• About
  • Advertise
  • Careers
  • Contact
Friday, May 1, 2026
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home EDITORS'S PICKS

ಗುಡಿಬಂಡೆಗೆ ಜಲ ದಿಗ್ಬಂಧನ

cknewsnow desk by cknewsnow desk
November 17, 2021
in EDITORS'S PICKS, STATE
Reading Time: 2 mins read
1
ಗುಡಿಬಂಡೆಗೆ ಜಲ ದಿಗ್ಬಂಧನ

ಭಾರೀ ವಾಹನವನ್ನು ವಾಪಸ್‌ ಕಳಿಸುತ್ತಿರುವ ತಹಸೀಲ್ದಾರ್.

2.4k
VIEWS
FacebookTwitterWhatsuplinkedinEmail

ಅಮಾನಿಭೈರ ಸಾಗರ ಕೆರೆ ಏರಿ ಮೇಲೆ ಭಾರೀ ವಾಹನಗಳು, ದ್ವಿಚಕ್ರ ವಾಹನ, ಆಟೋ ಓಡಾಟಕ್ಕೆ ತಾತ್ಕಾಲಿಕ ನಿಷೇಧ; ಇದು ಸಿಕೆನ್ಯೂಸ್ ನೌ ಬಿಗ್ ಇಂಪ್ಯಾಕ್ಟ್

ಅಪಾಯದ ಮಟ್ಟ ಮೀರಿ ಹರಿಯುತ್ತಿದೆ ಅಮಾನಿಭೈರ ಸಾಗರ ಕೋಡಿ

  • ಹಂಪಸಂದ್ರದಲ್ಲಿ 3 ಶಾಲೆಗಳಿಗೆ ರಜೆ ಘೋಷಣೆ
  • ವರ್ಲಕೊಂಡ ಗ್ರಾಮದಲ್ಲಿ ಭಾರೀ ಮಳೆಗೆ 3 ಮನೆಗಳಿಗೆ ಹಾನಿ, ಪ್ರಾಣಾಪಾಯವಿಲ್ಲ
  • ಲಕ್ಕೇನಹಳ್ಳಿಯಲ್ಲಿ ಕೊಚ್ಚಿಹೋದ ದ್ವಿಚಕ್ರ ವಾಹನ, ಆಟೋ ಪಲ್ಟಿ.

By GS Bharath Gudibande

ಗುಡಿಬಂಡೆ: ಒಂದು ತಿಂಗಳಿಂದ ಮಳೆಯೋ ಮಳೆ. ಬಹುತೇಕ ಎಲ್ಲಾ ಕೆರೆ ಕುಂಟೆಗಳು ತುಂಬಿ ಕೋಡಿ ಹರಿಯುತ್ತಿದೆ. ಕಳೆದ ರಾತ್ರಿ ಸುರಿದ ಭಾರೀ ಮಳೆಗೆ ಕೆರೆ ನೀರು ರಸ್ತೆಯ ಸೇತುವೆ ಮೇಲೆ ರಭಸವಾಗಿ ಹರಿಯುವುದರಿಂದ ಭಾರೀ ಗಾತ್ರದ ವಾಹನಗಳು ಹಾಗೂ ತಾಲೂಕು ಆಡಳಿತ ದ್ವಿಚಕ್ರ ವಾಹನಗಳನ್ನು ತಾತ್ಕಾಲಿಕವಾಗಿ ನಿಷೇಧಿಸಿದೆ.

ಬೆಂಗಳೂರು, ಚಿಕ್ಕಬಳ್ಳಾಪುರ ಪೆರೇಸಂದ್ರ, ಪೋಲಂಪಲ್ಲಿ, ಬೀಚಗಾನಹಳ್ಳಿ ಕಡೆಯಿಂದ ಬರುವ ವಾಹನಗಳಿಗೆ ನಿರ್ಬಂಧ ಹೇರಿದ ಪರಿಣಾಮ ಒಂದು ರೀತಿಯಲ್ಲಿ ಗುಡಿಬಂಡೆಗೆ ಜಲ ದಿಗ್ಬಂಧನ ವಿಧಿಸಿದಂತೆ ಆಗಿದೆ. ಇದು ಅನಿವಾರ್ಯವೂ ಆಗಿದೆ.

