ಕಮ್ಯುನಿಸ್ಟ್ ವ್ಯವಸ್ಥೆ ಪತನಕ್ಕೆ ಕ್ಸಿ ಗೃಹಬಂಧನ ಮುನ್ನುಡಿಯಾ?
ಬೀಜಿಂಗ್: ಕಮ್ಯುನಿಸ್ಟ್ ಮುಖವಾಡ ತೊಟ್ಟು ಇಡೀ ಚೇನಾವನ್ನು ಸರ್ವಾಧಿಕಾರದ ಆಡಳಿತದತ್ತ ಹೊರಳಿಸಿದ್ದ ಅಧ್ಯಕ್ಷ ಕ್ಸಿ ಜಿನ್ʼಪಿಂಗ್ ಬಹುತೇಕ ಪದಚ್ಯುತಿ ಆಗಿರುವ ಸುದ್ದಿಗಳು ಬರುತ್ತಿದ್ದು, ಅವರಿನ್ನೂ ಗೃಹ ಬಂಧನದಲ್ಲಿಯೇ ಇದ್ದಾರೆ ಎಂದು ಜಾಗತಿಕ ಮಾಧ್ಯಮಗಳು ವರದಿ ಮಾಡಿವೆ.
ಚೀನಾದ ಸರಕಾರಿ ಸ್ವಾಮ್ಯದ ಸುದ್ದಿಸಂಸ್ಥೆಗಳಾಗಲಿ ಅಥವಾ ಅಲ್ಲಿನ ಕಮ್ಯುನಿಸ್ಟ್ ಮುಖವಾಣಿ ʼಗ್ಲೋಬಲ್ ಟೈಮ್ಸ್ʼ ಪತ್ರಿಕೆಯಾಗಲಿ, ಈವರೆಗೂ ದೇಶದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಬಗ್ಗೆ ಒಂದು ಅಕ್ಷರರವನ್ನೂ ಭಿತ್ತರಸಿಲ್ಲ. ಆದರೆ, ಚೀನಿಯನ್ನರು ಸಾಮಾಜಿಕ ಜಾಲತಾಣಗಳಲ್ಲಿ ಚೀನಾದ ರಾಜಧಾನಿ ಬೀಜಿಂಗ್ ನಲ್ಲಿ ನಡೆಯುತ್ತಿರುವ ಘಟನೆಗಳು ಹಾಗೂ ಭಾರೀ ಪ್ರಮಾಣದಲ್ಲಿ ಸೇನಾ ತುಕಡಿಗಳನ್ನು ಬೀಜಿಂಗ್ ನಗರದಲ್ಲಿ ನಿಯೋಜನೆ ಮಾಡಲಾಗುತ್ತಿರುವ ದೃಶ್ಯಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಚೀನಾ ಸುದ್ದಿಗಳು ಜಗತ್ತಿಗೆ ಲೀಕ್ ಆಗುತ್ತಿರುವ ಬೆನ್ನಲ್ಲೇ ಅಲ್ಲಿನ ಸೇನೆ, ಬೀಜಿಂಗ್ ನಲ್ಲಿ ಇಂಟರ್ʼನೆಟ್ ಅನ್ನು ಸ್ಥಗಿತಗೊಳಿಸಿದೆ ಎನ್ನುವ ಮಾಹಿತಿ ಬಂದಿದೆ.
ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿಯ ಮಹಾ ದಂಡನಾಯಕನ ಸ್ಥಾನದಿಂದ ಕ್ಸಿಯನ್ನು ಕಿತ್ತೆಸೆದು, ಅವರನ್ನು ಗೃಹ ಬಂಧನದಲ್ಲಿ ಇರಿಸಲಾಗಿದೆ ಎಂದು ಗೊತ್ತಾಗಿದೆ.
