• About
  • Advertise
  • Careers
  • Contact
Monday, November 9, 2026
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home EDITORS'S PICKS

ಹಾಸನ ಜಿಲ್ಲಾಧಿಕಾರಿ ಕಚೇರಿಯಿಂದ ಕ್ರಷರ್ ಮಾಲೀಕರಿಂದ ಹಣ ಸುಲಿಗೆ

cknewsnow desk by cknewsnow desk
November 9, 2026
in EDITORS'S PICKS, EXCLUSIVE, NATION, POLITICS, STATE
Reading Time: 1 min read
0
ಹಾಸನ ಜಿಲ್ಲಾಧಿಕಾರಿ ಕಚೇರಿಯಿಂದ ಕ್ರಷರ್ ಮಾಲೀಕರಿಂದ ಹಣ ಸುಲಿಗೆ
914
VIEWS
FacebookTwitterWhatsuplinkedinEmail

ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ; ಮಧ್ಯವರ್ತಿಗಳಿಂದ ಕಲೆಕ್ಷನ್, ಜಿಲ್ಲಾಧಿಕಾರಿಗೆ ಹಣ ಸಂದಾಯ; ಡಿಸಿ ಆಪ್ತ ಸಹಾಯಕನ ವಾಟ್ಸಾಪ್ ಚಾಟ್ ದಾಖಲೆ ಬಿಡುಗಡೆ

Lead photocaption; ಹಾಸನ ಜಿಲ್ಲಾಧಿಕಾರಿ ಆಪ್ತ ಸಹಾಯಕನ ವಾಟ್ಸಾಪ್ DP

ಹಾಸನ: ಕಲ್ಲು ಗಣಿಗಾರಿಕೆ (ಕ್ರಷರ್) ಗಳಿಗೆ ಅನುಮತಿ ನೀಡುವುದು ಹಾಗೂ ವಸತಿ ಬಡಾವಣೆಗಳ ಅಲ್ಯುಲೇಷನ್ (ಅನ್ಯ ಸಂಕ್ರಮಣ) ವಿಚಾರದಲ್ಲಿ ಹಾಸನ ಜಿಲ್ಲಾಧಿಕಾರಿ ಕಚೇರಿ ವ್ಯಾಪಕ ಭ್ರಷ್ಟಾಚಾರದಲ್ಲಿ ತೊಡಗಿದೆ. ಈ ಅಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವಲಿಂಗೇಗೌಡ ಕೂಡ ಶಾಮೀಲಾಗಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಗಂಭೀರ ಆರೋಪ ಮಾಡಿದರು.

ಶ್ರೀ ಹಾಸನಾಂಬೆಯ ದರ್ಶನ ಪಡೆದ ನಂತರ ಶಾಸಕ ಸ್ವರೂಪ ಪ್ರಕಾಶ್ ಅವರ ಮನೆಯಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವರು; ಮಧ್ಯವರ್ತಿಗಳ ಮೂಲಕ ಜಿಲ್ಲಾಧಿಕಾರಿ ಕಚೇರಿಯೇ ನೇರವಾಗಿ ಕ್ರಷರ್ ಮಾಲೀಕರು ಹಾಗೂ ವಸತಿ ಬಡಾವಣೆಗಳ ಮಲಿಕರಿಂದ ಹಣ ಸುಲಿಗೆ ಮಾಡುತ್ತಿರುವ ದಾಖಲೆಗಳನ್ನು ಬಿಡುಗಡೆ ಮಾಡಿದರು.

ಹಾಸನ ಜಿಲ್ಲಾಧಿಕಾರಿ ಲತಾಕುಮಾರಿ ಅವರ ಆಪ್ತ ಸಹಾಯಕ ಶಶಿಕಿರಣ್ ಎಂಬ ವ್ಯಕ್ತಿ ಹಣವನ್ನು ಸುಲಿಗೆ ಮಾಡಿ ಜಿಲ್ಲಾಧಿಕಾರಿಗಳಿಗೆ ಕೊಡುತ್ತಿದ್ದಾರೆ ಎನ್ನಲಾದ ಅಂಶವು ಆ ವ್ಯಕ್ತಿಯ ವಾಟ್ಸಾಪ್ ಚಾಟ್ ಗಳ ಮೂಲಕ ಬಯಲಿಗೆ ಬಂದಿದೆ ಎಂದು ಸಚಿವರು ಹೇಳಿದರು.