ಇನ್ನೊಂದೆಡೆ ಕುಶಾವತಿ ನದಿ ಜಲಾನಯನ ಪ್ರದೇಶದಲ್ಲಿ ರಾತ್ರಿ ಸುರಿದ ಮಳೆಗೆ ನದಿಯಲ್ಲಿ ನೀರಿನ ಹರಿವು ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದ್ದು, ಅದರ ಪರಿಣಾಮ ಅಮಾನಿ ಭೈರ ಸಾಗರ ಕೆರೆ ಮೇಲೆ ಬಿದ್ದಿದೆ. ಈಗ ಗುಡಿಬಂಡೆಗೆ ಬರಬೇಕಾದರೆ ರಾಮಪಟ್ಟಣ, ಹಂಪಸಂದ್ರ, ಕಡೇಹಳ್ಳಿ ಕಡೆಯಿಂದ ಬರಬೇಕಿದೆ.

ಅಪಾಯದಿಂದ ಪಾರಾದ ಕಾರು

ಗುಡಿಬಂಡೆ ಅಮಾನಿ ಭೈರಸಾಗರ ಕೆರೆ ಏರಿಯ ರಸ್ತೆಯಲ್ಲಿ 3-4 ಅಡಿ ಆಳದ ಹಳ್ಳ ಗುಂಡಿಗಳು ಬಿದ್ದಿವೆ. ನೀರು ರಭಸವಾಗಿ ಹರಿಯುತ್ತಿರುವುದರಿಂದ ಎಲ್ಲಿ ಗುಂಡಿಗಳಿವೆ ಎಂಬುದು ತಿಳಿಯುವುದು ಕಷ್ಟ ಹಾಗೂ ಕೆರೆ ಏರಿ ಮೇಲೆ ಭಾರೀ ಗಾತ್ರದ ವಾಹನಗಳು ಓಡಾಡುವುದರಿಂದ ಮತ್ತಷ್ಟು ಸಮಸ್ಯೆ ಆಗಬಹುದು. ಒಂದು ವೇಳೆ ಯಾವುದಾದರೂ ಭಾರೀ ವಾಹನ ಬಂದು ಕುಸಿದುಬಿದ್ದರೆ ಇಡೀ ಕೋಡಿಗೇ ಅಪಾಯ ಉಂಟಾಗಬಹುದು. ಈ ಕಾರಣಕ್ಕೆ ಏರಿಯ ಮೇಲೆಯೇ ವಾಹನ ಸಂಚಾರವನ್ನು ತಾಲೂಕು ಆಡಳಿತ ನಿಷೇಧ ಮಾಡಿದೆ.

ಕಳೆದ ರಾತ್ರಿ ಸುಮಾರು ಹನ್ನೊಂದು ಗಂಟೆ ಸುಮಾರಿನಲ್ಲಿ ಕೆರೆ ಏರಿ ಮೇಲೆ ಗುಡಿಬಂಡೆಗೆ ಬರುತ್ತಿದ್ದ ಕಾರೊಂದು ಏರಿ ಮೇಲೆ ಸಿಲುಕಿಕೊಂಡಿತ್ತು. ಎಂಜಿನ್‌ ಸಮೇತ ಕಾರು ಗುಂಡಿಯಲ್ಲಿ ಕುಸಿದಿತ್ತು. ನಂತರ ಕಾರಿನಲ್ಲಿದ್ದವರೇ ಹರಸಾಹಸ ಮಾಡಿ ಕಾರನ್ನು ದಡಕ್ಕೆ ಸೇರಿಸಿದ್ದಾರೆ.

