• About
  • Advertise
  • Careers
  • Contact
Monday, November 9, 2026
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home CKPRESS

ನೀವು ಕೊಡೊ 60 ಲಕ್ಷದಲ್ಲಿ 50 ಲಕ್ಷ ಡಿಸಿ ಮನೆಗೇ ಕೊಡಬೇಕು ಎಂದು ಟೈಪ್ ಮಾಡಿದ್ದ ಹಾಸನ ಡಿಸಿ ಪಿಎ ಶಶಿಕಿರಣ್

cknewsnow desk by cknewsnow desk
November 9, 2026
in CKPRESS, Uncategorized
Reading Time: 2 mins read
0
ನೀವು ಕೊಡೊ 60 ಲಕ್ಷದಲ್ಲಿ 50 ಲಕ್ಷ ಡಿಸಿ ಮನೆಗೇ ಕೊಡಬೇಕು ಎಂದು ಟೈಪ್ ಮಾಡಿದ್ದ ಹಾಸನ ಡಿಸಿ ಪಿಎ ಶಶಿಕಿರಣ್
912
VIEWS
FacebookTwitterWhatsuplinkedinEmail

ವಾಟ್ಸಪ್ ಚಾಟ್ ನಲ್ಲಿ ಸ್ಪೋಟಕ ಅಂಶಗಳ ಉಲ್ಲೇಖ; ಜಿಲ್ಲಾ ಉಸ್ತುವಾರಿ ಸಚಿವ ಶಿವಲಿಂಗೇಗೌಡ ಅವರಿಗೂ ಹಣ ಸಂದಾಯ

ಹಾಸನ: ಡಿಸಿ ಪಿಎ ಶಶಿಕಿರಣ್ ಮತ್ತು ಮಧ್ಯವರ್ತಿ ನಡುವೆ ವಾಟ್ಸಾಪ್ ನಲ್ಲಿ ನಡೆದಿರುವ ಚಾಟ್ ವಿವರ:ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರು ಈ ವಾಟ್ಸಪ್ ಚಾಟ್ ದಾಖಲೆಯನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ.

ಆ ವಾಟ್ಸಪ್ ಚಾಟ್ ವಿವರ ಇಲ್ಲಿದೆ;

ಮಧ್ಯವರ್ತಿ: ನಮಸ್ತೆ ವಾಟ್ಸಪ್ ಅಲ್ಲಿ ಕಾಲ್ ಮಾಡಿ ಸರ್ ಕಾಲ್ ರಿಸೀವ್ ಮಾಡಿ ಸರ್ ಗುಡ್ ಮಾರ್ನಿಂಗ್ ಮೂರು ಕ್ರಷರ್ ಫೈಲ್ ಹಾಗೂ ಸಕಲೇಶಪುರ ಹೇಳಿದ್ನಲ್ಲ ಮಾಡಿಸಿ ಸರ್ ಸ್ವಲ್ಪ ದುಡ್ಡು ಕಡಿಮೆ ಮಾಡಿಸಿ ಸರ್ ಬೆಳಿಗ್ಗೆಯಿಂದ ಬಂದು ನಿಮ್ಮ ಆಫೀಸಲ್ಲಿ ಕಾದಿದ್ದೆ ತಾವು ಸಿಗಲಿಲ್ಲ. ನಾನು ಕಳುಹಿಸಿರುವ ಮೆಸೇಜ್ ಕೂಡ ರಿಪ್ಲೈ ಮಾಡಿಲ್ಲ, ಕಳೆದ ಮೂರು ವರ್ಷದಿಂದ ನಿಮ್ಮ ಹತ್ತಿರ ಎಷ್ಟು ಕೆಲಸ ಮಾಡಿಸಿದ್ದೇನೆ ನೀವು ಕೇಳಿದ ಹಾಗೆ ಲಕ್ಷಾಂತರ ದುಡ್ಡು ಕೊಟ್ಟಿದ್ದೇನೆ.

