ಹೈಕೋರ್ಟ್ ಛಿಮಾರಿ ಹಿನ್ನೆಲೆಯಲ್ಲಿ ಪ್ರತಿಪಕ್ಷ ನಾಯಕ ಹೇಳಿಕೆ
ಬೆಂಗಳೂರು: ಪಾದಯಾತ್ರೆ ಮುಂದುವರೆಸಬೇಕೋ ಅಥವಾ ಬೇಡವೋ ಎಂದು ನ್ಯಾಯಾಲಯ ನೀಡುವ ಆದೇಶವನ್ನು ನಾವು ಪಾಲನೆ ಮಾಡುತ್ತೇವೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಇಂದು ಬೆಂಗಳೂರಿನ ತಮ್ಮ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಪಾದಯಾತ್ರೆಗೆ ಸಂಬಂಧಿಸಿದ ಮೊಕದ್ದಮೆಯ ವಿಚಾರಣೆ 14ನೇ ತಾರೀಖು ನಡೆಯಲಿದೆ. ನಾಳೆ ಪಾದಯಾತ್ರೆ ಮಾಡಲು ತೊಂದರೆ ಇಲ್ಲ ಹಾಗಾಗಿ ನಾಳೆ ಪಾದಯಾತ್ರೆ ಮಾಡುತ್ತೇವೆ. ಒಂದು ವೇಳೆ ನ್ಯಾಯಾಲಯ ಪಾದಯಾತ್ರೆ ನಿಲ್ಲಿಸುವಂತೆ ಆದೇಶಿಸಿದರೆ ಅದನ್ನು ಗೌರವಿಸಿ, ಪಾಲಿಸುತ್ತೇವೆ ಎಂದು ತಿಳಿಸಿದರು.
ಪಾದಯಾತ್ರೆಯಲ್ಲಿ ಕೊವಿಡ್ ನಿಯಮ ಉಲ್ಲಂಘನೆ ಮಾಡಲಾಗುತ್ತಿದೆಯಾ ಎಂದು ಕೋರ್ಟ್ ಸರ್ಕಾರವನ್ನು ಪ್ರಶ್ನೆ ಮಾಡಿದೆ, ನ್ಯಾಯಾಲಯದ ಪ್ರಶ್ನೆಗೆ ಸರ್ಕಾರ ಉತ್ತರ ನೀಡುತ್ತೆ. ಪಾದಯಾತ್ರೆ, ಪ್ರತಿಭಟನೆ ಮಾಡುವಾಗೆಲ್ಲ ಸರ್ಕಾರದ ಅನುಮತಿ ಪಡೆದು ಮಾಡಲ್ಲ, ಸರ್ಕಾರದ ಗಮನಕ್ಕೆ ತಂದು ಪಾದಯಾತ್ರೆ ಮಾಡುತ್ತಿದ್ದೇವೆ. ನ್ಯಾಯಾಲಯದ ಆದೇಶ ಏನು ಬರುತ್ತೋ ಕಾದು ನೋಡೋಣ. ಏನೇ ಆದೇಶ ಬಂದರು ಅದನ್ನು ಉಲ್ಲಂಘನೆಯಂತೂ ಖಂಡಿತಾ ಮಾಡಲ್ಲಎಂದು ಅವರು ಹೇಳಿದರು.
ನ್ಯಾಯಾಲಯ ಗರಂ
ಇಂದು ಪಾದಯಾತ್ರೆ ಹಾಗೂ ಓಮಿಕ್ರಾನ್ ಹರಡುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸಿದ್ದ ಹೈಕೋರ್ಟ್; ರಾಜ್ಯದಲ್ಲಿ ಕೋವಿಡ್ ಸೋಂಕು ದಿನೇದಿನೇ ಹೆಚ್ಚಾಗುತ್ತಿರುವುದರ ಮಧ್ಯೆ ಪಾದಯಾತ್ರೆ ನಡೆಸುವ ಅಗತ್ಯವೇನಿದೆ ಎಂದು ಛೀಮಾರಿ ಹಾಕಿದೆ. ಇದಕ್ಕೆ ಸಂಬಂಧಿಸಿದಂತೆ ಸರ್ಕಾರಕ್ಕೆ, ರಾಮನಗರ ಜಿಲ್ಲಾಡಳಿತ, ಬಿಬಿಎಂಪಿ ಹಾಗೂ ಕೆಪಿಸಿಸಿಗೂ ನೋಟಿಸ್ ನೀಡಿದೆ.
Comments 1