• About
  • Advertise
  • Careers
  • Contact
Friday, November 6, 2026
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home NEWS & VIEWS NATION

ಮೈತ್ರಿ ಹೋರಾಟಕ್ಕೆ ದೇವೇಗೌಡ-ಬಿಎಸ್‌ವೈ ಭೇಟಿ ದಿಕ್ಸೂಚಿ

cknewsnow desk by cknewsnow desk
November 6, 2026
in NATION, NEWS & VIEWS, POLITICS, STATE
Reading Time: 1 min read
0
ಮೈತ್ರಿ ಹೋರಾಟಕ್ಕೆ ದೇವೇಗೌಡ-ಬಿಎಸ್‌ವೈ ಭೇಟಿ ದಿಕ್ಸೂಚಿ
916
VIEWS
FacebookTwitterWhatsuplinkedinEmail

ಇನ್ನೊಂದು ಅವಧಿಗೆ ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಅವರನ್ನು ಮುಂದುವರಿಸಲು ಮಾಜಿ ಪ್ರಧಾನಿ ಜತೆ ಮಾಜಿ ಸಿಎಂ ಚರ್ಚಿಸಿದರಾ?

ಬೆಂಗಳೂರು: ಬಿಜೆಪಿ ಹಾಗೂ ಜೆಡಿಎಸ್‌ ರಾಜ್ಯಾಧ್ಯಕ್ಷರುಗಳಾದ ಬಿ.ವೈ.ವಿಜಯೇಂದ್ರ ಮತ್ತು ಹೆಚ್.ಡಿ.ಕುಮಾರಸ್ವಾಮಿ ನಾಯಕತ್ವದಲ್ಲಿ ಮುಂಬರುವ ಚುನಾವಣೆಗಳನ್ನು ಎನ್‌ಡಿಎ ಮೈತ್ರಿಕೂಟ ಎದುರಿಸಿದರೆ ರಾಜ್ಯದಲ್ಲಿ ಕಾಂಗ್ರೆಸ್‌ ದುರಾಡಳಿತಕ್ಕೆ ಕೊನೆ ಹಾಡಬಹುದು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರಿಗೆ ತಿಳಿಸಿದ್ದಾರೆ.

ದೇವೇಗೌಡ ಅವರನ್ನು ಕಳೆದ ಶುಕ್ರವಾರ ಸಂಜೆ ಪದ್ಮನಾಭನಗರದ ದೇವೇಗೌಡರ ನಿವಾಸದಲ್ಲಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿ ಮಾಡಿದ ಯಡಿಯೂರಪ್ಪ ಅವರು ರಾಜ್ಯದಲ್ಲಿ ಮೈತ್ರಿ ರಾಜಕಾರಣ ಹಾಗೂ ಕಾಂಗ್ರೆಸ್ ಪಕ್ಷದ ದುರಾಡಳಿತದ ಬಗ್ಗೆ ಚರ್ಚೆ ನಡೆಸಿದರಲ್ಲದೆ, ಮುಂಬರುವ ಹಿರಿಯೂರು ವಿಧಾನಸಭೆ ಕ್ಷೇತ್ರದ ಚುನಾವಣೆ ಬಗ್ಗೆ ಸಮಾಲೋಚನೆ ನಡೆಸಿದರು.

ಕರ್ನಾಟಕದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಬುಡಸಮೇತ ಕಿತ್ತುಹಾಕಲು ಬಿ.ವೈ.ವಿಜಯೇಂದ್ರ ಮತ್ತೊಂದು ಅವಧಿಗೆ ರಾಜ್ಯಾಧ್ಯಕ್ಷರಾಗಿ ಮುಂದುವರೆಯುವುದು ಅನಿವಾರ್ಯ ಎಂದಿದ್ದಾರೆ ಎಂದು ಗೊತ್ತಾಗಿದ್ದು, ಈ ಬಗ್ಗೆ ಗೌಡರ ಜತೆ ಚರ್ಚೆ ನಡೆಸಿದ್ದಾರೆ.

ನವೆಂಬರ್‌ 11ಕ್ಕೆ ವಿಜಯೇಂದ್ರ ಅವರ ರಾಜ್ಯಾಧ್ಯಕ್ಷ ಅವಧಿ ಪೂರ್ಣಗೊಳ್ಳಲಿದ್ದು, ಮತ್ತೊಂದು ಅವಧಿಗೆ ಮುಂದುವರೆಯಲು ನಮ್ಮ ಪಕ್ಷಲ್ಲೇ ಭಿನ್ನಾಭಿಪ್ರಾಯಗಳಿವೆ. ಪಕ್ಷದ ಹಿತದೃಷ್ಟಿಯಿಂದ ವಿಜಯೇಂದ್ರ ಅವರನ್ನೇ ಮತ್ತೊಂದು ಅವಧಿಗೆ ಮುಂದುವರೆಸುವಂತೆ ನಾನು ಈಗಾಗಲೇ ವರಿಷ್ಠರಿಗೆ ಸಲಹೆ ಮಾಡಿದ್ದೇನೆ, ನೀವೂ ಸಹಾ ನನ್ನ ಧ್ವನಿಗೆ ಬೆಂಬಲ ವ್ಯಕ್ತಪಡಿಸಿ, ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೆ ಸಲಹೆ ಮಾಡಿ ಎಂದಿದ್ದಾರೆ.