ಕೆಲ ದಿನಗಳ ಹಿಂದೆ ನೆರೆಯ ಉಜ್ಬೇಕಿಸ್ಥಾನದಲ್ಲಿ ನಡೆದ ಶಾಂಘೈ ಸಹಕಾರಿ ಸಂಘಟನೆಯ ಶೃಂಗಸಭೆಯಲ್ಲಿ ಭಾಗವಹಿಸಿ ಬೀಜಿಂಗ್ ಗೆ ವಾಪಸಾದ ಕ್ಸಿ ಅವರನ್ನು ಸೆಪ್ಟೆಂಬರ್ ೧೬ರಂದು ವಿಮಾನ ನಿಲ್ದಾಣದಲ್ಲಿಯೇ ವಶಕ್ಕೆ ತೆಗೆದುಕೊಂಡು ಗೃಹ ಬಂಧನದಲ್ಲಿ ಇರಿಸಲಾಗಿದೆ ಎಂದು ಜಾಗತಿಕ ಮಾಧ್ಯಮಗಳಲ್ಲಿ ವರದಿಯಾಗಿದೆ.
ಈವರೆಗೆ ಕ್ಸಿ ಅವರು ತಮ್ಮ ಅಧಿಕಾರವನ್ನು ಚಲಾಯಿಸಿ ತಾವು ಹೊಂದಿದ್ದ ಚೀನಾದ ಅಧ್ಯಕ್ಷ ಹುದ್ದೆ, ಚೀನಾ ಲಿಬರೇಶನ್ ಆರ್ಮಿ ಹಾಗೂ ಚೀನಾ ಕಮ್ಯುನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿ ಹಾಗೂ ಚೀನಾದ ಸರ್ವೋಚ್ಚ ನಾಯಕ (Paramount Leader) ಪದವಿಗಳಲ್ಲಿ ತಮ್ಮ ಜೀವಿತಾವಧಿವರೆಗೂ ಮುಂದುವರೆಯುವ ಹಾಗೆ ಕಾನೂನಾತ್ಮಕ ತಿದ್ದುಪಡಿಗಳನ್ನು ಮಾಡಿಕೊಂಡಿದ್ದರು.
ಅದಾದ ಮೇಲೆ ಸರ್ವಾಧಿಕಾರಿ ರೀತಿಯಲ್ಲಿ ವರ್ತಿಸುತ್ತಿದ್ದ ಜಿನ್ ಪಿಂಗ್, ತಮ್ಮ ಕೆಳಗಿನ ಸೇನಾ ವ್ಯವಸ್ಥೆಯಲ್ಲಿ ಮನಸೋ ಇಚ್ಛೆ ಬದಲಾವಣೆಗಳನ್ನು ಮಾಡಿಕೊಂಡು ತಮಗೆ ಪರಮ ನಿಷ್ಠರಾದವರನ್ನೆ ನೇಮಕ ಮಾಡಿಕೊಳ್ಳುತ್ತಿದ್ದರು ಎನ್ನಲಾಗಿದೆ. ಅದರಲ್ಲೂ ತಮ್ಮ ಆಪ್ತ ಭದ್ರತಾ ಸಿಬ್ಬಂದಿಯನ್ನು ಪದೇ ಪದೆ ಬದಲಾಯಿಸುತ್ತಿದ್ದರು ಎನ್ನಲಾಗಿದೆ.
ಮತ್ತೊಂದು ಕಡೆ ಚೀನಾ ಲಿಬರೇಶನ್ ಆರ್ಮಿಯ ಜನರಲ್ ಲಿ ಕಿಯೋಮಿಂಗ್ ಅವರು ಜಿನ್ ಪಿಂಗ್ ಜಾಗಕ್ಕೆ ಬರಬಹುದು ಎನ್ನುವ ಮಾತು ಕೇಳಿ ಬರುತ್ತಿರುವ ಹೊತ್ತಿನಲ್ಲೇ, ಆ ದೇಶದಲ್ಲಿ ಮಾವೊತ್ಸೇತುಂಗ್ ನಿಂದ ಅನುಷ್ಠಾನಕ್ಕೆ ಬಂದ ಕಮ್ಯೂನಿಸ್ಟ್ ಆಡಳಿತ ಕೊನೆಗೊಳ್ಳುವುದಾ ಎನ್ನುವ ಅನುಮಾನವೂ ದಟ್ಟವಾಗಿದೆ.