what’s app chatDownload

ಡಿಸಿ ಪಿಎ ಶಶಿಕಿರಣ್: ರೀ ನೀವು ಸುಮ್ಮನೆ ನನ್ನ ತಲೆ ತಿನ್ನಬೇಡಿ. ಯಾವುದಾದರೂ ಒಂದು ವಿಷಯ ಮಾತ್ರ ಮಾತಾಡಿ. ನಾನೇನ್ ಇಲ್ಲಿ ಸುಮ್ನೆ ಕೂತಿರಲ್ಲ, ಏನ್ ಲಕ್ಷಾಂತರ ಬಿಟ್ಟಿದ್ದೀರಾ. ನೀವು ಮಾಡುವ ಕೆಲಸ ಬ್ರೋಕರ್ ಕೆಲಸ ತಾನೇ. ನೀವು ಇಟ್ಟುಕೊಳ್ಳದೆ ನಮಗೆ ಕೊಟ್ಟಿರ್ತೀರ.. ನೀವು ಕೊಡೋ ಅಷ್ಟು ದುಡ್ಡು ನಾವು ಡಿಸಿ ಅವರಿಗೆ ಕೊಡಬೇಕು, ಮಿಕ್ಕಿದ ಸಣ್ಣ ದುಡ್ಡಲ್ಲಿ ನಾನು ನನ್ನ ಸೆಕ್ಷನ್ ಅಲ್ಲಿರೋ ಎಲ್ಲರಿಗೂ ಹಂಚಬೇಕು. ಡ್ರೈವರ್ ಗನ್ ಮ್ಯಾನ್ ಇನ್ನೊಬ್ರು ಪಿಎ ಸಹನಾ ಎಲ್ಲರಿಗೂ ಕೊಟ್ಟು ನನಗೆ ಮಿಕ್ಕಿದ್ದು ಮೂರುನಾಮ ಅಷ್ಟೇ.

ಮಧ್ಯವರ್ತಿ: ಸಾರಿ ಸರ್, ಸಿಟ್ಟು ಮಾಡ್ಕೋಬೇಡಿ, ಏನು ನಿಮ್ಮ ಹೆಸರು ಹೇಳಿಕೊಂಡು ಜೀವನ ಮಾಡುತ್ತಿದ್ದೀನಿ. ಸಹನಾ ಮೇಡಮ್ ಅವರಿಗೂ ಕೆಲಸಗಳು ಕೊಟ್ಟಿದ್ದೀನಿ ಸರ್. ಏಪ್ರಿಲ್ ನಲ್ಲಿ ಮಾತ್ರ ಒಂದು ಕೆಲಸಕ್ಕೆ ಇಷ್ಟೇ ಕೇಳಿಕೊಂಡರು 15 ಲಕ್ಷ ಕಡಿಮೆ ಆಗಲ್ಲ ಅಂತ ಹಠ ಹಿಡಿದು ಇಸ್ಕೊಂಡ್ರು, ಕೇಳಿದ್ರೆ ಡಿಸಿ ಮೇಡಂ ಒಂದು ರೂಪಾಯಿ ಕಡಿಮೆ ಆದರೂ ಇಸ್ಕೊಳ್ಳಲ್ಲ ಅಂತಾರೆ. ನಮಗಂತೂ ನಂಬಿಕೆ ಆಗ್ಲಿಲ್ಲ ಸರ್, ಡಿಸಿ ಮೇಡಂ ಇಷ್ಟೊಂದು ಕೇಳ್ತಾರ ಅಂತ.

ಡಿಸಿ ಪಿಎ ಶಶಿಕಿರಣ್: ನೀವು ಹೆಂಗಸರು ಎಷ್ಟ್ ಕೇಳಿದ್ರೂ ಕೊಡ್ತೀರಾ ನಾವು ನ್ಯಾಯವಾಗಿ ಕೇಳಿದ್ರೂ ಕೊಡೋಕೆ ಹಿಂದೆ ಮುಂದೆ ನೋಡ್ತಿರ ಇನ್ನೇನ್ ಡಿಸಿ ನಾನು ಇಸ್ಕೊತಿನಿ ಅಂತ ಪ್ರೆಸ್ ಮೀಟ್ ಮಾಡಿ ಹೇಳ್ತಾರ ಹಿಂದೆ ಇದ್ದ ಸತ್ಯಭಾಮ ಅವರೇ ಪರವಾಗಿಲ್ಲ ಸ್ವಲ್ಪ ಮಾತ್ರ ಕೆಲಸ ಹೇಳೋರು ದುಡ್ಡು ಅಷ್ಟೇ ಕಡಿಮೆ.ಈ ಡಿಸಿ ಬಂದ್ಮೇಲೆ ನಮಗಂತೂ ಖರ್ಚು ಮಾಡಿ ಮಾಡಿ ಸಾಕಾಗಿದೆ.ದಿನಕ್ಕೆ 50 ರಿಂದ 60 ಸಾವಿರ ಬೇಕು ಅವರ ಮನೆ ಖರ್ಚಿಗೆ, ಏನ್ ಮಾಡಿ ಸಾಯೋದು ನಿಮ್ಮಂತವರು ನೋಡಿದ್ರೆ ಕೆಲಸ ಆಗ್ಬೇಕು ಬೇಗ ಅಂತೀರಾ ದುಡ್ಡು ಬಿಚ್ಚಲ್ಲ.