ಮಂಗಳವಾರವಷ್ಟೇ ಸಿಕೆನ್ಯೂಸ್‌ ನೌ ಈ ಬಗ್ಗೆ ವಿವರವಾದ ವರದಿ ಪ್ರಕಟಿಸಿ ಅಧಿಕಾರಿಗಳ ಹಮನ ಸೆಳೆದಿತ್ತು.

ಈ ಸುದ್ದಿಯನ್ನು ಓದಲು ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ
ಅಪಾಯದಲ್ಲಿದೆ ಗುಡಿಬಂಡೆ ಅಮಾನಿಭೈರ ಸಾಗರ ಕೆರೆ ಏರಿ

ಲಾಠಿ ಹಿಡಿದುನಿಂತ ತಹಸೀಲ್ದಾರ್

ಇಂದು ಬೆಳ್ಳಂಬೆಳಗ್ಗೆಯೇ ತಾಲೂಕಿನ ಹಂಪಸಂದ್ರ, ಲಕ್ಕೇನಹಳ್ಳಿ, ಕಡೇಹಳ್ಳಿ ಹಾಗೂ ಗುಡಿಬಂಡೆ ಅಮಾನಿ ಭೈರಸಾಗರ ಕೆರೆ ಪ್ರದೇಶಗಳಿಗೆ ಭೇಟಿ ನೀಡಿರುವ ತಹಸೀಲ್ದಾರ್ ಸಿಬ್ಗತ್ ವುಲ್ಲಾ ಅವರು; ಸ್ವತಃ ಲಾಠಿ ಹಿಡಿದು ರಸ್ತೆಯಲ್ಲಿ ನಿಂತು ಆಟೋ, ದ್ವಿಚಕ್ರ ವಾಹನ ಹಾಗೂ ಭಾರೀ ಗಾತ್ರದ ವಾಹನಗಳುನ್ನು ವಾಪಸ್ ಕಳುಹಿಸಿದರು. ಇದರಿಂದ ವಾಹನಗಳು ಆ ಕಡೆ ಈ ಕಡೆ ಕೆರೆ ಏರಿ ದಾಟಲಾಗದೇ ಜನರು ಗೊಂದಲಕ್ಕೆ ಒಳಗಾದರು. ಈ ಬಗ್ಗೆ ತಹಸೀಲ್ದಾರ್‌ ಅವರು ಸಾರ್ವಜನಕರಿಗೆ ಅರಿವು ಮೂಡಿಸಿದರಲ್ಲದೆ, ಆಪಾಯದ ಬಗ್ಗೆ ಎಚ್ಚರಿಕೆ ನೀಡಿ ವಾಹನ ಚಾಲಕರಿಗೆ ಮನವೊಲಿಸಿ ವಾಪಸ್‌ ಕಳಿಸಿದರು. ಅವರ ಕಾರ್ಯವೈಖರಿ ಬಗ್ಗೆ ಜಾಲಾತಾಣಗಳಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ಮಳೆಯಿಂದ ಶಾಲೆಗಳಿಗೆ ರಜೆ

ಗುಡಿಬಂಡೆ ತಾಲೂಕಿನಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಕೆರೆ ಕುಂಟೆ ತುಂಬಿ ನೀರು ರಭಸವಾಗಿ ರಸ್ತೆಗಳಲ್ಲಿ  ಹರಿಯುತ್ತಿದೆ. ಹೀಗಾಗಿ ಮಕ್ಕಳು ಶಾಲೆಗೆ ಹೋಗಲು ಸಮಸ್ಯೆಯಾಗಬಹುದು ಎಂಬ ಮುನ್ನೆಚ್ಚರಿಕೆಯಿಂದ ಹಂಪಸಂದ್ರದಲ್ಲಿ 3 ಶಾಲೆಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ರಜೆ ಘೋಷಣೆ ಮಾಡಿದ್ದಾರೆ.

