ಶ್ರೀ ಲಕ್ಷ್ಮೀ ಆದಿನಾರಾಯಣ ಸ್ವಾಮಿ ಬ್ರಾಹ್ಮಣ ಸೇವಾ ಸಂಘದಿಂದ ಕಾರ್ಯಕ್ರಮ
ಗುಡಿಬಂಡೆ: ಮುಂಬರುವ ಅಕ್ಟೋಬರ್ 14ರಂದು ಶನಿವಾರದಂದು ಎಲ್ಲೋಡು ಗ್ರಾಮದಲ್ಲಿ ವಿಪ್ರ ಬಾಂಧವರಿಗಾಗಿ ಸರ್ವ ಪಿತೃ ತರ್ಪಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಲಕ್ಷ್ಮೀ ಆದಿನಾರಾಯಣ ಸ್ವಾಮಿ ಬ್ರಾಹ್ಮಣ ಸೇವಾ ಸಂಘದ ಕಾರ್ಯದರ್ಶಿ ಸಿ.ಪಿ.ಸೂರ್ಯಪ್ರಕಾಶ್ ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಅವರು; ಮಹಾಲಯ ಅಮಾವಾಸ್ಯೆ ಪ್ರಯುಕ್ತ ಅಂದು ಸರ್ವ ಪಿತೃ ತರ್ಪಣ ಆಚರಣಾ ಕಾರ್ಯಕ್ರಮವನ್ನು ಬೆಳಗ್ಗೆ 11:30 ಗಂಟೆಗೆ ಗುಡಿಬಂಡೆ ತಾಲ್ಲೂಕಿನ ಎಲ್ಲೋಡುನಲ್ಲಿ ಏರ್ಪಡಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಶ್ರೀ ಲಕ್ಷ್ಮೀ ಆದಿನಾರಾಯಣ ಸ್ವಾಮಿ ಬ್ರಾಹ್ಮಣ ಸೇವಾ ಸಂಘ ಪ್ರತಿವರ್ಷದಂತೆ ಈ ವರ್ಷ ಕೂಡ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದೆ. ಸಂಘದ ಮಹಾಪೋಷಕರು ಹಾಗೂ ಮಹಾ ಗುರುಗಳಾದ ವೇದಬ್ರಹ್ಮ ಮಂಕಾಲ ಸದಾಶಿವ ಶರ್ಮಾಜಿ ಹಾಗೂ ಪ್ರಧಾನ ಪೋಷಕರಾದ ವೇದ ಬ್ರಹ್ಮ ಮಂಕಾಲ ಶ್ರೀಹರಿ ಶರ್ಮಾಜಿ ಮತ್ತು ಎಸ್.ಎ. ಸುಬ್ಬುಕೃಷ್ಣ ರವರುಗಳ ನೇತೃತ್ವದಲ್ಲಿ ಏರ್ಪಡಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಈ ಕಾರ್ಯಕ್ರಮದ ಪೌರೋಹಿತ್ಯವನ್ನು ಪ್ರತಿವರ್ಷವೂ ನಡೆಸಿಕೊಡುತ್ತಿರುವ ಗುರುವರ್ಯರುಗಳಾದ ವೇದ ಬ್ರಹ್ಮಶ್ರೀ ಮಂಕಾಲ ವೇಣುಗೋಪಾಲ ಶರ್ಮಾಜಿ ಹಾಗೂ ವೇದ ಬ್ರಹ್ಮಶ್ರೀ ಮಂಕಾಲ ಜ್ವಾಲಾ ಪ್ರಸಾದ್ ಶರ್ಮಾಜಿ ಅವರು ನಡೆಸಿಕೊಡಲಿದ್ದಾರೆ. ಈ ಕಾರ್ಯಕ್ರಮವನ್ನು ಹಿಂದಿನ ವರ್ಷ ನಡೆಸಿದ ಬೆಂಗಳೂರಿನ ದಾನಿಗಳಾದ ಶಶಿಕಲಾ ಹಾಗೂ ಕಮಲ್ ದಂಪತಿ ಈ ವರ್ಷವೂ ಸಹ ನಡೆಸಿಕೊಡಲು ಒಪ್ಪಿರುತ್ತಾರೆ ಎಂದು ಅವರು ಹೇಳಿದ್ದಾರೆ.
ಆ ದಿನ ತಮ್ಮ ದಿವಂಗತ ಮಾತಾ ಪಿತೃರುಗಳಿಗೆ ತರ್ಪಣ ನೀಡುವ ಎಲ್ಲಾ ವಿಪ್ರಬಾಂಧವರು ಸಕಾಲಕ್ಕೆ ಆಗಮಿಸಿ ಈ ಕಾರ್ಯದಲ್ಲಿ ಪಾಲ್ಗೊಂಡು ನಮ್ಮ ಆತಿಥ್ಯ ಸ್ವೀಕರಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಅವರು ಮನವಿ ಮಾಡಿದ್ದಾರೆ.
ವಿವರಗಳಿಗೆ ಸಿ.ಪಿ.ಸೂರ್ಯ ಪ್ರಕಾಶ್ – 9845826693- ಸಿ.ಎನ್.ದಕ್ಷಿಣಮೂರ್ತಿ – 9972275881, ಮತ್ತು ಬಿ. ಆರ್. ಶ್ರೀನಿವಾಸ್ – 9448865577, ಸಿ.ಎಂ. ನಾರಾಯಣರಾವ್ – 9482615725, ಬಿ.ಆರ್.ವೆಂಕಟೇಶ್ – 7619452404 ಹಾಗೂ ಸಿ.ಪಿ.ರಾಘವೇಂದ್ರ – 7259151128 ಅವರನ್ನು ಸಂಪರ್ಕಿಸಲು ಅವರು ಕೋರಿದ್ದಾರೆ.