ಮಧ್ಯವರ್ತಿ: ಅವೆಲ್ಲ ಬಿಡಿ ಸರ್ ಆ ಮೂರು ಫೈಲ್ ದು ಒಂದು ಫೈಲ್ ಅಮೌಂಟ್ ಹೇಳಿ.

ಡಿಸಿ ಪಿಎ ಶಶಿಕಿರಣ್: ಹೇಳಿದ್ನಲ್ಲ ಹೋದ ವಾರನೇ ಒಟ್ಟು 60 ಲಕ್ಷ ಕೊಡೋದಿದ್ರೆ ಮಾತಾಡಿ ಇಲ್ಲಾಂದ್ರೆ ಪದೇ ಪದೇ ಕೇಳಿ ಹಿಂಸೆ ಕೊಡಬೇಡಿ.

ಮಧ್ಯವರ್ತಿ: ಅಯ್ಯೋ ಸರ್ ನಮ್ಮನೆ ಉಳಿಯುತ್ತಾ, ಇಷ್ಟ ಆದ್ರೆ ಏನ್ ಹೇಳಿ ಸರ್ ಬೇರೆ.

ಡಿಸಿ ಪಿಎ ಶಶಿಕಿರಣ್: ನೀವು ಕೊಡೊ 60 ಲಕ್ಷದಲ್ಲಿ 50 ಲಕ್ಷ ಡಿಸಿ ಮನೆಗೆ ಕೊಡಬೇಕು ಇನ್ನು ಮಿಕ್ಕಿದ 10 ಲಕ್ಷದಲ್ಲಿ ನಾನು ಸಹನ ಮೇಡಂ ಇಬ್ಬರು ಡ್ರೈವರ್ ಹಾಗೂ ಇಬ್ಬರು ಗನ್ ಮ್ಯಾನ್ ಹಂಚಿಕೊಳ್ಳಬೇಕು ಏನು ಉಳಿಯುತ್ತೆ ಹೇಳಿ.

ಮಧ್ಯವರ್ತಿ: ಆಯ್ತು ನಿಮಗೆ ಕೊಡಬೇಕಿರುವ 10 ಲಕ್ಷ ಕೊಡಿಸ್ತೀನಿ ಡಿಸಿ ಅವರಿಗೆ ಹೇಳಿರೋ 50 ಲಕ್ಷ ಕಡಿಮೆ ಮಾಡಿಸಿ ಸರ್ ಬೇಕಾದರೆ ಮಿನಿಸ್ಟರ್ ಶಿವಲಿಂಗೇಗೌಡರು ಕಡೆಯಿಂದ ಅಥವಾ ಎಂಪಿ ಅವರ ಕಡೆಯಿಂದ ಡಿಸಿ ಅವರಿಗೆ ಹೇಳುತ್ತೇವೆ.

