ರಮೇಶ್ ಕುಮಾರ್ ಅವರನ್ನು ಜೈಲಿಗೆ ಕಳಿಸುವೆ ಎಂದ ಆರೋಗ್ಯ ಸಚಿವರಿಗೆ ಮೇಲೆ ಸಿದ್ದರಾಮಯ್ಯ ಗುಟುರು
ಬೆಂಗಳೂರು: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಜೈಲಿಗೆ ಕಳಿಸಿವುದಾಗಿ ಹೇಳಿಕೆ ನೀಡಿರುವ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿಕೆಯ ಬಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದರು.
ಮಾಧ್ಯಮಗಳ ಜತೆ ಮಾತನಾಡುತ್ತಾ, ಈ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರ ನೀಡಿದ ಅವರು; ಸುಧಾಕರ್ ಅವರಿಗೆ ಅಧಿಕಾರದ ಮದ ನೆತ್ತಿಗೇರಿದೆ. ಅದು ಅವರನ್ನು ಹಾಗೆ ಮಾತನಾಡಿಸುತ್ತಿದೆ. ಇವರು ಕಾಂಗ್ರೆಸ್ ಪಕ್ಷದಿಂದ ಗೆದಿದ್ದರು. ಆಪರೇಷನ್ ಕಮಲದ ಮೂಲಕ ಹಣ ತೆಗೆದುಕೊಂಡು ಬಿಜೆಪಿಗೆ ಹೋಗಿ ಮಂತ್ರಿಗಳಾಗಿದ್ದಾರೆಂದು ಕುಟುಕಿದರು.
2023ಕ್ಕೆ ಇವರೆಲ್ಲರೂ ಮನೆಗೆ ಹೋಗುತ್ತಾರೆ. ಯಾರು ಜೈಲಿಗೆ ಹೋಗುತ್ತಾರೆ? ಯಾರು ಹೊರಗೆ ಇರುತ್ತಾರೆ? ಎನ್ನುವುದು ಆಮೇಲೆ ಗೊತ್ತಾಗುತ್ತದೆ. ಆತನಿಗೆ ಕಾನೂನಿನ ಅರಿವಿಲ್ಲ. ಆತನೊಬ್ಬ ಮೂರ್ಖ ಎಂದು ಟೀಕಿಸಿದರು ಸಿದ್ದರಾಮಯ್ಯ.