ಅಲ್ಲದೆ ಈ ಸಂದರ್ಭದಲ್ಲಿ ಶಶಿಕಿರಣ್ ಅವರ ವಾಟ್ಸಾಪ್ ಚಾಟ್ ದಾಖಲೆಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದರು. ಮುಖ್ಯವಾಗಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ದೊಡ್ಡ ಮತದ ಹಣವನ್ನು ಕೊಟ್ಟು ಹಾಸನ ಜಿಲ್ಲಾಧಿಕಾರಿಯಾಗಿಯೇ ಅವರು ಮುಂದುವರೆದಿದ್ದಾರೆ ಎಂಬ ಬಗ್ಗೆಯೂ ಕೇಂದ್ರ ಸಚಿವರು ಗಂಭೀರ ಆರೋಪ ಮಾಡಿದರು.

ಈ ಅಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವಲಿಂಗೇಗೌಡ ಅವರು ಕೂಡ ಶಾಮೀಲಾಗಿದ್ದಾರೆ ಆಗಿದ್ದಾರೆ ಎಂದು ಸಚಿವರು ದೂರಿದರು.

ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿಮೀರಿದ್ದು, ಹಾಸನ ಜಿಲ್ಲಾಡಳಿತದ ಬ್ರಹ್ಮಾಂಡ ಭ್ರಷ್ಟಾಚಾರದ ವಾಟ್ಸಾಪ್ ಚಾಟ್ ದಾಖಲೆಗಳನ್ನು ಪ್ರಾಮಾಣಿಕ ಅಧಿಕಾರಿಯೊಬ್ಬರು ನನಗೆ ನೀಡಿದ್ದಾರೆ. ಶಶಿಕಿರಣ್ ಎಂಬ ಬ್ರೋಕರ್ ಮೂಲಕ ಕಡತಗಳ ವಿಲೇವಾರಿಗೆ ಲಕ್ಷಾಂತರ ರೂ. ಲಂಚದ ಚೌಕಾಸಿ ನಡೆಯುತ್ತಿದ್ದು, ₹60 ಲಕ್ಷ ಲಂಚದಲ್ಲಿ ₹50 ಲಕ್ಷ ಡಿಸಿಗೆ ಹಾಗೂ ಉಳಿದ ಹಣವನ್ನು ಡಿಸಿ ಮೇಡಂ ಆಪ್ತ ಸಹಾಯಕಿ ಸಹನಾ, ವಾಹನ ಚಾಲಕ, ಗನ್ ಮ್ಯಾನ್ ಮತ್ತು ಇತರ ಸಿಬ್ಬಂದಿಗೆ ಹಂಚಿಕೆಯಾಗುತ್ತಿದೆ.

ಹಾಗೆಯೇ ಹಾಸನದ ಎಸಿ ಜಗದೀಶ್ ಅವರು ₹22 ಲಕ್ಷ, ತಹಶೀಲ್ದಾರ್ ಗೀತಾ ಅವರು 13 ಲಕ್ಷ ಲಂಚ ಪಡೆದಿರುವ ಉಲ್ಲೇಖ ವಾಟ್ಸಾಪ್ ಚಾಟ್ ನಲ್ಲಿದೆ ಎಂದು ಸಚಿವ ಕುಮಾರಸ್ವಾಮಿ ಅವರು ಹೇಳಿದರು.

ಮುಖ್ಯವಾಗಿ ಜಿಲ್ಲಾಧಿಕಾರಿ ಅವರನ್ನು ವರ್ಗಾವಣೆ ಮಾಡದಂತೆ ತಡೆಯಲು ಸಚಿವ ಶಿವಲಿಂಗೇಗೌಡರಿಗೆ ತಹಶೀಲ್ದಾರ್ ಸಂತೋಷ್ ಮೂಲಕ ₹75 ಲಕ್ಷ ನೀಡಲಾಗಿದೆ ಎಂಬ ಆಘಾತಕಾರಿ ವಿಷಯ ಕೂಡ ವಾಟ್ಸಾಪ್ ಚಾಟ್ ನಲ್ಲಿ ಬಹಿರಂಗವಾಗಿದೆ ಎಂದು ಕೇಂದ್ರ ಸಚಿವರು ಹೇಳಿದರು.