1954ರಲ್ಲಿ ಸಂಪೂರ್ಣವಾಗಿ ಕಮ್ಯುನಿಸ್ಟ್ ವ್ಯವಸ್ಥೆಗೆ ಜಾರಿದ ಚೀನಾದಲ್ಲಿ ಈವರೆಗೆ 9 ಅಧ್ಯಕ್ಷರು ಆಗಿದ್ದಾರೆ. ಹಾಗೆಯೇ ಜಿನ್ ಪಿಂಗ್ 6ನೇ ಸರ್ವೋಚ್ಚ ನಾಯಕ. ಹು ಜಿಂಟಾವೊ ಅಧ್ಯಕ್ಷರಾಗಿ ಇರುವ ತನಕ ಮೃದು ಕಮ್ಯುನಿಸ್ಟ್ ನೀತಿ ಅನುಸರಿಸುತ್ತಾ ಮುಕ್ತ ಆರ್ಥಿಕ ಸುಧಾರಣೆಗಳು ಮತ್ತೂ ವೇಗವಾಗಿ ತೆರೆದುಕೊಂಡ ಚೀನಾ, ಅದೇ ಜಿನ್ ಪಿಂಗ್ ಅಧಿಕಾರಕ್ಕೆ ಬಂದ ಮೇಲೆ ಇಡೀ ಅಧಿಕಾರವಿಲ್ಲ ವ್ಯಕ್ತಿ ಕೇಂದ್ರಿತವಾಗಿ ಸರ್ವಾಧಿಕಾರ ಆಡಳಿತ ಛಾಯೆ ಮೂಡಿತು.
ನೆರೆಯ ರಷ್ಯಾದಲ್ಲಿ ಕೂಡ ಜಿನ್ ಪಿಂಗ್ ಗೆ ಮೊದಲೇ ಇನ್ನೂ 35 ವರ್ಷ ತಾನೇ ಅಧ್ಯಕ್ಷನಾಗಿ ಇರಬೇಕು ಎಂದು ವ್ಲಾಡಿಮಿರ್ ಪುಟಿನ್ ಸಂವಿಧಾನಕ್ಕೆ ತಿದ್ದುಪಡಿ ತಂದುಕೊಂಡ ರೀತಿಯಲ್ಲಿಯೇ ಚೀನಾದಲ್ಲಿ ಇವರು ಮಾಡಿಕೊಂಡರು.
ವ್ಯಕ್ತಿ ಕೇಂದ್ರಿತ ಸರ್ವಾಧಿಕಾರ ಚೀನಾದಲ್ಲಿ ಉಸಿರುಗಟ್ಟಿಸುವ ಮಾರಕ ಸನ್ನಿವೇಶವನ್ನು ಸೃಷ್ಟಿ ಮಾಡಿತ್ತು. ಸೇನೆಯ ಕೆಲ ಉನ್ನತ ಅಧಿಕಾರಿಗಳು ಕೂಡ ಜಿನ್ ಪಿಂಗ್ ವಿರುದ್ಧ ಕುಡಿಯುತ್ತಿದ್ದರು. ಕಮ್ಯುನಿಸ್ಟ್ ಪಕ್ಷದಲ್ಲೂ ಇದೇ ವ್ಯವಸ್ಥೆ ಇತ್ತು. ಕೋವಿಡ್ ಸೋಂಕು ಜಗತ್ತಿಗೇ ಹಬ್ಬಿಸಿ ಚೀನಾದ ಪ್ರತಿಷ್ಠೆಗೆ ಮಾರಣಾಂತಿಕ ಪೆಟ್ಟು ನೀಡಿದ್ದ ಜಿನ್ ಪಿಂಗ್, ಕೋವಿಡ್ ನಂತರ ಜನರ ಬಗ್ಗೆ ಇನ್ನೂ ರಕ್ಕಸ ಪ್ರವೃತ್ತಿಯಿಂದ ವರ್ತಿಸಿದ್ದರು. ಜನರಲ್ಲಿ ಇದೆಲ್ಲ ಆಕ್ರೋಶಕ್ಕೆ ಕಾರಣವಾಗಿತ್ತು.
