ವಿದ್ಯಾರ್ಥಿಗಳ ಲೇಖನ ಸಾಮಗ್ರಿಗಳ ಬೆಲೆ ದುಬಾರಿ; ಪೆನ್, ಪೆನ್ಸಿಲ್, ನೋಟ್ ಬುಕ್ ತುಟ್ಟಿ
by GS Bharath Gudibande
ಬೆಂಗಳೂರು: ರಷ್ಯಾ-ಉಕ್ರೇನ್ ಯುದ್ಧ ಕಾರಣದಿಂದ ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲ ಸೇರಿದಂತೆ ಗೃಹಬಳಕೆ ವಸ್ತುಗಳ ಬೆಲೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ.
ಹದಿನಾಲ್ಕನೇ ಸಲ, ಅಂದರೆ ಬುಧವಾರವೂ ತೈಲ ಬೆಲೆ ಏರಿಕೆಯಾಗಿದೆ. ಇದು ಹೀಗಿದ್ದರೆ; ವಿದ್ಯಾರ್ಥಿಗಳಿಗೂ ಬೆಲೆ ಏರಿಕೆ ಬಿಸಿ ತಟ್ಟಲಾರಂಭಿಸಿದೆ. ಪರೀಕ್ಷೆಗಳ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಬೆಲೆ ಏರಿಕೆ ಬಿಸಿ ತೀವ್ರವಾಗಿ ತಟ್ಟಿತ್ತಿದ್ದು, ಅವರು ಬಳಕೆ ಮಾಡುವ ಲೇಖನ ಸಾಮಗ್ರಿಗಳ ಬೆಲೆ ಗಗನಮುಖಿಯಾಗಿದೆ.
ಪುಸ್ತಕ, ಬ್ಲೂ ಬುಕ್, ನೋಟ್ಸ್, ಪೆನ್ನು, ಪೆನ್ಸಿಲ್, ಪೇಪರ್ ಸೇರಿದಂತೆ ಲೇಖನ ಸಾಮಗ್ರಿಗಳ ಬೆಲೆ ಶೇ.5ರಿಂದ ಶೇ.10ರಷ್ಟು ಹೆಚ್ಚಾಗಿದೆ. ಅಂಗಡಿಗಳಿಗೆ ಹೋದರೆ ಮಾರಾಟಗಾರರು ಹೇಳಿದ್ದೇ ರೇಟು ಎನ್ನುವಂತೆ ಆಗಿದೆ. ಇದರಿಂದಾಗಿ ಪರೀಕ್ಷೆ ಸಮಯದಲ್ಲಿ ಬಡ ವಿದ್ಯಾರ್ಥಿಗಳು ತೀವ್ರ ತೊಂದರೆಗೆ ಒಳಗಾಗಿದ್ದಾರೆ.
ಈ ಮೊದಲು 5 ರೂ.ಗೆ ದೊರೆಯುತ್ತಿದ್ದ ಬಾಲ್ ಪೆನ್ ಬೆಲೆ ಈಗ 7ರಿಂದ 8 ರೂ. ಆಗಿದೆ. ಒಂದು ರಿಮ್ ಎ4 ಬಿಳಿ ಕಾಗದದ ಶೀಟ್ ಬೆಲೆ 200 ರಿಂದ 300 ರೂ. ವರೆಗೂ ಏರಿಕೆಯಾಗಿದೆ. ಹೀಗಾಗಿ ಹಾಸ್ಟೆಲ್‌ನಲ್ಲಿರುವ ಬಡ ವಿದ್ಯಾರ್ಥಿಗಳು ಅತಂತ್ರ ಸ್ಥಿತಿಯಲ್ಲಿದ್ದಾರೆ.
ಈ ಮೊದಲು ಅರ್ಧ ವಾರ್ಷಿಕ ಪರೀಕ್ಷೆ ಸಮಯದಿಂದಲೇ ನೋಟ್ ಬುಕ್, ಪೆನ್‌ಗಳನ್ನು ವಿತರಣೆ ಮಾಡುತ್ತಿದ್ದ ಸಂಘ-ಸಂಸ್ಥೆಗಳು ದಾನಿಗಳಿಂದಲ್ಲೂ ಕೊಡುಗೆ ನೀಡಲು ಹಿಂದೇಟು ಹಾಕುತ್ತಿದ್ದಾರೆ
ಯಾವುದಕ್ಕೆ ಎಷ್ಟೆಷ್ಟು ಏರಿಕೆ?
