ಆರೋಪ ಪ್ರತ್ಯಾರೋಪಗಳ ನಡುವಿನ ಸತ್ಯಾಸತ್ಯತೆ, ಅಸಲಿ ಅಂಕಿ-ಅಂಶ ಇಲ್ಲಿದೆ ನೋಡಿ
ಬೆಂಗಳೂರು: ನಮ್ಮ ತೆರಿಗೆ ನಮ್ಮ ಹಕ್ಕು ಎಂದು ಕೇಂದ್ರದ ವಿರುದ್ಧ ತೆರಿಗೆ ಯುದ್ಧ ಸಾರಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಡಿರುವ ಆರೋಪಗಳಲ್ಲಿ ಸತ್ಯ ಇದೆಯಾ? ಅವರು ನೀಡುತ್ತಿರುವ ಅಂಕಿ-ಅಂಶಗಳಲ್ಲಿ ಹುರುಳು ಇದೆಯಾ ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ ಇದೆ.
ಯಾವುದೇ ರಾಜ್ಯ ಇರಲಿ; ಮೂರು ರೀತಿಯ ತೆರಿಗೆಗಳು ಇರುತ್ತವೆ. ೧.ಜಿಎಸ್ ಟಿ ೨.ಆದಾಯ ತೆರಿಗೆ ೩.ಕಾರ್ಪೊರೇಟ್ ತೆರಿಗೆ
15ನೇ ಹಣಕಾಸು ಆಯೋಗದ ವರದಿಯಲ್ಲಿ ಜನಸಂಖ್ಯಾ ಕಾರ್ಯಕ್ಷಮತೆ (Demographic Performance) ಗೆ 12.5% ಅವಕಾಶ (Weightage) ನೀಡಲಾಗಿದೆ. ಜನಸಂಖ್ಯೆ ನಿಯಂತ್ರಣ ಮಾಡಿದರೆ ಅದರ ಲಾಭ ಆಯಾ ರಾಜ್ಯಕ್ಕೆ ದೊರೆಯುತ್ತದೆ. ಇದು ಸರಳ ಸೂತ್ರ.
ಉದಾಹರಣೆ, ಜನಸಂಖ್ಯೆ ನಿಯಂತ್ರಣ ಮಾಡಿದ ಕರ್ನಾಟಕ ರಾಜ್ಯ 1,000 ರೂ. ಜಿಎಸ್ ಟಿ ಸಂಗ್ರಹಿಸಿದರೆ, 500 ರೂ. ರಾಜ್ಯಕ್ಕೇ ಉಳಿದುಕೊಳ್ಳುತ್ತದೆ. ಉಳಿದ 500 ರೂ. ಕೇಂದ್ರಕ್ಕೆ ಹೋಗುತ್ತದೆ. ಕೇಂದ್ರಕ್ಕೆ ಹೋದ 500 ರೂ.ನಲ್ಲಿ 42% ಆಯಾ ರಾಜ್ಯಗಳ ʼಸಂಗ್ರಹಿಸಲಾದ ಖಾತೆʼ (pooled account) ಗೆ ಹೋಗುತ್ತದೆ. ಅಂದರೆ, 500 ರೂ.ಗಳಲ್ಲಿ 210 ರೂ.ಗಳನ್ನು ನಮ್ಮ ರಾಜ್ಯಕ್ಕೆ ಕೇಂದ್ರವೇ ವಾಪಸ್ ಕೊಟ್ಟು ಬಿಡುತ್ತದೆ. ಅಂತಿಮವಾಗಿ ಕೇಂದ್ರ ಸರಕಾರಕ್ಕೆ ಉಳಿಯುವುದು 50%, ಅಂದರೆ; 58 ರೂ. ಮಾತ್ರ.