ಇವೆಲ್ಲ ಕಾರಣಗಳನ್ನು ನೋಡಿದರೆ, ಚೀನಾದ ಜನರು ಕಮ್ಯುನಿಸ್ಟ್ ವ್ಯವಸ್ಥೆ ಬಗ್ಗೆ ರೋಸಿ ಹೋಗಿದ್ದಾರೆ ಎನ್ನುವುದು ಗೊತ್ತಾಗುತ್ತದೆ. ಕಮ್ಯುನಿಸ್ಟ್ ನಾಯಕರು ಅಧಿಕಾರ ಸಿಕ್ಕ ಮೇಲೆ ಸರ್ವಾಧಿಕಾರಿಗಳಾಗಿ ಬದಲಾಗುತ್ತಿರುವುದು ಚೀನಿಯರಲ್ಲಿ ಆತಂಕ ಹೆಚ್ಚಿಸಿದೆ.
ಈ ಹಿನ್ನೆಲೆಯಲ್ಲಿ ಚೀನಾದ ಕಮ್ಯುನಿಸ್ಟ್ ವ್ಯವಸ್ಥೆ ಕುಸಿದು ಬೀಳುವ ಸಾಧ್ಯತೆ ಹೆಚ್ಚಿದೆ. ಮೇಲಾಗಿ ಅಕ್ರಮವಾಗಿ ತನ್ನ ವಶದಲ್ಲಿ ಇಟ್ಟುಕೊಂಡಿರುವ ಟಿಬೆಟ್, ಹಾಂಕಾಂಗ್, ಪೂರ್ವ ತರ್ಕಿಸ್ಥಾನ್, ಅಕ್ಸಾಯ್ ಚಿನ್, ಮಂಗೂಲಿಯನ್ನರು ಹೆಚ್ಚಾಗಿರುವ ಉತ್ತರದ ಒಂದು ಭಾಗ ಸೇರಿ ಕೆಲ ಭಾಗಗಳು ಚೀನಾದ ಕೈ ತಪ್ಪಿ ಹೋಗುವ ಅಪಾಯವಿದೆ. ಸೋವಿಯತ್ ಒಕ್ಕೂಟದಂತೆ ಛಿದ್ರವಾಗುವ ಆತಂಕವನ್ನು ಕೂಡ ಎದುರಿಸುತ್ತಿದೆ.
ಈಗ ತೈವಾನ್ ದೇಶವನ್ನು ಆಕ್ರಮಣ ಮಾಡಿಕೊಳ್ಳುವ ಜಿನ್ ಪಿಂಗ್ ಆಡಳಿತ ಯಶ ಕಾಣುವ ಸಾಧ್ಯತೆ ಇಲ್ಲ.
ಅತಿಯಾದ ಮಹತ್ವಾಕಾಂಕ್ಷೆ, ಸರ್ವಾಧಿಕಾರಿ ಆಡಳಿತ, ಸೇನಾ ಹಸ್ತಕ್ಷೇಪ, ನೆರೆ ದೇಶಗಳ ಮೇಲೆ ಆಕ್ರಮಣಶೀಲತೆ, ಜೈವಿಕ ಅಸ್ತ್ರಗಳ ಪ್ರಯೋಗ ಇತ್ಯಾದಿ ಕಾರಣಗಳಿಂದ ಚೀನಾ ಪತನದತ್ತ ಸಾಗಿದೆ. ಕೋವಿಡ್ ನಂತರ ಆರ್ಥಿಕ ಹಿಂಜರಿತ, ನಿರುದ್ಯೋಗ, ಕೈಗಾರಿಕೆಗಳ ವಲಸೆ, ಕುಗ್ಗಿದ ವಿದೇಶಿ ಹೂಡಿಕೆ, ನಿರಂತರ ಮಾನವ ಹಕ್ಕುಗಳ ದಮನ ಇತ್ಯಾದಿಗಳನ್ನು ಮೈವೇತ್ತ ಚೀನಾವನ್ನು, ಈಗ ಉಂಟಾಗಿರುವ ರಾಜಕೀಯ ಕಂಪನ ಯಾವ ದಿಕ್ಕಿನತ್ತ ಒಯ್ಯುತ್ತದೆ ಎನ್ನುವ ಅನುಮಾನ ಜಗತ್ತನ್ನು ಕಾಡುತ್ತಿದೆ.