- ಬಾಲ್ ಪೆನ್ – 5ರಿಂದ 7 ರೂ.
- 1 ರಿಮ್ ಎ4 ಶೀಟ್ – 200 ರಿಂದ 300 ರೂ
- ನೋಟ್‌ಬುಕ್’ – 2 ರಿಂದ 3 5.
- ಎಕ್ಸಾಂ ಪ್ಯಾಡ್ – 20 ರೂ. ಗೆ ಏರಿಕೆ
- 6 ಕ್ಯಾಲುಕಲೇಟರ್ – 20 ರಿಂದ ದರ 500
- ಈಗ ಪೆನ್ ಪೆನ್ಸಿಲ್ – 5 ರೂ. ಏರಿಕೆ
- ಬ್ಲೂಬುಕ್ – 2ರಿಂದ 3 ರೂ.
- ರೆರ್ಕಾಡ್ ಬುಕ್ – 5ರಿಂದ 7 ರೂ
ಬೆಲೆ ಏರಿಕೆಯಿಂದಾಗಿ ವಿದ್ಯಾರ್ಥಿಗಳಿಗೆ ಈ ವರ್ಷವು ದಾನಿಗಳ ಸಂಖ್ಯೆ ತೀರ ವಿರಳವಾಗಿದೆ. ಒಂದೆಡೆ ಬೆಲೆ ಏರಿಕೆ, ಮತ್ತೊಂದೆಡೆ ಪರೀಕ್ಷೆ ಟೆನ್ನನ್‌ನಿಂದಾಗಿ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ.
ಪರೀಕ್ಷೆಗೆ ಕನಿಷ್ಠ 4 ಪೆನ್ʼಳಾದರೂ ಬೇಕು, ಈಗೆಲ್ಲವೂ ದುಬಾರಿಯಾಗಿವೆ. ನಾವೇ ಪಾರ್ಟ್ ಟೈಂ ಕೆಲಸ ಮಾಡಿಕೊಂಡು ಓದಬೇಕು. 4 ಪೆನ್ ಬರುತ್ತಿದ್ದ ಹಣಕ್ಕೆ ಈಗ 2 ಪೆನ್ ಬಂದರೆ ಹೆಚ್ಚು ಎನ್ನುವಂತಾಗಿದೆ. ಬೆಲೆ ಏರಿಕೆಯಾದರೂ ಲೇಖನ ಸಾಮಗಳನ್ನು ಖರೀದಿಸುವ ಶಕ್ತಿ ಇದ್ದಿದ್ದರೆ, ನಾವೇಕೆ ಸರಕಾರಿ ಕಾಲೇಜುಗಳಲ್ಲಿ ಓದಬೇಕಿತ್ತು ಎನ್ನುತ್ತಾರೆ ವಿದ್ಯಾರ್ಥಿಗಳು.
ನಾವೆಲ್ಲ ಬಡ ಮಕ್ಕಳು. ಏಕಾಏಕಿ ದರ ಏರಿಕೆಯಾದರೆ ಯಾವ ಪುಸ್ತಕ, ಲೇಖನ ಸಾಮಗ್ರಿಗಳನ್ನು ಖರೀದಿ ಮಾಡಲು ಸಾಧ್ಯ? ಪೆನ್, ಪೆನ್ಸಿಲ್ ಬೆಲೆ ಸಹ ಹೆಚ್ಚಾಗಿದೆ. ಶಿಕ್ಷಣವನ್ನು ಉಚಿತವಾಗಿ ನೀಡಬೇಕಿದ್ದ ಸರಕಾರ, ನಮ್ಮಗಳ ಮೇಲೂ ಬೆಲೆ ಏರಿಕೆ ಅಸ್ತ್ರ ಪ್ರಯೋಗಿಸುತ್ತಿದೆ.
ಹರ್ಷ, ವಿದ್ಯಾರ್ಥಿ.