ಲಂಡನ್ ಸಂಸತ್ʼನಲ್ಲಿ ಜಿ20 ಶೃಂಗದಲ್ಲಿ ಗೌರವ ಪ್ರಧಾನ
ಬಾಗೇಪಲ್ಲಿ: ಆರ್ಯವೈಶ್ಯ ವಾಸವಿ ಫೌಂಡೇಷನ್ ನ ಅಂತರರಾಷ್ಟ್ರೀಯ ಕಾರ್ಯದರ್ಶಿ ಪಟ್ಟಣದ ಎ.ಎಂ.ಶ್ವೇತಾ ಗಂಜಾಂ ಅಶ್ವಥ್ಥನಾರಾಯಣ ಮಾಕಮ್ ಅವರು ಗ್ಲೋಬಲ್ ಐಕಾನ್ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ಉತ್ತಮ ನಾಯಕತ್ವ, ಸಾಮಾಜಿಕ ಸೇವೆ ಗುರುತಿಸಿ ಸೆಪ್ಟಂಬರ್ 14ರಿಂದ 18ರವರಿಗೆ ಲಂಡನ್ ನ ಸಂಸತ್ ನಲ್ಲಿ ನಡೆದ ಜಿ20 ಶೃಂಗಸಭೆಯ ಕಾರ್ಯಕ್ರಮದಲ್ಲಿ 2023ರ ‘ಗ್ಲೋಬಲ್ ಐಕಾನ್ ಪ್ರಶಸ್ತಿ’ ಯನ್ನು ಪ್ರಧಾನ ಮಾಡಲಾಯಿತು.
ಪಟ್ಟಣದ ಎ.ಎಂ.ಶ್ವೇತಾ ಅವರು ಆರ್ಯವೈಶ್ಯ ವಾಸವಿ ಫೌಂಡೇಷನ್ ನ ತಮ್ಮ ಸದಸ್ಯೆಯರ ಜತೆ ಸೇರಿ, ಪಟ್ಟಣದ ಸರ್ಕಾರಿ ಶಾಲೆ ಹಾಗೂ ಕಾಲೇಜುಗಳಲ್ಲಿನ ಶೈಕ್ಷಣಿಕ ಚಟುವಟಿಕೆಗಳ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ಪ್ರತಿಭಾನ್ವಿತ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪ್ರಶಸ್ತಿಪತ್ರಗಳು, ನೆನಪಿನ ಕಾಣಿಕೆಗಳನ್ನು ನೀಡಿದ್ದಾರೆ. ಸಾಮಾಜಿಕ ಸೇವಾ ಹಾಗೂ ಮಹಿಳೆಯ ಸಬಲಿಕರಣದ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಜನಜಾಗೃತಿ ಮೂಡಿಸುತ್ತಿದ್ದಾರೆ.
ಇಂತಃ ಸಾಮಾಜಿಕ ಹಾಗೂ ಉತ್ತಮ ನಾಯಕತ್ವದ ಸೇವೆ ಗುರುತಿಸಿ, ಯುನೈಟೆಡ್ ಕಿಂಗ್ ಡಂನ ಹೌಸ್ ಆಫ್ ಲಾರ್ಡ್ಸ್ ಸದಸ್ಯ ಲಾರ್ಡ್ ಸುಸಾನ್ ಕ್ರಾಮರ್‌ರವರಿಗೆ, ಭಾರತೀಯ ಮೂಲದ ಮೊದಲ ಯುಕೆ ಮೇಯರ್ ಸುನಿಲ್ ಚೋಪ್ರಾ ಹಾಗೂ ರಾಜ್ಯ ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ ಅವರು ಗ್ಲೋಬಲ್ ಐಕಾನ್ ಪ್ರಶಸ್ತಿಯನ್ನು ಪ್ರಧಾನ ಮಾಡಿದ್ದಾರೆ.