ಮೂರನೇ ಅವಧಿಗೆ ರೆಡಿಯಾಗಿದ್ದ ಕ್ಸಿ
ಅಕ್ಟೋಬರ್ 16ರಂದು ಬೀಜಿಂಗ್ ನಲ್ಲಿ ಚೀನಾ ಕಮ್ಯುನಿಸ್ಟ್ ಪಕ್ಷದ ಮಹಾಧಿವೇಶನ ಇದೆ. ಈ ಮಹಾಧಿವೇಶನದಲ್ಲಿ ಕ್ಸಿ ಮೂರನೇ ಅವಧೀಗೆ ಅಧ್ಯಕ್ಷರಾಗಿ ಆಯ್ಕೆಯಾಗಿ ಇನ್ನೂ ಐದು ವರ್ಷ ಆಡಳಿತ ನಡೆಸುವುದಕ್ಕೆ ಕಮ್ಯುನಿಸ್ಟ್ ಪಕ್ಷದ ಅಧಿಕೃತ ಮುದ್ರೆ ಪಡೆಯುವುದಿತ್ತು. ಆದರೆ, ಕೆಲ ದಿನಗಳಿಂದ ಪಕ್ಷದಲ್ಲಿ ಕುದಿಯುತ್ತಿದ್ದ ಭಿನ್ನಮತ ಏಕಾಏಕಿ ಸ್ಫೋಟಗೊಂಡು ಇಬ್ಬರು ಸಚಿವರಿಗೆ ಭ್ರಷ್ಟಾಚಾರದ ಪ್ರಕರಣದಲ್ಲಿ ಸಿಲುಕಿಸಿ ಗಲ್ಲುಶಿಕ್ಷೆ ವಿಧಿಸಿರುವುದು ಹಾಗೂ ನಾಲ್ವರು ಉನ್ನತ ಅಧಿಕಾರಿಗಳಿಗೆ ಜೀವಿತಾವಧಿ ಜೈಲು ಶಿಕ್ಷೆ ವಿಧಿಸಿರುವುದು ಚೀನಾದಲ್ಲಿ ಅಲ್ಲೋಲ ಕಲ್ಲೋಲ ಉಂಟು ಮಾಡಿದೆ.
ಶಿಕ್ಷೆಗೆ ಗುರಿಯಾಗಿರುವ ಈ ಆರು ಮಂದಿ ಅಧ್ಯಕ್ಷ ಕ್ಸಿ ಅವರ ಕಡು ವಿರೋಧಿಗಳು ಎಂದು ಜಾಗತಿಕ ಮಾಧ್ಯಮಗಳು ಹೇಳಿವೆ. ರಾಜಕೀಯ ದ್ವೇಷವೇ ಕ್ಸಿಗೆ ಮುಳುವಾಗಿದ್ದು, ಸೇನೆ ಕೂಡ ಈ ಸರ್ವಾಧಿಕಾರಿ ನೀತಿಗೆ ವಿರುದ್ಧವಾಗಿ ನಿಂತಿದೆ.
ಇದಲ್ಲದೆ, ಮಾವೋತ್ಸೆತುಂಗ್ ನಂತರ ಚೀನಾದ ಬಲಿಷ್ಠ ನಾಯಕ ಕ್ಸಿ ಎನ್ನುವಂತೆ ಚೀನಾದ ಮಾಧ್ಯಮಗಳು ಬಿಂಬಿಸುತ್ತಿದ್ದವು. ಅಲ್ಲದೆ, ಕ್ಸಿ ವರ್ತನೆಯೂ ಹಾಗೆಯೇ ಇತ್ತು ಎಂದು ವಿದೇಶಿ ಮಾಧ್ಯಮಗಳು ಅಭಿಪ್ರಾಯಪಟ್ಟಿವೆ.
