ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪಧವೀಧರೆ, ಸಂಸ್ಕೃತದಲ್ಲಿ ಟಾಪರ್; ಪತಿಯ ಮೇಲಿನ ಕೋಪಕ್ಕೆ ಗೋವಾ ಹೋಟೆಲ್ ನಲ್ಲಿ ಹೀನಕೃತ್ಯ ಪಾಪಿ ಹೆಣ್ಣು!
ಚಿತ್ರದುರ್ಗ: ತಾನು ಹೆತ್ತು ಪಾಲಿಸುತ್ತಿದ್ದ ನಾಲ್ಕು ವರ್ಷದ ಕಂದನನ್ನೇ ನಿರ್ಧಯಿ ಪಾಪಿ ತಾಯಿ ಕೊಂದು ಸೂಟ್‌ಕೇಸ್ ನಲ್ಲಿ ಹಾಕಿದ ಹೃದಯ ವಿದ್ರಾವಕ ಘಟನೆ ಕೋಟೆ ನಾಡಿನಿಂದ ವರದಿಯಾಗಿದೆ.
4 ವರ್ಷದ ಮಗುವನ್ನು ಹತ್ಯೆಗೈದು ಸೂಟ್ ಕೇಸ್ ನಲ್ಲಿ ಶವ ತುರುಕಿ ಸಾಗಿಸುತ್ತಿದ್ದ ಕಿರಾತಕಿ ತಾಯಿಯನ್ನು ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಐಮಂಗಲ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸ್ಟಾರ್ಟ್ ಅಪ್ ಫೌಂಡರ್ ಮತ್ತು ಸಿಇಒ ಆಗಿರುವ ಸುಚನಾ ಸೇಠ್ ಬಂಧಿತ ಆರೋಪಿ.
ಈಕೆ ಅತ್ಯಂತ ಬುದ್ದಿವಂತೆ,ದಿಟ್ಟೆ ಅಂತಹುದರಲ್ಲಿ ತನ್ನ ಮಗುವನ್ನು ಕೊಲೆ ಮಾಡುವಸ್ಟು ಕಲ್ಲು ಹೃದಯಿ ಏಕಾದಳೋ ತನಿಖೆಯಿಂದ ಗೊತ್ತಾಗಬೇಕಿದೆ. ಘಟನೆಗೆ ಆಕೆಯ ಸ್ನೇಹಿತರೇ ದಿಗ್ಭ್ರಮೆ ವ್ಯಕ್ತ ಪಡಿಸಿದ್ದಾರೆ. ಗೋವಾದ ಹೋಟೆಲ್ನಲ್ಲಿ ತಂಗಿದ್ದ ಸುಚನಾ ಸೇಠ್ (39) ತನ್ನ ಮಗುವನ್ನ ಹತ್ಯೆ ಮಾಡಿದ್ದಾಳೆ.
ಗೋವಾದ ಹೋಟೆಲ್ ನಲ್ಲಿ ತಂಗಿದ್ದ ಸುಚನಾ ಹೋಟೆಲ್ನಿಂದ ಬೆಂಗಳೂರಿಗೆ ಹೋಗಲು ಸೂಟ್ ಕೇಸ್ ಹಿಡಿದು ಟ್ಯಾಕ್ಸಿಯತ್ತ ಹೊರಟಿದ್ದ ವೇಳೆ ಹೋಟೆಲ್ ಸಿಬ್ಬಂದಿ ನಿಮ್ಮ ಜತೆ ಬಂದಿದ್ದ ಮಗು ಎಲ್ಲಿ ಎಂದು ವಿಚಾರಿಸಿದ್ದಾರೆ.
ಆ ವೇಳೆ ಸುಚನಾ ಸಂಬಂಧಿಕರ ಮನೆಗೆ ಕಳುಹಿಸಿದ್ದೇನೆ ಎಂದು ಸುಳ್ಳು ಹೇಳಿ ಟ್ಯಾಕ್ಸಿ ಮೂಲಕ ಬೆಂಗಳೂರಿನತ್ತ ಬಂದಿದ್ದಾಳೆ. ಈ ವೇಳೆ ಅನುಮಾನಗೊಂಡ ಹೋಟೆಲ್ ನವರು ರೂಮ್ ಸ್ವಚ್ಛಗೊಳಿಸಲು ಹೋಗಿದ್ದು ಅಲ್ಲಿ ರಕ್ತದ ಕಲೆಗಳು ಪತ್ತೆ ಆಗಿವೆ.
ತಕ್ಷಣ ಹೋಟೆಲ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ನಂಬರ್ ಹುಡುಕಿ ಸುಚನಾ ಪ್ರಯಾಣಿಸುತ್ತಿದ್ದ ಟ್ಯಾಕ್ಸಿ ಡ್ರೈವರ್ಗೆ ಕರೆ ಮಾಡಿದ್ದಾರೆ.
ಹೈವೇ ಬಳಿ ಪೊಲೀಸ್ ಠಾಣೆ ಕಂಡಾಕ್ಷಣ ಕಾರು ನಿಲ್ಲಿಸುವಂತೆ ಸೂಚನೆ ನೀಡಿದ್ದು, ಪೊಲೀಸರ ಸೂಚನೆಯಂತೆ ರಾಷ್ಟ್ರೀಯ ಹೆದ್ದಾರಿ 4ರ ಐಮಂಗಲ ಠಾಣೆ ಬಳಿ ಚಾಲಕ ಟ್ಯಾಕ್ಸಿ ನಿಲ್ಲಿಸಿ, ಐಮಂಗಲ ಪೊಲೀಸರಿಗೆ ಸುಚನಾಳನ್ನು ಒಪ್ಪಿಸಿದ್ದಾರೆ.
