ಶ್ರೀ ವೆಂಕಟೇಶ್ವರ ಸ್ವಾಮಿಯ ದೇವಸ್ಥಾನಗಳಲ್ಲಿ ಪ್ರಸಾದ ವಿತರಣೆ
ಬೆಂಗಳೂರು: ವೈಕುಂಠ ಏಕಾದಶಿ (ಡಿಸೆಂಬರ್ 23) ಅಂಗವಾಗಿ ಟಿ.ಎ.ಶರವಣ ಅವರು ಚಾರಿಟೆಬಲ್ ಟ್ರಸ್ಟ್ ವತಿಯಿಂದ ಭಕ್ತರಿಗೆ ಒಂದು ಲಕ್ಷ ಲಡ್ಡು ಪ್ರಸಾದವನ್ನು ವಿತರಣೆ ಮಾಡಲಾಗುತ್ತಿದೆ.
ಶ್ರೀ ವೆಂಕಟೇಶ್ವರ ಸ್ವಾಮಿಯ ದೇವಸ್ಥಾನಗಳಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ಪ್ರಸಾದವನ್ನು ನಮ್ಮ ಸಂಸ್ಥೆ ಮೂಲಕ ವಿತರಿಸುವುದಾಗಿ ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ ತಿಳಿಸಿದ್ದಾರೆ.
ಪವಿತ್ರ ದಿನವಾದ ಅಂದು ದೇವಸ್ಥಾನಗಳಲ್ಲಿ ತಿರುಪತಿ ಮಾದರಿಯ ಲಡ್ಡು ಪ್ರಸಾದ ಸ್ವೀಕರಿಸಬೇಕೆಂಬ ಬಯಕೆ ಭಕ್ತರಲ್ಲಿ ಇರುತ್ತದೆ. ಎಲ್ಲರೂ ತಿರುಪತಿಗೆ ಹೋಗಲು ಸಾಧ್ಯವಿಲ್ಲ, ಈ ಕಾರಣದಿಂದ ನಮ್ಮ ಸಂಸ್ಥೆ ಲಡ್ಡು ಪ್ರಸಾದವನ್ನು ವಿತರಿಸಲಿದೆ ಎಂದಿದ್ದಾರೆ ಅವರು.
ಈ ಬಗ್ಗೆ ಮಾಹಿತಿ ನೀಡಿರುವ ಟಿ.ಎ.ಶರವಣ ಅವರು, ವೈಕುಂಠ ಏಕಾದಶಿ ದಿನದಂದು ಮಹಾವಿಷ್ಣುವಿನ ವೈಕುಂಠ ಮಹಾದ್ವಾರ ತೆಗೆಯಲಾಗುತ್ತದೆ ಎಂದು ನಂಬಿಕೆ ಹಿಂದೂ ಧರ್ಮದಲ್ಲಿ ಇದೆ. ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕ ಎಂಬ ಬಿರುದಾಂಕಿತ ವೈಕುಂಠ ಏಕಾದಶಿಯಂದು ಶ್ರೀ ವೆಂಕಟೇಶ್ವರ ದರ್ಶನ ಪಡೆಯಬೇಕು, ತಿರುಮಲ ತಿರುಪತಿಗೆ ಹೋಗಬೇಕು, ಲಡ್ಡು ಪ್ರಸಾದ ಸ್ವೀಕರಿಸಬೇಕು ಎಂಬ ಬಯಕೆ ಭಕ್ತಿ, ಎಲ್ಲರಿಗೂ ಇರುತ್ತದೆ. ಎಲ್ಲರೂ ತಿರುಪತಿಗೆ ಹೋಗಲು ಸಾಧ್ಯವಾಗುವುದಿಲ್ಲ ಮತ್ತು ತಿರುಪತಿ ಲಡ್ಡು ಮಾದರಿಯಲ್ಲಿ ನೂರು ಬಾಣಸಿಗರು ಹಗಲುರಾತ್ರಿ ಎನ್ನದೇ ಒಂದು ಲಕ್ಷ ಲಡ್ಡು ತಯಾರಿಕೆಯಲ್ಲಿ ಮಗ್ನರಾಗಿದ್ದಾರೆ.
ಶುದ್ದ ತುಪ್ಪ, ಗೋಡಂಬಿ, ದಾಕ್ಷಿ, ಕಡಲೆಬೇಳೆ ಬಳಸಿ ತಿರುಪತಿಯ ಲಡ್ಡು ಮಾದರಿಯಲ್ಲಿ ತಯಾರಿಸಲಾಗಿದೆ. ಶ್ರೀ ವೆಂಕಟೇಶ್ವರ ದೇವಸ್ಥಾನಗಳಿಗೆ ಲಡ್ಡು ನೀಡಲಾಗುತ್ತದೆ. ಬಂದ ಭಕ್ತರಿಗೆ ಲಡ್ಡು ಪ್ರಸಾದ ವಿತರಿಸಲಾಗುವುದು. ತಿರುಪತಿ ತಿಮ್ಮಪ್ಪ, ಗೋವಿಂದ, ಹರೇ ಶ್ರೀನಿವಾಸ, ವೆಂಕಟೇಶ್ವರ, ಏಳು ಬೆಟ್ಟದ ಒಡೆಯ ಭಕ್ತರು ಅವರವರ ಭಕ್ತಿಭಾವನೆಗೆ ಸ್ಮರಣೆ ಮಾಡುತ್ತಾರೆ. ತಿರುಪತಿ ತಿಮ್ಮಪ್ಪ ನಂಬಿದ ಭಕ್ತರಿಗೆ ಎಂದು ಸಂಕಷ್ಟಗಳು ಬರುವುದಿಲ್ಲ ಎಂದು ಅವರು ಹೇಳಿದ್ದಾರೆ.
ಇಂದು ಜನರು ಬಹಳ ಆತಂಕದಲ್ಲಿ ಇದ್ದಾರೆ ಕೊರೊನಾ ಎಂಬ ಮಹಾಮಾರಿ ಮತ್ತೇ ತನ್ನ ಆರ್ಭಟ ತೋರಿಸುತ್ತಿದೆ ಎಂಬ ವರದಿಗಳು ಬರುತ್ತಿದೆ. ಸಕಲ ಸಂಕಷ್ಟಗಳು ದೂರವಾಗಲಿ, ರೋಗರುಜಿನಗಳು ಮುಕ್ತವಾಗಲಿ ಮತ್ತು ನಾಡಿನ ಸಮಸ್ತ ಜನರಿಗೆ ಸುಖ, ಶಾಂತಿ ನೆಮ್ಮದ್ದಿ ಲಭಿಸಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.
ಟಿ.ಎ.ಶರವಣ, ವಿಧಾನ ಪರಿಷತ್ ಸದಸ್ಯ