ಪಟ್ಟಣದ ನಿವಾಸಿಗಳಲ್ಲಿ ಹೆಚ್ಚಿದ ಆತಂಕ; ನಿಲ್ಲದ ವರುಣ ತಾಂಡವ
By GS Bharath Gudibande
ಗುಡಿಬಂಡೆ: ಶತಮಾನಗಳ ಹಿಂದೆ ಪಾಳೇಗಾರರಿಂದ ನಿರ್ಮಿಸಲಾದ ಐತಿಹಾಸಿಕ ಹಾಗೂ ಏಳುಸುತ್ತಿನ ಕೋಟೆಯಾದ ಸುರಸದ್ಮಗಿರಿ ಬೆಟ್ಟದ ಮೊದಲ ಕೋಟೆಯ ಬಳಿ ಕಲ್ಲು ಬಂಡೆಗಳ ಕುಸಿತವಾಗಿರುವುದು ಪಟ್ಟಣದ ಸಾರ್ವಜನಿಕರಲ್ಲಿ ಆತಂಕ ಉಂಟು ಮಾಡಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ವಿನಾಯಕ ನಗರದ ತಪ್ಪಲಿನಲ್ಲಿರುವ ಸುರಸದ್ಮಗಿರಿ ಬೆಟ್ಟವು ಪ್ರವಾಸಿಗರ ಅಚ್ಚುಮೆಚ್ಚಿನ ತಾಣವಾಗಿದ್ದು, ಈಗ ಕಲ್ಲು ಬಂಡೆಗಳ ಕುಸಿತ ತೀವ್ರ ಆತಂಕಕ್ಕೆ ಕಾರಣವಾಗಿದೆ.
ಏಳು ಸುತ್ತಿನ ಕೋಟೆ ಎಂದು ಹೆಸರುವಾಸಿಯಾದ ಸುರಸದ್ಮಗಿರಿ ಬೆಟ್ಟದ ಮೊದಲ ಸುತ್ತಿನ ಕೋಟೆಯಲ್ಲಿ ಕಲ್ಲು ಬಂಡೆಗಳು ಕುಸಿದಿದೆ. ಸತತ ಮಳೆಯಿಂದ ಜನ ಜೀವನ ಅಸ್ತವ್ಯಸ್ತತೆವಾಗಿದೆ, ಮಳೆಯಿಂದ ಕೆರೆ ಕುಂಟೆ, ತುಂಬಿ ರಸ್ತೆಗಳೆಲ್ಲ ಜಲಾವೃತವಾದರೆ, ಮನೆಗಳು ಬಿದ್ದು ಹಾನಿಯಾಗಿದೆ, ಈಗ ಗುಡಿಬಂಡೆ ಬೆಟ್ಟದಲ್ಲಿ ಕಲ್ಲು ಬಂಡೆಗಳು ಕುಸಿದು ಬೀಳುತ್ತಿರುವುದು ಸಾರ್ವಜನಿಕರ ನೆಮ್ಮದಿ ಕೆಡೆಸಿದೆ.
ಗುಡಿಬಂಡೆಯಲ್ಲಿ 4 ಕಾಳಜಿ ಕೇಂದ್ರ
ಜಿಲ್ಲಾಡಳಿತದ ನಿರ್ದೇನದ ಮೆರೆಗೆ ತಾಲೂಕು ಆಡಳಿತ ಅತಿವೃಷ್ಟಿಯಿಂದ ತೊಂದರೆಗೆ ಒಳಗಾದ ನಿರಾಶ್ರಿತರಿಗಾಗಿ ತಾಲೂಕಿನಲ್ಲಿ 4 ಕಾಳಜಿ ಕೇಂದ್ರಗಳನ್ನು ಸ್ಥಾಪನೆ ಮಾಡಿದೆ.
- 1) ಎಸ್.ಸಿ. ಎಸ್.ಟಿ ಬಾಲಕರ ವಿದ್ಯಾರ್ಥಿ ನಿಲಯ (50) ಬೆಡ್ ವ್ಯವಸ್ಥೆ
- 2) ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಕೊಂಡರೆಡ್ಡಿ ಹಳ್ಳಿ ( 80 ) ಬೆಡ್ ವ್ಯವಸ್ಥೆ.
- 3) ಕಸ್ತೂರಬಾ ವಿದ್ಯಾರ್ಥಿ ನಿಲಯ ಜೆ.ಪಿ ನಗರ ( 50 ) ಬೆಡ್ ವ್ಯವಸ್ಥೆ.
- 4) ಬಿಸಿಎಂ ವಿದ್ಯಾರ್ಥಿ ನಿಲಯ ಗುಡಿಬಂಡೆ ಪಟ್ಟಣ ( 50 ) ಬೆಡ್ ವ್ಯವಸ್ಥೆ ಮಾಡಲಾಗಿದೆ ಎಂದು ತಾಲೂಕು ಆಡಳಿತ ಮಾಹಿತಿ ನೀಡಿತು.
ಆಹಾರ, ವಸತಿ ಸೇರಿದಂತೆ ಮುಂತಾದ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.