ದಲಿತ ಸಂಸದರ ಮೇಲೆ ಎಸಗಿದ ಅಪಮಾನ; ಪೊಲೀಸರ ಅಮಾನತಿಗೆ ಆಗ್ರಹ
ಬೆಂಗಳೂರು: ಕೋಲಾರ ಸಂಸದ ಮುನಿಸ್ವಾಮಿ ಅವರರನು ಜನತಾದರ್ಶನ ಸಭೆಯಿಂದ ಹೋರಹಾಕಿ ದಬ್ಬಾಳಿಕೆ ನಡೆಸಿರುವುದಕ್ಕೆ ಮಾಜಿ ಸಚಿವ ಡಾ.ಕೆ.ಸುಧಾಕರ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಹೇಳಿಕೆಯನ್ನು ಪೋಸ್ಟ್ ಮಾಡಿರುವ ಅವರು; ಕೋಲಾರದಲ್ಲಿ ನಡೆಯುತ್ತಿದ್ದ ಜನತಾ ದರ್ಶನ ಕಾರ್ಯಕ್ರಮದಲ್ಲಿ ದಲಿತ ಸಂಸದ ಎಸ್.ಮುನಿಸ್ವಾಮಿ ಅವರ ಮೇಲೆ ದಬ್ಬಾಳಿಕೆ ನಡೆಸಿ ಚುನಾಯಿತ ಜನಪ್ರತಿನಿಧಿ ಎಂಬ ಕನಿಷ್ಠ ಗೌರವವೂ ಇಲ್ಲದೆ ವೇದಿಕೆಯಿಂದ ಹೊರನೂಕುವ ಮೂಲಕ ಕಾಂಗ್ರೆಸ್ ಸರ್ಕಾರ ಮತ್ತೊಮ್ಮೆ ತನ್ನ ದರ್ಪ, ದಲಿತ ಸಮುದಾಯಗಳ ಬಗ್ಗೆ ಇರುವ ಕೀಳು ಮನಸ್ಥಿತಿಯನ್ನು ಪ್ರದರ್ಶಿಸಿದೆ ಎಂದು ಅವರು ಕಟುವಾಗಿ ಟೀಕಿಸಿದ್ದಾರೆ.
ಎಂಟು ವಿಧಾನಸಭೆ ಕ್ಷೇತ್ರಗಳನ್ನು ಪ್ರತಿನಿಧಿಸುವ ಒಬ್ಬ ದಲಿತ ಸಂಸದರ ಮೇಲೆ ಅಧಿಕೃತ ಸರ್ಕಾರಿ ಕಾರ್ಯಕ್ರಮ ಒಂದರಲ್ಲಿ ಸಾರ್ವಜನಿಕವಾಗಿ ದೌರ್ಜನ್ಯ ಎಸಗಿರುವ ಕಾಂಗ್ರೆಸ್ ಸರ್ಕಾರ ಇಡೀ ದಲಿತ ಸಮುದಾಯಕ್ಕೆ ಅಪಮಾನ ಮಾಡಿದೆ ಎಂದು ಅವರು ಹೇಳಿದ್ದಾರೆ.
ಕಾಂಗ್ರೆಸ್ ಸರ್ಕಾರದ ದುರಾಡಳಿತದಲ್ಲಿ ಒಬ್ಬ ಹಾಲಿ ಸಂಸದರಿಗೇ ರಕ್ಷಣೆ ಇಲ್ಲದೆ ಹೋದರೆ ಇನ್ನು ಜನ ಸಾಮಾನ್ಯರ ಸುರಕ್ಷತೆಗೆ ಯಾವ ಗ್ಯಾರೆಂಟಿ ಇದೆ? ಸಂಸದರ ಮೇಲೆ ದಬ್ಬಾಳಿಕೆ ನಡೆಸಿ ವೇದಿಕೆಯಿಂದ ಹೊರಹಾಕಿದ ಪೊಲೀಸರನ್ನು ಈ ಕೂಡಲೇ ಅಮಾನತು ಮಾಡಿ ಈ ಘಟನೆಯ ಬಗ್ಗೆ ತನಿಖೆಗೆ ಆದೇಶ ನೀಡಬೇಕು ಎಂದು ಸರ್ಕಾರಕ್ಕೆ ಆಗ್ರಹಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.
ಆಗಬಾರದಿತ್ತು