ಡಿಸಿ ಮನೆ ಪೊಲೀಸ್ ರೂಂನಲ್ಲಿಯೇ ಲಂಚದ ಹಣ

ಲಂಚದ ಹಣವನ್ನು ಸಿಸಿಟಿವಿ ಕಣ್ಣುತಪ್ಪಿಸಿ ಜಿಲ್ಲಾಧಿಕಾರಿ ನಿವಾಸದ ಗೇಟ್ ಬಳಿ ಇರುವ ಪೊಲೀಸ್ ರೂಮ್ ನಲ್ಲಿ ಇಡುವಂತೆ ವಾಟ್ಸಾಪ್ ಸಂದೇಶದಲ್ಲಿ ಸೂಚಿಸಲಾಗಿದೆ. ಆ ನಂತರ ಹಣ ಯಾರಿಗೆಲ್ಲ ತಲುಪಬೇಕೋ ಅವರಿಗೆಲ್ಲ ಮುಟ್ಟಿದೆ. ಭ್ರಷ್ಟಾಚಾರ ಎಷ್ಟರಮಟ್ಟಿಗೆ ಇದೆ ಎಂದರೆ, ರೈತರ ಜಮೀನು ಕಡತಗಳಿಗೆ ಅವರ ಒಡವೆಗಳನ್ನು ಮಾರಿ 50 ಲಕ್ಷ ಲಂಚ ಕೊಡುವಂತಹ ದಾರುಣ ಸ್ಥಿತಿ ಜಿಲ್ಲೆಯಲ್ಲಿ ನಿರ್ಮಾಣವಾಗಿದೆ. ಇತ್ತೀಚೆಗಷ್ಟೇ ಟ್ರ್ಯಾಪ್ ಆಗಿ ಸಸ್ಪೆಂಡ್ ಆಗಿದ್ದ ಅಧಿಕಾರಿಯೇ ಮತ್ತೆ ಜಿಲ್ಲೆಗೆ ಬಂದು ಹಣ ವಸೂಲಿ ಮಾಡುತ್ತಿದ್ದಾನೆ ಎಂದು ಸಚಿವರು ಹೇಳಿದರು.

what’s app chatDownload
ಭ್ರಷ್ಟಾಚಾರ ನಿಯಂತ್ರಣ ಎಲ್ಲಿ ಆಗಿದೆ ಮುಖ್ಯಮಂತ್ರಿಗಳೇ..?

ಯಾರೇ ಸರಕಾರಿ ನೌಕರರು ₹10 ಲಂಚ ಕೇಳಿದರೂ ತಮಗೆ ಕರೆ ಮಾಡಿ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಆದರೆ ಇಲ್ಲಿ ಇಡೀ ಜಿಲ್ಲಾಡಳಿತವೇ ಭ್ರಷ್ಟಾಚಾರದಲ್ಲಿ ಮುಳುಗಿದೆ. ಈಗ ಹೇಳಿ ಮುಖ್ಯಮಂತ್ರಿಗಳೇ, ಲಂಚ ಕೇಳುವ ಇಂತಹ ಅಧಿಕಾರಿಗಳ ವಿರುದ್ಧ ಯಾರಿಗೆ ದೂರು ಕೊಡಬೇಕು? ಯಾವ ಮೊಬೈಲ್ ನಂಬರ್ ಗೆ ಕರೆ ಮಾಡಬೇಕು ಎಂಬುದನ್ನು ಹೇಳಬೇಕು? ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಪ್ರಶ್ನಿಸಿದರು.

ತಕ್ಷಣವೇ ವಾಟ್ಸಾಪ್ ಚಾಟ್ ನಲ್ಲಿ ಪ್ರಸ್ತಾಪಿಸಲ್ಪಟ್ಟಿರುವ ಅಧಿಕಾರಿಗಳ ಮೊಬೈಲ್ ಫೋನ್ ಗಳನ್ನು ಜಪ್ತಿ ಮಾಡಿ ತನಿಖೆ ನಡೆಸಬೇಕು ಎಂದು ಮುಖ್ಯಮಂತ್ರಿಗೆ ಒತ್ತಾಯಿಸಿದ ಕೇಂದ್ರ ಸಚಿವರು; ಯಾವುದೇ ಕಾರಣಕ್ಕೂ ಇಂತಹ ಭ್ರಷ್ಟ ಅಧಿಕಾರಿಗಳನ್ನು ಬಿಡಬಾರದು.

