ಗುಡಿಬಂಡೆ ತಾಲೂಕು ವಿದ್ಯಾರ್ಥಿಗಳಿಗೆ ಅನುಕೂಲ
by GS Bharath Gudibande
ಗುಡಿಬಂಡೆ: sslc ಪರೀಕ್ಷೆಗೆ ಸಂಬಂಧಿಸಿದಂತೆ ಪೋಷಕರು ಹಾಗೂ ವಿದ್ಯಾರ್ಥಿಗಳಿಗೆ ಇರುವ ಸಂದೇಹ, ವಿಷಯದ ಕ್ಲಿಷ್ಟಾಂಶ, ಓಎಂಆರ್ʼನಲ್ಲಿ ಉತ್ತರಿಸುವ ವಿಧಾನ ಹಾಗೂ ಪರೀಕ್ಷಾ ಕೇಂದ್ರಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವ ಕುರಿತು ಬುಧವಾರ (ಮಾರ್ಚ್ 16) ದಂದು ಫೋನ್ ಇನ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಈ ವಿಷಯವನ್ನು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಸಿದ್ದಪ್ಪ ಅವರು ತಿಳಿಸಿದ್ದಾರೆ.
ಜೀವನದ ದಿಕ್ಕನ್ನು ಬದಲಾಯಿಸುವ sslc ಪರೀಕ್ಷೆಯ ಬಗ್ಗೆ ವಿದ್ಯಾರ್ಥಿಗಳಿಗೆ ಕೆಲವೊಂದು ಗೊಂದಲಗಳಿರಬಹುದು. ಅವುಗಳನ್ನು ಬಗೆಹರಿಸಲು ಪರೀಕ್ಷಾ ವಿಷಯದ ಬಗ್ಗೆ ಉತ್ತಮ ಜ್ಞಾನವನ್ನು ಹೊಂದಿರುವ ಶಿಕ್ಷಕರನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಸೇರಿಸಿ ಫೋನ್ ಕರೆಗಳ ಮೂಲಕ ಬಗೆಹರಿಸುವ ಒಂದು ವಿಭಿನ್ನ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ನುರಿತ ಶಿಕ್ಷಕರು
ವಿದ್ಯಾರ್ಥಿಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ಪ್ರತಿಯೊಂದು ವಿಷಯದ ಶಿಕ್ಷಕರ ಜತೆಗೆ ನೋಡೆಲ್ ಅಧಿಕಾರಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಉಪಸ್ಥಿತಿಯಲ್ಲಿ ಫೋನ್ ಇನ್ ಮೂಲಕ ವಿದ್ಯಾರ್ಥಿಗಳು ಸಂದೇಹಗಳನ್ನು ಪರಿಹರಿಸಲಾಗುವುದು.
ಮಾರ್ಚ್ ಅಥವಾ ಏಪ್ರಿಲ್ ತಿಂಗಳಲ್ಲಿ ನಡೆಯುವ sslc ಪರೀಕ್ಷೆಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ಹಾಗೂ ಪೋಷಕರು ತಮ್ಮ ಸಂದೇಹಗಳನ್ನು ಬಗೆಹರಿಸಲು ನೇರವಾಗಿ ಶಿಕ್ಷಕರನ್ನು ಸಂಪರ್ಕಿಸಬಹುದು.
ಈ ಕೆಳಗಿನ ಮೊಬೈಲ್ ಸಂಖ್ಯೆಗಳಿಗೆ ವಿದ್ಯಾರ್ಥಿಗಳು ಕರೆ ಮಾಡಬಹುದು.
