• About
  • Advertise
  • Careers
  • Contact
Friday, May 1, 2026
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home CHIKKABALLAPUR

ಗುಡಿಬಂಡೆ ಕೆರೆ ಏರಿಗೆ ತಾತ್ಕಾಲಿಕ ತಡೆಗೋಡೆ

cknewsnow desk by cknewsnow desk
November 17, 2021
in CHIKKABALLAPUR, STATE
Reading Time: 2 mins read
1
ಗುಡಿಬಂಡೆ ಕೆರೆ ಏರಿಗೆ ತಾತ್ಕಾಲಿಕ ತಡೆಗೋಡೆ
1.8k
VIEWS
FacebookTwitterWhatsuplinkedinEmail

ಗುಂಡಿಗಳಿಗೆ ಜಲ್ಲಿ; ಸ್ಥಳಕ್ಕೆ ಧಾವಿಸಿದ ಸಣ್ಣ ನೀರಾವರಿ ಅಧಿಕಾರಿಗಳು: ಇದು ಸಿಕೆನ್ಯೂಸ್ ನೌ ವರದಿ ಫಲಶ್ರುತಿ

ಅಮಾನಿ ಭೈರಸಾಗರದಿಂದ ಪ್ರತಿ ಸೆಕೆಂಡಿಗೆ ಹೊರಗೆ ಹರಿಯುತ್ತಿರುವ ನೀರಿನ ಪ್ರಮಾಣವೆಷ್ಟು ಗೊತ್ತಾ?

By GS Bharath Gudibande

ಗುಡಿಬಂಡೆ: ಇಲ್ಲಿನ ಐತಿಹಾಸಿಕ ಅಮಾನಿ ಭೈರಸಾಗರ ಕೆರೆ ಏರಿಯ ರಸ್ತೆ ದೊಡ್ಡ ಗುಂಡಿಗಳು ಬಿದ್ದು ಅದು ಅಪಾಯದ ಅಂಚಿನಲ್ಲಿದೆ ಎಂದು ಸಿಕೆನ್ಯೂಸ್ ನೌ ಪ್ರಕಟಿಸಿದ್ದ ವರದಿ ಬೆನ್ನಲ್ಲೇ ಸಣ್ಣ ನೀರಾವರಿ ಇಲಾಖೆ  ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದರು.

ಗುಡಿಬಂಡೆ ಕೆರೆ ಏರಿ ಅಪಾಯಕಾರಿ ಮಟ್ಟದಲ್ಲಿ ಹರಿಯುತ್ತಿರುವ ಪರಿಣಾಮವಾಗಿ ಬೆಳಗ್ಗೆಯಿಂದಲೇ ಪಟ್ಟಣಕ್ಕೆ ಭಾರೀ ವಾಹನಗಳ ಪ್ರವೇಶವನ್ನು ನಿಷೇಧ ಮಾಡಿದ ತಾಲೂಕು ಆಡಳಿತ, ಕೆರೆ ಏರಿಯ ಮೇಲೆ ತೀವ್ರ ನಿಗಾ ಇರಿಸಿತ್ತು. ಕಳೆದ ನಲವತ್ತಕ್ಕೂ ಹೆಚ್ಚು ದಿನಗಳಿಂದ ಕೋಡಿ ಹರಿಯುತ್ತಿರುವ ಪರಿಣಾಮ ಕೆರೆ ಏರಿಯ ಮೇಲೆ ದೊಡ್ಡ ದೊಡ್ಡ ಕಂದಕ, ಹಳ್ಳ, ಗುಂಡಿಗಳು ಬದ್ದಿವೆ. ಇದರಿಂದಾಗಿ ಕೋಡಿ ರಸ್ತೆಯ ಮೇಲೆ ವಾಹನ ಸವಾರರು ಹರಸಾಹಸ ಮಾಡುವ ಪರಿಸ್ಥಿತಿ ಎದುರಾಗಿದೆ.

