ಸಿ.ಆರ್.ಮನೋಹರ್‌ಗೆ ಸಿಗದ ಚಾನ್ಸ್
ಬೆಂಗಳೂರು: ರಾಜ್ಯದ 25 ಸ್ಥಾನಗಳಿಗೆ ನಡೆಯಲಿರುವ ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಕೊನೆಗೂ 17 ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ.
ಆದರೆ; ಕೋಲಾರ-ಚಿಕ್ಕಬಳ್ಳಾಪುರ, ಬೀದರ್, ಬೆಂಗಳೂರು ನಗರ ಕ್ಷೇತ್ರಗಳಲ್ಲಿ ಆಕಾಂಕ್ಷಿಗಳ ಪಟ್ಟಿ ಹೆಚ್ಚಾಗಿದ್ದು, ಆ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಪ್ರಕಟವಾಗಿಲ್ಲ. ರಾತ್ರಿ ಮೂರು ಕ್ಷೇತ್ರಗಳ ಅಭ್ಯರ್ಥಿಗಳನ್ನು ಕಾಂಗ್ರೆಸ್ ಪ್ರಕಟಿಸಿದೆ. ಕೋಲಾರ-ಚಿಕ್ಕಬಳ್ಳಾಪುರಕ್ಕೆ ಎಂ.ಎಲ್.ಅನಿಲ್ ಕುಮಾರ್, ಬೀದರ್ʼಗೆ ಭೀಮ್ ರಾವ್ ಪಾಟೀಲ್ ಹಾಗೂ ಬೆಂಗಳೂರು ನಗರಕ್ಕೆ ಯೂಸಫ್ ಷರೀಫ್ʼಗೆ ಟಿಕೆಟ್ ನೀಡಲಾಗಿದೆ.
ಕೋಲಾರ-ಚಿಕ್ಕಬಳ್ಳಾಪುರದ ಜಿಡಿಎಸ್ ಹಾಲಿ ಸದಸ್ಯ ಸಿ.ಆರ್.ಮನೋಹರ್ ಬಿಜೆಪಿಗೆ ಹಾರಿ ಟಿಕೆಟ್ ಕೇಳಿದ್ದರು. ಆದರೆ, ಕಮಲ ಪಾಳೆಯ ಕೊನೆವರೆಗೂ ಟಿಕೆಟ್ ಕೊಡುವ ಕಣ್ಣಾಮುಚ್ಚಾಲೆ ಆಡಿ ಕೈಕೊಟ್ಟಿದೆ. ಕೊನೆಗೆ ಅವರು ಕಾಂಗ್ರೆಸ್ ಕದ ತಟ್ಟಿದ್ದಾರೆಂದು ಗೊತ್ತಾಗಿದೆ. ಆದರೆ, ಅವರಿಗೆ ಟಿಕೆಟ್ ನೀಡುವುದಕ್ಕೆ ಕೋಲಾರದ ಮೂಲ ಕಾಂಗ್ರೆಸ್ ನಾಯಕರ ವಿರೋಧ ವ್ಯಕ್ತವಾಗಿದೆ. ಹೀಗಾಗಿ ಪಟ್ಟಿ ವಿಳಂಬವಾಗಿದೆ.
ಇದೇ ವೇಳೆ ಸಿ.ಆರ್.ಮನೋಹರ್ ಅವರು ಬಿಜೆಪಿ ಮತ್ತು ಕಾಂಗ್ರೆಸ್ ಕೈತಪಿದ ಮೇಲೆ ಈಗ ಜೆಇಎಸ್ ಟಿಕೆಟ್‌ಗಾಗಿ ಮರಳಿ ಯತ್ನ ನಡೆಸುತ್ತಿದ್ದಾರೆ ಎನ್ನಲಾಗಿದ್ದು, ಆ ಬಗ್ಗೆ ಜೆಡಿಎಸ್ ಮೂಲಗಳು ಮುಗುಮ್ಮಾಗಿವೆ.
1. ಕಲಬುರಗಿ: ಶಿವಾನಂದ ಪಾಟೀಲ್ ಮತ್ತೂರು
2. ಬೆಳಗಾವಿ: ಚನ್ನರಾಜ ಬಸವರಾಜ ಹಟ್ಟಿಹೊಳಿ
3. ಉತ್ತರ ಕನ್ನಡ: ಭೀಮಾನಾಯಕ್
4. ಹುಬ್ಬಳ್ಳಿ, ಧಾರವಾಡ, ಗದಗ, ಹಾವೇರಿ: ಸಲೀಂ ಅಹಮದ್
5. ರಾಯಚೂರು: ಶರಣಗೌಡ ಆನಂದಗೌಡ ಪಾಟೀಲ್
6. ಚಿತ್ರದುರ್ಗ: ಬಿ.ಸೋಮಶೇಖರ್
7. ಶಿವಮೊಗ್ಗ: ಪ್ರಸನ್ನ ಕುಮಾರ್
8. ದಕ್ಷಿಣ ಕನ್ನಡ: ಮಂಜುನಾಥ್ ಭಂಡಾರಿ
9. ಚಿಕ್ಕಮಗಳೂರು: ಗಾಯಿತ್ರಿ ಶಾಂತೇಗೌಡ
10. ಹಾಸನ: ಎಂ.ಶಂಕರ್
11.ತುಮಕೂರು: ಎನ್. ರಾಜೇಂದ್ರ
12. ಮಂಡ್ಯ: ದಿನೇಶ್ ಗೂಳಿಗೌಡ
13. ಬೆಂಗಳೂರು ಗ್ರಾಮಾಂತರ: ಎಸ್.ರವಿ
14. ಕೊಡಗು: ಡಾ.ಮಂತಾರ ಗೌಡ
15. ಬಿಜಾಪುರ, ಬಾಗಲಕೋಟೆ: ಸುನೀಲ್‌ಗೌಡ ಪಾಟೀಲ್
16. ಮೈಸೂರು-ಚಾಮರಾಜನಗರ: ಡಾ.ಡಿ.ತಿಮ್ಮಯ್ಯ
17. ಬಳ್ಳಾರಿ: ಕೆ.ಸಿ.ಕೊಂಡಯ್ಯ