ಡಿಸಿ ಪಿಎ ಶಶಿಕಿರಣ್: ಅವರಿಂದ ಹೇಳಿಸುವುದಾದರೆ ನನ್ನ ಹತ್ತಿರ ಏನು ಕೀಳೋಕೆ ಮಾತಾಡ್ತಾ ಇದ್ದೀರಾ? ಹೋಗಿ ಶಿವಂಗೇಗೌಡ್ರು, ಮತ್ತೆ ಆ ‘ಚೈಲ್ಡ್ ಎಂ ಪಿ’ ಹತ್ತಿರಾನೆ ಕೆಲಸ ಮಾಡಿಸಿಕೊಳ್ಳಿ. ಶಿವಲಿಂಗೇಗೌಡರು ಮಿನಿಸ್ಟರ್ ಆದ ತಕ್ಷಣ ಡಿಸಿ ಅವರನ್ನು ಬದಲಾವಣೆ ಮಾಡಬೇಕು ಅಂತ ಇದ್ದರು. ಕೊನೆಗೆ ಡಿಸಿ ಮೇಡಂ ಅರಸೀಕೆರೆ ತಹಸೀಲ್ದಾರ್ ಸಂತೋಷ್ ಕಡೆಯಿಂದ ಮಾತನಾಡಿಸಿ 75 ಲಕ್ಷ ಕೊಟ್ಟು ಸುಮ್ಮನೆ ಇರಿಸಿದ್ದು. ಆ ದುಡ್ಡು ನಾನೇ ಎಲ್ಲೆಲ್ಲೋ ಅಡ್ಜಸ್ಟ್ ಮಾಡಿ ಸಂತೋಷ ಅವರಿಗೆ ಕೊಟ್ಟು ಬಂದೆ, ಅರಸೀಕೆರೆ ಅವರ ಮನೆಗೆ.

ಮಧ್ಯವರ್ತಿ: ಶಿವಲಿಂಗೇಗೌಡರು ದುಡ್ಡು ತಗೋತಾರೆ ಅಂತಾನೆ ಗೊತ್ತಿರಲಿಲ್ಲ ಸರ್, ಅಯ್ಯೋ ಈ ಕಾಲದಲ್ಲಿ ಯಾರನ್ನು ನಂಬೋದು, ಯಾರನ್ನು ಬಿಡೋದು ಈ ಕೇಸ್ ಗೆ ಈಗಾಗಲೇ ಹಾಸನ್ ತಹಶೀಲ್ದಾರ್ ಗೀತಾ ಮೇಡಂ ಅವರಿಗೆ 13 ಲಕ್ಷ ಕೊಟ್ಟಿದ್ದೀವಿ. ಎಸಿ ಜಗದೀಶ್ ಗಂಗಣ್ಣ ಅವರಂತೂ ಅವರ ಆಫೀಸ್ ಪ್ರಶಾಂತ್ ಕಡೆಯಿಂದ ಹೇಳಿಸಿ 20 ಲಕ್ಷ ಕಿತ್ಕೊಂಡ್ರು ಮತ್ತೆ ಪ್ರಶಾಂತ್ ಅವರು ಎರಡು ಲಕ್ಷ ಇಸ್ಕೊಂಡ್ರು. ಫೈಲ್ ನಿಮ್ಮ ಆಫೀಸ್ಗೆ ಬಂದಾಗ ಇದೇ ಏಸಿ ಅವರು ಎಡಿಸಿ ಚಾರ್ಜ್ ಇದ್ದರು ಮತ್ತೆ ವಿಜಯೇಂದ್ರ ಸರ್ ಕಡೆಯಿಂದ 10 ಲಕ್ಷ ಇಸ್ಕೊಂಡ್ರು. ನಿಮ್ಮ ಕೇಸ್ ವರ್ಕರ್ ಮುರಳಿ ಅಂಡ್ ಶ್ರೀಧರ್ ಇಬ್ಬರೂ ಸೇರಿ 6 ಲಕ್ಷ ಇಸ್ಕೊಂಡ್ರು ನಾವು ಡಿಸಿ ಮೇಡಂ ದುಡ್ಡು ಮುಟ್ಟಲ್ಲ ನಿಮಗೆ ಏನು ಕೊಡಬೇಕು ಅದನ್ನು ಕೊಟ್ಟು ಕೆಲಸ ಮಾಡಿಸಿ ಕೊಳ್ಳೋಣ ಅಂದರೆ ನೀವು ಹೀಗೆ 50 ಲಕ್ಷ ಡಿಸಿಗೆ ಅಂದ್ರೆ ಎಲ್ಲಿಂದ ತರೋದು ಸರ್ ಈಗಾಗಲೇ ಕೊಟ್ಯಂತರ ರೂ ಬಂಡವಾಳ ಆಗಿದೆ ಏನಾದ್ರು ಮಾಡಿ ಎಲ್ಲಾ ಸೇರಿ 51 ಲಕ್ಷ ಆಗಿದೆ ನನ್ನ ಹೆಂಡತಿ ಮಕ್ಕಳು ಒಡವೆ ಮಾರಿ ನಿಮಗೆ ಮತ್ತು ಡಿಸಿಗೆ ಕೊಡುವ ಅಮೌಂಟ್ ಕೊಡಬೇಕು ಅಷ್ಟೇ, ಸರ್ ಶಿವಲಿಂಗೇಗೌಡರು ಬೇಡ ಎಂಪಿ ಹತ್ರ ಹೇಳಿಸಿದ್ರೆ ಆಗಲ್ವಾ?.

