ಕೋವಿಡ್ ಬಗ್ಗೆ ನಿರ್ಲಕ್ಷ್ಯ ಬೇಡ ಸೋಂಕು ಕಂಡ ತಕ್ಷಣ ವೈದ್ಯರ ನೆರವು ಪಡೆಯಿರಿ: ಡಾ.ವಿಜಯಲಕ್ಷ್ಮಿ
by GS Bharath Gudibande
ಗುಡಿಬಂಡೆ: ಇಡೀ ದೇಶದಾದ್ಯಂತ ಕೊರೋನಾ 3ನೇ ಅಲೆಯು ಜನರನ್ನು ತೀವ್ರ ಆತಂಕಕ್ಕೆ ದೂಡಿದ್ದು, ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ, ಅಸಡ್ಡೆ ಮಾಡುವುದು ಬೇಡ. ಜ್ವರ ಕಾಣಿಸಿಕೊಂಡ ತಕ್ಷಣ ಕೋವಿಡ್ ಪರೀಕ್ಷೆ ಮಾಡಿಸಿಕೊಂಡು ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದು ವೈದ್ಯರು ಜನರಿಗೆ ಕಿವಿಮಾತು ಹೇಳಿದ್ದಾರೆ.
ನಮಗೆ ಕೊರೋನಾ ಸೋಂಕು ತಗುಲುವುದಿಲ್ಲ, ನಮ್ಮ ಆರೋಗ್ಯ ಚೆನ್ನಾಗಿದೆ. ರೋಗ ನಿರೋಧಕ ಶಕ್ತಿ ಹೆಚ್ಚಾಗಿದೆ ಎಂದು ಭಾವಿಸಿ ನಿರ್ಲಕ್ಷ್ಯ ಮಾಡುವುದು ಬೇಡ. ಕೊರೋನಾ ವೈರಸ್ ಹೆಚ್ಚಾಗಿ ಹರಡುತ್ತಿದೆ. ಈ ಸಮಸ್ಯೆಗಳನ್ನು ಅರಿತು ಸರಿಯಾದ ಸಮಯಕ್ಕೆ ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆಯುವುದರ ಮೂಲಕ ತಮ್ಮ ಆರೋಗ್ಯವನ್ನು ಜನರು ಕಾಪಾಡಿಕೊಂಡು ಕೊರೋನಾ ಮಹಾಮಾರಿಯಿಂದ ಪಾರಾಗಬೇಕು ಎಂದು ಅವರು ತಿಳಿಸಿದ್ದಾರೆ.
ಗುಡಿಬಂಡೆ ತಾಲೂಕಿನಲ್ಲಿ ಇದುವರೆಗೂ 4ಕ್ಕೂ ಹೆಚ್ಚು ಕೋವಿಡ್ ಪ್ರಕರಣಗಳು ಕಂಡುಬಂದಿದ್ದು, ಎಲ್ಲರೂ ಆರೋಗ್ಯವಾಗಿದ್ದಾರೆ. ಇನ್ನೂ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಸೋಂಕಿನ ಲಕ್ಷಣಗಳಿದ್ದರೂ ಆಸ್ಪತ್ರೆಗೆ ಹೋಗಲು ಹಿಂಜರಿಕೆ
ಕೊರೋನಾ ಸೋಂಕಿನ ಲಕ್ಷಣಗಳು ಇದ್ದರೂ ಸಾರ್ವಜನಿಕರು ಆಸ್ಪತ್ರೆಗೆ ಹೋಗುತ್ತಿಲ್ಲ. ಚಿಕಿತ್ಸೆ ಪಡೆಯಲು ಭಯ ಪಡುತ್ತಿದ್ದಾರೆ, ಇದರಿಂದ ಹಳ್ಳಿಗಳಲ್ಲಿ ಸೋಂಕು ಹೆಚ್ಚಳವಾಗುತ್ತಿದೆ. ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯುವುದಕ್ಕೆ ನಿಧಾನ ಮಾಡುತ್ತಿರುವುದರಿಂದ ಕೆಲವರಿಗೆ ಉಸಿರಾಟದ ಸಮಸ್ಯೆ ಉಂಟಾಗುತ್ತದೆ. ನಿರ್ಲಕ್ಷ್ಯದಿಂದ ಶ್ವಾಸಕೋಶ ಸಂಪೂರ್ಣವಾಗಿ ಹಾಳಾಗುತ್ತದೆ. ಹೀಗೆ ಕೋನೆ ಸಂದರ್ಭದಲ್ಲಿ ಆಸ್ಪತ್ರೆಗೆ ಬಂದರೆ ಕೊರೋನಾ ವಿರುದ್ಧ ಹೋರಾಡಲು ಸಮಸ್ಯೆ ಆಗಬಹುದು ಎಂಬುದು ವೈದ್ಯರ ಅಭಿಪ್ರಾಯವಾಗಿದೆ.
