ಅನಾರೋಗ್ಯದಿಂದ ದುಬೈ ಆಸ್ಪತ್ರೆಯಲ್ಲಿ ಮರಣ
ದುಬೈ: ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಶ್ರಫ್ ಇಂದು ನಿಧನರಾಗಿದ್ದಾರೆ.
ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದ ಅವರು ದುಬೈ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಮುಷರಫ್ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು.
ಭ್ರಷ್ಟಾಚಾರ ಪ್ರಕರಣದಲ್ಲಿ ಪಾಕ್ ಸುಪ್ರೀಂಕೋರ್ಟ್ ಗಡಿಪಾರು ಮಾಡಿತ್ತು. ಹಾಗಾಗಿ ಅವರು ದುಬೈನಲ್ಲಿ ನೆಲೆಸಿದ್ದರು. ನವಾಜ್ ಷರೀಫ್ ಅವರನ್ನು ಕೆಳಗಿಳಿಸಿ
ಮುಷರಫ್ 1999 ರಿಂದ 2008ರವರೆಗೆ ಪಾಕಿಸ್ತಾನದ ಅಧ್ಯಕ್ಷರಾಗಿದ್ದರು.
ಮುಷರಫ್ ಭಾರತದ ವಿರುದ್ಧ ಕಾರ್ಗಿಲ್ ಸಮರ ಸಾರಿ ಮುಖಭಂಗ ಅನುಭವಿಸಿದ್ದರು. ಪರ್ವೇಜ್ ಮುಷರಫ್ 1998ರಿಂದ ಪಾಕಿಸ್ತಾನದ ಮಿಲಿಟರಿ ಜನರಲ್ ಆಗಿದ್ದರು.