ಹಾಸನದ ʼಜನತಾ ಮಾಧ್ಯಮʼ ವರದಿ ಎಲ್ಲೆಲ್ಲೂ ವೈರಲ್; ತನಿಖೆಗೆ ಒತ್ತಾಯಿಸಿದ ಕರ್ನಾಟಕ ರಾಷ್ಟ್ರ ಸಮಿತಿ
ಬೆಳಗಾವಿ ಅಧಿವೇಶನ ದಿನವೇ ಸರಕಾರ ಮತ್ತು ಬಿಜೆಪಿಗೆ ಮುಜುಗರ
ಬೆಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವೈದ್ಯ ಶಿಕ್ಷಣ ಸಚಿವರು ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಮಂತ್ರಿಯೂ ಆಗಿರುವ ಡಾ.ಕೆ.ಸುಧಾಕರ್ ಮತ್ತೆ ಸುದ್ದಿಯಲ್ಲಿದ್ದಾರೆ. ಅವರ ವಿರುದ್ಧ ಲಂಚದ ಆರೋಪ ಕೇಳಿಬಂದಿದ್ದು, ಪತ್ರಕರ್ತರೊಬ್ಬರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬರೆದಿರುವ ಬಹಿರಂಗ ಪತ್ರ ಬಿಜೆಪಿ ನಾಯಕರಿಗೆ ಸಿಕ್ಕಾಪಟ್ಟೆ ಇರಿಸುಮುರಿಸು ಉಂಟು ಮಾಡಿದೆ.
ಅಲ್ಲದೆ, ಬೆಳಗಾವಿ ಅಧವೇಶನ ಆರಂಭವಾದ ದಿನವೇ ಹಾಸನ ಜಿಲ್ಲೆಯ ʼಜನತಾ ಮಾಧ್ಯಮʼ ಪತ್ರಿಕೆಯ ಸಂಪಾದಕ ಆರ್.ಪಿ.ವೆಂಕಟೇಶ ಮೂರ್ತಿ ಅವರು ಸಿಎಂಗೆ ಬರೆದಿರುವ ಬಹಿರಂಗ ಪತ್ರ ಅವರದ್ದೇ ಪತ್ರಿಕೆಯಲ್ಲಿ ಪ್ರಕಟವಾಗಿದ್ದು, ಆ ಸುದ್ದಿಯ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಸುದ್ದಿ ಇಂದು (ಡಿಸೆಂಬರ್ ೧೩) ʼಜನತಾ ಮಾಧ್ಯಮʼ ಪತ್ರಿಕೆಯಲ್ಲಿ ಪ್ರಕಟವಾಗಿದೆ.
ಸರಕಾರಿ ಆಸ್ಪತ್ರೆ ವೈದ್ಯನ ಹುದ್ದೆ ಸಿಗಬೇಕೆಂದರೆ ಸಚಿವ ಸುಧಾಕರ್ ಅವರಿಗೆ ೩೦ ಲಕ್ಷ ರೂ. ಲಂಚ ನೀಡಬೇಕಂತೆ. ಉತ್ತಮ ವಿಭಾಗದಲ್ಲಿ ಅವಕಾಶ ಬೇಕೆಂದರೆ ೫೦ ಲಕ್ಷ ರೂ. ಕೊಡಬೇಕಂತೆ. ಅದಕ್ಕೆ ಅವರು ಹೇಳುವ ಕಾರಣ ಪಾರ್ಟಿ ಫಂಡ್ ಎಂದು ವೆಂಕಟೇಶ ಮೂರ್ತಿ ಅವರು ಪತ್ರದಲ್ಲಿ ಬರೆದಿದ್ದಾರೆ.
ತನಿಖೆಗೆ ಕೆಆರ್‌ಎಸ್ ಒತ್ತಾಯ
ಇದೇ ʼಜನತಾ ಮಾಧ್ಯಮʼ ಪತ್ರಿಕೆಯ ತುಣುಕು ಸಾಮಾಜಿಕ ಮಾಧ್ಯಮಗಳಲ್ಲಿ ಬಿರುಸಿನ ಸಂಚಾರ ಮಾಡುತ್ತಿದೆ. ಬೆಂಗಳೂರು, ಚಿಕ್ಕಬಳ್ಳಾಪುರದ ವಾಟ್ಸಾಪ್ ಗ್ರೂಪುಗಳು ಹಾಗೂ ಬಿಜೆಪಿಯ ವಲಯದಲ್ಲಿ ಅದು ವೈರಲ್ ಆಗಿದೆ.
ಮತ್ತೊಂದೆಡೆ ಪತ್ರಿಕೆಯ ಸುದ್ದಿ ತುಣಕುನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಿರುವ ಕರ್ನಾಟಕ ರಾಷ್ಟ್ರ ಸಮಿತಿ ಅಧ್ಯಕ್ಷ ರವಿ ಕೃಷ್ಣಾರೆಡ್ಡಿ; ಸಚಿವ ಸುಧಾಕರ್ ಅವರ ವಿರುದ್ಧ ಕೇಳಿ ಬಂದಿರುವ ಆರೋಪಗಳನ್ನು ತನಿಖೆ ಮಾಡಬೇಕು ಎಂದು ಸರಕಾರವನ್ನು ಒತ್ತಾಯ ಮಾಡಿದ್ದಾರೆ. ಈ ಸರಕಾರಕ್ಕೆ ಕಿಂಚಿತ್ ಮಾನ-ಮರ್ಯಾದೆ-ಲಜ್ಜೆ ಇದ್ದರೆ ಈ ಕೂಡಲೇ ತನಿಖೆಗೆ ಆದೇಶಿಸಬೇಕು. ಸಾಮಾಜಿಕ ನ್ಯಾಯದ ಅತಿದೊಡ್ಡ ಶತ್ರು ಭ್ರಷ್ಟಾಚಾರ ಎಂದು ಅವರು ಹೇಳಿದ್ದಾರೆ.
ಇದೊಂದು ಪಿಡುಗು ,ಎಲ್ಲಿ ನೋಡಿದರಲ್ಲಿ ಭಾರ್ಸ್ಟಾಚಾರ ತಾಂಡವವಾಡುತ್ತಿದೆ . ಇದಕ್ಕೆಲ್ಲ ಮೂಲ ಕಾರಣ ರಾಜಕಾರಣಿಗಳು . ಯಾಕಂದ್ರೆ ರಾಜಕಾರಣಿಗಳು ಕಮೀಷನ್ ಕೀಳದಿದ್ರೆ ಅಧಿಕಾರಿಗಳು ಲಂಚ ಕೇಳಲ್ಲ ,ಆಗ ಜನಗಳಿಗೆ ಭ್ರಷ್ಟಾಚಾರ ಮುಕ್ತ ಆಡಳಿತ ಸಿಗುತ್ತೆ ,