ಎಚ್ಚೆತ್ತುಕೊಂಡ ಸಣ್ಣ ನೀರಾವರಿ ಇಲಾಖೆ

ಅಮಾನಿ ಭೈರಸಾಗರ ಕೆರೆ ಏರಿ ರಸ್ತೆ ಸುರಕ್ಷಿತವಾಗಿಲ್ಲ, ಅದು ಕುಸಿಯುವ ಆತಂಕವಿದೆ ಎಂದು ಕೆಲ ಮಹತ್ವದ ಅಂಶಗಳನ್ನು ಉಲ್ಲೇಖ ಮಾಡಿ ಸಿಕೆನ್ಯೂಸ್‌ ನೌ ವಿವರವಾದ ವರದಿ ಮಾಡಿತ್ತು. ಈ ವರದಿಯಿಂದ ಎಚ್ಚೆತ್ತುಕೊಂಡ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಬಂದರಲ್ಲದೆ, ಕೆರೆ ಏರಿಯ ಎರಡೂ ಕಡೆ ಕಟ್ಟಿಗೆಗಳ ಮೂಲಕ ತಾತ್ಕಾಲಿಕವಾಗಿ ತಡೆಗೋಡೆ ನಿರ್ಮಾಣ ಮಾಡಿದ್ದಾರೆ. ಇದರಿಂದಾಗಿ ವಾಹನ ಸವಾರರಿಗೆ ಕೊಂಚ ನೆಮ್ಮದಿ ನೀಡಿದ್ದಾರೆ.

ಈ ವರದಿ ಓದಲು ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ
ಗುಡಿಬಂಡೆಗೆ ಜಲ ದಿಗ್ಬಂಧನ

ಗುಂಡಿಗಳಿಗೆ ತಾತ್ಕಾಲಿಕ ಪರಿಹಾರ

ಹಾಗೆಯೇ; ಕೆರೆ ಏರಿ ರಸ್ತೆಯಲ್ಲಿ ಕೋಡಿಯಲ್ಲಿ ನೀರು ರಭಸವಾಗಿ ಹರಿಯುತ್ತಿರುವ ಕಾರಣ ಎಲ್ಲೆಡೆ ಗುಂಡಿಗಳು ಬಿದ್ದಿವೆ. ನಾಲ್ಕು ಅಡಿ ಆಳದಷ್ಟು ಗುಂಡಿಗಳಿಗೆ ತಾತ್ಕಾಲಿಕವಾಗಿ ಜಲ್ಲಿ ಹಾಕುವ ಮೂಲಕ ಸಮಸ್ಯೆ ನಿವಾರಿಸಿದ್ದಾರೆ. ಅದು ಎಷ್ಟು ದಿನ ಉಳಿಯುತ್ತದೊ ಕಾದು ನೋಡಬೇಕಾಗಿದೆ. ಮುಖ್ಯವಾಗಿ ನೀರು ರಭಸವಾಗಿ ಹರಿಯುತ್ತಿರುವ ಕಾರಣ ಜಲ್ಲಿ ಸ್ಥಿರವಾಗಿ ನಿಲ್ಲುವುದಿಲ್ಲ ಎಂದು ಸ್ಥಳೀಯರು ಹೇಳುತ್ತಾರೆ.

ಕೋಡಿ ನಿಂತ ನಂತರ ಶಾಶ್ವತ ಪರಿಹಾರ

ಅಮಾನಿ ಭೈರಸಾಗರ ಕೆರೆ ಕೋಡಿ 40 ದಿನಗಳಿಂದ ಎಡೆಬಿಡದೆ ಭಾರೀ ಪ್ರಮಾಣದಲ್ಲಿ ಹರಿಯುತ್ತದೆ. ಹಾಗಾಗಿ ಶಾಶ್ವತ ಪರಿಹಾರ ಕಲ್ಪಿಸಲು ಸಾಧ್ಯವಾಗಿಲ್ಲ. ಕರೆಗೆ ನೀರಿನ ಹರಿವು ಕಡಿಮೆಯಾದ ನಂತರ ಕೆರೆಯ ಬಲ ಭಾಗಕ್ಕೆ ಉಕ್ಕಿನ ತಡೆಗೋಡೆ ನಿರ್ಮಾಣ ಮಾಡುವುದರ ಜತೆಗೆ ಲೋಕೋಪಯೋಗಿ ಇಲಾಖೆಯ ಸಹಕಾರದಿಂದ ರಸ್ತೆಯನ್ನು ಉತ್ತಮ ರೀತಿಯಲ್ಲಿ ಸರಿಪಡಿಸುವ ಕೆಲಸ ಮಾಡುತ್ತೇವೆ ಎಂದು ಸಣ್ಣ ನೀರಾವರಿ ಇಲಾಖೆ ಅಧಿಕಾರಿ ಕೀರ್ತಿ ಅವರು ತಿಳಿಸಿದ್ದಾರೆ.

