ಎಂಟು ಗಂಟೆಗಳ ಕಾಲ ಚರ್ಚೆ; ವಿಧೇಯಕಕ್ಕೆ ಇಬ್ಬರ ವಿರೋಧ!
ನವದೆಹಲಿ: ಲೋಕಸಭೆ,ವಿಧಾನಸಬೆಯಲ್ಲಿ ಶೇ.33 ರಷ್ಟು ಮಹಿಳಾ ಮೀಸಲಾತಿ ಕೊಡುವ ಐತಿಹಾಸಿಕ ʼನಾರಿ ಶಕ್ತಿ ವಂದನ್ ವಿಧೇಯಕʼ (ಮಹಿಳಾ ಮೀಸಲಾತಿ ಮಸೂದೆ)ಗೆ ಲೋಸಭೆಯಲ್ಲಿ ಅಂಗೀಕಾರ ದೊರೆಯಿತು.
ಲೋಕಸಭೆಯಲ್ಲಿ ಈ ಮಸೂದೆ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು. ಎಂಟು ಗಂಟೆಗಳ ಕಾಲ ಸಂಸತ್ ಸದಸ್ಯರು ಚರ್ಚಿಸಿದರು. ನಂತರ ಮತದಾನ ಪ್ರಕ್ರಿಯೆ ಪ್ರಾರಂಭವಾಯಿತು.
ಈ ಮಹಿಳಾ ಮೀಸಲಾತಿ ಮಸೂದೆ ಪರ ಒಟ್ಟು 454 ಮತ ಬಂದಿದ್ದರೆ ಇಬ್ಬರು ಮಾತ್ರ ವಿರೋಧ ವ್ಯಕ್ತಪಡಿಸಿದರು. ಒವೈಸಿ ಮತ್ತು ಇಂತಿಯಾಜ್ ಈ ಬಿಲ್ ಗೆ ವಿರೋಧ ವ್ಯಕ್ತಪಡಿಸಿದ್ದಾರೆ. 87 ಸದಸ್ಯರು ಮತದಾನದ ವೇಳೆ ಗೈರಾಗಿದ್ದರು.
ಬಹುಶಃ ಗುರುವಾರ ಈ ಬಿಲ್ ಕುರಿತು ರಾಜ್ಯಸಭೆಯಲ್ಲಿ ಚರ್ಚೆಯಾಗಿ ಮಂಡನೆಯಾಗಿ ಅಂಗೀರವಾಗುವ ಸಾಧ್ಯತೆ ಇದೆ. ತದನಂತರ ಇದು ಕಾಯಿದೆಯಾಗಿ ಜಾರಿಯಾಗಲಿದೆ.
ನೂತನ ಸಂಸತ್ ಭವನದಲ್ಲಿ ಕಾನೂನು ಸಚಿವ ಅರ್ಜುನ್ ರಾಮ್ ಮೇಘ್ವಾಲ್ ಅವರು ಮಹಿಳೆಯರಿಗೆ ಶೇ. 33ರಷ್ಟು ಮೀಸಲು ನೀಡುವ ಐತಿಹಾಸಿಕ ಮಸೂದೆಯನ್ನು ಮಂಗಳವಾರ ಮಂಡಿಸಿದ್ದರು. ಎಂಟು ಗಂಟೆಗಳ ಸತತ ಚರ್ಚೆಯ ನಂತರ ಲೋಕಸಭೆ ಸ್ವೀಕರ್ ಓಂ ಬಿರ್ಲಾ ಅವರು ಬುಧವಾರ ಈ ಮಸೂದೆಯನ್ನು ಮತಕ್ಕೆ ಹಾಕಿದರು.