ಕೇಂದ್ರದಿಂದ ರಾಜ್ಯಕ್ಕೆ ಬರುತ್ತಿರುವ ತೆರಿಗೆ ಪಾಲು 13% ಎಂದು ಸಿದ್ದರಾಮಯ್ಯ ಅವರು ಹೆಳಿದ್ದರು. ಆದರೆ, ಸಿಕೆನ್ಯೂಸ್ ನೌ ಗೆ ಸಿಕ್ಕಿರುವ ಕೇಂದ್ರ ಸರಕಾರದ ಅಧಿಕೃತ ಮಾಹಿತಿಯಂತೆ, ರಾಜ್ಯಕ್ಕೆ ಸಿಗುತ್ತಿರುವ ತೆರಿಗೆ ಪಾಲು 58%. ಹಣಕಾಸು ಆಯೋಗದ ಮಾನದಂಡಗಳ ಪ್ರಕಾರ ತೆರಿಗೆ ಪಾಲು, ಅನುದಾನ ನೀಡಿಕೆ ಪ್ರಮಾಣ ನಿರ್ಧರಿತವಾಗುತ್ತದೆ ಎಂಬುದು ನಿಜ. ಆದರೆ; . ಅದಕ್ಕೆ 5 ಮಾನದಂಡಗಳು ಇರುತ್ತವೆ.
ಆ ಮಾನದಂಡಗಳು ಯಾವುವು?
ರಾಜ್ಯಗಳ ಆದಾಯ
ಹೆಚ್ಚು ಬಡತನವುಳ್ಳ ರಾಜ್ಯಗಳಿಗೆ 50% ತೆರಿಗೆ ಪಾಲಿನ ಅವಕಾಶ (Weightage) ವನ್ನು ಹಿಂದಿನ ಕಾಂಗ್ರೆಸ್ ಸರಕಾರದ (ಡಾ.ಮನಮೋಹನ್ ಸಿಂಗ್ ಪ್ರಧಾನಿ ಆಗಿದ್ದ ವೇಳೆ) 14ನೇ ಹಣಕಾಸು ಆಯೋಗವೇ (2015-2020) ನೀಡಿತ್ತು. ಆ ನಂತರ ಬಂದ ಬಿಜೆಪಿ ಸರಕಾರ (ನರೇಂದ್ರ ಮೋದಿ ಸರಕಾರ) (2020-2021) ಅವಧಿಯ 15ನೇ ಹಣಕಾಸು ಆಯೋಗವು ಈ ಅವಕಾಶವನ್ನು 45%ಗೆ ಇಳಿಕೆ ಮಾಡಿತು. ಸಿದ್ದರಾಮಯ್ಯ ಅವರು 5% ಕಡಿತ ಮಾಡಲಾಗಿದೆ ಎಂದು ಆರೋಪ ಮಾಡಿದ್ದರು. ವಾಸ್ತವ ಸಂಗತಿ ಎಂದರೆ, ಹಾಗೆ ಕಡಿತ ಮಾಡಿದ 5% ತೆರಿಗೆ ಪಾಲನ್ನು ಕರ್ನಾಟಕ, ತಮಿಳುನಾಡಿನಂಥ ಮುಂದುವರಿದ ರಾಜ್ಯಗಳಿಗೇ ಕೊಡುತ್ತಿದೆ.
ವಿಸ್ತೀರ್ಣ
ಇದರಲ್ಲಿ ಬದಲಾವಣೆ ಮಾಡಲು ಆಗುವುದಿಲ್ಲ. ಈ ಮಾನದಂಡದಲ್ಲಿ 15% ಅವಕಾಶವನ್ನು 14 ಮತ್ತು 15ನೇ ಹಣಕಾಸು ಆಯೋಗಗಳ ವರದಿಗಳಲ್ಲಿಯೇ ಕೊಡಲಾಗಿದೆ.
ಜನಸಂಖ್ಯೆ
ಕಾಂಗ್ರೆಸ್ ಸರಕಾರದ ಕಾಲದ 14ನೇ ಹಣಕಾಸು ಆಯೋಗದ ಕಾಲದಲ್ಲಿ ಜನಸಂಖ್ಯೆಗೆ 27% ಅವಕಾಶ ಕೋಡಲಾಗಿತ್ತು. 1971ರಲ್ಲಿ ನಡೆಸಿದ ಜನಗಣತಿಗೆ ಅನುಗುಣವಾಗಿ 17.5% ಹಾಗೂ 2011ರ ಜನಗಣತಿಗೆ ಅನುಗುಣವಾಗಿ 10% ಸೇರಿ ಒಟ್ಟು 24.5% ಅವಕಾಶ (Weightage) ಕೊಡಲಾಗಿತ್ತು.
