.