ಕುಮಾರಸ್ವಾಮಿ ಮತ್ತು ವಿಜಯೇಂದ್ರ ನಡುವೆ ಸಣ್ಣ-ಪುಟ್ಟ ಭಿನ್ನಾಭಿಪ್ರಾಯಗಳಿವೆ, ಇದನ್ನೇ ಮುಂದಿಟ್ಟುಕೊಂಡು ವಿಜಯೇಂದ್ರ ಬದಲಾವಣೆಗೆ ಕೆಲವರು ಒತ್ತಡ ತರುತ್ತಿದ್ದಾರೆ.

ಮೈತ್ರಿಕೂಟಕ್ಕೆ ಕುಮಾರಸ್ವಾಮಿ ನಾಯಕತ್ವ

ಎರಡೂ ಪಕ್ಷಗಳ ರಾಜ್ಯಾಧ್ಯಕ್ಷರನ್ನು ಕರೆದು ಸಲಹೆ ನೀಡಿ, ನಾನು ವಿಜಯೇಂದ್ರ ಅವರಿಗೆ ತಿಳಿಹೇಳುತ್ತೇನೆ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕುಮಾರಸ್ವಾಮಿಯೇ ಎನ್‌ಡಿಎ ಮೈತ್ರಿಕೂಟದ ನಾಯಕತ್ವ ವಹಿಸಿಕೊಳ್ಳಲಿ, ಈ ಇಬ್ಬರೂ ನಾಯಕರು ಒಟ್ಟಿಗೆ ಶ್ರಮಿಸಿದರೆ ನಾವು ಜಯಗಳಿಸಬಹುದಾಗಿದೆ.

ನಿಮ್ಮ ಜೊತೆಗಿನ ಮಾತುಕತೆ ವೇಳೆ ಕುಮಾರಸ್ವಾಮಿ ಅವರಿಗೂ ಬರುವಂತೆ ಕೋರಿದ್ದೆ, ಆದರೆ, ಪುಣೆಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕಿದ್ದರಿಂದ ಬರಲು ಸಾಧ್ಯವಾಗಲಿಲ್ಲ, ಆದರೆ ನಮ್ಮಗಳ ತೀರ್ಮಾನಕ್ಕೆ ಬದ್ಧರಾಗಿರುವುದಾಗಿ ಹೇಳಿದ್ದಾರೆ.

ಒಟ್ಟಾಗಿ ಮುಂದುವರಿಯಬೇಕು

ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಹಲವಾರು ವಿದ್ಯಮಾನಗಳು ನಡೆಯುತ್ತಿದ್ದು ಯಾವುದೇ ಕ್ಷಣ ಏನು ಬೇಕಾದರೂ ಆಗಬಹುದು, ಹೀಗಾಗಿ ನಾವಿಬ್ಬರು ಒಟ್ಟಾಗಿ ಮುಂದುವರಿಯಬೇಕು ಎಂದು ಯಡಿಯೂರಪ್ಪ ತಿಳಿಸಿದ್ದಾರೆ.

ಮೈತ್ರಿಕೂಟದಲ್ಲಿ ಗೊಂದಲಗಳು ಎದುರಾದರೆ ಕಾಂಗ್ರೆಸ್‌ ಇದನ್ನೇ ರಾಜಕೀಯ ಲಾಭವಾಗಿ ಬಳಸಿಕೊಳ್ಳಬಹುದು, ಆದ್ದರಿಂದ ವಿಧಾನ ಪರಿಷತ್‌ ಚುನಾವಣೆಯಲ್ಲಿ ತೋರಿದ ಒಗ್ಗಟ್ಟನ್ನೇ ಮುಂದುವರೆಸಲು ಉಭಯ ನಾಯಕರು ತೀರ್ಮಾನಿಸಿದ್ದಾರೆ.

