ಬಿಇಒ ಟು ಮಿನಿಸ್ಟರ್ ವರೆಗೆ ಹಣ ಕೊಡಬೇಕು: ಶಿಕ್ಷಣ ಸಂಸ್ಥೆಗಳ ಆರೋಪ
ಬೆಂಗಳೂರು: ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಹೊಸ ಹೊಸ ಸಮಸ್ಯೆ ಹುಟ್ಟು ಹಾಕುವ ಮೂಲಕ ಲಂಚ ಪಡೆದು ಭ್ರಷ್ಟಾಚಾರ ಮಾಡಲಾಗುತ್ತಿದೆ ಎಂದು ರುಪ್ಸಾ ಸಂಘಟನೆ ರಾಜ್ಯಾಧ್ಯಕ್ಷ ಲೋಕೇಶ್ ತಾಳಿಕಟ್ಟೆ ಗಂಭೀರ ಆರೋಪ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಇಒ, ಡಿಡಿಪಿಐ ಸೇರಿದಂತೆ ಇತರೆ ಅಧಿಕಾರಗಳಿಗೂ ಪರ್ಸಂಟೇಜ್ ಕೊಡಬೇಕಿದೆ ಎಂದು ದೂರಿದರು.
ನಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗುತ್ತಿಲ್ಲ. ಹಣ ಮಾಡಲು ಹೊಸ ಹೊಸ ವಿಧಾನಗಳನ್ನು ಅಳವಡಿಕೆ ಮಾಡುತ್ತಾರೆ. ಹೀಗಾಗಿ ಪ್ರದಾನಮಂತ್ರಿಗಳಿಗೆ ಪತ್ರ ಬರೆಯಬೇಕೆಂದು ತೀರ್ಮಾನಿಸಿದ್ದೇವೆ ಎಂದು ತಿಳಿಸಿದರು.
ಪ್ರತಿ ವರ್ಷ ಮಾನ್ಯತೆ ನವೀಕರಣ ಸಚಿವರ ನೇತೃತ್ವದಲ್ಲಿ ನಡೆಯುತ್ತಿದೆ. ಇಲಾಖೆಯಿಂದ ಪ್ರತಿ ವರ್ಷ ಹಣ ಇಲ್ಲದೆ ಮಾನ್ಯತೆ ನವೀಕರಣ ಮಾಡುವುದಿಲ್ಲ,ಇದಕ್ಕೆ ಸಂಬಂಧಿಸಿದ ಆಡಿಯೋ ಹಾಗೂ ಡ್ಯಾಕ್ಯುಮೆಂಟ್ಸ್ ಇದೆ ಎಂದು ಲೋಕೇಶ್ ತಿಳಿಸಿದರು.
ಲಂಚ ಪಡೆಬೇಕು ಅಂತ ಹೊಸ ಮಾರ್ಗ ಅನುಸರಿಸುತ್ತಾರೆ. ಅಗ್ನಿ ಸುರಕ್ಷ ಹೆಸರಲ್ಲಿ ಹಣ ಪೀಕಿಸುತ್ತಿದ್ದಾರೆ. ಇದರಿಂದ ಶಾಲೆಗಳಿಗೆ ಸಮಸ್ಯೆಯಾಗುತ್ತಿದೆ. ಆರ್ ಟಿ ಇ ಶುಲ್ಕ ವಾಪಸ್ ಪಡೆಯಲು ಶೇ.50ರಷ್ಟು ಲಂಚ ಕೊಡಬೇಕು, ಹೀಗಾಗಿ ಹಣ ಕೊಡೋದೆ ಬೇಡ ಅಂತ ಡಿಸೈಡ್ ಮಾಡಿದ್ದೇವೆ ಎಂದು ತಿಳಿಸಿದರು.
ಅಗ್ನಿ ಸುರಕ್ಷತೆಗೆ ಅನ್ ಲೈನ್ ವ್ಯವಸ್ಥೆ ಮಾಡಿ ಅಂತ ಮನವಿ ಮಾಡಿದ್ದೇವೆ. ಆದರೆ ಈವರೆಗೆ ಯಾವುದೇ ಕ್ರಮ ಆಗಿಲ್ಲ. NOC ಪಡೆಯಲು ಪ್ರತಿ ಟೇಬಲ್ ಮೂವ್ ಆಗುತ್ತೆ, BEO ಟು ಮಿನಿಸ್ಟರ್ ವರೆಗೆ ಹಣ ಕೊಡಬೇಕು,ಪ್ರತಿ ಟೇಬಲ್ ಗೂ ಹಣ ಕೊಡಬೇಕು ಹೀಗಾದರೆ ಶಾಲೆ ನಡೆಸುವುದು ಬಹಳ ಕಷ್ಟವಾಗುತ್ತದೆ. ಆದ್ದರಿಂದ ಪ್ರಧಾನಿಗೆ ಪತ್ರ ಬರೆಯುತ್ತೇವೆ ಎಂದು ಲೋಕೇಶ್ ತಿಳಿಸಿದರು.