ಅದೇ ಬಿಜೆಪಿ ಸರಕಾರದ ಕಾಲದ 15ನೇ ಹಣಕಾಸು ಆಯೋಗದ ಕಾಲದಲ್ಲಿ ಜನಸಂಖ್ಯೆ ಮಾನದಂಡಕ್ಕೆ ಕೇವಲ 15% ಅವಕಾಶ (Weightage) ಕೊಡಲಾಯಿತು. ಹಾಗಾದರೆ, ಸಿದ್ದರಾಮಯ್ಯನವರು ಜನಸಂಖ್ಯೆ ಮಾನದಂಡದ ಪ್ರಕಾರ ತೆರಿಗೆ ಪಾಲು ಹಂಚಿಕೆ ಬಗ್ಗೆ ಹೇಳಿದ್ದು ಸುಳ್ಳು ಎಂಬುದನ್ನು ಕೇಂದ್ರದ ಅಂಕಿ ಅಂಶಗಳು ಸಾಬೀತು ಮಾಡುತ್ತವೆ.
15ನೇ ಹಣಕಾಸು ಆಯೋಗವು ಜನಸಂಖ್ಯಾ ಕಾರ್ಯಕ್ಷಮತೆಗೆ 12.5% ಅವಕಾಶ ಕೊಟ್ಟಿದೆ. ಯಾವುದೇ ರಾಜ್ಯ ಜನಸಂಖ್ಯೆಯನ್ನು ನಿಯಂತ್ರಣ ಮಾಡಿದೆ ಎಂದಾದರೆ ಅದಕ್ಕೆ 12.5% ತೆರಿಗೆ ಪಾಲು ಸಿಗುತ್ತದೆ. ಯಾವುದೇ ರಾಜ್ಯ ಜನಸಂಖ್ಯೆ ನಿಯಂತ್ರಣ ಮಾಡದಿದ್ದರೆ ಅವರಿಗೆ 12.5% ತೆರಿಗೆ ಪಾಲು ಸಿಗುವುದಿಲ್ಲ. ಇಂಥ ಅವಕಾಶದಿಂದ ಬಿಹಾರ, ಉತ್ತರ ಪ್ರದೇಶ, ಮಧ್ಯ ಪ್ರದೇಶದಂಥ ರಾಜ್ಯಗಳು ವಂಚಿತವಾಗಿವೆ.
ಅರಣ್ಯ
ಈ ಮಾನದಂಡದ ಪ್ರಕಾರ 14ನೇ ಹಣಕಾಸು ಆಯೋಗ 7.5% ಅವಕಾಶ ನೀಡಿತ್ತು. 15ನೇ ಹಣಕಾಸು ಆಯೋಗವು ಅದಕ್ಕೆ 10% ನೀಡಿದೆ. ಅಂದರೆ, ಬಿಜೆಪಿ ಸರಕಾರದ ಕಾಲದ ಹಣಕಾಸು ಆಯೋಗ ಈ ವಿಭಾಗದ ತೆರಿಗೆ ಪಾಲಿನಲ್ಲಿ ಹೆಚ್ಚಳ ಮಾಡಿದೆ
ತೆರಿಗೆ ಸಂಗ್ರಹ & ಹಣಕಾಸು ಶಿಸ್ತು
ಈ ಮಾನದಂಡದ ಪ್ರಕಾರ 15ನೇ ಹಣಕಾಸು ಆಯೋಗ 2.5% ಅವಕಾಶ ನೀಡಿದೆ. ಇದು ಎಲ್ಲಾ ರಾಜ್ಯಗಳಿಗೆ ಅನುಕೂಲ ಮತ್ತು ಪ್ರೋತ್ಸಾಹ ಕೊಡುವ ಅಂಶ. ಮುನ್ನಡೆಯುವುದಕ್ಕೆ ಸಹಕಾರಿ. ಯಾವ ರಾಜ್ಯದಲ್ಲಿ ಉತ್ತಮ ರೀತಿಯ ತೆರಿಗೆ ಸಂಗ್ರಹ, ಸೃಷ್ಟಿ ಇರುತ್ತದೆಯೋ ಆ ರಾಜ್ಯಕ್ಕೆ ಹೆಚ್ಚಿನ ಅನುಕೂಲ ಸಿಗುತ್ತದೆ. ಆರ್ಥಿಕ ಶಿಸ್ತು ಉಳ್ಳ ರಾಜ್ಯಗಳಿಗೆ ಲಾಭವೂ ಹೆಚ್ಚಾಗಿರುತ್ತದೆ.
