ಸಚಿವ ಎಂಟಿಬಿ ನಾಗರಾಜ್ ಜತೆ ಭೇಟಿ
ಗೌರಿಬಿದನೂರು: ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ಅವರು ಸೋಮವಾರ ಸಮೀಪದ ಮುದಗಾನುಕುಂಟೆಗೆ ಭೇಟಿ ನೀಡಿ ಗಂಗಾ ಪೂಜೆ ನೆರೆವೇರಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ್ ಅವರೊಂದಿಗೆ ಕ್ಷೇತ್ರಕ್ಕೆ ಆಗಮಿಸಿದ ಅವರು, ಗೌರಿಬಿದನೂರು ತಾಲ್ಲೂಕಿನ ಮುದಗಾನುಕುಂಟೆ ಗ್ರಾಮದ ಪುರಾಣ ಪ್ರಸಿದ್ಧ ಗಂಗಾ ಭಾಗೀರಥಿ ದೇವಸ್ಥಾನದಲ್ಲಿ ಪಾದುಕೆಗಳಿಗೆ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು; ಈ ಪುಣ್ಯಕ್ಷೇತ್ರಕ್ಕೆ ಭೇಟಿ ಗಂಗಾ ಮಾತೆಗೆ ಪೂಜೆ ಸಲ್ಲಿಸುವಂತಾಗಿದ್ದು ನನ್ನ ಪೂರ್ವಜನ್ಮದ ಸುಕೃತ. ಈ ಪರಿಸರವನ್ನು ಕಂಡು ನನಗೆ ಬಹಳ ಸಂತೋಷ ಉಂಟಾಗಿದೆ ಎಂದರು.
ಈ ಸಂದರ್ಭದಲ್ಲಿ ಅವರು, ‘ಗೌರಿಬಿದನೂರು ಸೇವಾ ಪ್ರತಿಷ್ಠಾನ’ವು ಹೂಳು ತೆಗೆದ ನಂತರ ಇತ್ತೀಚೆಗೆ ತುಂಬಿರುವ ಕೆರೆಯನ್ನು ವೀಕ್ಷಿಸಿದರು. ಜತೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಟಿ.ಬಿ.ನಾಗರಾಜ್ ಮತ್ತಿತರರು ಇದ್ದರು.