ಅಲ್ಲದೆ; ಮಕ್ಕಳ ಮಳೆ ಹಿನ್ನೆಲೆಯಲ್ಲಿ ಸುರಕ್ಷತೆಯ ಬಗ್ಗೆ ಶಿಕ್ಷಣ ಇಲಾಖೆ ತೀವ್ರ ನಿಗಾ ಇರಿಸಿದ್ದು, ಕೊರೊನಾದಿಂದ ತತ್ತರಿಸಿದ್ದ ತಾಲೂಕು ಶೈಕ್ಷಣಿಕ ಚಟುವಟಿಕೆಗಳಿಗೆ ಮಳೆ ಕೂಡ ಅಡ್ಡಿ ಮಾಡುತ್ತಿದೆ.

ಇದೇ ವೇಳೆ, ಅಮಾನಿಭೈರ ಸಾಗರ ಕೆರೆ ಏರಿ ಮೇಲೆ ಪ್ರಯಾಣಿಕರ ಬಸ್‌ʼಗಳಿಗೆ ಮಾತ್ರ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಆದರೆ, ಈ ಬಗ್ಗೆ ಗುಡಿಬಂಡೆ ಜನರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಉಕ್ಕಿಹರಿಯುತ್ತಿರುವ ಕೆರೆ ಕೋಡಿ ಮೇಲೆ ಜನರ ಬಸ್‌ʼಗಳನ್ನು ಬಿಡುತ್ತಿರುವುದು ಎಷ್ಟರಮಟ್ಟಿಗೆ ಸರಿ? ಇದು ಅಪಾಯವನ್ನು ಅಪಾಯಕ್ಕೆ ಅವಕಾಶ ಕೊಟ್ಟಂತೆಯೇ ಅಲ್ಲವೇ ಎಂದು ಪ್ರಶ್ನೆ ಮಾಡುತ್ತಿದ್ದಾರೆ.

ಸಣ್ಣ ನೀರಾವರಿ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಎಲ್ಲಿ?

ಇನ್ನೊಂದೆಡೆ, ಅಮಾನಿಭೈರ ಸಾಗರದಲ್ಲಿ ಭಾರೀ ಪ್ರಮಾಣದ ನೀರು ಸಂಗ್ರಹವಾಗಿದೆ. ಮತ್ತೊಂದೆಡೆ ಕೋಡಿ ಹರಿಯುತ್ತಲೇ ಇದೆ. ಇಂಥ ಹೊತ್ತಿನಲ್ಲಿ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಕೆರೆಕಟ್ಟೆಯನ್ನು ಪರಿಶೀಲನೆ ನಡೆಸಬೇಕಿದೆ. ಕಟ್ಟೆಯ ಮೇಲೆ ಬಸ್ಸುಗಳು ಸೇರಿ ಭಾರೀ ಗಾತ್ರದ ವಾಹನಗಳು ಸಂಚಾರ ಮಾಡುತ್ತವೆ. ಆದರೆ, ಈವರೆಗೂ ಆ ಇಲಾಖೆಯ ಅಧಿಕಾರಿಗಳು ಪತ್ತೆ ಇಲ್ಲ, ಜನರಿಗೂ ಲಭ್ಯವಾಗುತ್ತಿಲ್ಲ, ಕೆರೆಕಟ್ಟೆ ಸುರಕ್ಷತೆಯ ಬಗ್ಗೆ ಜನರಿಗೆ ಅಥವಾ ಮಾಧ್ಯಮಗಳಿಗೆ ಮಾಹಿತಿ ನೀಡುತ್ತಿಲ್ಲ.