ಸಿದ್ದರಾಮಯ್ಯ ಅವರು ಸಂಬಂಧ ಇಲ್ಲದ ಅಂಶಗಳ ಬಗ್ಗೆ ಪ್ರಸ್ತಾಪಿಸಿ ತಪ್ಪು ಮಾಹಿತಿ ನೀಡಿದ್ದಾರೆಯೇ ಎನ್ನುವುದು ನನ್ನ ಪ್ರಶ್ನೆ. ಒಂದು ವೇಳೆ ಅವರ ಮಾಹಿತಿ ತಪ್ಪಾಗಿದ್ದರೆ ಕರ್ನಾಟಕದ ಬಗ್ಗೆ ದೇಶಕ್ಕೆ ಹಾಗೂ ಜಾಗತಿಕ ಹೂಡಿಕೆದಾರರಿಗೆ ಯಾವ ಸಂದೇಶ ಹೋಗುತ್ತದೆ? ಇದು ನಿಜಕ್ಕೂ ಆತಂಕಕಾರಿ ಅಂಶ.
ಹೆಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ
ಪ್ರಧಾನಂತ್ರಿ ಆವಾಸ್ ಯೋಜನೆ
ಪ್ರಧಾನಮಂತ್ರಿ ಆವಾಸ್ ಯೋಜನೆಯಲ್ಲಿ ಕೇಂದ್ರ ಮತ್ತು ರಾಜ್ಯಗಳದ್ದು 50% – 50% ಪಾಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದರು. ಇದು ಕೂಡ ಸುಳ್ಳು ಎನ್ನುವುದು ಅಂಕಿ-ಅಂಶಗಳ ಮೂಲಕ ಗೊತ್ತಾಗುತ್ತದೆ. ಈ ಅಂಕಿ ಅಂಶದ ಪ್ರಕಾರ ಬೆಟ್ಟಗುಡ್ಡ ರಹಿತ ಪ್ರದೇಶದಲ್ಲಿ 60% ಹಣವನ್ನು ಕೇಂದ್ರ ನೀಡಿದರೆ, 40% ಹಣ ರಾಜ್ಯದ್ದು. ಅದೇ ರೀತಿ ಗುಡ್ಡಗಾಡು ಪ್ರದೇಶದಲ್ಲಿ 90% ಹಣ ಕೇಂದ್ರದ್ದು, 10% ಹಣ ರಾಜ್ಯಗಳದ್ದು ಈಶಾನ್ಯ ಭಾರತದ ರಾಜ್ಯಗಳು ಸೇರಿದಂತೆ ಅತಿಹೆಚ್ಚು ಅರಣ್ಯ ಹೊಂದಿರುವ ರಾಜ್ಯಗಳಿಗೆ ಇದರ ಅನುಕೂಲ ಹೆಚ್ಚು ದೊರೆಯುತ್ತಿದೆ.)
ಜಿಎಸ್ ಟಿ ಪರಿಹಾರ & ಒಪ್ಪಂದ
ಜಿಎಸ್ ಟಿ ಪರಿಹಾರವನ್ನು 2022ಕ್ಕೇ ನಿಲ್ಲಿಸಿಬಿಟ್ಟರು ಎಂದು ಸಿದ್ದರಾಮಯ್ಯ ಅವರು ಕೇಂದ್ರದ ವಿರುದ್ಧ ಆರೋಪ ಮಾಡಿದ್ದರು. ಅವರು ಹೇಳಿದ್ದು ಅದು ಸರಿ ಇದೆ. ಈ ಬಗ್ಗೆ ಕೇಂದ್ರ – ರಾಜ್ಯಗಳ ಮಧ್ಯೆ ಒಪ್ಪಂದ ಆಗಿದೆ. ಆ ಒಪ್ಪಂದ 2022ಕ್ಕೆ ಅಂತ್ಯವಾಗಿದೆ.
