ಆಶಾ ಕಾರ್ಯಕರ್ತೆರಿಗೆ ಆಹಾರ ಕಿಟ್ ವಿತರಣೆ
ಗುಡಿಬಂಡೆ: ಆಹಾರ ಕಿಟ್ ವಿತರಣೆ, ಅನ್ನದಾನ, ಹಣ್ಣುಹಂಪಲು ಹಂಚಿಕೆ, ದೇವಸ್ಥಾನಗಳಲ್ಲಿ ಪೂಜೆ ಸೇರಿದಂತೆ ವಿವಿಧ ಕಾರ್ಯಕ್ರಮಗಳ ಮೂಲಕ ಅಭಿಮಾನಿಗಳು ಬಂಧುವಾರದಂದು ಗುಡಿಬಂಡೆಯಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅವರ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
ತಾಲೂಕಿನ ಬೀಚಗಾನಹಳ್ಳಿ ಗ್ರಾಮ ಪಂಚಾಯತಿಯ ಆವರಣದಲ್ಲಿ ಶಾಸಕರ ಹುಟ್ಟುಹಬ್ಬದ ಪ್ರಯುಕ್ತ ಆಶಾ ಕಾರ್ಯಕರ್ತೆಯರಿಗೆ ಆಹಾರ ಕಿಟ್ʼಗಳನ್ನು ವಿತರಿಸಲಾಯಿತು. ಈ ಕಾರ್ಯಕ್ರಮದ ನೇತೃತ್ವವನ್ನು ಗ್ರಾಮ ಪಂಚಾಯತಿ ಸದಸ್ಯ ಬಾಲೇನಹಳ್ಳಿ ರಮೇಶ್ ವಹಿಸಿದ್ದರು.
ಸುಬ್ಬಾರೆಡ್ಡಿ ಅವರು ಬಾಗೇಪಲ್ಲಿ, ಗುಡಿಬಂಡೆ ತಾಲೂಕುಗಳಲ್ಲಿ ದಶಕಗಳಿಂದ ದೀನ ದಲಿತರಿಗೆ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರಿಗೆ ಕಳೆದ 15 ವರ್ಷಗಳಿಂದ ಸಮಾಜ ಸೇವೆ ಮಾಡುತ್ತಿದ್ದಾರೆ. ಸದಾ ಬಡಪರ ಕಾಳಜಿ ವಹಿಸಿರುವ ಶಾಸಕರು, ಇನ್ನಷ್ಟು ಸಮಾಜ ಸೇವೆ ಮಾಡಿ ಜನರಿಗೆ ಒಳ್ಳೆಯದು ಮಾಡಲಿ ಎಂದು ಬಾಲೇನಹಳ್ಳಿ ರಮೇಶ್ ಶುಭ ಕೋರಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಪ್ರಕಾಶ್ ಮಾತನಾಡಿ, ಬಾಗೇಪಲ್ಲಿ ಕ್ಷೇತ್ರದಲ್ಲಿ ಶಾಸಕರು ಬಡಜನರಿಗೆ ವಿದ್ಯಾಭ್ಯಾಸ, ಆರೋಗ್ಯ, ಸಾಮೂಹಿಕ ವಿವಾಹದಂಥ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ನಿರಂತರವಾಗಿ ಜನರ ಸೇವೆ ಮಾಡುತ್ತಿದ್ದಾರೆ ಎಂದರು.
ಈ ಕಾರ್ಯಕ್ರಮದಲ್ಲಿ ಗ್ರಾ.ಪಂ. ಅಧ್ಯಕ್ಷ ವೆಂಕಟ ನರಸಪ್ಪ, ಉಪಾಧ್ಯಕ್ಷ ರಮೇಶ್, ರಘುನಾಥ ರೆಡ್ಡಿ, ಪಿ.ಎಲ್.ಡಿ.ಬ್ಯಾಂಕ್ ಮಾಜಿ ಅಧ್ಯಕ್ಷ ಪಾವಜೇನಹಳ್ಳಿ ನಾಗರಾಜ್ , ಪಿ.ಎಲ್.ಡಿ ಬ್ಯಾಂಕ್ ಉಪಾಧ್ಯಕ್ಷ ಹಾಗೂ ಹಂಪಸಂದ್ರ ಗ್ರಾ.ಪಂ.ಸದಸ್ಯ ಪ್ರಕಾಶ್, ಗ್ರಾ.ಪಂ.ಸದಸ್ಯೆ ವಾಣಿ ಶ್ರೀನಿವಾಸ್, ರಮೇಶ್, ಮುಖಂಡರಾದ ಬಿ.ವೆಂಕಟರಮಣಪ್ಪ, ಬಾಬುರೆಡ್ಡಿ, ಜಿವಿಕ ಜಿಲ್ಲಾ ಸಂಘಟನಾಕಾರ ನಾರಾಯಣಸ್ವಾಮಿ, ಬಲರಾಮಣ್ಣ, ರೈತಸಂಘದ ನಂದೀಶ್, ಚಿಕ್ಕಕುರುಬರಹಳ್ಳಿ ಗ್ರಾ.ಪಂ.ಸದಸ್ಯ ಶ್ರೀನಿವಾಸ್ ಸೇರಿ ಗ್ರಾ.ಪಂ. ಸದಸ್ಯರು, ಅಂಗನವಾಡಿ, ಆಸ್ಪತ್ರೆ, ಆಶಾಕಾರ್ಯಕರ್ತೆಯರು, ಗ್ರಾ.ಪಂ.ಸಿಬ್ಬಂದಿ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.
