ತಮಿಳುನಾಡಿಗೆ ನೀರು ಹರಿಸಿದ ಪರಿಣಾಮ
ಮಂಡ್ಯ: ಮಂಡ್ಯ,ಮೈಸೂರು, ಬೆಂಗಳೂರು ಭಾಗದ ಜೀವನಾಡಿ ಕೃಷ್ಣರಾಜಸಾಗರ ಅಣೆಕಟ್ಟೆ ಭರ್ತಿಯಾಗದೇ ಇದ್ದರು ಸರಕಾರ ತಮಿಳುನಾಡಿಗೆ ನೀರು ಹರಿಸಿದ ಪರಿಣಾಮ ನೀರಿನ ಮಟ್ಟ ಕುಸಿತ ಕಂಡಿದೆ.
ಕೃಷ್ಣರಾಜಸಾಗರ ಜಲಶಯದ ಮಟ್ಟ 124.80 ಅಡಿ. ಮಂಡ್ಯ, ಮೈಸೂರು ಜಿಲ್ಲೆಗಳ ಸುತ್ತಮುತ್ತ ಹೆಚ್ಚು ಮಳೆಯಾಗಿಲ್ಲ.
ಕಳೆದ ತಿಂಗಳು ಕೇರಳದ ವೈನಾಡಿನಲ್ಲಿ ಹೆಚ್ಚು ಮಳೆ ಆದ ಪರಿಣಾಮ, ಜೊತೆಗೆ ಮಡಿಕೇರಿ ಸುತ್ತಮುತ್ತ ಸತತ ಮಳೆ ಸುರಿದ ಕಾರಣ ಕೆಆರ್ ಎಸ್ ಅಣ್ಎಕಟ್ಟೆಗೆ ಹೆಚ್ಚು ನೀರು ಹರಿದು ಬಂದಿತ್ತು ಹಾಗಾಗಿ 113 ಅಡಿ ತಲುಪಿತ್ತು.
ಆದರೆ ತಮಿಳುನಾಡಿಗೆ ನೀರು ಹರಿಸಿದ ಪರಿಣಾಮ ಜಲಾಶಯದಲ್ಲಿ 107 ಅಡಿ ನೀರು ಮಾತ್ರ ಸಂಗ್ರಹವಾಗಿದೆ.
ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ಖಂಡಿಸಿ ಮೈಸೂರು, ಮಂಡ್ಯ ಮತ್ತಿತರೆಡೆ ಪ್ರತಿಭಟನೆಗಳು ನಡೆದಿವೆ, ಪ್ರತಿಪಕ್ಷದ ನಾಯಕರುಗಳಾದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಹೆಚ್.ಡಿ ಕುಮಾರಸ್ವಾಮಿ ಮತ್ತಿತರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಆದರೆ ಸರ್ಕಾರ ಕಾವೇರಿ ನೀರು ನಿವಾಹಣಾ ಮಂಡಳಿ ಹೇಳಿದಂತೆ ತಮಿಳುನಾಡಿಗೆ ನೀರು ಹರಿಸಲೇಬೇಕಿದೆ ಹಾಗಾಗಿ ಸ್ವಲ್ಪ ಪ್ರಮಾಣ ಮಾತ್ರ ಬಿಡಲಾಗಿದೆ ಎಂದು ಸಮರ್ಥಿಸಿಕೊಂಡಿದೆ.