ವಿಮಾನ ನಿಲ್ದಾಣಗಳಲ್ಲೇ ಮಲಗಿದ ಪ್ರಯಾಣಿಕರು
ವಾಷಿಂಗ್ಟನ್: ಅಟ್ಲಾಂಟಿಕ್ ಕಡಲಲ್ಲಿ ಎದ್ದ ಚಂಡಮಾರುತ ಅಮೆರಿಕ ಪೂರ್ವ ಕರಾವಳಿಗೆ ಅಪ್ಪಳಿಸಿದ ಪರಿಣಾಮ ರಾಷ್ಟ್ರ ರಾಜಧಾನಿ ವಾಷಿಂಗ್ಟನ್ ನಲ್ಲಿ ವಿಮಾನ ಸೇವೆ ಅಸ್ತವ್ಯಸ್ತವಾಗಿದೆ.
ಚಂಡಮಾರುತದ ಜೊತೆಗೆ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವುದರಿಂದ ಜನರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ರಜಾದಿನದ ಮೋಜಿಗಾಗಿ ತೆರಳಿದ್ದವರು ವಾಪಸು ಮನೆಗೆ ಹೋಗಲು ಪರದಾಡುವಂತಾಗಿದೆ.
ಸುಮಾರು 3000 ದೇಶೀಯ ವಿಮಾನ ಮತ್ತು ಸುಮಾರು 4700 ಅಂತರಾಷ್ಟ್ರೀಯ ವಿಮಾನಗಳನ್ನು ರದ್ದುಗೊಳಿಸಲಾಗಿದೆ. ದೇಶೀಯ 5,600 ಸೇರಿದಂತೆ ಸುಮಾರು 12,500 ವಿಮಾನಗಳು ವಿಳಂಬವಾಗಿವೆ. ಕೆಲವರು ವಿಮಾನ ನಿಲ್ದಾಣಗಳಲ್ಲೇ ಮಲಗಿದ್ದಾರೆ.
ಕೊಲಂಬಿಯಾ, ಉತ್ತರ ವರ್ಜೀನಿಯಾ ಮತ್ತು ಮಧ್ಯ ಮೇರಿಲ್ಯಾಂಡ್‍ನಲ್ಲಿ ಜನರು ಹಿಮ ಗಾಳಿಯ ಚಂಡಮಾರುತದೊಂದಿಗೆ ಹೋರಾಡಬೇಕಾದ ಪರಿಸ್ಥಿತಿ ನಿರ್ಮಾಣ ವಾಗಿದೆ.