ಸರಕಾರದಿಂದ ನೇಮಕ ಆದೇಶ
by GS Bharath Gudibande
ಗುಡಿಬಂಡೆ: ಪಟ್ಟಣ ಪಂಚಾಯಿತಿಗೆ ಸರಕಾರ ನಾಮನಿರ್ದೇಶನ ಸದಸ್ಯರನ್ನು ಆಯ್ಕೆ ಮಾಡಿ ಆದೇಶ ಹೋರಡಿಸಿದೆ.
ಕರ್ನಾಟಕ ಪೌರಸಭೆ ಕಾಯ್ದೆ1964 ರ ಪ್ರಕರಣ 352 (1) (ಬಿ) ರಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ತಕ್ಷಣದಿಂದ ಜಾರಿಗೆ ಬರುವಂತೆ ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ಪಟ್ಟಣ ಪಂಚಾಯಿತಿಗೆ ಮೂವರನ್ನು ಸರಕಾರವು ನಾಮನಿರ್ದೇಶನ ಮಾಡಿ ಆದೇಶ ಹೊರಡಿಸಿದೆ.
ಮಂಜುನಾಥ್ ನಾಯ್ಡು, ಎಸ್.ಪದ್ಮಾವತಿ ಹಾಗೂ ಸಿ.ಆರ್.ಮಂಜುನಾಥ್ ನಾಮನಿರ್ದೇಶನಗೊಂಡ ಸದಸ್ಯರು.
1) ಮಂಜುನಾಥ ನಾಯ್ಡು
10ನೇ ವಾರ್ಡ್ ಬಾಪೂಜಿ ನಗರ
2) ಪದ್ಮಾವತಿ,
10ನೇ ವಾರ್ಡ್ ಬಾಪೂಜಿ ನಗರ
3) ಸಿ.ಆರ್.ಮಂಜುನಾಥ್
3ನೇ ವಾರ್ಡ್ ಗುಡಿಬಂಡೆ