ನಾನು ಈಗಷ್ಟೇ ತಾಯಿ ಹಾಸನಾಂಬೆಯ ದರ್ಶನ ಪಡೆದುಕೊಂಡು ಬಂದೆ. ಈ ವಿಚಾರವನ್ನು ಇಲ್ಲಿ ಪ್ರಸ್ತಾಪ ಮಾಡುವುದು ಬೇಡ ಎಂದು ಭಾವಿಸಿದ್ದೆ. ಆದರೆ ಹೇಳಲೇಬೇಕಾದ ವಿಚಾರ. ಜಿಲ್ಲಾಡಳಿತ ಯಾವ ರೀತಿಯಲ್ಲಿ ಲಂಚಾವತಾರದಲ್ಲಿ ಮುಳುಗಿದೆ ಎಂಬುದನ್ನು ಈ ವಾಟ್ಸಪ್ ಚಾಟ್ ಹೇಳುತ್ತದೆ ಎಂದು ಸಚಿವ ಕುಮಾರಸ್ವಾಮಿ ಅವರು ಹೇಳಿದರು.

Tags: corruption charges against Haasan DCcorruption in karnatakaHaasan deputy commissionerhd kumaraswamyLatakymari iasmoney collection for Minister
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಶ್ರೀ ಹಾಸನಾಂಬೆ ದಿವ್ಯ ದರ್ಶನ #Live

ಶ್ರೀ ಹಾಸನಾಂಬೆ ದಿವ್ಯ ದರ್ಶನ #Live

by cknewsnow desk
November 8, 2026
0

ಹಾಸನಕ್ಕೆ ಹರಿದು ಬರುತ್ತಿರುವ ಭಕ್ತಸಾಗರ

ಸಂಪುಟಕ್ಕೆ ಬಿ.ನಾಗೇಂದ್ರ ಪಕ್ಕಾ! ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೂ ಮರಳಿ ಮಂತ್ರಿಗಿರಿ!!

ಸಂಪುಟಕ್ಕೆ ಬಿ.ನಾಗೇಂದ್ರ ಪಕ್ಕಾ! ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೂ ಮರಳಿ ಮಂತ್ರಿಗಿರಿ!!

by cknewsnow desk
November 8, 2026
0

ಇಬ್ಬರ ಪರ ಹೈಕಮಾಂಡ್ ಮುಂದೆ ಡಿಕೆಶಿ ಬ್ಯಾಟಿಂಗ್

ಹೆಚ್ಚು ಎಥೆನಾಲ್ ಮಿಶ್ರಣದಿಂದ ವಾಹನಗಳಿಗೆ ಧಕ್ಕೆ

ಹೆಚ್ಚು ಎಥೆನಾಲ್ ಮಿಶ್ರಣದಿಂದ ವಾಹನಗಳಿಗೆ ಧಕ್ಕೆ

by cknewsnow desk
November 8, 2026
0

ಎಂಜಿನ್ ಸಮಸ್ಯೆಯಿಂದ ವಾಹನ ಮಾಲೀಕರಿಗೆ ರಿಪೇರಿ ಖರ್ಚಿನ ಹೊರೆ

ಆಪರೇಷನ್‌ ಕಮಲಕ್ಕೆ ಸಿಕ್ಕಿ ಬೇಲಿ ಹಾರಿದ್ದವರಿಗೆ ಶಾಕ್!‌

ಬರದ ನಷ್ಟ ₹62,000 ಕೋಟಿ; ಕೇಂದ್ರಕ್ಕೆ ಕೇಳಿದ ಮೊತ್ತ ₹22,000 ಕೋಟಿ!