2022ರ ವರೆಗೆ ಕೇಂದ್ರ ಸರಕಾರ ಜಿಎಸ್ ಟಿ ಪರಿಹಾರದಲ್ಲಿ ಒಂದು ರೂಪಾಯಿ ಬಾಕಿ ಕೂಡ ಉಳಿಸಿಕೊಂಡಿಲ್ಲ ಹಾಗೂ ಕೇಂದ್ರ ಬಜೆಟ್ ದೊಡ್ಡದಾಗುವುದಕ್ಕೂ, ರಾಜ್ಯಕ್ಕೆ ಪಾಲು ಕೊಡುವುದಕ್ಕೂ ಸಂಬಂಧವಿಲ್ಲ. ರಾಜ್ಯಗಳಿಗೆ ಕೊಡುವ ಹಣ, ಯೋಜನೆಗಳಿಗೆ ಬಿಡುಗಡೆ ಮಾಡುವುವಕ್ಕೆ ಹಣದ ಕೊರತೆ ಎದುರಾದರೆ ಕೇಂದ್ರ ಸಾಲ ಪಡೆಯುತ್ತದೆ ಅಥವಾ ರಾಜ್ಯಗಳಲ್ಲಿ ಜಾರಿ ಆಗುವ ಕೇಂದ್ರ ಯೋಜನೆಗಳಿಗೆ ಕೇಂದ್ರವೇ ಹಣವನ್ನೂ ನೀಡುತ್ತದೆ. ಆ ಸಾಲವನ್ನು ಕೇಂದ್ರವೇ ಪಾವತಿಸುತ್ತದೆ.
ಅಲ್ಲದೆ; ರಾಜ್ಯಗಳಿಗೆ ಅನುಕೂಲವಾಗಲಿ ಎಂದು ಕೋವಿಡ್ ಕಾಲದಲ್ಲಿ ತಾನು ಮಾಡಿದ್ದ ಸಾಲವನ್ನು ಕೇಂದ್ರವೇ ಭರಿಸುತ್ತಿದೆ. 50 ವರ್ಷಗಳ ಬಡ್ಡಿರಹಿತ ಜಿಎಸ್ ಟಿ ಸಾಲವನ್ನು ರಾಜ್ಯಕ್ಕೆ ಕೊಟ್ಟಿದೆ. ಕೇಂದ್ರದ ಬಜೆಟ್ ಹಿಗ್ಗಿದಂತೆ ರಾಜ್ಯದ ಬಜೆಟ್ ಕೂಡ ಹಿಗ್ಗುತ್ತದೆ. ಇವತ್ತು 3.೭೧ ಲಕ್ಷ ಕೋಟಿ ಗಾತ್ರದ ಬಜೆಟ್ ಮಂಡಿಸಿದ್ದಾರೆ ಸಿದ್ದರಾಮಯ್ಯ ಅವರು. ಅದೇ ರೀತಿ ಸಾಲದ ಪ್ರಮಾಣ 6.60 ಲಕ್ಷ ಕೋಟಿ ( ಬಜೆಟ್ ನಲ್ಲಿ1,05, 246 ಕೋಟಿ ಸಾಲ ಪ್ರಸ್ತಾವನೆ ಮಾಡಲಾಗಿದೆ) ಮೀರುತ್ತಿದೆ. ಸರಕಾರ ತೆರಿಗೆ ಕಲೆಕ್ಷನ್ʼಗೆ ಒತ್ತು ನೀಡುತ್ತಿದೆಯೇ ಹೊರತು, ಅದರ ಸದ್ಬಳಕೆಗೆ ಅಲ್ಲ. ಮುಖ್ಯವಾಗಿ ಆರ್ಥಿಕ ತಜ್ಞರು ರಾಜ್ಯ ಸರಕಾರದ ವಿರುದ್ಧ ಮಾಡುತ್ತಿರುವ ಗಂಭೀರ ಆರೋಪವಿದು.