ತಪಾಸಣೆ ಮಾಡಿದಾಗ ಕಾರ್ ನ ಢಿಕ್ಕಿಯಲ್ಲಿದ್ದ ಸೂಟ್ ಕೇಸ್ ನಲ್ಲಿ ಮಗುವಿನ ಶವ ಪತ್ತೆಯಾಗಿದೆ. ಘಟನೆ ಸಂಬಂಧ ಗೋವಾದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುಚನಾಳನ್ನು ಗೋವಾ ಪೊಲೀಸರಿಗೆ ಹಸ್ತಾಂತರಿಸಲಾಗಿದ್ದು ಅಲ್ಲಿನ ಪೊಲೀಸರು ತನಿಖೆ ಮುಂದುವರಿಸಲಿದ್ದಾರೆ.
ಸುಚನಾ ಸೇಠ್ ಪತಿ ವೆಂಕಟ್ ವಿದೇಶದಲ್ಲಿ ಸಾಫ್ಟ್‌ವೇರ್ ಡೆವೆಲಪರ್ ಆಗಿದ್ದು ವಿಷಯ ತಿಳಿದು ಬೆಂಗಳೂರಿಗೆ ಬರುತ್ತಿದ್ದಾರೆ. ಒಂದೆರಡು ವರ್ಷಗಳಿಂದ ಸುಚನಾ ಪತಿಯಿಂದ ದೂರವಿದ್ದಳೆಂದೂ ಗಂಡನೊಂದಿಗೆ ಕಲಹವಿತ್ತೆಂದು ಗೊತ್ತಾಗಿದೆ. ಗಂಡನ ಮೇಲಿನ ಕೋಪಕ್ಕೆ ಹೆತ್ತ ಮಗುವನ್ನು ಈ ಪಾಪಿ ಹೆಣ್ಣು ಕೊಂದಿದ್ದಾಳೆ ಎಂದು ಗೊತ್ತಾಗಿದೆ.
ಯಾರು ಈ ಸುಚನಾ ಸೇಠ್?
ಈ ಸುಚನಾ ಸೇಠ್ ಮೂಲತಃ ಪಶ್ಚಿಮ ಬಂಗಾಳದ ಕೋಲ್ಕತಾದವರು. ಕೋಲ್ಕತಾ ವಿಶ್ವವಿದ್ಯಾಲಯದ ಭೌತಶಾಸ್ತ್ರ ಸ್ನಾತಕೋತ್ತರ ಪದವಿಧರೆ. ಸಂಸ್ಕೃತ ವಿದ್ಯಾ ಪಾರಂಗತೆ. ಕೆಲ ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದದ್ದ ರೆಸಿಡೆನ್ಸಿ ರಸ್ತೆಯಲ್ಲಿರುವ ʼದಿ ಮೈಂಡ್‌ಫುಲ್ ಎಐ ಲ್ಯಾಬ್ʼನ ಸಂಸ್ಥಾಪಕಿ ಹಾಗೂ ಸಿಈಒ. ಕಳೆದ ನಾಲ್ಕು ವರ್ಷಗಳಿಂದ ಆ ಸಂಸ್ಥೆಯನ್ನು ನಡೆಸುತ್ತಿರುವ ಆಕೆ; ಸುಶಿಕ್ಷಿತೆ ಹಾಗೂ ಪ್ರಜ್ಞಾವಂತೆ.
ಬೆಂಗಳೂರಿನ ಬೂಮರಾಂಗ್ ಕಾಮರ್ಸ್ ಸಂಸ್ಥೆಯಲ್ಲಿ ಹಿರಿಯ ದತ್ತಾಂಶ (ಡಾಟ) ವಿಜ್ಞಾನಿಯಾಗಿದ್ದ ಆಕೆ, ಕೊನೆಗೆ ತನ್ನ ಸ್ವಂತ ಕಂಪನಿಯನ್ನು ಸ್ಥಾಪಿಸಿ ಗ್ರಾಹಕರಿಗಾಗಿವ ಕೇತಕ ಬುದ್ಧಿಮತ್ತೆ (Artificial Intelligence) ಆಧಾರಿತ ಸೇವೆ ಒದಗಿಸುತ್ತಿದ್ದರು.
ಸುಚನಾ ಸೇಠ್ ಲಿಂಕ್ಡ್‌ಇನ್ ಪ್ರೊಫೈಲ್ ಪ್ರಕಾರ, ಡಾಟಾ ಸೈನ್ಸಸ್ ಗ್ರೂಪ್, ಇನ್ನೋವೇಶನ್ ಲ್ಯಾಬ್‌ಗಳಲ್ಲಿ ಹಿರಿಯ ಅನಾಲಿಟಿಕ್ಸ್ ಸಲಹೆಗಾರ್ತಿಯಾಗಿ ಮತ್ತು ರಾಮನ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನಲ್ಲಿ ರಿಸರ್ಚ್ ಫೆಲೋ ಆಗಿ ಕೆಲಸ ಮಾಡಿದ್ದಾಳೆ.