ಗಂಭೀರ ಆರೋಪ ಮಾಡಿದ ಅಮೆರಿಕ
ವಾಷಿಂಗ್ಡನ್: ಎರಡು ವರ್ಷಗಳ ಹಿಂದೆ ಶುಕ್ರವೇ ನನ್ನದು ಎಂದು ವಾದಿಸಿದ್ದ ರಷ್ಯಾ ಸಾಲಿಗೆ ಚೀನಾ ಕೂಡ ಸೇರಲಿದೆಯಾ? ಇಂಥದ್ದೊಂದು ಪ್ರಶ್ನೆ ಈಗ ಉದ್ಭವವಾಗಿದೆ.
ಬಾಹ್ಯಾಕಾಶ ಕ್ಷೇತ್ರದಲ್ಲಿ ಸತತ ವಿಕ್ರಮಗಳನ್ನು ಸಾಧಿಸಿ ಮುನನಡೆಯುತ್ತಿರುವ ಚೀನಾ, ಅಮೆರಿಕ ಹಾಗೂ ಯುರೋಪ್ ಒಕ್ಕೂಟಕ್ಕೆ ಸಡ್ಡು ಹೊಡೆದು ಚಂದ್ರ ಗ್ರಹವನ್ನು ವಶಕ್ಕೆ ತೆಗೆದುಕೊಳ್ಳಲು ತಂತ್ರಗಾರಿಕೆ ರೂಪಿಸಿದೆ ಎಂದು ಅಮೆರಿಕದ ನಾಸಾ ಆರೋಪ ಮಾಡಿದೆ.
ಈ ಬಗ್ಗೆ ಹೇಳಿಕೆ ನೀಡಿರುವ ನಾಸಾದ ಆಡಳಿತಾಧಿಕಾರಿ ಹಾಗೂ ಬಾಹ್ಯಾಕಾಶ ವಿಜ್ಞಾನಿ ಬಿಲ್ ನೆಲ್ಸನ್ ಅವರು ಚೀನಾದ ಪ್ರಯತ್ನಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಭೂಮಿಯ ಮೇಲೆ ನೆರೆ ರಾಷ್ಟ್ರಗಳ ಮೇಲೆ ಆಕ್ರಮಣಕಾರಿ ನೀತಿ ಅನುಸರಿಸುವ ಚೀನಾ ಇದೀಗ ಅಮೆರಿಕಕ್ಕೆ ಸಡ್ಡು ಹೊಡೆದು ಚಂದ್ರನನ್ನೇ ಆಕ್ರಮಿಸಿಕೊಳ್ಳವ ಪ್ರಯತ್ನವನ್ನು ಮಾಡುತ್ತಿದೆ. ಇದನ್ನು ಇಡೀ ಜಗತ್ತು ಗಂಭೀರವಾಗಿ ಪರಿಗಣಿಸಬೇಕು ಎಂದು ಅವರು ಎಚ್ಚರಿಸಿದ್ದಾರೆ.
ಬಾಹ್ಯಾಕಾಶ ಕುರಿತು ಏರ್ಪಟ್ಟಿರುವ 1967ರ ಅಂತಾರಾಷ್ಟ್ರೀಯ ಒಪ್ಪಂದದ ಪ್ರಕಾರ ಚಂದ್ರ ಸೇರಿದಂತೆ ಆಕಾಶಕಾಯಗಳ ಮೇಲೆ ಯಾವುದೇ ದೇಶಕ್ಕೆ ಹಕ್ಕು ಸಾಧಿಸಲು ಬರುವುದಿಲ್ಲ. ಈ ಒಪ್ಪಂದಕ್ಕೆ ಚೀನ ಸೇರಿ ಜಗತ್ತಿನ 134 ದೇಶಗಳು ಸಹಿ ಹಾಕಿವೆ. ಈ ಒಪ್ಪಂದದ ಪ್ರಕಾರ ಚಂದ್ರನ ಮೇಲೆ ಹಕ್ಕು ಸಾಧಿಸಲು ಚೀನಕ್ಕೆ ಆಗುವುದಿಲ್ಲ.
ಭಾರತವು ಮಿಷನ್ ಚಂದ್ರಯಾನ್ʼಗೆ ಹೆಚ್ಚು ಮಹತ್ವ ನೀಡುತ್ತಿರುವ ಹಿನ್ನೆಲೆಯಲ್ಲಿ ಚೀನ ಕೂಡ ಚಂದ್ರನ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸಿದೆ. ಅಮೆರಿಕ ಕೂಡ ಹಿಂದೆ ಬಿದ್ದಿಲ್ಲ. ಸುಮಾರು 3.9 ಕೋಟಿ ಚದರ ಕಿಲೋಮೀಟರ್‌ಗಳಷ್ಟು ವಿಸ್ತೀರ್ಣವುಳ್ಳ ಚಂದ್ರನ ಮೇಲ್ಮೈಯನ್ನು ಚೀನ ಒಂದೇ ನಿಯಂತ್ರಣಕ್ಕೆ ತೆಗೆದುಕೊಳ್ಳುವುದು ಕಷ್ಟ ಎನ್ನುತ್ತಾರೆ ನಾಸಾ ವಿಜ್ಞಾನಿಗಳು.
ಇದು ಗೊತ್ತಿದ್ದರೂ ಚೀನ ಹವಣಿಕೆ ನಿಂತಿಲ್ಲ.ಕೆಲ ಪ್ರಮುಖ ಪ್ರದೇಶಗಳ ಮೇಲೆ ಅನಧಿಕೃತ ನಿಯಂತ್ರಣ ಸಾಧಿಸಬಹುದು ಚೀನ ಎಂಬ ಅಂದಾಜು ನಾಸಾಕ್ಕಿದೆ.