- ಕ್ಷೇತ್ರ ಶಿಕ್ಷಣಾಧಿಕಾರಿ: 9480695120
- ಜಿ.ವಿ.ಚಂದ್ರಶೇಖರ್, ನೋಡಲ್ ಅಧಿಕಾರಿ: 9481585810
- ಕನ್ನಡ / ದೇವೇಂದ್ರ ಜಂಬರ ಖಾನಿ: 9901991187
- ಇಂಗ್ಲಿಷ್ / ಕೆ.ಎಂ.ಚಂದ್ರಶೇಖರ್: 9482895531
- ಹಿಂದಿ / ನಿರ್ಮಲ: 8880852223
- ಗಣಿತ / ಬಿ.ಎಸ್.ಶ್ರೀನಿವಾಸ್: 8762870983
- ವಿಜ್ಞಾನ / ರಾಜಾನಾಯಕ್: 9449709402
- ಸಮಾಜ ವಿಜ್ಞಾನ / ರಬ್ಬಾನಿ: 9141442462
ಕೆಲ ದಿನಗಳಲ್ಲಿ sslc ಪರೀಕ್ಷೆ ಆರಂಭವಾಗುತ್ತಿದೆ. ಪರೀಕ್ಷೆಯ ಬಗ್ಗೆ ಕೆಲವೊಂದು ಪ್ರಶ್ನೆಗಳು ಹಾಗೂ ಸಂದೇಹಗಳನ್ನು ನಿವಾರಿಸಿಕೊಳ್ಳಲು ಮಕ್ಕಳಿಗಾಗಿ ಫೋನ್ ಇನ್ ಕಾರ್ಯಕ್ರಮ ಒಂದು ಉತ್ತಮ ವೇದಿಕೆ ಎಂದು ವಿದ್ಯಾರ್ಥಿಗಳ ಪೋಷಕರು ಸಂತಸ ವ್ಯಕ್ತಪಡಿಸಿದ್ದಾರೆ. ತಾಲೂಕು ಮಟ್ಟದಲ್ಲಿ ಶಿಕ್ಷಣ ಇಲಾಖೆ ಉತ್ತಮ ಕೆಲಸ ಮಾಡುತ್ತಿದೆ. ಈ ಮೂಲಕ ಗ್ರಾಮೀಣ ವಿದ್ಯಾರ್ಥಿಗಳ ಸ್ಥೈರ್ಯ ಹೆಚ್ಚುವಂತೆ ಮಾಡುತ್ತಿದೆ. ಕ್ಷೇತ್ರ ಶಿಕ್ಷಣಾಧಿಕಾರಿಗಳ ಉಪಕ್ರಮ ಉಪಯುಕ್ತವಾಗಿದೆ ಎಂದು ಪೋಷಕರು ಹೇಳಿದ್ದಾರೆ.
ಕಡಿಮೆ ಅವಧಿಯಲ್ಲಿ ಎಲ್ಲಾ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಬಗೆಹರಿಸಲು ಕೊರೋನಾ ಸಂದರ್ಭದಲ್ಲಿ ಕಷ್ಟ. ಹಾಗಾಗಿ. ನಮ್ಮ ಮೇಲಿನ ಅಧಿಕಾರಿಗಳ ಆದೇಶದಂತೆ ತಾಲೂಕು ಸಂಪನ್ಮೂಲ ಶಿಕ್ಷಕರಿಂದ ಜುಲೈ 16ರಂದು ಬೆಳಗ್ಗೆ 11ರಿಂದ ಮಧ್ಯಾಹ್ನ 1 ರವರಗೆ ಫೋನ್ ಇನ್ ಮೂಲಕ ವಿದ್ಯಾರ್ಥಿಗಳು ಮತ್ತು ಪೋಷಕರ ಪ್ರಶ್ನೆಗಳು, ಸಂದೇಹಗಳನ್ನು ನಿವಾರಿಸುವ ಪ್ರಯತ್ನ ಮಾಡುತ್ತಿದ್ದೇವೆ.
ಜಿ.ವಿ ಚಂದ್ರಶೇಖರ್, ನೋಡೆಲ್ ಅಧಿಕಾರಿ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಗುಡಿಬಂಡೆ