ಅಗಲಿದ ಕಾಮ್ರೇಡ್ ಗೆ ಆಪ್ತರ ಗೌರವ; 25ರಂದು ಸ್ತೂಪ ಉದ್ಘಾಟನೆ
by GS Bharath Gudibande
ಬಾಗೇಪಲ್ಲಿ: ಪ್ರಜಾ ಸಂಘರ್ಷ ಸಮಿತಿ ಪಕ್ಷದ ಸಂಸ್ಥಾಪಕ ಅಧ್ಯಕ್ಷರು ಹಾಗೂ ಕಮ್ಯೂನಿಸ್ಟ್ ಪಕ್ಷದ ಮಾಜಿ ದಿಗ್ಗಜ ನಾಯಕ ದಿವಂಗತ ಜಿ.ವಿ.ಶ್ರೀರಾಮರೆಡ್ಡಿ ಅವರ ಸ್ತೂಪವು ಬಾಗೇಪಲ್ಲಿಯಲ್ಲಿ ನಿರ್ಮಾಣವಾಗಲಿದೆ.
ಜಿವಿಎಸ್ ಅವರು ಅಗಲಿ ಒಂದು ವರ್ಷವಾಗಿದೆ, ಇದೇ ತಿಂಗಳ 25 ರಂದು ಅವರ ಹುಟ್ಟುಹಬ್ಬದ ದಿನಂದು ಸ್ತೂಪವನ್ನು ಉದ್ಘಾಟನೆ ಮಾಡಲು ಜಿವಿಎಸ್ ಅಭಿಮಾನಿಗಳು ಸಿದ್ದತೆಗಳನ್ನು ಮಾಡಿಕೊಂಡಿದ್ದಾರೆ.
ಜನಮಾನಸದಲ್ಲಿ ಕಾಮ್ರೇಡ್ ಜಿವಿಎಸ್ ಎಂದೇ ಖ್ಯಾತರಾಗಿರುವ ಶ್ರೀರಾಮರೆಡ್ಡಿ ಅವರ ಹುಟ್ಟುಹಬ್ಬದ ದಿನದಂದು ಅವರ ಅಭಿಮಾನಿಗಳು ಹಾಗೂ ಆಪ್ತರು ವಿವಿಧ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದ್ದಾರೆ.
35 ಅಡಿ ಎತ್ತರ ಜಿವಿಎಸ್ ಅವರ ಸ್ತೂಪ ಉದ್ಘಾಟನೆ ಮಾಡಲು ಸಿದ್ದತೆಗಳನ್ನು ಮಾಡಿಕೊಂಡಿದ್ದಾರೆ, ಇದನ್ನು ನಿರ್ಮಾಣ ಮಾಡಲು ಪ್ರಜಾ ಸಂರ್ಘ ಸಮಿತಿಯ ಮುಖಂಡರು ಕಾರ್ಯಕರ್ತರು ಅಭಿಮಾನಿಗಳು, ಆಪ್ತರು ಹಾಗೂ ಪಿ.ಎಸ್.ಎಸ್ ಬೆಂಬಲಿತ ಅಭ್ಯರ್ಥಿ ಮಿಥುನ್ ರೆಡ್ಡಿ ಅವರು ತಲಾ ಒಂದು ಕೈಹಾಕಿ ನಿರ್ಮಾಣಕ್ಕೆ ಸಹಕಾರ ನೀಡಿದ್ದಾರೆ.
ಪಿ.ಎಸ್.ಎಸ್ ಕಾರ್ಯಕರ್ತರ ಹಗಲಿರುಳು ಪರಿಶ್ರಮದಿಂದ ಇದು ಇಂದು ಸಾಧ್ಯವಾಯಿತು ಎಂಬುದು ಪಿ.ಎಸ್.ಎಸ್ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.
ವಿವಿಧ ಕಾರ್ಯಕ್ರಮಗಳ ಆಯೋಜನೆಜಿವಿಎಸ್ ಅವರ ಹುಟ್ಟುಹಬ್ಬದ ದಿನದಂದು ಪಿ.ಎಸ್.ಎಸ್ ಹಾಗೂ ಅವರ ಅಭಿಮಾನಿಗಳು ಹಲವು ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದ್ದಾರೆ. ಅದರಲ್ಲಿ ವಿಶೇಷವಾಗಿ ರಕ್ತದಾನ ಶಿಬಿರ, ಅನ್ನ ಸಂರ್ತಪಣೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದ್ದಾರೆ.
ಜಿವಿಎಸ್ ಅವರ ಆಪ್ತರು ಸೇರಿದಂತೆ ಸಿಐಟಿಯು ರಾಜ್ಯಾಧ್ಯಕ್ಷೆ ವರಲಕ್ಷ್ಮೀ, ಸಿಐಟಿಯು ಹಿರಿಯ ಮುಖಂಡ, ಜಿವಿಎಸ್ ಅವರನ್ನು ಬಾಗೇಪಲ್ಲಿಗೆ ಕರೆತಂದ ವಿ.ಜೆ.ಕೆ ನಾಯರ್ ಹಾಗೂ ಪಿಎಸ್.ಎಸ್ ಬೆಂಬಲಿತ ಅಭ್ಯರ್ಥಿಯಾದ ಮಿಥುನ್ ರೆಡ್ಡಿ ಅವರು ಸೇರಿದಂತೆ ಪಿಎಸ್.ಎಸ್ ಕಾರ್ಯಕರ್ತರು, ಜಿವಿಎಸ್ ಅಭಿಮಾನಿಗಳು ಸೇರಿದಂತೆ ಪಕ್ಷಬೇಧವಿಲ್ಲದೇ ಎಲ್ಲಾ ಪಕ್ಷಗಳ ಮುಖಂಡರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎನ್ನುವ ಮಾಹಿತಿ ಸಿಕ್ಕಿದೆ.
ಮಾಜಿ ಶಾಸಕರಾದ ದಿವಂಗತ ಕಾಮ್ರೇಡ್ ಜಿ.ವಿ.ಶ್ರೀರಾಮರೆಡ್ಡಿ ಅವರ ಹುಟ್ಟುಹಬ್ಬದ ದಿನದಂದು ನಡೆಯುವ ಸ್ತೂಪ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರ ಅಭಿಮಾನಿಗಳು, ಕಾರ್ಯಕರ್ತರು, ಆಪ್ತರು, ಸ್ನೇಹಿತರು ಪಿ.ಎಸ್.ಎಸ್ ಕಾರ್ಯಕರ್ತರು ಸೇರಿದಂತೆ ಮುಂತಾದವರು ಭಾಗವಹಿಸಲಿದ್ದಾರೆ, ಯಾವುದೇ ಪಕ್ಷ ಬೇಧವಿಲ್ಲದೇ ಎಲ್ಲರೂ ಭಾಗವಹಿಸಲು ಮನವಿ ಮಾಡುತ್ತೇನೆ.
ಚನ್ನರಾಯಪ್ಪ ಪಿ ಎಸ್ ಎಸ್ ಸಂಚಾಲಕ