ಕೇಂದ್ರ ತೆರಿಗೆ ಪಾಲು ಹಾಗೂ ಅನುದಾನ UPA vs NDA
2004-14 ರಲ್ಲಿ ಕೇಂದ್ರದ UPA ಸರಕಾರವು ರಾಜ್ಯಕ್ಕೆ ನೀಡಿರುವ ತೆರಿಗೆ ಪಾಲು ₹81,795.19 ಕೋಟಿ. ಅದೇ 2014-24 ಕೇಂದ್ರದ NDA ಸರಕಾರ ನೀಡಿರುವುದು 2,85,452 (10 ಜನವರಿ 2024ವರೆಗೆ). ಈ ಲೆಕ್ಕದ ಪ್ರಕಾರ ನೋಡಿದರೆ 250% ಹೆಚ್ಚು ತೆರಿಗೆ ಪಾಲು NDA ಸರಕಾರದ ಅವಧಿಯಲ್ಲಿ ಸಿಕ್ಕಿದೆ, ಅದೂ ಮೂರು ಪಟ್ಟು ಹೆಚ್ಚು
2004-14 ರಲ್ಲಿ ಕೇಂದ್ರದ UPA ಸರಕಾರವು ರಾಜ್ಯಕ್ಕೆ ನೀಡಿರುವ ಅನುದಾನ ₹60,779.84 ಕೋಟಿ. ಅದೇ 2014-24 ಕೇಂದ್ರದ NDA ಸರಕಾರ ನೀಡಿರುವುದು ₹2,08,832.02 (2022-23). ಇದರಲ್ಲಿ 243.58% ಹೆಚ್ಚು ಸಿಕ್ಕಿದೆ. ಅಂದರೆ ಕಾಂಗ್ರೆಸ್ ಸರಕಾರಕ್ಕಿಂತ ಬಿಜೆಪಿ ಸರಕಾರದಲ್ಲಿ ಸಿಕ್ಕಿದ್ದು 3.4 ಪಟ್ಟು ಜಾಸ್ತಿ.ಇಲ್ಲಿಯೂ ಕೂಡ ಸಿದ್ದರಾಮಯ್ಯ ಅವರು ನೀಡಿರುವ ಲೆಕ್ಕ ಪ್ರಶ್ನಾರ್ಥಕವಾಗಿದೆ.
ರಾಜ್ಯದ ವಿವಿಧ ಯೋಜನೆಗಳಿಗೆ ಕೇಂದ್ರದ ಅನುದಾನ
ರಾಜ್ಯದಲ್ಲಿ ಕಾರ್ಯಗತವಾಗುತ್ತಿರುವ ವಿವಿಧ ಯೋಜನೆಗಳಿಗೆ ಕೇಂದ್ರದಿಂದ ₹37,970 ಕೋಟಿ ಅನುದಾನ ಸಿಕ್ಕಿದೆ. ಅದು ಯಾವ ಯಾವ ಯೋಜನೆಗೆ ಎನ್ನುವ ಮಾಹಿತಿ ಇಲ್ಲಿದೆ.
- ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ: ₹8,408 ಕೋಟಿ
- ಪಿಎಂ ಪಿಸಾನ್ ಯೋಜನೆ: ₹8,023 ಕೋಟಿ
- ಭದ್ರ ಮೇಲ್ದಂಡೆ ಯೋಜನೆ: ₹5,300 ಕೋಟಿ
- ತುಮಕೂರಿನ ಹೆಚ್ ಎಎಲ್ ಹೆಲಿಕಾಪ್ಟರ್ ಘಟಕ: ₹5,000 ಕೋಟಿ
- ಮಂಗಳೂರು ಬಂದರು, ಸಂಸ್ಕರಣೆ ಮತ್ತು ಮೀನುಗಾರಿಕೆ ಯೋಜನೆ: ₹3,800 ಕೋಟಿ
- ಬೆಂಗಳೂರು ಉಪ ನಗರ ರೈಲು: ₹3,242 ಕೋಟಿ
- ಬೆಂಗಳೂರು ಮೆಟ್ರೋ ಎರಡನೇ ಹಂತ: ₹2,526 ಕೋಟಿ
- ಕಲಬುರಗಿ-ಬೀದರ್ ಹೊಸ ರೈಲು ಮಾರ್ಗ: ₹1,542 ಕೋಟಿ
- ಬೆಂಗಳೂರು-ಚೆನ್ನೈ ವಂದೇಭಾರತ್ ರೈಲು: ₹97 ಕೋಟಿ
- ಪ್ಲಾಸ್ಟಿಕ್ ಪಾರ್ಕ್, ಗಂಜೀಮಠ, ದಕ್ಷಿಣ ಕನ್ನಡ: ₹32 ಕೋಟಿ
- ಒಟ್ಟು: ₹37,970 ಕೋಟಿ