ಚುನಾವಣೆ ಸಂದರ್ಭದಲ್ಲಿ ಕ್ಷೇತ್ರಕ್ಕೆ ಢೋಂಗಿ ರಾಜಕಾರಣಿಗಳು ಎಂಟ್ರಿ ಕೊಡುತ್ತಾರೆ. ಈ ಬಗ್ಗೆ ಎಚ್ಚರ ಇರಲಿ. ಯಾಕೆಂದರೆ, ಅವರು ನಿಮ್ಮನ್ನು ಮೋಸ ಮಾಡಿ ಕಾಣೆಯಾಗುತ್ತಾರೆ.
ಬಾಲಕೃಷ್ಣ ರೆಡ್ಡಿ, ಅಧ್ಯಕ್ಷರು, ಹಾಲು ಉತ್ಪಾದಕರ ಸಂಘ ಗುಡಿಬಂಡೆ
ನಮ್ಮ ಶಾಸಕರ ಅಭಿವೃದ್ಧಿ ಕೆಲಸವನ್ನು ಗಮನಿಸಿ, ಅವರನ್ನು ಬೆಂಬಲಿಸಿ ಎನ್ನುವುದು ನನ್ನ ಮನವಿ.
ಶಾಸಕರ ಹುಟ್ಟುಹಬ್ಬದ ಪ್ರಯುಕ್ತ ಬಾಗೇಪಲ್ಲಿ, ಗುಡಿಬಂಡೆಯಲ್ಲಿ ಹಲವು ಕಾರ್ಯಕ್ರಮಗಳನ್ನು ಸ್ವಯಂ ಪ್ರೇರಿತರಾಗಿ ಜನರು ಹಮ್ಮಿಕೊಂಡಿದ್ದರು. ಕ್ಷೇತ್ರದಲ್ಲಿ ಶಾಸಕರು ಪ್ರತಿದಿನವೂ ಓಡಾಡುತ್ತಾರೆ, ಎಲ್ಲರ ಕಷ್ಟ-ಸುಖವನ್ನು ವಿಚಾರಿಸುತ್ತಾರೆ. ವೈದ್ಯ ಚಿಕಿತ್ಸೆ, ಶಿಕ್ಷಣ ಸೇರಿದಂತೆ ಅನೇಕ ರೀತಿಯಲ್ಲಿ ಜನರಿಗೆ ಸಹಾಯ ಮಾಡುತ್ತಾರೆ. ಶಾಸಕರಿಗೆ ದೇವರು ಇನ್ನಷ್ಟು ಸಮಾಜ ಸೇವೆ ಮಾಡುವ ಶಕ್ತಿ, ಆರೋಗ್ಯ ನೀಡಲಿ.
ಜಿ.ಎನ್.ನವೀನ್, ಅಧ್ಯಕ್ಷ, ಕೆಪಿಸಿಸಿ ಸಾಮಾಜಿಕ ಜಾಲಾತಾಣ ವಿಭಾಗ, ಗುಡಿಬಂಡೆ
10 ವರ್ಷ ದಿಂದ ನಮ್ಮ ತಾಲ್ಲೂಕು ಗೆ ಇವರೇ ಶಾಸಕರು ಆದರೆ ಏನು ಪ್ರಯೋಜ ಇವರಿಂದ ತಾಲ್ಲೂಕಿನಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ ಬಾಗೇಪಲ್ಲಿ ಯಿಂದ ಚಿಂತಾಮಣಿ ರೋಡ್ ಎಷ್ಟು ಗುಣಿಗಳು ಬಿದ್ದಿವೆಯೋ ಅದನ್ನು ಸರಿಪಡಿಸಲಿಕ್ಕೆ ಆಗಲಿಲ್ಲ ಮದುವೆ ಸಮಾರಂಭಗಳು ಮತ್ತು ಸೀರೆಗಳನ್ನು ಕೊಟ್ಟು ಓಟುಗಳನ್ನು ಹಾಕಿಸಿಕೊಂಡು ಗೆದ್ದು ನಮ್ಮ ಬಾಗೇಪಲ್ಲಿ ಯಲ್ಲಿ ಏನು ಡಬ್ಬಾಕಿಲ್ಲ ಇವನು ಮತ್ತೆ ಹುಟ್ಟು ಹಬ್ಬ ಒಂದು ಈತನಿಗೆ ಮೊದಲು ತಾಲೂಕಿನಲ್ಲಿ ಜನರ ಜೋತೆಗೆ ಬೇರೆತರೆ ಸಾಕು ಅವರ ಕಷ್ಟಗಳು ಅರ್ಥವಾಗುತ್ತವೆ, ಗೆದ್ದಾಗ ಹೋದವನು ಮತ್ತೆ ಎಲೆಕ್ಷನ್ ಹತ್ತಿರ ಬಂತು ಅಂತಹೇಳಿ ಹುಟ್ಟುಹಬ್ಬ ಹೆಸರಿಟ್ಟು ಕೊಂಡು ಬಂದಿದಾನೆ ಈ ಬಾರಿ ನಿನಗೆ ಓಟು ಹಾಕಲ್ಲ ಬೇರೆಯವರ ಹತ್ತಿರಾನೂ ಹಾಕಿಸಲ್ಲ ಇದೆ ನಿನಗೆ ಕೊನೆ ಆಗಬೇಕು.