ಕ್ಸಿ ನಡೆದು ಬಂದ ಹಾದಿ
2012: ಚೀನಾ ಅಧ್ಯಕ್ಷರಾಗಿ, ಹು ಜಿಂಟಾವೋ ಉತ್ತರಾಧಿಕಾರಿ ಆಗಿ ಆಯ್ಕೆ
2018: ಅಧ್ಯಕ್ಷರ ಅಧಿಕಾರಾವಧಿ 2 ಅವಧಿ (10 ವರ್ಷ) ಎಂಬ ನಿಯಮಕ್ಕೆ ತಿದ್ದುಪಡಿ; ಜೀವಿತಾವಧಿ ಅಧ್ಯಕ್ಷರಾಗಿ ಕ್ಸಿ ಮುಂದುವರಿಯಲು ಕಮ್ಯುನಿಸ್ಟ್ ಪಕ್ಷ ಅನುಮೋದನೆ
2018: ಎಲ್ಲ ಅಧಿಕಾರಗಳನ್ನು ಕೇಂದ್ರಿಕರಿಸಿಕೊಂಡ ಕ್ಸಿ. ಭ್ರಷ್ಟಾಚಾರದ ನೆಪದಲ್ಲಿ ರಾಜಕೀಯ ವಿರೋಧಿಗಳ ನಿರ್ನಾಮ
ಭಾರತದ ಮೇಲೇನು ಪರಿಣಾಮ?
ಚೀನಾದ ಬೆಳವಣಿಗೆಗಳನ್ನು ಭಾರತ ಎಚ್ಚರಿಕೆಯಿಂದ ಗಮನಿಸುತ್ತಿದೆ. ಚೀನಾದ ಆಡಳಿತ ಸೇನೆಯ ಕೈಗೆ ಹೋಗುವುದು ಸೇರಿದಂತೆ ವಿವಿಧ ಬೆಳವಣಿಗೆಗಳಿಂದ ತನ್ನ ಮೇಲಾಗುವ ಪರಿಣಾಮಗಳನ್ನು ಭಾರತ ಎಚ್ಚರಿಕೆಯಿಂದ ತುಲನೆ ಮಾಡುತ್ತಿದೆ.
ಕ್ಸಿ ಅವರು ಚೀನಾದ ಅಧ್ಯಕ್ಷರಾದ ಮೇಲೆ ಭಾರತ-ಚೀನಾ ಸಂಬಂಧ ಅನೇಕ ಸಲ ಹದಗೆಟ್ಟಿದೆ. ಅರುಣಾಪ್ರದೇಶ ಹಾಗೂ ಗಾಲ್ವಾನ್ ಕಣಿವೆಯಲ್ಲಿ ಎರಡೂ ದೇಶಗಳ ಸೇನೆಗಳು ಮುಖಾಮುಖಿಯಾಗಿದ್ದವು. ದಕ್ಷಿಣ ಏಷ್ಯಾದಲ್ಲಿ ತನ್ನ ಪ್ರಭಾವ ಹೆಚ್ಚಿಸಿಕೊಳ್ಳಲು ಚೀನಾ, ಭಾರತದ ನೆರೆ ದೇಶಗಳಾದ ಶ್ರೀಲಂಕಾ, ಪಾಕಿಸ್ತಾನಗಳನ್ನು ನಮ್ಮ ಮೇಲೆ ಎತ್ತಿ ಕಟ್ಟುವ ಪ್ರಯತ್ನ ಮಾಡಿತ್ತು. ಚೀನಾದ ಸಾಲದ ಸುಳಿಗೆ ಸಿಲುಕಿರುವ ಲಂಕಾ & ಪಾಕಿಸ್ತಾನಗಳು ಆರ್ಥಿಕವಾಗಿ ಪಾಪರೆದ್ದು ಹೋಗಿವೆ.