ಡಿಸಿ ಪಿಎ ಶಶಿಕಿರಣ್: 50 ಲಕ್ಷ ಖರ್ಚು ಮಾಡಿದ್ದಾರೆ ಇನ್ನೊಂದು 50 ಲಕ್ಷ ಮಾಡಕ್ಕೆ ಏನು ನಿಮಗೆ ಈಗ ಒಡವೆ ಮಾರಿದ್ರೂ ಮುಂದೆ ಅದರ 10 ಪಟ್ಟು ತಗೊಳ್ಳೋ ಅಷ್ಟು ದುಡಿತೀರಿ ಅಲ್ವಾ ತಾಹಶೀಲ್ದಾರ್ಣ, ಎಸಿ ಹೆ ಎಲ್ಲಾ ಅಷ್ಟೊಂದು ದುಡ್ಡು ಕೊಡಿ ಅಂತ ಯಾರು ಹೇಳಿದ್ದು ತಹಶೀಲ್ದಾರು ಈಗಾಗಲೇ ದುಡ್ಡು ಇಸ್ಕೊಂಡು ಚಿಕ್ಕನಾಯಕನಹಳ್ಳಿಯಲ್ಲಿ ಟ್ರ್ಯಾಕ್ ಆಗಿದ್ಲು ಮತ್ತೆ ಟ್ರ್ಯಾಕ್ ಮಾಡಿಸ್ತೀನಿ ಅಂತ ಹೆದರಿಸಿ ಒಂದು 50,000 ಬಿಸಾಕದಲ್ವಾ? ಎಸಿಗೆ ಒಂದು ಲಕ್ಷ ಕೊಟ್ಟಿದ್ರೆ ಸಾಕಿತ್ತು ಅವನದು 108 ನಮ್ಮ ಆಫೀಸ್ ಅಲ್ಲಿ ಯಾಕೆ ಕೊಡಕ್ ಹೋದ್ರಿ ನನಗೆ ಹೇಳಿದ್ರೆ ಡಿಸಿ ಮೇಡಂ ಹೆಸರು ಹೇಳಿ ನಾನೆಲ್ಲ ಹತ್ತಿರ ಮಾತಾಡುತ್ತಿರಲಿಲ್ವ ವಿಜೇಂದ್ರ ಅಣ್ಣ 2 ಲಕ್ಷ ಕೊಟ್ಟಿದ್ರೆ ಹೆಚ್ಚು ಮಿಕ್ಕಿದ್ ಎಲ್ಲಾ ಅವನೇ ಇಟ್ಕೊಂಡಿರ್ತಾನೆ ಅದರಲ್ಲಿ ವೆನ್ ಯು ಕಾರ್ ಅದ್ಯಾವುದೋ ಕಾರು ತೆಗೆದುಕೊಂಡವ್ನೆ. ಎಂಪಿ ನೂ ನಿಮ್ಮತ್ರ ದುಡ್ಡು ಇಸ್ಕೊಂಡು ಆಮೇಲೆ ಡಿಸಿಗೆ ಹೇಳ್ತಾರೆ *ಮಧ್ಯವರ್ತಿ* :ಸರಿ ಬಿಡಿ ಸರ್ ಅಡ್ಜಸ್ಟ್ ಮಾಡಿ ಅಂತ ಪಾರ್ಟಿಗೆ ಹೇಳ್ತೀನಿ ಏನಂತಾರೆ ನೋಡೋಣ ದುಡ್ಡು ಕೊಟ್ರೆ ಕೆಲಸ ಮತ್ತೆ ಯಾವಾಗ್ ಆಗಬಹುದು ಸರ್ ಮೇಡಂ ಯಾವಾಗಲೂ ಬಿಜಿ ಇರ್ತಾರಲ್ಲ.