ಕೊರೋನಾ ಲಕ್ಷಣಗಳು ಪತ್ತೆಯಾದ ಕೂಡಲೇ ವೈದ್ಯರ ಸಲಹೆಯಂತೆ ಪರೀಕ್ಷೆ ಮಾಡಿಕೊಂಡು ಪ್ರಾರಂಭದಲ್ಲೆ ಸೂಕ್ತ ಚಿಕಿತ್ಸೆ ಪಡೆಯಬೇಕು. ನಮ್ಮ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಮಾಡದೆ ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದು ಗುಡಿಬಂಡೆ ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ.ವಿಜಯಲಕ್ಷ್ಮಿ ಅವರು ಸಲಹೆ ನೀಡಿದ್ದಾರೆ.
ತಾಲೂಕಿನಲ್ಲಿ ಅನಗತ್ಯವಾಗಿ ಓಡಾಡುವ ವಾಹನಗಳನ್ನು ಸೀಜ್ ಮಾಡಲಾಗುತ್ತಿದೆ. ಜನರು ಕೋವಿಡ್ ನಿಯಮಗಳನ್ನು ಚಾಚೂ ತಪ್ಪದೇ ಪಾಳಿಸುತ್ತಾ ಪೊಲೀಸ್ ಇಲಾಖೆ, ಜಿಲ್ಲಾಡಳಿತ ಹಾಗೂ ಸರ್ಕಾರಕ್ಕೆ ಸಹಕಾರ ನೀಡಬೇಕು. ಅನಗತ್ಯವಾಗಿ ಓಡಾಡಿಕೊಂಡು ಆಪತ್ತು ತಂದುಕೊಳ್ಳುವುದು ಬೇಡ.
ಲಿಂಗರಾಜು, ಆರಕ್ಷಕ ವೃತ್ತ ನಿರೀಕ್ಷಕ ಗುಡಿಬಂಡೆ,
ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು. ನಿರ್ಲಕ್ಷ್ಯ, ನಿಧಾನ ಮಾಡುವುದು ಸೂಕ್ತವಲ್ಲ. ನಿರ್ಲಕ್ಷ್ಯದಿಂದ ಸೋಂಕು ಹರಡುತ್ತಿದೆ. ಇದರಿಂದ ಸೋಂಕು ಉಲ್ಬಣಗೊಂಡು ಪ್ರಾಣ ಕಳೆದುಕೊಳುತ್ತಾರೆ. ಹಾಗಾಗಿ ಎಲ್ಲರೂ ಎಚ್ಚುತ್ತುಕೊಂಡು ಜಾಗರೂಕರಾಗಿ ಸರ್ಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಹಾಗೂ ಒಂದು ವೇಳೆ ಕೊರೋನಾ ಪರೀಕ್ಷೆಯಲ್ಲಿ ಪಾಸಿಟಿವ್ ಬಂದರೆ ಇತರರಿಗೆ ತೊಂದರೆ ಕೊಡದೆ ಪ್ರತ್ಯೇಕವಾಗಿ ಐಸೋಲೇಷನ್ ಮಾಡಿಕೊಂಡು ತಮ್ಮ ಆಕ್ಸಿಜನ್ ಲೆವೆಲ್ ಅನ್ನು ಚೆಕ್ ಮಾಡಿಕೊಳ್ಳಬೇಕು.
ಡಾ.ವಿಜಯಲಕ್ಷ್ಮಿ, ತಾಲ್ಲೂಕು ಆಡಳಿತ ವೈದ್ಯಾಧಿಕಾರಿ