ಅಪಾರ ನೀರು ಕೋಡಿಯಿಂದ ಹೊರಕ್ಕೆ

ಇಡೀ ರಾಜ್ಯದಲ್ಲಿಯೇ ಅತಿ ದೊಡ್ಡ ಕೆರೆಗಳಲ್ಲಿ ಒಂದಾದ ಅಮಾನಿ ಭೈರಸಾಗರ ತುಂಬಿದೆ ಎನ್ನುವ ಸಂತೋಷಕ್ಕಿಂತ, ಕೆರೆಯಲ್ಲಿ ತುಂಬಿರುವ ಭಾರೀ ಹೂಳಿನಿಂದ ನೀರಿನ ಸಂಗ್ರಹ ಗಣನೀಯವಾಗಿ ಕಡಿಮೆಯಾಗಿದೆ. ಅಲ್ಲದೆ, ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆಯಿಂದ ಕೆರೆ ಕೋಡಿ ಹರಿಯುತ್ತಿದೆಯಾದರೂ, ಆ ನೀರಿನ ಬಹುತೇಕ ಪ್ರಮಾಣ ನೆರೆ ರಾಜ್ಯ ಆಂದಧ್ರ ಪ್ರದೇಶದ ಪಾಲಾಗುತ್ತಿದೆ.

ಸಿಕೆನ್ಯೂಸ್‌ ನೌ ವೆಬ್‌ತಾಣಕ್ಕೆ ಲಭ್ಯವಾಗಿರುವ ಮಾಹಿತಿ ಪ್ರಕಾರ; ಪ್ರತಿ ಸೆಕೆಂಡಿಗೆ ಸುಮಾರು 214 ಕ್ಯೂಸೆಕ್ ನೀರು ಅಮಾನಿ ಭೈರಸಾಗರ ಕೆರೆಯಿಂದ ಹೊರಗೆ ಕೋಡಿ ಮೂಲಕ ಹರಿದುಹೋಗುತ್ತಿದೆ. ಈ ಲೆಕ್ಕದಂತೆ 40 ದಿನಗಳಲ್ಲಿ ಅಂದಾಜು 23,101,200 ಕ್ಯೂಸೆಕ್ ನೀರು ಹರಿದು ಹೋಗಿದೆ ಎಂಬ ಮಾಹಿತಿ ಸಣ್ಣ ನೀರಾವರಿ ಇಲಾಖೆಯಿಂದ ಸಿಕ್ಕಿದೆ. ಇಷ್ಟು ನೀರಿನಲ್ಲಿ ಕೊಂಚ ಪ್ರಮಾಣ ಹಂಪಸಂದ್ರ, ಕಡೇಹಳ್ಳಿ ಕೆರೆಗಳಿಗೆ ಹೋಗಿ ಸೇರಿದೆಯಾದರೂ ಅಪಾರ ಜಲರಾಶಿ ನೆರೆ ರಾಜ್ಯದ ಪಾಲಾಗಿದೆ.

ಅಮಾನಿ ಭೈರಸಾಗರ ಕೆರೆ ಕೋಡಿ ನೀರು ನಿಂತ ತಕ್ಷಣ ಬಲಭಾಗಕ್ಕೆ ಸ್ಟೀಲ್ ತಡೆಗೋಡೆ ನಿರ್ಮಿಸುತ್ತೇವೆ. ಜತೆಗೆ; ಲೋಕೋಪಯೋಗಿ ಇಲಾಖೆಯ ಸಹಕಾರದಿಂದ ರಸ್ತೆಯ ಗುಂಡಿಗಳನ್ನು ಮುಚ್ಚಿ ಸುಗಮ ಸಂಚಾರಕ್ಕೆ ಅನುಕೂಲ ಮಾಡುತ್ತೇವೆ.

ಕೀರ್ತಿ, ಸಣ್ಣ ನೀರಾವರಿ ಇಲಾಖೆ ಅಧಿಕಾರಿ, ಚಿಕ್ಕಬಳ್ಳಾಪುರ
  • ಬುಧವಾರದಂದು ಅಮಾನಿ ಭೈರಸಾಗರ ಕೆರೆ ಕೋಡಿ ಪರಿಶೀಲನೆ ಮಾಡಿದ ಶಾಸಕ ಎಸ್.‌ಎನ್.‌ಸುಬ್ಬಾರೆಡ್ಡಿ.