ಡಿಸಿ ಪಿಎ ಶಶಿಕಿರಣ್:ನೀವ್ ದುಡ್ಡು ರೆಡಿ ಆದ್ಮೇಲೆ ತಗೊಂಡು ಹೇಳಿ ಮೇಡಂ ಕೀ ಪಾಸ್ವರ್ಡ್ ನನ್ನ ಹತ್ರ ಮತ್ತೆ ಸಹನ ಮೇಡಂ ಹತ್ರ ಇದೆ ಎಲ್ಲಾ ಸೈನ್ ಅಪ್ರುವಲ್ ಮಾಡೋದು ಎಲ್ಲ ನಾವೇ ನಿಮಗೆ ಇದೆಲ್ಲ ಬೇಡದ ವಿಷಯ ದುಡ್ಡು ತಂದು ಮೇಡಂ ಕ್ವಾಟರ್ಸ್ ಎಂಟ್ರೆನ್ಸ್ ಅಲ್ಲಿ ಪೊಲೀಸ್ ರೂಮ್ ಅಲ್ಲಿ ಇಡಿ ಒಳಗೆ ಬರೋದು ಬೇಡ ಸಿಸಿ ಕ್ಯಾಮೆರಾ ಇದೆ.

ಮಧ್ಯವರ್ತಿ: ಸರಿ ಸರ್ ಮತ್ತೆ ಮತ್ತೆ ಕೇಳ್ತೀನಿ ಅಂತ ಬೇಜಾರ್ ಆಗ್ಬೇಡಿ ಸಾಧ್ಯ ಆದ್ರೆ ಸ್ವಲ್ಪ ಕಡಿಮೆ ಮಾಡಿ ನೀವೇ ನನ್ನ ಪಾಲಿನ ದೇವರು.

ಡಿಸಿ ಪಿಎ ಶಶಿಕಿರಣ್: ನೋಡೋಣ ನೀವು ಫಸ್ಟು ದುಡ್ಡು ಅಡ್ಜಸ್ಟ್ ಮಾಡಿಕೊಳ್ಳಿ

cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಶ್ರೀ ಹಾಸನಾಂಬೆ ದಿವ್ಯ ದರ್ಶನ #Live

ಶ್ರೀ ಹಾಸನಾಂಬೆ ದಿವ್ಯ ದರ್ಶನ #Live

by cknewsnow desk
November 8, 2026
0

ಹಾಸನಕ್ಕೆ ಹರಿದು ಬರುತ್ತಿರುವ ಭಕ್ತಸಾಗರ

ಕೇಂದ್ರ ಸಚಿವ HD ಕುಮಾರಸ್ವಾಮಿ ಪ್ರೆಸ್ ಮೀಟ್ #Live

HDK #preesmeet #Live

by cknewsnow desk
October 15, 2026
0

ಮುಖ್ಯಮಂತ್ರಿ ಡಿಕೆಶಿ ಮತ್ತು ಸ್ಟಿಂಗ್ ಪಿನ್ ಸಂಬಂಧದ ಬಗ್ಗೆ ಮಹತ್ವದ ಅಂಶಗಳನ್ನು ಬಹಿರಂಗಪಡಿಸಿದ ಕೇಂದ್ರ ಸಚಿವರು

3‌ ಲಕ್ಷದವರೆಗಿನ ಆದಾಯಕ್ಕೆ ತೆರಿಗೆ ವಿನಾಯಿತಿ

3‌ ಲಕ್ಷದವರೆಗಿನ ಆದಾಯಕ್ಕೆ ತೆರಿಗೆ ವಿನಾಯಿತಿ

by cknewsnow desk
July 23, 2024
0

ಯಾವುದು ಅಗ್ಗ? ಯಾವುದು ತುಟ್ಟಿ?

