ಕೆರಳಿ ಕೆಂಡವಾದ ಭಾರತ
ನವದೆಹಲಿ: ಭಾರತದ ಅರುಣಾಚಲ ಪ್ರದೇಶದ ಕೆಲ ಭಾಗ ದಕ್ಷಿಣ ಟಿಬೆಟ್ ಎಂದು ಹೇಳುವ ಮೂಲಕ ಚೀನಾ ಮತ್ತೆ ಕಿರಿಕ್ ಮಾಡಿದೆ. ಭಾರತ ತಿರುಗೇಟು ನೀಡುತ್ತಿದ್ದರೂ ಚೀನಾದ ಕುಚೋದ್ಯ ಮುಂದುವರೆದಿದೆ.
ಅರುಣಾಚಲ ಪ್ರದೇಶದ 15 ಸ್ಥಳಗಳಿಗೆ ಚೀನಾ ತನ್ನದೇ ಆದ ಹೆಸರುಗಳನ್ನು ಘೋಷಿಸಿಕೊಂಡಿದೆ. ಇದಕ್ಕೆ ಭಾರತ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ.
ಈ ಸ್ಥಳಗಳಿಗೆ ಆವಿಷ್ಕರಿಸಿದ ಹೆಸರುಗಳನ್ನು ನಿಯೋಜಿಸುವುದು ಸುಲಭ ಅದರೆ ವಾಸ್ತವವಾಗಿ ಬದಲಾಗುವುದಿಲ್ಲ ಅರುಣಾಚಲ ಭಾರತದ ಅವಿಭಾಜ್ಯ ಅಂಗವಾಗಿದೆ ಎಂದು ಖಡಕ್ ಸಂದೇಶ ನೀಡಿದೆ. 2017 ನಂತರ ಮತ್ತೆ ಚೀನಾ ಅರುಣಾಚಲ ಪ್ರದೇಶದ ಮೇಲೆ ಹಿಡಿತ ಸಾಧಿಸಲು ಮತ್ತೆ ಪ್ರಯತ್ನಿಸಿದೆ.
ನಮ್ಮ ಪ್ರದೇಶಗಳನ್ನು ಅವರು ಮರುನಾಮಕರಣ ಮಾಡಲು ಪ್ರಯತ್ನಿಸುತ್ತಿರುವುದು ಇದೇ ಮೊದಲಲ್ಲ ಎಂದು ವಿದೇಶಾಂಗ ಸಚಿವಾಲಯದ ಅಧಿಕೃತ ವಕ್ತಾರ ಅರಿಂದಮ್ ಬಾಗ್ಚಿ ತಿಳಿಸಿದ್ದಾರೆ.
ಅರುಣಾಚಲ ಪ್ರದೇಶ ಯಾವಾಗಲೂ ಮತ್ತು ಎಂದೆಂದಿಗೂ ಭಾರತದ ಅವಿಭಾಜ್ಯ ಅಂಗವಾಗಿದೆ ಎಂದು ಹೇಳಿದ್ದಾರೆ. ಎರಡು ನದಿಗಳು,ಹಲವು ಪರ್ವತಗಳು ಸೇರಿದ 6 ಪ್ರದೇಶಗಳನ್ನು ಚೀನಾ ತನ್ನದೆಂದು ಹೇಳಿಕೊಂಡು ಹೊಸ ಹೆಸರು ನಾಮಕರಣ ಮಾಡಿದೆ. ಇದು ಎಲ್ಲ ಭಾರತೀಯರನ್ನು ಕೆರಳಿಸಿದೆ.