ಇದೇ ಮಾದರಿಯಲ್ಲಿ ಈಜಿಪ್ಟ್ ನಲ್ಲಿ ಹೈಕೋರ್ಟ್ ಟೂರಿಸಂ ಹಾಗೂ ಜಿ20 ರವರ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಶ್ವೇತಾರವರಿಗೆ ಗ್ಲೋಬಲ್ ಐಕೋನ್ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ. ಪಟ್ಟಣದ ವಾಸವಿ ಫೌಂಡೇಷನ್ ನ ಗ್ಲೋಬಲ್ ಕಾರ್ಯದರ್ಶಿಯಾದ ಶ್ವೇತಾರವರು ಪಟ್ಟಣ ಸೇರಿದಂತೆ ಜಿಲ್ಲಾ, ರಾಜ್ಯ, ಅಂತರರಾಜ್ಯ, ರಾಷ್ಟ್ರೀಯ ಮಟ್ಟದಲ್ಲಿ ಇವರ ಸಾಮಾಜಿಕ ಸೇವೆ ಗುರುತಿಸಿ ವಿವಿಧ ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಅನೇಕ ವರ್ಷಗಳಿಂದ ಸಾಮಾಜಿಕ ಸೇವೆಯಲ್ಲಿ ಭಾಗಿಯಾಗಿದ್ದೇನೆ. ನಾಯಕತ್ವದ ಗುಣಗಳನ್ನು ಹೊಂದಿ, ನಮ್ಮ ಜೊತೆ ಇರುವವರಿಗೆ ಸಾಮಾಜಿಕ ಸೇವೆಗಳನ್ನು ಹಾಗೂ ವಿವಿಧ ಕಾರ್ಯಕ್ರಮಗಳ ಮೂಲಕ ಜನಪರ ಸೇವೆಗಳನ್ನು ಮಾಡಿದ್ದೇನೆ. ನನ್ನ ಸೇವೆ ಗುರುತಿಸಿ ಲಂಡನ್ ಸರ್ಕಾರ ಗ್ಲೋಬಲ್ ಐಕಾನ್ ಪ್ರಶಸ್ತಿ” ಪಡೆದಿರುವುದು ಸಂತಸ ತಂದಿದೆ. ಪ್ರಶಸ್ತಿಗಳಿಂದ ನನಗೆ ಮತ್ತಷ್ಟು ಸೇವೆಗಳನ್ನು ಮಾಡುವ ಗುರಿ ಇದೆ. ಪ್ರಶಸ್ತಿಗಳು ರಾಜ್ಯಕ್ಕೆ ಹಾಗೂ ದೇಶಕ್ಕೆ ಸಮರ್ಪಿಸಿದ್ದೇನೆ ಎಂದು ವಾಸವಿ ಫೌಂಡೇಷನ್ ನ ಗ್ಲೋಬಲ್ ಕಾರ್ಯದರ್ಶಿಯಾದ ಶ್ವೇತಾರವರು ತಮ್ಮ ಅನಿಸಿಕೆ ಹಂಚಿಕೊಂಡರು.
“ಶ್ವೇತಾರವರ ಸಾಮಾಜಿಕ ಸೇವೆ ಹಾಗೂ ನಾಯಕತ್ವದ ಸೇವೆಗಳು ಸಮಾಜದ ಹಾಗೂ ಸಮುದಾಯದ ಏಳಿಗೆಗೆ ಶ್ರಮಿಸಲಿ. ಲಂಡನ್ ಸರ್ಕಾರ ಗ್ಲೋಬಲ್ ಪ್ರಶಸ್ತಿ ನೀಡಿ ಗೌರವಿಸಿರುವುದು ತಾಲ್ಲೂಕಿನ ಎಲ್ಲಾ ಜನರ ಹೆಮ್ಮೆ ಆಗಿದೆ. ಮತ್ತಷ್ಟು ಸಾಮಾಜಿಕ ಸೇವೆಗಳಿಗೆ ನಾವೆಲ್ಲರೂ ಜೊತೆಯಲ್ಲಿ ಇರುತ್ತೇವೆ ಎಂದು ತಮ್ಮ ಸ್ನೇಹಿತೆಯರು ಅನಿಸಿಕೆಗಳನ್ನು ಹಂಚಿಕೊಂಡರು.