ಗೃಹ ಸಚಿವ ಶ್ರೀ ಅರಗ ಜ್ಞಾನೇಂದ್ರ
ಚಿಕ್ಕಬಳ್ಳಾಪುರ: ವೀಕೆಂಡ್ ಕರ್ಫ್ಯೂ ಅನ್ನು ರದ್ದುಪಡಿಸಿರುವ ರಾಜ್ಯ ಸರಕಾರ, ಜನರ ಆರ್ಥಿಕ ಬದುಕನ್ನು ಕಾಪಾಡಲು ಈ ಕ್ರಮ ಕೈಗೊಂಡಿದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದ್ದಾರೆ.
ಇಂದಿಲ್ಲಿ ತಮ್ಮ ಇಲಾಖೆಯ ಪರಿಶೀಲನಾ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ” ಜನರ ಬದುಕು ಹಾಗೂ ಜೀವ ಎರಡನ್ನೂ ರಕ್ಷಿಸುವ ಜವಾಬ್ದಾರಿ ಸರಕಾರ ಹೊಂದಿದೆ” ಎಂದರು.
ಕೋವಿಡ್ ವೈರಾಣು ಸಾಂಕ್ರಮಿಕ ವಾಗಿದ್ದು, ಕಳೆದ ಕೆಲವು ದಿನಗಳಿಂದ ವ್ಯಾಪಕವಾಗಿ ಹರಡುತ್ತಿದೆ, ಆದರೆ ಇದರಿಂದ ಆಸ್ಪತ್ರೆಗಳಿಗೆ ಸೇ್ಪಡೆಯಾಗುವವರ ಸಂಖ್ಯೆ ಕಡಿಮೆ ಇರುವುದರಿಂದ ವೀಕ್ ಎಂಡ್ ಕರ್ಫ್ಯೂ ರದ್ದಾಗಿದೆ ಎಂದ ಸಚಿವರು ” ಒಂದು ವೇಳೆ ಆಸ್ಪತ್ರೆಗಳಿಗೆ ಪ್ರವೇಶ ಪಡೆಯುವವರ ಸಂಖ್ಯೆ ಹೆಚ್ಚಾದರೆ, ಲಾಕ್ ಡೌನ್ ವಾಪಸು ಅನಿವಾರ್ಯ ವಾಗಬಹುದು” ಎಂದು ಎಚ್ಚರಿಸಿದರು.
ಸರಕಾರದ ಈ ನಿರ್ಧಾರ ತಜ್ಞರ ಶಿಫಾರಸಿಗೆ ಅನುಗುಣವಾಗಿದೆ ಎಂದ ಸಚಿವರು, ” ಪೊಲೀಸರು ನೈಟ್ ಕರ್ಫ್ಯೂ ಹೇರಿಕೆಯನ್ನು ಕಟ್ಟು ನಿಟ್ಟಾಗಿ ಜಾರಿಗೊಳಿಸುತ್ತಾರೆ” ಸಾರ್ವಜನಿಕರು ಸಹಕರಿಸಬೇಕು ಎಂದು ವಿನಂತಿಸಿದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವರು, ” ವೀಕೆಂಡ್ ಕರ್ಫ್ಯೂ ರದ್ದುಪಡಿಸುವ ನಿರ್ಧಾರ ಒಕ್ಕೊರಲಿನದಾಗಿತ್ತು” ಎಂದು ಅವರು ಸ್ಪಷ್ಟಪಡಿಸಿದರು.