34 ಶಾಸಕರಿಗೆ ನಿಗಮ ಮಂಡಳಿ ಭಾಗ್ಯ; ಎಲ್ಲರಿಗೂ ಸಂಪುಟ ದರ್ಜೆ ಪ್ರಾಪ್ತಿ
ಬೆಂಗಳೂರು: ಕಾಂಗ್ರೆಸ್ ಸರಕಾರದ ನಿಗಮ ಮಂಡಳಿ ಗಜ ಪ್ರಸವದ ಸಂಕಷ್ಟ ಕೊನೆಗೂ ಅಂತ್ಯವಾಗಿದೆ.
ಬಾಗೇಪಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ, ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ, ಕೆಜಿಎಫ್ ಶಾಸಕಿ ರೂಪಕಲಾ ಶಶಿಧರ್, ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಸೇರಿದಂತೆ 34 ಶಾಸಕರಿಗೆ ನಿಗಮ ಮಂಡಳಿ ಭಾಗ್ಯ ದೊರೆತಿದೆ.
ಎರಡು ವರ್ಷದ ಅವಧಿ ಅಥವಾ ಮುಂದಿನ ಆದೇಶದವರೆಗೆ ನೇಮಕಾತಿ ಆದೇಶ ಜಾರಿಯಲ್ಲಿ ಇರುತ್ತದೆ ಹಾಗೂ ಎಲ್ಲರಿಗೂ ಸಂಪುಟ ದರ್ಜೆ ದಯಪಾಲಿಸಲಾಗಿದೆ.
ಎಸ್ ಎನ್ ಸುಬ್ಬಾರೆಡ್ಡಿ ಅವರಿಗೆ ಕರ್ನಾಟಕ ಬೀಜ ನಿಗಮದ ಅಧ್ಯಕ್ಷಗಿರಿ ಸಿಕ್ಕಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯ ಡಾ.ಎಂ.ಸಿ.ಸುಧಾಕರ್ ಅವರು ಈಗಾಗಲೇ ಮಂತ್ರಿಯಾಗಿದ್ದಾರೆ. ಅಲ್ಲಿಗೆ ಜಿಲ್ಲೆಯಲ್ಲಿ ಇಬ್ಬರು ಶಾಸಕರಿಗೆ ಅಧಿಕಾರ ಸಿಕ್ಕಂತೆ ಆಗಿದೆ.
ಕೋಲಾರ ಜಿಲ್ಲೆಯಲ್ಲಿ ಇಬ್ಬರು ಶಾಸಕರಿಗೆ ನಿಗಮ ಮಂಡಳಿ ಭಾಗ್ಯ ಸಿಕ್ಕಿದೆ. ಮೂರು ಬಾರಿ ಗೆದ್ದು ಹ್ಯಾಟ್ರಿಕ್ ದಾಖಲೆ ಮಾಡಿರುವ ಬಂಗಾರಪೇಟೆ ಶಾಸಕ ಎಸ್ ಎನ್ ನಾರಾಯಣಸ್ವಾಮಿ ಅವರು ಶತಾಯ ಗತಾಯ ಮಂತ್ರಿ ಆಗಲೇಬೇಕು ಎಂದು ಪ್ರಯತ್ನ ಮಾಡಿದ್ದರು
ಆದರೆ, ಪೊಗದಸ್ತಾದ ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ ಕೊಡಲಾಗಿದೆ
ಕೆಜಿಎಫ್ ಶಾಸಕಿ ರೂಪಕಲಾ ಶಶಿಧರ್ ಅವರಿಗೆ ಅಷ್ಟೇನೂ ಪ್ರಭಾವೀ ಅಲ್ಲದ ಕರ್ನಾಟಕ ಕರಕುಶಲ ಅಭಿವೃದಿ ನಿಗಮವನ್ನು ನೀಡಲಾಗಿದೆ. ಅಲ್ಲಿಗೆ ಕೋಲಾರ ಜಿಲ್ಲೆಗೆ ಎರಡು ನಿಗಮ ಮಂಡಳಿಗಳನ್ನು ಹಂಚಿಕೆ ಮಾಡಲಾಗಿದೆ.
ಎಸ್ ಎನ್ ಸುಬ್ಬಾರೆಡ್ಡಿ ಅವರಿಗೆ ಸಿಕ್ಕಿರುವ ಬೀಜ ನಿಗಮವು ಭರ್ಜರಿಯಾಗಿದೆ.
ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿ ಹಾಗೂ ಬಾಗೇಪಲ್ಲಿ ಶಾಸಕ ಸುಬ್ಬಾರೆಡ್ಡಿ ಅವರಿಗೆ ಭರ್ಜರಿ ನಿಗಮ ಮಂಡಳಿ ಭಾಗ್ಯ ಸಿಗಲಿದೆ ಎಂದು ಸಿಕೆನ್ಯೂಸ್ ನೌ ಈ ಹಿಂದೆಯೇ ವರದಿ ಮಾಡಿತ್ತು
ಯಾರಿಗೆ ಯಾವ ಮಂಡಳಿ?
ಈ ಕೆಳಗಿನ ಸ್ಲೈಡ್ ಶೋ ಗಮನಿಸಿ
- ಹಂಪನಗೌಡ ಬಾದರ್ಲಿ / ಸಣ್ಣ ಕೈಗಾರಿಕೆಗಳ ಮೂಲಸೌಕರ್ಯ ಅಭಿವೃದ್ಧಿ ನಿಗಮ
- ಅಪ್ಪಾಜಿ ಸಿ.ಎಸ್.ನಾಡಗೌಡ / ಕರ್ನಾಟಕಸೋಪ್ಸ್ ಅಂಡ್ ಡಿಟರ್ಜಂಟ್ ನಿಯಮಿತ (ಕೆಎಸ್ಡಿಎಲ್)
- ಭರಮಗೌಡ ಅಲಗೌಡ ಕಾಗೆ (ರಾಜು ಕಾಗೆ) / ವಾಯವ್ಯ ಸಾರಿಗೆ ನಿಗಮ ನಿಯಮಿತ
- ಹೆಚ್.ವೈ.ಮೇಟಿ / ಬಾಗಲಕೋಟೆ ನಗರಾಭಿವೃದ್ಧಿ ಪ್ರಾಧಿಕಾರ
- ಎಸ್.ಆರ್.ಶ್ರೀನಿವಾಸ (ಗುಬ್ಬಿ ವಾಸು) / ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ
- ಬಸವರಾಜ ನೀಲಪ್ಪ ಶಿವಣ್ಣನವರ್ / ಅರಣ್ಯ ಅಭಿವೃದ್ಧಿ ನಿಗಮ
- ಬಿ.ಜಿ.ಗೋವಿಂದಪ್ಪ / ಆಹಾರ ಮತ್ತು ನಾಗರಿಕ ಸರಬರಾಜು ನಿಗಮ
- ಎಚ್.ಸಿ.ಬಾಲಕೃಷ್ಣ / ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ
- ಜಿ.ಎಸ್.ಪಾಟೀಲ್ / ಖನಿಜ ಅಭಿವೃದ್ಧಿ ನಿಗಮ ನಿಯಮಿತ
- ಎನ್.ಎ.ಹ್ಯಾರಿಸ್ / ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ
- ಮಹಾಂತೇಶ್ ಶಿವಾನಂದ ಕೌಜಲಗಿ / ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ
- ಸಿ.ಪುಟ್ಟರಂಗಶೆಟ್ಟಿ / ಮೈಸೂರು ಸೇಲ್ಸ್ ಇಂಟರ್ನ್ಯಾಷನಲ್ ಲಿಮಿಟೆಡ್
- ಜಿ.ಟಿ.ಪಾಟೀಲ್ / ಹಟ್ಟಿ ಚಿನ್ನದ ಗಣಿ
- ರಾಜಾ ವೆಂಕಟಪ್ಪ ನಾಯಕ / ಕರ್ನಾಟಕ ರಾಜ್ಯ ಉಗ್ರಾಣ ನಿಗಮ
- ಬಿ.ಕೆ.ಸಂಗಮೇಶ್ವರ / ಕರ್ನಾಟಕ ಮೂಲಭೂತ ಸೌಕರ್ಯಗಳ ನಿಗಮ (ಭೂಸೇನಾ ನಿಗಮ)
- ಕೆ.ಎಂ.ಶಿವಲಿಂಗೇಗೌಡ / ಕರ್ನಾಟಕ ಗೃಹ ಮಂಡಳಿ
- ಅಬ್ಬಯ್ಯ ಪ್ರಸಾದ್ / ಕರ್ನಾಟಕ ರಾಜ್ಯ ಕೊಳಚೆ ಅಭಿವೃದ್ಧಿ ಮಂಡಳಿ
- ಬೇಳೂರು ಗೋಪಾಲಕೃಷ್ಣ/ ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ನಿಗಮ
- ಎಸ್.ಎನ್.ನಾರಾಯಣಸ್ವಾಮಿ / ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ
- ಟಿ.ರಘುಮೂರ್ತಿ / ಕರ್ನಾಟಕ ರಾಜ್ಯ ಕೈಗಾರಿಕೆಗಳ ಮಂಡಳಿ
- ರಮೇಶ್ ಬಂಡಿಸಿದ್ದೇಗೌಡ / ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ (ಚೆಸ್ಕಾಂ)