Tags: Bs yediyurapppa meets hd devegowdaBY Vijayendrackcknewsnowhd kumaraswamyjds bjp alliancekarnataka politics
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಆಪರೇಷನ್‌ ಕಮಲಕ್ಕೆ ಸಿಕ್ಕಿ ಬೇಲಿ ಹಾರಿದ್ದವರಿಗೆ ಶಾಕ್!‌

ಬರದ ನಷ್ಟ ₹62,000 ಕೋಟಿ; ಕೇಂದ್ರಕ್ಕೆ ಕೇಳಿದ ಮೊತ್ತ ₹22,000 ಕೋಟಿ!

by cknewsnow desk
November 6, 2026
0

ಈವರೆಗೆ ಕ್ಷೇತ್ರಕ್ಕೆ ಮೂರು ಪತ್ರಗಳನ್ನು ಬರೆದಿರುವ ರಾಜ್ಯ ಸರಕಾರ

ನಾನು ಹಳ್ಳಿಯವನು, ಏನೀಗ?

ನಾನು ಹಳ್ಳಿಯವನು, ಏನೀಗ?

by cknewsnow desk
November 6, 2026
0

ಹಳ್ಳಿ ಗುಗ್ಗು ಎಂದ ಪ್ರಿಯಾಂಕ್ ಖರ್ಗೆ ಹಳ್ಳಿಗರಿಗೆ ಅಪಮಾನ ಮಾಡಿದ್ದಾರೆ ಎಂದು ಕೇಂದ್ರ ಸಚಿವರ ಬೇಸರ

ಕಾಂತರಾಜು ವರದಿ ನೈಜತೆ ಬಗ್ಗೆ ಅನುಮಾನಗಳಿವೆ ಎಂದ ಅಶೋಕ್

ಸಾರಿಗೆ ನಿಗಮಗಳಿಗೆ ₹5,650 ಕೋಟಿ ಬಾಕಿ! ಜನರ ಮೇಲೆ ದರ ಏರಿಕೆಯ ಹೊರೆ

by cknewsnow desk
November 5, 2026
0

ಸಾರಿಗೆ ನಿಗಮಗಳ ಒಟ್ಟು ಹೊಣೆಗಾರಿಕೆ ₹7,130.80 ಕೋಟಿ

ಕೇಂದ್ರ ಪೆಟ್ರೋಲ್, ಡೀಸೆಲ್ ದರ ಇಳಿಸಿದರೆ ಬಸ್ ಪ್ರಯಾಣ ದರ ಕಡಿಮೆ ಮಾಡುತ್ತೇವೆ

ಕೇಂದ್ರ ಪೆಟ್ರೋಲ್, ಡೀಸೆಲ್ ದರ ಇಳಿಸಿದರೆ ಬಸ್ ಪ್ರಯಾಣ ದರ ಕಡಿಮೆ ಮಾಡುತ್ತೇವೆ

by cknewsnow desk
November 5, 2026
0

ಮಹಿಳೆಯರಿಗೆ ಫ್ರೀ ಬಸ್ ಕೊಟ್ಟಿದ್ದಕ್ಕೆ ಆರ್ಥಿಕ ಹೊರೆ ಆಗಿದೆ ಎಂದ ಮುಖ್ಯಮಂತ್ರಿ

ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ಅಗತ್ಯವಿಲ್ಲ: ರಾಜಮಾತೆ ಪ್ರಮೋದಾ ದೇವಿ ಒಡೆಯರ್

ಮೈಸೂರು ಅರಮನೆ ಖಾಸಗಿ ಸ್ವತ್ತು, ಸರ್ಕಾರ ಕಟ್ಟಿಸಿದ್ದಲ್ಲ; ರಾಜಮಾತೆ ಪ್ರಮೋದಾ ದೇವಿ

by cknewsnow desk
November 4, 2026
0

ಸರಕಾರ ಬೇಕಾದರೆ ಇನ್ನೊಂದು ಅಂಬಾರಿಯನ್ನು ಮಾಡಿಸಿಕೊಳ್ಳಲಿ

ಬಸ್‌ ಪ್ರಯಾಣ ದರ ಶೇ.23ರಿಂದ ಶೇ.37ರಷ್ಟು ಹೆಚ್ಚಳ

ಬಸ್‌ ಪ್ರಯಾಣ ದರ ಶೇ.23ರಿಂದ ಶೇ.37ರಷ್ಟು ಹೆಚ್ಚಳ

by cknewsnow desk
November 4, 2026
0

ಇಂದು ಮಧ್ಯರಾತ್ರಿಯಿಂದಲೇ ಬರೆ ಏರಿಕೆ ಜಾರಿ

Next Post
ಆಪರೇಷನ್‌ ಕಮಲಕ್ಕೆ ಸಿಕ್ಕಿ ಬೇಲಿ ಹಾರಿದ್ದವರಿಗೆ ಶಾಕ್!‌

ಬರದ ನಷ್ಟ ₹62,000 ಕೋಟಿ; ಕೇಂದ್ರಕ್ಕೆ ಕೇಳಿದ ಮೊತ್ತ ₹22,000 ಕೋಟಿ!