ಮೇಲು ಸೇತುವೆ ಪ್ರಸ್ತಾವನೆ: ಶಾಸಕರು

ಗುಡಿಬಂಡೆ ಅಮಾನಿ ಭೈರಸಾಗರ ಕೆರೆಯಿಂದ ಪಟ್ಟಣಕ್ಕೆ ಫ್ಲೈಓವರ್ ನಿರ್ಮಾಣ ಮಾಡಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಸೂಕ್ತ ಕ್ರಮ ವಹಿಸುತ್ತೇನೆ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು. ಹಂಪಸಂದ್ರ, ಲಕ್ಕೇನಹಳ್ಳಿ ಬಳಿ ಕೂಡ ಮೇಲು ಸೇತುವೆಯ ಅವಶ್ಯಕತೆ ಇದೆ. ಆದರೆ, ಗುಡಿಬಂಡೆ ಅಮಾನಿ ಭೈರಸಾಗರ ಕೆರೆ ಏರಿ ರಸ್ತೆಯಲ್ಲಿ ಹೆಚ್ಚು ಓಡಾಟ ಇರುವುದರಿಂದ ಮೊದಲ ಆದ್ಯತೆ ಕೊಡುತ್ತೇನೆ. ಗುಂಡಿ ಮುಚ್ಚಿ, ಸೂಕ್ತ ಕ್ರಮವನ್ನು ವಹಿಸಲು ಸಣ್ಣ ನೀರಾವರಿ, ಪಿಡಬ್ಲ್ಯಡಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಅವರು ಹೇಳಿದರು.

Tags: amaani bhyrasagarachikkaballapuragudibandekarnatakaminor irrigationsn subbareddywood wall for lake
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

by cknewsnow desk
June 2, 2025
0

ರಾಜ್ಯದ ಹಿತರಕ್ಷಣೆಗೆ ಕೈ ಜೋಡಿಸುವಂತೆ ಕೇಂದ್ರ ಸಚಿವರು, ಸಂಸದರಿಗೆ ಡಿಸಿಎಂ ಡಿಕೆಶಿ ಮನವಿ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

Next Post
11 ಸಲ ಕಾಲ್‌ ಮಾಡಿದ  ಮಾಜಿ ಸಿಎಂ! ಜೆಡಿಎಸ್‌ ಶಾಸಕರ ಬ್ರೈನ್‌ವಾಶ್!!

11 ಸಲ ಕಾಲ್‌ ಮಾಡಿದ ಮಾಜಿ ಸಿಎಂ! ಜೆಡಿಎಸ್‌ ಶಾಸಕರ ಬ್ರೈನ್‌ವಾಶ್!!

Comments 1

  1. Pingback: ಬಾಗೇಪಲ್ಲಿಯಲ್ಲೇ ಬ್ಯುಸಿಯಾದರಾ ಶಾಸಕರು!! - cknewsnow

Leave a Reply Cancel reply

Your email address will not be published. Required fields are marked *

Recommended

ನವೆಂಬರ್‌ನಿಂದಲೇ ಕದ ತೆರೆಯಲಿದೆ  ಡಿಗ್ರಿ ಕಾಲೇಜ್; ಕೊನೆಗೂ ಡಿಸೈಡ್‌ ಮಾಡಿದ ಸರಕಾರ

ನವೆಂಬರ್‌ನಿಂದಲೇ ಕದ ತೆರೆಯಲಿದೆ ಡಿಗ್ರಿ ಕಾಲೇಜ್; ಕೊನೆಗೂ ಡಿಸೈಡ್‌ ಮಾಡಿದ ಸರಕಾರ

6 years ago
ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಕೃಷಿ ಸಾಲ ಮನ್ನಾ: ರಾಹುಲ್‌ ಗಾಂಧಿ

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಕೃಷಿ ಸಾಲ ಮನ್ನಾ: ರಾಹುಲ್‌ ಗಾಂಧಿ

2 years ago

Popular News

  • ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

    ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

    0 shares
    Share 0 Tweet 0
  • ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

    0 shares
    Share 0 Tweet 0
  • ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

    0 shares
    Share 0 Tweet 0
  • ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

    0 shares
    Share 0 Tweet 0
  • ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

June 2, 2025
ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2025 cknewsnow | Website Design  by Karnatakabest Digital Services

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2025 cknewsnow | Website Design  by Karnatakabest Digital Services

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