- ಬಿ.ಶಿವಣ್ಣ / ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)
- ಎಸ್.ಎನ್.ಸುಬ್ಬಾರೆಡ್ಡಿ / ಕರ್ನಾಟಕ ರಾಜ್ಯ ಬೀಜ ನಿಗಮ ನಿಯಮಿತ
- ವಿನಯ್ ಕುಲಕರ್ಣಿ / ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ
- ಅನಿಲ್ ಚಿಕ್ಕಮಾದು: ಜಂಗಲ್ ಲಾಡ್ಜಸ್
- ಬಸನಗೌಡ ದದ್ದಲ್ / ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ
- ಖನೀಜ್ ಫಾತಿಮಾ / ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ
- ವಿಜಯಾನಂದ ಕಾಶಪ್ಪನರ್ / ಕರ್ನಾಟಕ ಕ್ರೀಡಾ ಪ್ರಾಧಿಕಾರ
- ಟಿ.ಡಿ.ರಾಜೇಗೌಡ: ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮ ನಿಯಮಿತ
- ಎಂ.ರೂಪಕಲಾ: ಕರಕುಶಲ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತ
- ಸತೀಶ್ ಕೃಷ್ಣ ಸೈಲ್ / ಕರ್ನಾಟಕ ಮಾರ್ಕೆಟಿಂಗ್ ಕನ್ಸಲ್ ಟೆಂಟ್ ಅಂಡ್ ಏಜೆನ್ಸೀಸ್
- ಶರತ್ ಬಚ್ಚೇಗೌಡ / ಕರ್ನಾಟಕ ವಿದ್ಯುನ್ಮಾನ ಅಭಿವೃದ್ಧಿ ನಿಗಮ (ಕಿಯೋನಿಕ್ಸ್)
- ಜಿ.ಎಂ.ಗಣೇಶ್ / ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ನಿಯಮಿತ
- ಬಸವನಗೌಡ ತುರುವಿಹಾಳ / ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ
ಮೇಲಿನ ಈ ಪಟ್ಟಿಯನ್ನು ಸಿಬ್ಬಂದಿ ಮತ್ತು ಆಡಳಿ ಸುಧಾರಣಾ ಇಲಾಖೆ ಸಂಜೆ ಹೊತ್ತಿಗೆ ಬಿಡುಗಡೆ ಮಾಡಿದೆ.
ಇಬ್ಬರು ಶಾಸಕರ ಹೆಸರು ನಾಪತ್ತೆ
ಅಧಿಕೃತ ಪಟ್ಟಿ ಹೊರಬೀಳುವುದಕ್ಕೂ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಲೆಟರ್ ಹೆಡ್ ನಲ್ಲಿ ಮುದ್ರಣವಾಗಿ ಸಿದ್ದರಾಮಯ್ಯ ಅವರ ಸಹಿಯೇ ಇದ್ದ ಪಟ್ಟಿಯೊಂದು ಜಾಲತಾಣಗಳಲ್ಲಿ ವೈರಲ್ ಆಗಿತ್ತು. ವಿದ್ಯುನ್ಮಾನ ಮಾಧ್ಯಮಗಳಲ್ಲಿ ಆ ಪಟ್ಟಿಯೇ ಪ್ರಕಟವಾಯಿತು. ಆದರೆ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಿಂದ ಹೊರಬಿದ್ದ ಪಟ್ಟಿಯಲ್ಲಿ ವೈರಲ್ ಆದ ಪಟ್ಟಿಯಲ್ಲಿದ್ದ ಕೆಲ ಶಾಸಕರ ಹೆಸರುಗಳು ಮಿಸ್ ಆಗಿವೆ
ಪಿ.ಎಂ.ನರೇಂದ್ರಸ್ವಾಮಿ / ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಲಿ
ಜೆ.ಟಿ.ಪಾಟೀಲ್: ಹಟ್ಟಿ ಚಿನ್ನದ ಗಣಿ
ಈ ಇಬ್ಬರು ಶಾಸಕರ ಹೆಸರುಗಳು ಅಧಿಕೃತ ಪಟ್ಟಿಯಲ್ಲಿ ಇಲ್ಲ. ಕೊನೆಕ್ಷಣದಲ್ಲಿ ಇವರಿಬ್ಬರ ನೇಮಕಕ್ಕೆ ತಡೆ ಬಿತ್ತಾ ಎನ್ನುವುದು ಅನುಮಾನವಾಗಿದೆ.