ಇದರ ನಡುವೆ ನೇಪಾಳವನ್ನೂ ಭಾರತದ ವಿರುದ್ಧ ಎತ್ತಿಕಟ್ಟಿ ಚಿತಾವಣೆ ಮಾಡಿದ್ದ ಚೀನಾ, ಆಪ್ಘಾನಿಸ್ತಾನದಲ್ಲಿ ಖನಿಜ ಸಂಪತ್ತು ಲೂಟಿ ಹೊಡೆಯಲು ಹುನ್ನಾರ ನಡೆಸಿ ತಾಲಿಬಾನಿಗಳಿಗೆ ಬೆಂಬಲ ನೀಡಿ, ಪ್ರಜಾಪ್ರಭುತ್ವ ಆಡಳಿತ ಪತನವಾಗಲು ಕಾರಣವಾಗಿತ್ತು. ಅಲ್ಲದೆ, ವಿಶ್ವಸಂಸ್ಥೆ ಸೇರಿ ಜಾಗತಿಕ ಮಟ್ಟದ ಎಲ್ಲಾ ವೇದಿಕೆಗಳಲ್ಲಿ ಭಯೋತ್ಪಾದನೆ ವಿರುದ್ಧ ಭಾರತ ನಡೆಸುತ್ತಿರುವ ಹೋರಾಟಕ್ಕೆ ಹೆಜ್ಜೆಹೆಜ್ಜೆಗೂ ಅಡ್ಡಿ ಮಾಡುತ್ತಲೇ ಬಂದಿದೆ.
ಕ್ಸಿ ಆಡಳಿತಾವಧಿಯಲ್ಲಿ ಚೀನಾ ವರ್ಚಸ್ಸಿಗೆ ಮಾರಕ ಪೆಟ್ಟು ಬಿದ್ದಿದೆ. ಕೋವಿಡ್ ಸೋಂಕನ್ನು ಜಗತ್ತಿನ ಮೇಲೆ ಬಿಟ್ಟ ಕುಖ್ಯಾತಿ ಕ್ಸಿ ಆಡಳಿಕ್ಕಿದೆ. ಮೇಲಾಗಿ ಅಮೆರಿಕ, ಕೆನಡಾ, ಬ್ರಿಟನ್, ಯುರೋಪ್, ಜಪಾನ್, ಆಸ್ಟ್ರೇಲಿಯಾ ಸೇರಿದಂತೆ ಜಗತ್ತಿನ ಬಹುತೇಕ ದೇಶಗಳ ಜತೆ ಸಂಬಂಧಗಳನ್ನು ಕೆಡಿಸಿಕೊಂಡಿದೆ. ಪಾಕಿಸ್ತಾನ, ರಷ್ಯಾ, ಉತ್ತರ ಕೊರಿಯಾ, ಆಫ್ರಿಕಾ ಖಂಡ ಕೆಲ ದೇಶಗಳ ಜತೆ ಮಾತ್ರ ಚೀನಾ ಉತ್ತಮ ಸಂಬಂಧಗಳನ್ನು ಹೊಂದಿದೆ. ಮುಖ್ಯವಾಗಿ ಅನೇಕ ಸಣ್ಣಪುಟ್ಟ ದೇಶಗಳನ್ನು ತನ್ನ ಸಾಲದ ಸುಳಿಗೆ ಸಿಲುಕಿಸಿಕೊಂಡಿದೆ. ಚೀನಾದ ಸಾಲ ರಾಜಕೀಯ ಬಹುತೇಕ ದೇಶಗಳಿಗೆ ಅರ್ಥವಾಗಿದೆ.
ಮತ್ತೊಂದೆಡೆ, ಚೀನಾದ ರಫ್ತು ಪ್ರಮಾಣ ಕುಸಿತದತ್ತಾ ಸಾಗುತ್ತಿದೆ. ಭಾರತ-ಚೀನಾ ವಾಣಿಜ್ಯ ಕೋವಿಡ್ ನಂತರ ಗಣಣೀಯವಾಗಿ ಕುಸಿತ ಕಂಡಿದೆ. ಯುರೋಪ್ ದೇಶಗಳು, ಅಮೆರಿಕ, ಕೆನಡಾ, ದಕ್ಷಿಣ ಏಷ್ಯಾದ ಅನೇಕ ದೇಶಗಳು ಚೀನಾ ವಸ್ತುಗಳ ಮೇಲೆ ಅವಲಂಬನೆಯನ್ನು ಕಡಿಮೆ ಮಾಡಿಕೊಳ್ಳುತ್ತಿವೆ. ಇದು ಕಮ್ಯುನಿಸ್ಟ್ ಚೀನಾದಲ್ಲಿ ತಳಮಳಕ್ಕೆ ಕಾರಣವಾಗಿದೆ.