by cknewsnow desk
November 7, 2026
0

ಈವರೆಗೆ ಕ್ಷೇತ್ರಕ್ಕೆ ಮೂರು ಪತ್ರಗಳನ್ನು ಬರೆದಿರುವ ರಾಜ್ಯ ಸರಕಾರ

ಮೈತ್ರಿ ಹೋರಾಟಕ್ಕೆ ದೇವೇಗೌಡ-ಬಿಎಸ್‌ವೈ ಭೇಟಿ ದಿಕ್ಸೂಚಿ

ಮೈತ್ರಿ ಹೋರಾಟಕ್ಕೆ ದೇವೇಗೌಡ-ಬಿಎಸ್‌ವೈ ಭೇಟಿ ದಿಕ್ಸೂಚಿ

by cknewsnow desk
November 6, 2026
0

ಇನ್ನೊಂದು ಅವಧಿಗೆ ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಅವರನ್ನು ಮುಂದುವರಿಸಲು ಮಾಜಿ ಪ್ರಧಾನಿ ಜತೆ ಮಾಜಿ ಸಿಎಂ ಚರ್ಚಿಸಿದರಾ?

ನಾನು ಹಳ್ಳಿಯವನು, ಏನೀಗ?

ನಾನು ಹಳ್ಳಿಯವನು, ಏನೀಗ?

by cknewsnow desk
November 6, 2026
0

ಹಳ್ಳಿ ಗುಗ್ಗು ಎಂದ ಪ್ರಿಯಾಂಕ್ ಖರ್ಗೆ ಹಳ್ಳಿಗರಿಗೆ ಅಪಮಾನ ಮಾಡಿದ್ದಾರೆ ಎಂದು ಕೇಂದ್ರ ಸಚಿವರ ಬೇಸರ

Next Post
ನೀವು ಕೊಡೊ 60 ಲಕ್ಷದಲ್ಲಿ 50 ಲಕ್ಷ ಡಿಸಿ ಮನೆಗೇ ಕೊಡಬೇಕು ಎಂದು ಟೈಪ್ ಮಾಡಿದ್ದ ಹಾಸನ ಡಿಸಿ ಪಿಎ ಶಶಿಕಿರಣ್

ನೀವು ಕೊಡೊ 60 ಲಕ್ಷದಲ್ಲಿ 50 ಲಕ್ಷ ಡಿಸಿ ಮನೆಗೇ ಕೊಡಬೇಕು ಎಂದು ಟೈಪ್ ಮಾಡಿದ್ದ ಹಾಸನ ಡಿಸಿ ಪಿಎ ಶಶಿಕಿರಣ್

Leave a Reply Cancel reply

Your email address will not be published. Required fields are marked *

Recommended

ನಾನು ಸುಳ್ಳು ಹೇಳುತ್ತಿಲ್ಲ ಎಂದ ಡಿಕೆಶಿ

ನಾನು ಸುಳ್ಳು ಹೇಳುತ್ತಿಲ್ಲ ಎಂದ ಡಿಕೆಶಿ

5 years ago
ಆಮ್ಲಜನಕ, ರೆಮಿಡಿಸ್ವೀರ್‌ ಕೃತಕ ಅಭಾವ ಸೃಷ್ಟಿ!! ಸೋಂಕಿತರ ಸಂಖ್ಯೆಗೂ-ಬೇಡಿಕೆಗೂ ತಾಳ-ಮೇಳವಿಲ್ಲ, ಸಪ್ಲೈ ಆಗುತ್ತಿರುವುದೆಲ್ಲ ಎಲ್ಲಿ ಹೋಗುತ್ತಿದೆ ಎಂದು ಪ್ರಶ್ನಿಸಿದ ಡಿಸಿಎಂ

2022-23ರಿಂದ ಕನ್ನಡದಲ್ಲೂ ಎಂಜಿನಿಯರಿಂಗ್

5 years ago

Popular News

  • ನೀವು ಕೊಡೊ 60 ಲಕ್ಷದಲ್ಲಿ 50 ಲಕ್ಷ ಡಿಸಿ ಮನೆಗೇ ಕೊಡಬೇಕು ಎಂದು ಟೈಪ್ ಮಾಡಿದ್ದ ಹಾಸನ ಡಿಸಿ ಪಿಎ ಶಶಿಕಿರಣ್

    ನೀವು ಕೊಡೊ 60 ಲಕ್ಷದಲ್ಲಿ 50 ಲಕ್ಷ ಡಿಸಿ ಮನೆಗೇ ಕೊಡಬೇಕು ಎಂದು ಟೈಪ್ ಮಾಡಿದ್ದ ಹಾಸನ ಡಿಸಿ ಪಿಎ ಶಶಿಕಿರಣ್