ಹೆಚ್.ಡಿ.ಕುಮಾರಸ್ವಾಮಿ ರಾಜಕೀಯ ವಿಲನ್

ಶಾಮನೂರು ಶಿವಶಂಕರಪ್ಪ ಕಾರ್ಯಕ್ರಮಕ್ಕೆ ಸಿಎಂಗೇ ಆಹ್ವಾನ ಇಲ್ಲ! ಹೆಚ್.ಡಿ.ಕುಮಾರಸ್ವಾಮಿಗೆ ಆಹ್ವಾನ

by P K Channakrishna
February 9, 2024
0

ಕೇಂದ್ರ ಗೃಹ ಸಚಿವರಿಂದ ಶಾಮನೂರು ಅತಿಥಿ ಗೃಹ ಉದ್ಘಾಟನೆ

ಸಂಸತ್ ಭವನ ಬಿಜೆಪಿ ಅಥವಾ ಆರೆಸ್ಸೆಸ್ ಕಚೇರಿ ಅಲ್ಲ

ಮೇಕೆದಾಟು ಯೋಜನೆಗೆ ಒಪ್ಪಿಗೆ ಕೊಡಿ ಎಂದು ಕೈಜೋಡಿಸಿ ಮನವಿ ಮಾಡಿದ ಮಾಜಿ ಪ್ರಧಾನಿಗಳು

by cknewsnow desk
February 6, 2024
0

ರಾಜ್ಯಸಭೆಯಲ್ಲಿ ಗ್ಯಾರಂಟಿಗಳ ನೈಜಸ್ಥಿತಿ ಬಿಡಿಸಿಟ್ಟ ಮಾಜಿ ಪ್ರಧಾನಮಂತ್ರಿಗಳು

ನಿಡುಮಾಮಿಡಿ ಶ್ರೀಗಳು: ಕಾವಿಯೊಳಗೆ ನಿಗಿನಿಗಿ ಹೊಳೆಯುವ ಕೆಂಪುಸೂರ್ಯ

ನಿಡುಮಾಮಿಡಿ ಶ್ರೀಗಳು: ಕಾವಿಯೊಳಗೆ ನಿಗಿನಿಗಿ ಹೊಳೆಯುವ ಕೆಂಪುಸೂರ್ಯ

by cknewsnow desk
December 28, 2023
0

ನಿಜದ ಜಾಡು ಹಿಡಿದು ಹೊರಟ ನಿಡುಮಾಮಿಡಿ ಶ್ರೀಗಳ ಹೋರಾಟಕ್ಕೆ 33 ವರ್ಷ

Leave a Reply Cancel reply

Your email address will not be published. Required fields are marked *

Recommended

55 ಲಕ್ಷ ಸರಕಾರಿ ಶಾಲೆ ಮಕ್ಕಳಿಗೆ ರಾಗಿ ಮಾಲ್ಟ್

55 ಲಕ್ಷ ಸರಕಾರಿ ಶಾಲೆ ಮಕ್ಕಳಿಗೆ ರಾಗಿ ಮಾಲ್ಟ್

3 years ago
ರಸಪ್ರಶ್ನೆ: ಗುಡಿಬಂಡೆ ಶಾಲೆಗಳ ಮೂವರು ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ

ರಸಪ್ರಶ್ನೆ: ಗುಡಿಬಂಡೆ ಶಾಲೆಗಳ ಮೂವರು ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ

3 years ago

Popular News

  • ನೀವು ಕೊಡೊ 60 ಲಕ್ಷದಲ್ಲಿ 50 ಲಕ್ಷ ಡಿಸಿ ಮನೆಗೇ ಕೊಡಬೇಕು ಎಂದು ಟೈಪ್ ಮಾಡಿದ್ದ ಹಾಸನ ಡಿಸಿ ಪಿಎ ಶಶಿಕಿರಣ್

    ನೀವು ಕೊಡೊ 60 ಲಕ್ಷದಲ್ಲಿ 50 ಲಕ್ಷ ಡಿಸಿ ಮನೆಗೇ ಕೊಡಬೇಕು ಎಂದು ಟೈಪ್ ಮಾಡಿದ್ದ ಹಾಸನ ಡಿಸಿ ಪಿಎ ಶಶಿಕಿರಣ್