Leave a Reply Cancel reply

Your email address will not be published. Required fields are marked *

Recommended

ಹೊಸ ಸಂಸತ್ ಭವನ ರಾಷ್ಟ್ರಕ್ಕೆ ಸಮರ್ಪಣೆ

ಹೊಸ ಸಂಸತ್ ಭವನ ರಾಷ್ಟ್ರಕ್ಕೆ ಸಮರ್ಪಣೆ

3 years ago
ಗುಡಿಬಂಡೆ ಜೈನಮುನಿಗಳ ತಪೋಭೂಮಿ ಪಾದಬೆಟ್ಟಕ್ಕಿಲ್ಲ ರಕ್ಷಣೆ

ಗುಡಿಬಂಡೆ ಜೈನಮುನಿಗಳ ತಪೋಭೂಮಿ ಪಾದಬೆಟ್ಟಕ್ಕಿಲ್ಲ ರಕ್ಷಣೆ

5 years ago

Popular News

  • ಆಪರೇಷನ್‌ ಕಮಲಕ್ಕೆ ಸಿಕ್ಕಿ ಬೇಲಿ ಹಾರಿದ್ದವರಿಗೆ ಶಾಕ್!‌

    ಬರದ ನಷ್ಟ ₹62,000 ಕೋಟಿ; ಕೇಂದ್ರಕ್ಕೆ ಕೇಳಿದ ಮೊತ್ತ ₹22,000 ಕೋಟಿ!

    0 shares
    Share 0 Tweet 0
  • ಮೈತ್ರಿ ಹೋರಾಟಕ್ಕೆ ದೇವೇಗೌಡ-ಬಿಎಸ್‌ವೈ ಭೇಟಿ ದಿಕ್ಸೂಚಿ

    0 shares
    Share 0 Tweet 0
  • ನಾನು ಹಳ್ಳಿಯವನು, ಏನೀಗ?

    0 shares
    Share 0 Tweet 0
  • ಸಾರಿಗೆ ನಿಗಮಗಳಿಗೆ ₹5,650 ಕೋಟಿ ಬಾಕಿ! ಜನರ ಮೇಲೆ ದರ ಏರಿಕೆಯ ಹೊರೆ

    0 shares
    Share 0 Tweet 0
  • ಕೇಂದ್ರ ಪೆಟ್ರೋಲ್, ಡೀಸೆಲ್ ದರ ಇಳಿಸಿದರೆ ಬಸ್ ಪ್ರಯಾಣ ದರ ಕಡಿಮೆ ಮಾಡುತ್ತೇವೆ

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಆಪರೇಷನ್‌ ಕಮಲಕ್ಕೆ ಸಿಕ್ಕಿ ಬೇಲಿ ಹಾರಿದ್ದವರಿಗೆ ಶಾಕ್!‌

ಬರದ ನಷ್ಟ ₹62,000 ಕೋಟಿ; ಕೇಂದ್ರಕ್ಕೆ ಕೇಳಿದ ಮೊತ್ತ ₹22,000 ಕೋಟಿ!

November 6, 2026
ಮೈತ್ರಿ ಹೋರಾಟಕ್ಕೆ ದೇವೇಗೌಡ-ಬಿಎಸ್‌ವೈ ಭೇಟಿ ದಿಕ್ಸೂಚಿ

ಮೈತ್ರಿ ಹೋರಾಟಕ್ಕೆ ದೇವೇಗೌಡ-ಬಿಎಸ್‌ವೈ ಭೇಟಿ ದಿಕ್ಸೂಚಿ

November 6, 2026
ನಾನು ಹಳ್ಳಿಯವನು, ಏನೀಗ?

ನಾನು ಹಳ್ಳಿಯವನು, ಏನೀಗ?

November 6, 2026
ಕಾಂತರಾಜು ವರದಿ ನೈಜತೆ ಬಗ್ಗೆ ಅನುಮಾನಗಳಿವೆ ಎಂದ ಅಶೋಕ್

ಸಾರಿಗೆ ನಿಗಮಗಳಿಗೆ ₹5,650 ಕೋಟಿ ಬಾಕಿ! ಜನರ ಮೇಲೆ ದರ ಏರಿಕೆಯ ಹೊರೆ

November 5, 2026

Covid 19

ಸತ್ಯಸಾಯಿ ಗ್ರಾಮದಲ್ಲಿ ನವರಾತ್ರಿ ಪೂಜೆಯಲ್ಲಿ ಪಾಲ್ಗೊಂಡ HDK

ಸತ್ಯಸಾಯಿ ಗ್ರಾಮದಲ್ಲಿ ನವರಾತ್ರಿ ಪೂಜೆಯಲ್ಲಿ ಪಾಲ್ಗೊಂಡ HDK

October 16, 2026
ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
  • About
  • Advertise
  • Careers
  • Contact

© 2025 cknewsnow | Website Design  by Karnatakabest Digital Services

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2025 cknewsnow | Website Design  by Karnatakabest Digital Services

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