ಕಮಲ ಪಾಳೆಯದಲ್ಲಿ ಬಿಟ್ ಕಾಯಿನ್ ತಳಮಳ
ಬೆಂಗಳೂರು: ಮಹತ್ವದ ಬೆಳವಣಿಗೆಯೊಂದರಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಅವರ ನಿವಾಸದಲ್ಲಿ ಸಚಿವರು ಮತ್ತು ಶಾಸಕರು ಗೌಪ್ಯ ಸಭೆ ನಡೆಸಿರುವುದು ರಾಜ್ಯ ರಾಜಕೀಯದಲ್ಲಿ ಭಾರೀ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.
ರೇಣುಕಾಚಾರ್ಯ ಅವರ ಸರ್ಕಾರಿ ನಿವಾಸದಲ್ಲಿ ಮಂಗಳವಾರ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಸಚಿವರಾದ ಶಂಕರ್ ಪಟೇಲ್ ಮುನೇನ ಕೊಪ್ಪಘಿ, ಶಾಸಕರಾದ ರಾಜುಗೌಡ ನಾಯಕ್, ವಿರೂಪಾಕ್ಷಪ್ಪ ಬಳ್ಳಾರಿ, ಶಿವರಾಜ್ ಪಾಟೀಲ್, ಮುಖಂಡರಾದ ಎಂ.ರುದ್ರೇಶ್, ಮರಿಸ್ವಾಮಿ, ಸೇರಿದಂತೆ ಮತ್ತಿತರರು ಗುಪ್ತವಾಗಿ ಮಾತುಕತೆ ನಡೆಸಿರುವುದು ಹಲವು ಸಂಶಯಗಳಿಗೆ ಕಾರಣವಾಗಿದೆ.
ಇತ್ತೀಚೆಗೆ ರೇಣುಕಾಚಾರ್ಯ ಅವರ ಕಾಲಿಗೆ ಶಸ ಚಿಕಿತ್ಸೆ ನಡೆಸಲಾಗಿತ್ತುಘಿ. ಆರೋಗ್ಯ ವಿಚಾರಿಸುವ ನೆಪದಲ್ಲಿ ಆಗಮಿಸಿದ್ದ ಎಲ್ಲ ಮುಖಂಡರು ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಗುಪ್ತವಾಗಿ ಸಭೆ ನಡೆಸಿದರು.
ಒಂದು ಕಡೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನವದೆಹಲಿಗೆ ತೆರಳಿರುವುದು ಇತ್ತ ರೇಣುಕಾಚಾರ್ಯ ನಿವಾಸದಲ್ಲಿ ಸಚಿವರು ಮತ್ತು ಶಾಸಕರು ಸಭೆ ಸೇರಿದ್ದು, ಸಂಶಯಗಳನ್ನು ಹುಟ್ಟುಹಾಕಿದೆ.