    0 shares
    Share 0 Tweet 0
  • ಹಾಸನ ಜಿಲ್ಲಾಧಿಕಾರಿ ಕಚೇರಿಯಿಂದ ಕ್ರಷರ್ ಮಾಲೀಕರಿಂದ ಹಣ ಸುಲಿಗೆ

    0 shares
    Share 0 Tweet 0
  • ಶ್ರೀ ಹಾಸನಾಂಬೆ ದಿವ್ಯ ದರ್ಶನ #Live

    0 shares
    Share 0 Tweet 0
  • ಸಂಪುಟಕ್ಕೆ ಬಿ.ನಾಗೇಂದ್ರ ಪಕ್ಕಾ! ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೂ ಮರಳಿ ಮಂತ್ರಿಗಿರಿ!!

    0 shares
    Share 0 Tweet 0
  • ಹೆಚ್ಚು ಎಥೆನಾಲ್ ಮಿಶ್ರಣದಿಂದ ವಾಹನಗಳಿಗೆ ಧಕ್ಕೆ

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ನೀವು ಕೊಡೊ 60 ಲಕ್ಷದಲ್ಲಿ 50 ಲಕ್ಷ ಡಿಸಿ ಮನೆಗೇ ಕೊಡಬೇಕು ಎಂದು ಟೈಪ್ ಮಾಡಿದ್ದ ಹಾಸನ ಡಿಸಿ ಪಿಎ ಶಶಿಕಿರಣ್

ನೀವು ಕೊಡೊ 60 ಲಕ್ಷದಲ್ಲಿ 50 ಲಕ್ಷ ಡಿಸಿ ಮನೆಗೇ ಕೊಡಬೇಕು ಎಂದು ಟೈಪ್ ಮಾಡಿದ್ದ ಹಾಸನ ಡಿಸಿ ಪಿಎ ಶಶಿಕಿರಣ್

November 9, 2026
ಹಾಸನ ಜಿಲ್ಲಾಧಿಕಾರಿ ಕಚೇರಿಯಿಂದ ಕ್ರಷರ್ ಮಾಲೀಕರಿಂದ ಹಣ ಸುಲಿಗೆ

ಹಾಸನ ಜಿಲ್ಲಾಧಿಕಾರಿ ಕಚೇರಿಯಿಂದ ಕ್ರಷರ್ ಮಾಲೀಕರಿಂದ ಹಣ ಸುಲಿಗೆ

November 9, 2026
ಸಂಪುಟಕ್ಕೆ ಬಿ.ನಾಗೇಂದ್ರ ಪಕ್ಕಾ! ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೂ ಮರಳಿ ಮಂತ್ರಿಗಿರಿ!!

ಸಂಪುಟಕ್ಕೆ ಬಿ.ನಾಗೇಂದ್ರ ಪಕ್ಕಾ! ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೂ ಮರಳಿ ಮಂತ್ರಿಗಿರಿ!!

November 8, 2026
ಹೆಚ್ಚು ಎಥೆನಾಲ್ ಮಿಶ್ರಣದಿಂದ ವಾಹನಗಳಿಗೆ ಧಕ್ಕೆ

ಹೆಚ್ಚು ಎಥೆನಾಲ್ ಮಿಶ್ರಣದಿಂದ ವಾಹನಗಳಿಗೆ ಧಕ್ಕೆ

November 8, 2026

Covid 19

ಸತ್ಯಸಾಯಿ ಗ್ರಾಮದಲ್ಲಿ ನವರಾತ್ರಿ ಪೂಜೆಯಲ್ಲಿ ಪಾಲ್ಗೊಂಡ HDK

ಸತ್ಯಸಾಯಿ ಗ್ರಾಮದಲ್ಲಿ ನವರಾತ್ರಿ ಪೂಜೆಯಲ್ಲಿ ಪಾಲ್ಗೊಂಡ HDK

October 16, 2026
ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
  • About
  • Advertise
  • Careers
  • Contact

© 2025 cknewsnow | Website Design  by Karnatakabest Digital Services

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2025 cknewsnow | Website Design  by Karnatakabest Digital Services

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