ಜತೆಗೆ; ರಸ್ತೆಯ ಗುಣಮಟ್ಟ ನೋಡಿಕೊಳ್ಳಬೇಕಾದ ಲೋಕೋಪಯೋಗಿ ಇಲಾಖೆ ಅಥವಾ ಮತ್ತಾವುದೇ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕೂಡ ಪತ್ತೆ ಇಲ್ಲ. ಕಳೆದ ನಲವತ್ತಕ್ಕೂ ಹೆಚ್ಚು ದಿನಗಳಿಂದ ಕೋಡಿ ಹರಿಯುತ್ತಿರುವ ಕೆರೆ ಕೋಡಿ ರಸ್ತೆಯ ಗುಣಮಟ್ಟದ ಬಗ್ಗೆ ಅವರು ಪರಿಶೀಲನೆ ನಡೆಸಿಲ್ಲ. ಜತೆಗೆ, ಹಳ್ಳ-ಗುಂಡಿಗಳು ಬಿದ್ದು ಜನರು ಹೈರಾಣಾಗಿದ್ದರೂ ಅವರು ಅಡ್ರೆಸ್‌ ಇಲ್ಲ ಎಂದು ಜನರು ದೂರುತ್ತಿದ್ದಾರೆ.

ಸುಮಾರು 40 ದಿನಗಳಿಂದ ಎಡೆಬಿಡದೆ ಮಳೆಯಾಗುತ್ತಿದೆ. ತಾಲೂಕಿನ ಎಲ್ಲಾ ಕೆರೆ ಕುಂಟೆಗಳು ತುಂಬಿವೆ. ಸೇತುವೆ ಮೇಲೆ ನೀರಿನ ಕೋಡಿ ರಭಸವಾಗಿ ಹರಿಯುತ್ತಿದೆ. ಅಮಾನಿ ಭೈರಸಾಗರ ಕೆರೆ ಏರಿ ಮೇಲೆ ಭಾರೀ ಗಾತ್ರದ ವಾಹನಗಳನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ಹಂಪಸಂದ್ರದಲ್ಲಿ 3 ಶಾಲೆಗಳಿಗೆ ರಜೆ ನೀಡಲಾಗಿದೆ. ಯಾವುದೇ ಸಮಸ್ಯೆ ಆಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದ್ದು, ಪೊಲೀಸರ ಸಹಕಾರದಿಂದ ಸೂಕ್ತ ಬಂದೋಬಸ್ತ್‌ ಮಾಡಲಾಗಿದೆ.

ಸಿಬ್ಗತ್ ವುಲ್ಲಾ, ತಹಸೀಲ್ದಾರ್, ಗುಡಿಬಂಡೆ

ಬಾಗೀನಕ್ಕೆ ಮುಗಿಬಿದ್ದ ಜನಪ್ರತಿನಿಧಿಗಳು ನಾಪತ್ತೆ

ಅಮಾನಿ ಭೈರ ಸಾಗರ ತುಂಬುತ್ತಿದ್ದಂತೆ ಕೆರೆಗೆ ಬಾಗೀನ ಅರ್ಪಿಸುವ ನೆಪದಲ್ಲಿ ಮಾಧ್ಯಮಗಳಲ್ಲಿ ಮಿಂಚಿದ್ದ ಜನಪ್ರತಿನಿಧಿಗಳು ಕೂಡ ಈಗ ಪತ್ತೆ ಇಲ್ಲ. ಕೋಡಿ ಭಾಗದ ರಸ್ತೆಯೂ ಹಾಳಾಗಿದ್ದು, ಅದರ ಸುರಕ್ಷತೆಯೇ ಪ್ರಶ್ನಾರ್ಹವಾಗಿದೆ. ಅಲ್ಲದೆ, ಶತಮಾನಗಳ ಹಿಂದೆ ಪಾಳೆಯಗಾರರಿಂದ ನಿರ್ಮಾಣವಾಗಿರುವ ಕೆರೆಕಟ್ಟೆಯ ಸುರಕ್ಷತೆಯ ಬಗ್ಗೆಯೂ ಅವರು ಮಾತನಾಡಬೇಕಿದೆ. ಏಕೆಂದರೆ, ಭಾರೀ ಮಳೆಯಿಂದ ಚಿಕ್ಕಬಳ್ಳಾಪುರ ಜಿಲ್ಲೆಯ ಅನೇಕ ಕೆರೆ ಕಟ್ಟೆಗಳು ಒಡೆದುಹೋಗಿವೆ ಎನ್ನುವುದನ್ನು ಇಲ್ಲಿ ಸ್ಮರಿಸಬಹುದು. ದುರಂತವೆಂದರೆ, ಬಾಗೀನ ಅರ್ಪಿಸಲು ನಾ ಮುಂದು ತಾ ಮುಂದು ಎಂದು ಪೈಪೋಟಿ ನಡೆಸಿದ್ದ ಜನಪ್ರತಿನಿಧಿಗಳು, ಎಲ್ಲ ಪಕ್ಷಗಳ ರಾಜಕೀಯ ಮುಖಂಡರು ಈಗ ಕೆರೆ ಕೋಡಿ ಬಳಿ ಒದ್ದಾಡುತ್ತಿರುವ ಜನರತ್ತ ಕಣ್ಣೆತ್ತಿಯೂ ನೋಡುತ್ತಿಲ್ಲ.‌