    0 shares
    Share 0 Tweet 0
  • ಹಾಸನ ಜಿಲ್ಲಾಧಿಕಾರಿ ಕಚೇರಿಯಿಂದ ಕ್ರಷರ್ ಮಾಲೀಕರಿಂದ ಹಣ ಸುಲಿಗೆ

    0 shares
    Share 0 Tweet 0
  • ಶ್ರೀ ಹಾಸನಾಂಬೆ ದಿವ್ಯ ದರ್ಶನ #Live

    0 shares
    Share 0 Tweet 0
  • ಸಂಪುಟಕ್ಕೆ ಬಿ.ನಾಗೇಂದ್ರ ಪಕ್ಕಾ! ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೂ ಮರಳಿ ಮಂತ್ರಿಗಿರಿ!!

    0 shares
    Share 0 Tweet 0
  • ಹೆಚ್ಚು ಎಥೆನಾಲ್ ಮಿಶ್ರಣದಿಂದ ವಾಹನಗಳಿಗೆ ಧಕ್ಕೆ

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ನೀವು ಕೊಡೊ 60 ಲಕ್ಷದಲ್ಲಿ 50 ಲಕ್ಷ ಡಿಸಿ ಮನೆಗೇ ಕೊಡಬೇಕು ಎಂದು ಟೈಪ್ ಮಾಡಿದ್ದ ಹಾಸನ ಡಿಸಿ ಪಿಎ ಶಶಿಕಿರಣ್

ನೀವು ಕೊಡೊ 60 ಲಕ್ಷದಲ್ಲಿ 50 ಲಕ್ಷ ಡಿಸಿ ಮನೆಗೇ ಕೊಡಬೇಕು ಎಂದು ಟೈಪ್ ಮಾಡಿದ್ದ ಹಾಸನ ಡಿಸಿ ಪಿಎ ಶಶಿಕಿರಣ್

November 9, 2026
ಹಾಸನ ಜಿಲ್ಲಾಧಿಕಾರಿ ಕಚೇರಿಯಿಂದ ಕ್ರಷರ್ ಮಾಲೀಕರಿಂದ ಹಣ ಸುಲಿಗೆ

ಹಾಸನ ಜಿಲ್ಲಾಧಿಕಾರಿ ಕಚೇರಿಯಿಂದ ಕ್ರಷರ್ ಮಾಲೀಕರಿಂದ ಹಣ ಸುಲಿಗೆ

November 9, 2026
ಸಂಪುಟಕ್ಕೆ ಬಿ.ನಾಗೇಂದ್ರ ಪಕ್ಕಾ! ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೂ ಮರಳಿ ಮಂತ್ರಿಗಿರಿ!!

ಸಂಪುಟಕ್ಕೆ ಬಿ.ನಾಗೇಂದ್ರ ಪಕ್ಕಾ! ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೂ ಮರಳಿ ಮಂತ್ರಿಗಿರಿ!!

November 8, 2026
ಹೆಚ್ಚು ಎಥೆನಾಲ್ ಮಿಶ್ರಣದಿಂದ ವಾಹನಗಳಿಗೆ ಧಕ್ಕೆ

ಹೆಚ್ಚು ಎಥೆನಾಲ್ ಮಿಶ್ರಣದಿಂದ ವಾಹನಗಳಿಗೆ ಧಕ್ಕೆ

November 8, 2026

Covid 19

ಸತ್ಯಸಾಯಿ ಗ್ರಾಮದಲ್ಲಿ ನವರಾತ್ರಿ ಪೂಜೆಯಲ್ಲಿ ಪಾಲ್ಗೊಂಡ HDK

ಸತ್ಯಸಾಯಿ ಗ್ರಾಮದಲ್ಲಿ ನವರಾತ್ರಿ ಪೂಜೆಯಲ್ಲಿ ಪಾಲ್ಗೊಂಡ HDK

October 16, 2026
ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
  • About
  • Advertise
  • Careers
  • Contact

© 2025 cknewsnow | Website Design  by Karnatakabest Digital Services

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2025 cknewsnow | Website Design  by Karnatakabest Digital Services

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