Tags: amaani bhyrasagarachikkaballapuragudibande lakegudibaneheavy rainskarnatakaminor irrigation department
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

by cknewsnow desk
June 2, 2025
0

ರಾಜ್ಯದ ಹಿತರಕ್ಷಣೆಗೆ ಕೈ ಜೋಡಿಸುವಂತೆ ಕೇಂದ್ರ ಸಚಿವರು, ಸಂಸದರಿಗೆ ಡಿಸಿಎಂ ಡಿಕೆಶಿ ಮನವಿ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

Next Post
ಗುಡಿಬಂಡೆ ಕೆರೆ ಏರಿಗೆ ತಾತ್ಕಾಲಿಕ ತಡೆಗೋಡೆ

ಗುಡಿಬಂಡೆ ಕೆರೆ ಏರಿಗೆ ತಾತ್ಕಾಲಿಕ ತಡೆಗೋಡೆ

Comments 1

  1. Pingback: ಗುಡಿಬಂಡೆ ಕೆರೆ ಏರಿಗೆ ತಾತ್ಕಾಲಿಕ ತಡೆಗೋಡೆ - cknewsnow

Leave a Reply Cancel reply

Your email address will not be published. Required fields are marked *

Recommended

SBI ATM ಬ್ರೇಕ್; ಹಣ ಲೂಟಿ ಯತ್ನ

SBI ATM ಬ್ರೇಕ್; ಹಣ ಲೂಟಿ ಯತ್ನ

5 years ago
ತೆರಿಗೆ ಸಂಗ್ರಹದ ಲೆಕ್ಕ ಪರಿಶೀಲನೆ ಮಾಡಿದ ಮುಖ್ಯಮಂತ್ರಿ ಯಡಿಯೂರಪ್ಪ: ಪೆಟ್ರೋಲ್,  ಡೀಸೆಲ್‌ನಿಂದ 15,861 ಕೋಟಿ ರೂ. ಟ್ಯಾಕ್ಸ್‌ ಕಲೆಕ್ಷನ್‌

ವಿಸ್ತರಣೆ ಅಥವಾ ಪುನಾರಚನೆ; ಚಿಕ್ಕಬಳ್ಳಾಪುರ, ಕೋಲಾರದ ಮೇಲೆ ಇರುತ್ತಾ ಸಂಪುಟ ಪ್ರಭಾವ

5 years ago

Popular News

  • ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

    ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

    0 shares
    Share 0 Tweet 0
  • ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

    0 shares
    Share 0 Tweet 0
  • ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

    0 shares
    Share 0 Tweet 0
  • ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

    0 shares
    Share 0 Tweet 0
  • ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

June 2, 2025
ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2025 cknewsnow | Website Design  by Karnatakabest Digital Services

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2025 cknewsnow | Website Design  by Karnatakabest Digital Services

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